ಇಲ್ಲಿ ಯಾರು ನನ್ನೋರು..?

ಮೂರು ನಿಮಿಷದ ಮನುಷ್ಯ

Team Udayavani, Jun 4, 2019, 6:00 AM IST

ಅವತ್ತು ಬೆಂಗಳೂರಿನಲ್ಲಿ ಒಂದು ಕಾಂಪಿಟೇಶನ್‌ ಇತ್ತು. ಒಬ್ಬನೇ ಹೊರಟಿದ್ದೆ. ನನ್ನ ದುರದೃಷ್ಟವೋ ಏನೋ, ಅಂದು ಬೆಳಗ್ಗೆ 6 ಗಂಟೆಗೆ ತಲುಪಬೇಕಿದ್ದ ಬಸ್ಸು, ಇಳಿರಾತ್ರಿ 3ಕ್ಕೇ ಮೆಜೆಸ್ಟಿಕ್‌ ಮುಟ್ಟಿತು. ಮೆಜೆಸ್ಟಿಕ್‌ನಲ್ಲಿ ಇಳಿದೆ. ಕೊರೆಯುವ ಚಳಿ ಬೇರೆ. ಅದೇ ಮೊದಲ ಬಾರಿಗೆ ಬೆಂಗಳೂರಿಗೆ ಬಂದಿದ್ದರಿಂದ, ಒಳಗೊಳಗೇ ಭಯವೂ ಇತ್ತು. ಹೊಸ ಜನ, ಯಾರು ಹೇಗೆ ಮೋಸ ಮಾಡ್ತಾರೋ ಏನೋ ಎನ್ನುವ ದಿಗಿಲು. ಸ್ಪರ್ಧೆ ಇರೋದು 9 ಗಂಟೆಗೆ, ಅಲ್ಲಿಯ ತನಕ ಎಲ್ಲಿರಲಿ?- ಇದು ನನ್ನನ್ನು ಕಾಡುತ್ತಿದ್ದ ಪ್ರಶ್ನೆ.

ದಿಕ್ಕೇ ತೋಚದಾಗಿ, ಅಲ್ಲೇ ಚಹಾ ಕುಡಿಯುತ್ತಾ ಕುಳಿತಿದ್ದೆ. ಯಾರೋ ಪುಣ್ಯಾತ್ಮ ಆಟೋ ಚಾಲಕ ಬಳಿ ಬಂದು, ವಿಚಾರಿಸಿದ. ಮೊದ ಮೊದಲಿಗೆ ನಾನು ಅವನೊಂದಿಗೆ ಮಾತಾಡಲು ಹಿಂಜರಿದೆನಾದರೂ, ನಂತರ ಯಾಕೋ ಒಳ್ಳೆಯವನು ಅಂತನ್ನಿಸಿಬಿಟ್ಟ. “9 ಗಂಟೆಯವರಿಗೆ ಎಲ್ಲಿರಬೇಕೋ, ತಿಳಿಯುತ್ತಿಲ್ಲ’ ಅಂದೆ. ಅವನು ಅಲ್ಲೇ ಇದ್ದ, ಅವನ ಸ್ನೇಹಿತನ ಅಂಗಡಿಯಲ್ಲಿ 9 ಗಂಟೆಯವರೆಗೆ ಉಳಿಯಲು ಅವಕಾಶ ಕಲ್ಪಿಸಿಕೊಟ್ಟ. ಕೊನೆಗೆ ಸೇರಬೇಕಾದ ಸ್ಥಳಕ್ಕೂ ಆಟೋದಲ್ಲಿ ನನ್ನನ್ನು ಮುಟ್ಟಿಸಿದ. “ಬೆಂಗಳೂರು ಜನ, ಹುಷಾರು’ ಅಂತ ಯಾರ್ಯಾರೋ ಹೇಳಿದ್ದನ್ನು ಕೇಳಿದ್ದೆ. ಆದರೆ, ಇವನು ಆ ಅಪವಾದವನ್ನು ದೂರ ಮಾಡಿಬಿಟ್ಟ. ಥ್ಯಾಂಕ್ಯೂ ಸರ್‌…

– ಶಾಮ ಪ್ರಸಾದ್‌, ಹನಗೋಡು

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

  • "ಆಲೂಗಡ್ಡೆ ಎಲ್ಲಿ ಬೆಳೆಯುತ್ತದೆ ? "ಮರದ ಮೇಲೆ ಸಾರ್‌', " ಹಾಲಿನ ಮೂಲ ಎಲ್ಲಿದೆ ?' " ಅಂಗಡಿಯಲ್ಲಿ ಸಾರ್‌' ಎಂದು ಉತ್ತರಿಸುವ ಮಕ್ಕಳು ಇರುವ ಈ ಕಾಲದಲ್ಲಿ. ಶಿರಸಿಯ ಒಂದಷ್ಟು...

  • ಬಹಳ ಹಿಂದೆ, ನನ್ನ ತಂದೆಯವರ ಬಳಿ ಕೆ.ಜಿ ತೂಕದ ಆಗ್ಭಾ ಬೆಲ್ಲೋಸ್‌ಫಿಲಂ ರೋಲ್‌ ಕ್ಯಾಮೆರಾ ಇತ್ತು. 100 ಮಿ.ಮೀ ಅಳತೆಯ ಒಂದೊಂದು ಪ್ರೇಂನಲ್ಲಿ ಚೌಕಾಶಿ ಮಾಡಿ ಒಟ್ಟು...

  • ಪರೀಕ್ಷೆ ಸಂದರ್ಭದಲ್ಲಿ ಸಮಯವೇ ದೇವರು. ಅದನ್ನು ಒಲಿಸಿಕೊಳ್ಳುವುದೂ ಕಲೆ. ಕಷ್ಟದ ಸಬೆjಕ್ಟ್ಗಳು, ಸುಲಭದ ವಿಷಯಗಳಿಗೆ ಇದನ್ನು ಹಂಚುವುದು ನಿಜಕ್ಕೂ ಪ್ರತಿಭೆಯೇ....

  • ಸೇವೆ ಅಂದರೆ ಊಟ, ಬಟ್ಟೆ ಕೊಡೋದು, ಕಷ್ಟದಲ್ಲಿರುವವರಿಗೆ ಹಣ ಸಹಾಯ ಮಾಡೋದು ಮಾತ್ರವಲ್ಲ. ಹೀಗೂ ಮಾಡಬಹುದು ಅಂತ ಕೊಟ್ಟೂರಿನ ಯುವಕರು ತೋರಿಸುತ್ತಿದ್ದಾರೆ. ಅವರು...

  • ಕೈ ಕೆಸರು ಮಾಡಿಕೊಂಡು, ಬಾಯಿಗೆ ಮೊಸರು ಹಾಕಿಕೊಳ್ಳುವುದು ಇವತ್ತು ಎಂಜಿನಿಯರಿಂಗ್‌ ಆಗಿದೆ. ಕೃಷಿ ಎಂದರೆ, ಅಪ್ಪ ಹಾಕಿದ ಆಲದ ಮರದಂತಲ್ಲ. ಅದರ ಸುತ್ತಲೂ ನಮ್ಮ...

ಹೊಸ ಸೇರ್ಪಡೆ

  • ತುಮಕೂರು: ಶ್ರೀ ಕ್ಷೇತ್ರ ಸಿದ್ಧಗಂಗಾ ಮಠದ ಹಿರಿಯ ಶ್ರೀಗಳಾದ ಕರ್ನಾಟಕ ರತ್ನ, ತ್ರಿವಿಧ ದಾಸೋಹಿ, ಪದ್ಮಭೂಷಣ ಲಿಂ.ಡಾ.ಶ್ರೀ ಶಿವಕುಮಾರ ಮಹಾಸ್ವಾಮಿಗಳವರ ಪ್ರಥಮ...

  • ಬೆಂಗಳೂರು: ಪಾಲಿಕೆಯ 12 ಸ್ಥಾಯಿ ಸಮಿತಿಗಳ ಸದಸ್ಯರ ಆಯ್ಕೆ ಕೊನೆಗೂ ಶನಿವಾರ ನಡೆಯಿತು. ಸ್ಥಾನ ವಂಚಿತ ಕೆಲವು ಸದಸ್ಯರ ಅಸಮಾಧಾನ, ಆಕ್ರೋಶ, ಕಣ್ಣೀರಿನ ನಡುವೆಯೇ ಎಲ್ಲ...

  • ಬೆಂಗಳೂರು: ಒಳಚರಂಡಿ ಸಂಪರ್ಕ ಪಡೆಯದೇ ಅನಧಿಕೃತವಾಗಿ ಮಳೆನೀರು ಕಾಲುವೆಗೆ ಶೌಚಾಲಯ ಸೇರಿ ಮನೆಯ ತ್ಯಾಜ್ಯ ನೀರು ಹರಿಯಬಿಟ್ಟಿದ್ದೀರಾ? ಹಾಗಾದರೆ ನಿಮ್ಮ ಮನೆ ವಿದ್ಯುತ್‌...

  • ಬೆಂಗಳೂರು: ಭಾರತೀಯ ಸಂಸ್ಕೃತಿಯ ಬಾವುಟವನ್ನು ವಿಶ್ವಮಟ್ಟದಲ್ಲಿ ಎತ್ತಿ ಹಿಡಿಯುವ ಪ್ರಧಾನಿ ನಮಗೆ ಸಿಕ್ಕಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ, ಕೇಂದ್ರ...

  • ಬೆಂಗಳೂರು: "ನಾಟಕ ಕಂಪನಿ ನಡೆಸಲು ಸಾಲ ಕೊಟ್ಟವರು ಹಾರ್ಮೋನಿಯಂ ತೆಗೆದುಕೊಂಡು ಹೋಗುವಾಗ ತಾಯಿಯೊಬ್ಬರು ತನ್ನ ತಾಳಿ ಕೊಟ್ಟು ಸಾಲ ತೀರಿಸಿದ್ದರಿಂದಲೇ ಇಂದು...