ತಂಗಾಳಿಯಾಗಿ ಬಂದವಳು ಬಿರುಗಾಳಿಯಾಗಿ ಹೋದೆಯೇಕೆ?

Team Udayavani, May 23, 2017, 10:43 AM IST

tangali.jpg

ಹಾಯ್‌ ಮೈ ಡಿಯರ್‌ ಸ್ವೀಟ್‌ ಹಾರ್ಟ್‌…
ನಿನಗೆ ನಾನೀಗ ಬಿಲ್‌ಕುಲ್ಲಾಗಿ ಬೇಡವಾಗಿರೋನು. ಕಣ್ಮುಚ್ಚಿ ಕಣ್ಣಬಿಟ್ಟರೂ ನೀನೇ… ಕಣ್‌ಬಿಟ್ಟು ಕಣ್‌ ಮುಚ್ಚಿದರೂ ನೀನೇ… ನೆನಪಿನ ಬುತ್ತಿಯಲ್ಲಿ ಬರೀ ನಿನದೇ ನೆನಪು ಕಣೆ. ಸಂತಸ, ಸಂಭ್ರಮ, ಸಡಗರ ಎಲ್ಲವೂ ಒಟ್ಟೊಟ್ಟಿಗೆ ತುಂಬಿ ತುಳುಕಾಡುತ್ತಿದ್ದ ನನ್ನ ಹೃದಯದ ಕಪಾಟಿನಲ್ಲಿ ನೀ ನನ್ನ ತೊರೆದಾಗಿನಿಂದ ಉಳಿದಿರೋದು ಮೌನವೊಂದೇ. ನೀನಂದು ಹಚ್ಚಿದ ಹಣತೆಯೂ ಆರಿದೆ. ನೀನಂದು ಗಟ್ಟಿಯಾಗಿ ತಬ್ಬಿಕೊಂಡು ನೀಡಿದ ಸಿಹಿಮುತ್ತು ಇಂದೇತಕೋ ಕಹಿಯಾಗುತ್ತಿದೆ. ನೀನಂದು ನನ್ನ ಕೈ ಮೇಲೆ ಕೈ ಇಟ್ಟು ಮಾಡಿದ ಆಣೆ ಪ್ರಮಾಣಗಳು ನೆನೆಗುದಿಗೆ ಬಿದ್ದು ಉಪಯೋಗಕ್ಕೆ ಬಾರದಾಗಿವೆ.

ನನ್ನ ಪತ್ರವಾಗಿರೋ ಪ್ರೀತಿಗೆ ನೀನು ಮುನ್ನುಡಿಯೂ ಆಗಲಿಲ್ಲ… ಬೆನ್ನುಡಿಯೂ ಆಗಲಿಲ್ಲ… ಬದುಕು ಕಟ್ಟಿಕೊಳ್ಳುವ ಆತುರದಲ್ಲಿ ನೀನು ಎಲ್ಲವನ್ನೂ ಮರೆತುಹೋದೆ. ಕಡಲ ತೀರದಲ್ಲಿ ಕುಳಿತು ಅಲೆಗಳನ್ನು ಲೆಕ್ಕಿಸುವ ಖಾಯಂ ಕೆಲಸವನ್ನು ಕೇಳದೇ ಹೋದರೂ ಕೊಟ್ಟು ಹೋದೆ. ರಾತ್ರಿಯ ಬಾನಂಗಳದಲ್ಲಿ ಫ‌ಳಫ‌ಳನೆ ಹೊಳೆಯುವ ನಕ್ಷತ್ರಗಳ ತಿಳಿ ಬೆಳಕಿನಲ್ಲಿ ಕಣ್ಣೀರ ಹನಿ ಹರಿಸುವ ಭಾವುಕ ಲೋಕಕ್ಕೆ ದಬ್ಬಿ ಹೋದೆ. ಇಷ್ಟು ದಿನ ಜೊತೆಗಿದ್ದು ಈಗ ಕೊಂಚವೂ ಕನಿಕರ ತೋರದೇ ಕಗ್ಗತ್ತಲಲ್ಲಿ ನನ್ನನ್ನು ಒಂಟಿಯಾಗಿ ಬಿಟ್ಟು ದೂರ ಹೋದೆ.

ನನ್ನ ಬದುಕಿನಲ್ಲಿ ನೀನು ಸದ್ದಿಲ್ಲದೆ ಸರಿದು ಹೋಗಿರುವೆ. ಬರಿದಾಗಿದ್ದ ಬಾಳಲ್ಲಿ ತಂಗಾಳಿಯಂತೆ ಬಂದು ಬಿರುಗಾಳಿಯಾಗಿ ಹೋದೆ. ನೀನೇತಕೆ ನನ್ನನ್ನು ತೊರೆದು ದೂರ ಸರಿದೆ ಎನ್ನುವ ಘೋರ ಪ್ರಶ್ನೆಯೊಂದಕ್ಕೆ ಉತ್ತರವೆಂದಿಗೂ ಸಿಗಲಾರದೆಂದು ಈ ಹುಚ್ಚು ಮನಸ್ಸಿಗೆ ಈಗ ಮನವರಿಕೆಯಾಗಿದೆ. ನಿನ್ನನ್ನು ಪ್ರೀತಿಸುವ ಯೋಗ್ಯತೆಯೂ ನನಗಿಲ್ಲ. ನಿನ್ನೊಂದಿಗೆ ಪ್ರೀತಿ ಹಂಚಿಕೊಳ್ಳುವ ಪಾಲುದಾರಿಕೆಯನ್ನು ಕಳೆದುಕೊಂಡಿರುವೆ. 

ಆದರೆ ನಿನ್ನನ್ನು ಕಣ್ತುಂಬ ನೋಡಿ…. ಮನಸ್‌ ತುಂಬ ತುಂಬಿಕೊಳ್ಳಬೇಕೆಂಬ ಬಯಕೆ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಎಲ್ಲೇ ಇರು…. ಹೇಗೇ ಇರು… ಎಂದೆಂದಿಗೂ ನಗುನಗುತ್ತಾ ನೂರು ಕಾಲ ಸುಖವಾಗಿರೆಂದು ತುಂಬು ಹೃದಯದಿಂದ ಹಾರೈಸುತ್ತೇನೆ. ನಿನಗೆ ನಾನು ಬೇಡವಾಗಿರೋನು… ಇನ್ನುಮುಂದೆ ಕನಸು ಮನಸಲ್ಲೂ ನನ್ನನ್ನು ನೆನಪಿಸಿಕೊಳ್ಳಬೇಡ.
                                                                                      ಇಂತಿ ನಿನ್ನ ಸುಖಾಭಿಲಾಷಿ

– ರಂಗನಾಥ ಎಸ್‌. ಗುಡಿಮನಿ, ಬಾಗಲಕೋಟ

ಟಾಪ್ ನ್ಯೂಸ್

ಲಸಿಕೆ ಕಡ್ಡಾಯ; ಜಾರಿ ಸಾಧ್ಯವೇ?

ಕೋವಿಡ್‌ ಲಸಿಕೆ ಕಡ್ಡಾಯ; ಜಾರಿ ಸಾಧ್ಯವೇ?

ಪಚ್ಚನಾಡಿ ಭೂ ಭರ್ತಿ ಘಟಕದ ತ್ಯಾಜ್ಯ ವಿಲೇವಾರಿ: ಶೀಘ್ರ ಪೂರ್ಣಗೊಳಿಸಲು ಆದೇಶ

ಪಚ್ಚನಾಡಿ ಭೂ ಭರ್ತಿ ಘಟಕದ ತ್ಯಾಜ್ಯ ವಿಲೇವಾರಿ: ಶೀಘ್ರ ಪೂರ್ಣಗೊಳಿಸಲು ಆದೇಶ

ಸೋಂಕು ಪರೀಕ್ಷೆ ಹೆಚ್ಚಿಸಿ: ಕೇಂದ್ರದ ಸೂಚನೆ

ಸೋಂಕು ಪರೀಕ್ಷೆ ಹೆಚ್ಚಿಸಿ: ಕೇಂದ್ರದ ಸೂಚನೆ

ತಂತ್ರಗಾರಿಕೆ ಬದಲಿಸಿದ ಬಿಜೆಪಿ! ಉತ್ತರ ಪ್ರದೇಶ ಚುನಾವಣೆಗೆ ಹೊಸ ಕಾರ್ಯತಂತ್ರ

ತಂತ್ರಗಾರಿಕೆ ಬದಲಿಸಿದ ಬಿಜೆಪಿ! ಉತ್ತರ ಪ್ರದೇಶ ಚುನಾವಣೆಗೆ ಹೊಸ ಕಾರ್ಯತಂತ್ರ

ಹೊಸ ಇತಿಹಾಸ ಬರೆದಿದ ಭಾರತದ ಅಂಡರ್‌-19 ವಿಶ್ವಕಪ್‌ ಕೂಟದ ಯಶಸ್ವಿ ನಾಯಕ ಉನ್ಮುಕ್ತ್ ಚಂದ್‌

ಹೊಸ ಇತಿಹಾಸ ಬರೆದಿದ ಭಾರತದ ಅಂಡರ್‌-19 ವಿಶ್ವಕಪ್‌ ಕೂಟದ ಯಶಸ್ವಿ ನಾಯಕ ಉನ್ಮುಕ್ತ್ ಚಂದ್‌

astrology today

ಬುಧವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹ ಬಲ

3ನೇ ಕೋವಿಡ್ ಅಲೆಯಲ್ಲಿ ಪ್ರತಿ ದಿನ 1.2 ಲಕ್ಷ ಪ್ರಕರಣ: ತಜ್ಞರ ಎಚ್ಚರಿಕೆ : ಡಾ. ಸುಧಾಕರ್‌

3ನೇ ಕೋವಿಡ್ ಅಲೆಯಲ್ಲಿ ಪ್ರತಿ ದಿನ 1.2 ಲಕ್ಷ ಪ್ರಕರಣ: ತಜ್ಞರ ಎಚ್ಚರಿಕೆ : ಡಾ. ಸುಧಾಕರ್‌ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಕೃಷ್ಣಾಪುರ ಪರ್ಯಾಯ – 2022 Highlights

udayavani youtube

18 ವರ್ಷಗಳ ವೈವಾಹಿಕ ಜೀವನಕ್ಕೆ ಅಂತ್ಯ ಹಾಡಿದ ಧನುಷ್ – ಐಶ್ವರ್ಯಾ

udayavani youtube

ಪರ್ಯಾಯ ಮಹೋತ್ಸವ : ದಂಡ ತೀರ್ಥದಲ್ಲಿ ಶ್ರೀ ಕೃಷ್ಣಾಪುರ ಮಠಾಧೀಶರಿಂದ ಪವಿತ್ರ ಸ್ನಾನ

udayavani youtube

ನಿಷೇಧದ ನಡುವೆಯೂ ರಥೋತ್ಸವ : ಜನರನ್ನು ನಿಯಂತ್ರಿಸಲು ಪೊಲೀಸರು ವಿಫಲ

udayavani youtube

ಉಡುಪಿ : ಇಂದು (ಜ.17) ರಾತ್ರಿ 10 ಗಂಟೆ ಒಳಗೆ ಅಂಗಡಿ ಮುಂಗಟ್ಟು ಮುಚ್ಚಲು ನಗರ ಸಭೆ ಆದೇಶ

ಹೊಸ ಸೇರ್ಪಡೆ

ಲಸಿಕೆ ಕಡ್ಡಾಯ; ಜಾರಿ ಸಾಧ್ಯವೇ?

ಕೋವಿಡ್‌ ಲಸಿಕೆ ಕಡ್ಡಾಯ; ಜಾರಿ ಸಾಧ್ಯವೇ?

ಪಚ್ಚನಾಡಿ ಭೂ ಭರ್ತಿ ಘಟಕದ ತ್ಯಾಜ್ಯ ವಿಲೇವಾರಿ: ಶೀಘ್ರ ಪೂರ್ಣಗೊಳಿಸಲು ಆದೇಶ

ಪಚ್ಚನಾಡಿ ಭೂ ಭರ್ತಿ ಘಟಕದ ತ್ಯಾಜ್ಯ ವಿಲೇವಾರಿ: ಶೀಘ್ರ ಪೂರ್ಣಗೊಳಿಸಲು ಆದೇಶ

ಸೋಂಕು ಪರೀಕ್ಷೆ ಹೆಚ್ಚಿಸಿ: ಕೇಂದ್ರದ ಸೂಚನೆ

ಸೋಂಕು ಪರೀಕ್ಷೆ ಹೆಚ್ಚಿಸಿ: ಕೇಂದ್ರದ ಸೂಚನೆ

ತಂತ್ರಗಾರಿಕೆ ಬದಲಿಸಿದ ಬಿಜೆಪಿ! ಉತ್ತರ ಪ್ರದೇಶ ಚುನಾವಣೆಗೆ ಹೊಸ ಕಾರ್ಯತಂತ್ರ

ತಂತ್ರಗಾರಿಕೆ ಬದಲಿಸಿದ ಬಿಜೆಪಿ! ಉತ್ತರ ಪ್ರದೇಶ ಚುನಾವಣೆಗೆ ಹೊಸ ಕಾರ್ಯತಂತ್ರ

ಹೊಸ ಇತಿಹಾಸ ಬರೆದಿದ ಭಾರತದ ಅಂಡರ್‌-19 ವಿಶ್ವಕಪ್‌ ಕೂಟದ ಯಶಸ್ವಿ ನಾಯಕ ಉನ್ಮುಕ್ತ್ ಚಂದ್‌

ಹೊಸ ಇತಿಹಾಸ ಬರೆದಿದ ಭಾರತದ ಅಂಡರ್‌-19 ವಿಶ್ವಕಪ್‌ ಕೂಟದ ಯಶಸ್ವಿ ನಾಯಕ ಉನ್ಮುಕ್ತ್ ಚಂದ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.