ಸಂಜೆ ಅಂದ್ರೆ ಸುಮ್ನೆ ಅಲ್ಲ…

ಈ ಸಂಜೆ ಯಾಕಾಗಿದೆ ?

Team Udayavani, Oct 1, 2019, 5:23 AM IST

ಸಂಜೆ ಅಂದರೆ ಸುಮ್ಮನೆ ಕೂರಬೇಕಾ? ಸಂಜೆ ನಿದ್ದೆ ಮಾಡಬಹುದಾ? ಸಂಜೆ ಅನೋದು ದಿನದ ದೊಡ್ಡ ಜಗುಲಿ. ಬೆಳಗ್ಗೆ ಮತ್ತು ರಾತ್ರಿಯ ನಡುವಿನ ಕೊಂಡಿ. ಸುಮ್ಮನೆ ಕೂತು ಹಾಗೇ ಯೋಚಿಸಿ ನೋಡಿ, ಬೇಡ ಓದಿ ನೋಡಿ- ಬೇರೆಯದೇ ಆದ ಅನುಭೂತಿ ನಿಮ್ಮದಾಗುತ್ತದೆ. ಸಂಜೆ ಅಂದರೆ ನಿನ್ನೆಯ ಕಡೆ ತಿರುಗುವ, ಇಂದನ್ನು ನೋಡುವ, ನಾಳೆಗೆ ಬಗ್ಗೆ ಇಣುಕುವ ಜಗುಲಿ.

ಬಹುತೇಕರು ಸಂಜೆಯನ್ನು ಒಂದು ಕಿರಿಕಿರಿ ಅಂತಲೇ ಭಾವಿಸುತ್ತಾರೆ. ಮೈಯೊಳಗೆ ಸುಸ್ತು, ನಾಳೆಯೇ ತುರ್ತಾಗಿ ಎದುರಾಗುವ ಯಾವುದೊ ಕೆಲಸ, ದಿನವಿಡೀ ಬೆವರು ಹೀರಿ ಮೈಯಿಗೆ ಅಂಟಿದ ಬಟ್ಟೆ, ಕಾಡುವ ಸಮಸ್ಯೆಗಳು ಸಂಜೆಯನ್ನು ಅಸಹನೀಯವಾಗಿ ಮಾಡುತ್ತವೆ. ಪ್ರತಿ ಸಂಜೆಯ ಒಡಲೊಳಗೂ ನಾಳೆ ಹುಟ್ಟಿನ ಬೀಜ ಇರುವುದು ಯಾರಿಗೂ ಗೊತ್ತಿಲ್ಲದಿರುವ ಸತ್ಯವೇನೂ ಅಲ್ಲ. ನಾಳೆಯ ಬೀಜ ಮೊಳೆಯುವ ಹೊತ್ತಿನಲ್ಲಿ ಸುಸ್ತು, ಸಂಕಟ, ಕಿರಿಕಿರಿ ಅಂತ ಕೂತರೆ ಪ್ರತಿ ನಾಳೆಗಳು ಕೂಡ ಇಂದಿನಂತೆಯೇ ಸುಮ್ಮನೆ ಸವೆದು ಹೋಗುತ್ತವೆ.

ನೆನಪಿಡಿ, ಪ್ರತಿಯೊಬ್ಬರಿಗೂ ದಿನಕ್ಕೊಂದೇ ಸಂಜೆ. ಆ ಸಂಜೆ ಮತ್ತೆಂದೂ ಲೈಫಿನಲ್ಲಿ ಬರುವುದಿಲ್ಲ. ಗೋಳುಗಳು ಯಾರಿಗಿಲ್ಲ ಹೇಳಿ? ಅದನ್ನೇ ನೆಪವಾಗಿಟ್ಟುಕೊಂಡು ತಣ್ಣನೆಯ ರಂಗುರಂಗಾದ ಸಂಜೆಯನ್ನು ಮಿಸ್‌ ಮಾಡಿಕೊಳ್ಳುವುದಿದೆಯಲ್ಲ, ಬದುಕಿನಲ್ಲಿ ಅದಕ್ಕಿಂತ ವ್ಯರ್ಥ ಯಾವುದಿದೆ ಹೇಳಿ? ಸಂಜೆ ಎಂದರೆ ಮತ್ತೇನೂ ಅಲ್ಲ, ಬೆಳಗೊಂದು ಕನ್ನಡಿಯಲ್ಲಿ ನೋಡಿಕೊಂಡ ತನ್ನದೇ ಪ್ರತಿಬಿಂಬ. ಸಂಜೆಯನ್ನು ಅಷ್ಟೇ ಸೊಗಸಾಗಿ ಬಳಸಿಕೊಂಡು ಲೈಫ್ ಈಸ್‌ ಬ್ಯೂಟಿಫ‌ುಲ್ ಅಂದವರು ಇದ್ದಾರೆ. ಸಂಜೆಯೆಂದರೆ ಆ್ಯಕ್ಟಿವ್‌ ದಿನವೊಂದರ ಸೋಮಾರಿತನದ ಹೊತ್ತು ಅಂದುಕೊಂಡವರಿಗೆ ಇಲ್ಲೊಂದಿಷ್ಟು ಸಲಹೆಗಳಿವೆ ನೋಡಿ..

ನೀವೆಷ್ಟು ಸಿದ್ಧ?
ಸಂಜೆಯ ಬಗ್ಗೆ ಮಾತನಾಡುವಾಗ, ಇದೇನು ಮಧ್ಯೆ ನಿದ್ದೆ ಎಂದಿರೇನು? ಬೆಳಗ್ಗೆ ನಾವು ದಿನಪೂರ್ತಿ ಮಾಡುವ ಕೆಲಸಕ್ಕಾಗಿ ತಯಾರಿ ನಡೆಸುತ್ತೇವೆ. ಹಾಗೇ ಸಂಜೆ ನಾವು ನಿದ್ದೆಗಾಗಿ ತಯಾರಿ ನಡೆಸಬೇಕು. ಹಗಲಿನ ಎಲ್ಲಾ ಕ್ರಿಯಾತ್ಮಕ ಚಟುವಟಿಕೆಗಳು ರಾತ್ರಿಯ ಕ್ವಾಲಿಟಿ ನಿದ್ದೆಯನ್ನು ಅವಲಂಬಿಸಿದೆ. ನಮ್ಮ ನಡುವೆ ನಿದ್ದೆ ಇಲ್ಲದೆ ಬಳಲುವ ಅದೆಷ್ಟೋ ಜನರಿದ್ದಾರೆ. ಸಂಜೆ ಟೈಮಲ್ಲಿ ಪದೇ ಪದೇ ಕುಡಿಯುವ ಕಾಫಿ, ಟೀ, ಆಲ್ಕೊಹಾಲ… ಅಭ್ಯಾಸ ಖಂಡಿತ ನಿಮ್ಮ ಕ್ವಾಲಿಟಿ ನಿದ್ದೆಯನ್ನು ಕದಿಯುತ್ತದೆ. ಊಟಕ್ಕಾಗಿ ರಾತ್ರಿಯವರೆಗೂ ಕಾಯದೆ ಸಂಜೆಯ ತುದಿಯಲ್ಲಿ ಮುಗಿಸಿ ಬಿಡಿ. ಸಂಜೆಯ ವಾಕ್‌ ಮೈಗೆ ತುಂಬಿಸುವ ಸುಸ್ತು ಒಳ್ಳೆಯ ನಿದ್ದೆ ತರುತ್ತದೆ. ಸಂಜೆಯ ಸ್ನಾನ ಒಳ್ಳೆಯದು. ನಿತ್ಯ ಮಲಗೋ ಹೊತ್ತಿಗೆ ನಿಮಗೆ ಬೇಕಾದ ಪೂರ್ಣ ನಿದ್ದೆಯನ್ನು ಸಂಜೆಯಿಂದ ದುಡಿಸಿಕೊಳ್ಳಿ..

ಕೆಲಸಗಳ ಬ್ಯಾಲೆನ್ಸ್‌ ಶೀಟ್‌
ಇಂದು ಸಿಗುವ ಸಂಜೆ, ನಾಳೆಯ ತಯಾರಿಗೆ ಅಂತ ನಾವೇಕೆ ಭಾವಿಸಬಾರದು? ಬೆಳಗ್ಗೆ ಹೊತ್ತಿಗೆ ಸಿಗುವ ಹಿಡಿಯಷ್ಟು ವೇಳೆಯಲ್ಲಿ ಯಾಕೆ ಒ¨ªಾಡಬೇಕು? ಇವತ್ತಿಗೆ ಮತ್ತು ನಾಳೆಗೆ ಆಗಲೇಬೇಕಾದ ಕಾರ್ಯಗಳ ಒಂದು ಬ್ಯಾಲೆನ್ಸ್‌ ಶೀಟ್‌ ಹಾಕಿಕೊಳ್ಳುವುದು ಒಳ್ಳೆಯದು. ರಾತ್ರಿಗೇನು ಅಡುಗೆ? ಬೆಳಗಿನ ತಿಂಡಿಯೇನು? ಆಫೀಸಿಗೆ ಒಯ್ಯುವ ಪರ್ಸಿನಲ್ಲಿ ಏನು ಇರಬೇಕಿತ್ತು ಮತ್ತು ಇರಬಾರದ್ದೇನು? ನಾಳೆ ಯಾವ ಪ್ಯಾಂಟ್‌ ಹಾಕಿಕೊಳ್ಳಬೇಕು? ಸೀರೆ ಯಾವುದಿರಲಿ? ಆಫೀಸಿಂದ ಮನೆಗೆ ತಂದ ಕೆಲಸಗಳೇನು? ಇದನ್ನೆಲ್ಲಾ ಮೊದಲೇ ಪಟ್ಟಿ ಮಾಡಿಕೊಂಡರೆ, ದೇಹ-ಮನಸ್ಸು, ಎರಡೂ ನಿರಾಳ. ನಿಮಗಾಗಿ ಒಂದಷ್ಟು ಟೈಮ…

ನಾಳೆ ಮಾಡುವ ಕೆಲಸಗಳಿಗಷ್ಟೇ ಸಂಜೆ ಅಲ್ಲ. ಜೊತೆಗೆ ಕೇವಲ ನಿಮಗಾಗಿ ಒಂದಷ್ಟು ಟೈಮ… ಇಟ್ಟುಕೊಳ್ಳಿ. ದಿನಪೂರ್ತಿ ಅಷ್ಟೊಂದು ದುಗುಡದ ಮಧ್ಯೆ, ಗಲಾಟೆಗಳ ಮಧ್ಯೆ ಕಳೆದ ನೀವು, ಸಂಜೆ ವೇಳೆಯಲ್ಲಿ ಮೌನವಾಗಿ ಪಾರ್ಕಿನ ಕಲೆºಂಚಿನ ಮೇಲೆ ಕೂತು ಒಂದು ಗಿಡ ನೋಡುತ್ತಲೋ, ಹಾರುವ ಪಕ್ಷಿಗಳನ್ನು ನೋಡುತ್ತಲೊ ಕೂತು ಬಿಡಿ. ಮೊಬೈಲ… ಲ್ಯಾಪ್‌ ಟಾಪ್‌ಗ್ಳನ್ನು ಹತ್ತಿರ ಬಿಟ್ಟುಕೊಳ್ಳಲೇ ಬೇಡಿ. ನಿಮಗೆ ಇಷ್ಟವಾದ ಪುಸ್ತಕ ಓದಿ. ಅನಿಸಿದ್ದನ್ನು ಬರೆಯುವ ಅಭ್ಯಾಸವಿದ್ದರೆ ಸಂಜೆ ಹೊತ್ತಿನಲ್ಲಿ ಬರೆದು ಬಿಡಿ. ಗೆಳೆಯರೊಂದಿಗೆ ನಗುತ್ತಾ ಹರಟುತ್ತಾ ಒಂದು ವಾಕ್‌ ಮಾಡಿ. ದಿನಪೂರ್ತಿ ಹೇಗಿತ್ತು? ನಾನೇನು ಮಾಡಿದೆ? ಏನು ಮಾಡಬೇಕಿತ್ತು? ಏನು ಮಾಡಬಾರದಿತ್ತು? ಎಂಬುದರ ಅವಲೋಕನವಾಗಲಿ. ನಿಮ್ಮಷ್ಟಕ್ಕೆ ನೀವೇ ಸಂಜೆಯಲ್ಲಿ ಒಂದಾಗಿಬಿಡಿ.

ಸಾಧಕರ ಸಂಜೆಗಳು —
ಸ್ಟೀವ್‌ಜಾಬ್ಸ್, ಪ್ರತಿ ದಿನ ಸಂಜೆ ಕೂತು ದಿನದ ತನ್ನ ಕಾರ್ಯದ ಬಗ್ಗೆ, ದುಡಿತದ ಬಗ್ಗೆ ಲೆಕ್ಕ ಹಾಕುತ್ತಿದ್ದನಂತೆ. ಆತ ಪ್ರತಿದಿನವನ್ನೂ ತನ್ನ ಕೊನೆಯ ದಿನವೆಂದೇ ತಿಳಿದು ಬದುಕಿದವನು. ಬೆಂಜಮಿನ್‌ ಫ್ರಾಂಕ್ಲಿನ್‌ ಸಂಜೆಗಳನ್ನು ಸಂಗೀತಕ್ಕಾಗಿ ಮೀಸಲಿಟ್ಟಿದ್ದ. ಹಾಡುಗಳನ್ನು ಕೇಳುತ್ತಾ ಸಂಜೆಗಳನ್ನು ಸವಿಯುತ್ತಿದ್ದ. ಅರ್ನೆಸ್ಟ್‌ ಹೆಮಿಂಗ್ವೆ, ತನ್ನ ಬರಹಕ್ಕೆ ಬೇಕಾದ ಸರಕನ್ನು ತನ್ನ ಸಂಜೆಗಳಲ್ಲಿ ಹುಡುಕಿಕೊಳ್ಳುತ್ತಿದ್ದ. ಅರ್ಥ ಆಯ್ತಾ? ಸಂಜೆಗಳೆಂದರೆ ಸುಮ್ನೆ ಅಲ್ಲ.

ಸಂಜೆ ಮಲಗಬೇಡಿ ಅಂತಾರೆ
ಮನೆಯಲ್ಲಿ ಯಾರಾದರೂ ಸಂಜೆ ಹೊತ್ತಿನಲ್ಲಿ ಮಲಗಿದರೆ ಹಿರಿಯರಿಂದ ಬೈಗುಳ ಫಿಕ್ಸ್‌. ಅದಕ್ಕೆ ಅವರು ಕೊಡುವ ಕಾರಣಕ್ಕಿಂತ ಸೈಕಾಲಜಿ ಬೇರೇನೇ ಹೇಳುತ್ತದೆ. ಸಂಜೆ ಹೊತ್ತು ಮಲಗುವುದರಿಂದ, ವ್ಯಕ್ತಿಯಲ್ಲಿ ನಕಾರಾತ್ಮಕ ಭಾವನೆಗಳು ಹೆಚ್ಚುತ್ತವೆಯಂತೆ. ಅತಿ ಹೆಚ್ಚು ಅಂತರ್ಮುಖೀಗಳಾಗುವ ಸಾಧ್ಯತೆಯೂ ಇದೆಯಂತೆ.

ಸದಾಶಿವ ಸೊರಟೂರು

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ನೆಟ್‌ ಪರೀಕ್ಷೆ ಪಾಸು ಮಾಡೋದು ತಪಸ್ಸೇ. ಒಂದಷ್ಟು ತಿಂಗಳುಗಳ ಕಾಲ ಎಲ್ಲ ಕನಸನ್ನು ಗಂಟು ಕಟ್ಟಿ ಅಟ್ಟಕ್ಕೆ ಎಸೆದು, ಆ ಜಾಗದಲ್ಲಿ ಪರೀಕ್ಷೆ ಪಾಸು ಮಾಡುವ ಕನಸಷ್ಟೇ...

  • ವಾಟ್ಸ್‌ ಆ್ಯಪ್‌, ಫೇಸ್‌ಬುಕ್‌ನಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡು ಫೋಟೋ ಹಾಕಬೇಕು, ಮಾಲ್‌ನಲ್ಲಿ ಶಾಪಿಂಗ್‌ಗೆ ಹೋಗಬೇಕು. ಸ್ಮಾರ್ಟ್‌ ಫೋನ್‌ ಇದ್ದರೆ ಇಡೀ ಜಗತ್ತೇ...

  • ನಮ್ಮ ಕಡೆ ಶಾಲೆಯ ರಜಾ ದಿನಗಳನ್ನು ಮಜಾ ಮಾಡಬೇಕೆಂದರೆ ಗೆಳೆಯರೊಡನೆ ತಿರುಗಾಟ ಮಾಡುವುದೂ ಒಂದು ದಾರಿ. ನಮ್ಮ ಪಾಲಿಗೆ ಇದು ದಿನನಿತ್ಯದ ಹವ್ಯಾಸವಾಗಿಯೇ ಬಿಟ್ಟಿತ್ತು....

  • ಒಬ್ಬ ವ್ಯಕ್ತಿಯ ಮೇಲೆ ಒಂದು ಇಡೀ ಕುಟುಂಬ ಡಿಪೆಂಡ್‌ ಆಗಿರುತ್ತದೆ. ಆತ/ಆಕೆ ಬದುಕಿ ಉಳಿದರೆ ಹತ್ತಿಪ್ಪತ್ತು ಜನರ ನೆಮ್ಮದಿಗೆ ಕಾರಣ ಸಿಗುತ್ತದೆ. ಹಾಗಾಗಿ, ಆಪರೇಷನ್‌...

  • ಗ್ರೂಪ್‌ ಹೆಸರು- ಊರಿನ ಹೆಸರು ಮತ್ತು ದಾರಿ ಸದಸ್ಯರು- ಅಂಜನಾ ಗಾಂವ್ಕರ್‌ ಇತರರು ಎಷ್ಟೋ ಜನ ವಾಟ್ಸ್‌ ಆ್ಯಪ್‌ ಗ್ರೂಪಿಗೆ ನಮ್ಮ ಹೆಸರನ್ನು ಹೇಳದೇ ಕೇಳದೆ ಸೇರಿಸಿ...

ಹೊಸ ಸೇರ್ಪಡೆ