ಕಾಕ್‌ಪಿಟ್ ಮೇ ಕ್ಯಾಪ್ಟನ್ ರೋಹನ್ ಬಾಸಿನ್ ಹೈ!
ವಿಂಡೋ ಸೀಟು
Team Udayavani, Apr 2, 2019, 6:00 AM IST
ಅಂದು ಸುಧಾ ಮೇಡಂ ಏರ್ ಇಂಡಿಯಾದ ವಿಮಾನದಲ್ಲಿ ಕುಳಿತು, ದೆಹಲಿಯಿಂದ ಚಿಕಾಗೋಗೆ ಹೊರಟಿದ್ದರು. ಇನ್ನೇನು ಸೀಟ್ ಬೆಲ್ಟ್ ಕಟ್ಟಿಕೊಂಡು, ಕಿಟಕಿಯಾಚೆ ನೋಡುತ್ತಾ ಕುಳಿತಿದ್ದಷ್ಟೇ… ಗಗನಸಖಿ, ಸೂಚನೆಗಳೆಲ್ಲ ಮುಗಿದ ಮೇಲೆ, “ಕಾಕ್‌ಪಿಟ್ ಮೇ ಕ್ಯಾಪ್ಟನ್ ರೋಹನ್ ಭಾಸಿನ್’ ಎಂದು ಪೈಲಟ್‌ನ ಹೆಸರನ್ನು ಅನೌನ್ಸ್ ಮಾಡಿದಳು. ಮೇಡಂ ಕಿವಿ ತಕ್ಷಣವೇ ನಿಮಿರಿತು. ನೆನಪು 30 ವರುಷಗಳ ಹಿಂದೆ ಜಾರಿತು…
ಗಗನಸಖಿಯನ್ನು ಬಳಿ ಕರೆದು, “ದಯವಿಟ್ಟು ನನಗೆ, ಈ ವಿಮಾನದ ಪೈಲಟ್ ಅನ್ನು ಭೇಟಿ ಮಾಡಿಸಿ’ ಎಂದು ಕೇಳಿಕೊಂಡರು. ಕಾಕ್‌ಪಿಟ್‌ನಲ್ಲಿ ಕುಳಿತ 33 ವರುಷದ ಪೈಲಟ್ ಇತ್ತ ತಿರುಗುತ್ತಿದ್ದಂತೆ, ಮೇಡಂ ಕಣ್ಣಲ್ಲಿ ದಳದಳನೆ ನೀರು. ಭಾವುಕರಾಗಿ ಒಂದು ನಿಮಿಷ ಮಾತೇ ಹೊರಡಲಿಲ್ಲ.
ಕಣ್ಣೆದುರು, ಬೆಳೆದು ನಿಂತಿರುವ “ಕ್ಯಾಪ್ಟನ್ ರೋಹನ್ ಭಾಸಿನ್’ ಒಂದು ಕಾಲದಲ್ಲಿ ಸುಧಾ ಮೇಡಂನ ಶಿಷ್ಯ. ಪ್ಲೇಹೋಮ್‌ನಲ್ಲಿದ್ದಾಗ, “ನಿನ್ನ ಹೆಸರೇನು ಪುಟ್ಟಾ..’ ಎಂದು ಕೇಳಿದಾಗ, ಅವತ್ತೇ ಆತ “ಕ್ಯಾಪ್ಟನ್ ರೋಹನ್ ಭಾಸಿನ್’ ಅಂತ ಹೇಳಿಕೊಂಡಿದ್ದನಂತೆ. ರೋಹನ್‌ನ ಅಜ್ಜ, ತಂದೆ, ಅಕ್ಕ ಪೈಲಟ್ ಆಗಿದ್ದರಿಂದ, ತಾನೂ ಮುಂದೊಂದು ಕ್ಯಾಪ್ಟನ್ ಆಗುತ್ತೇನೆಂಬ ಕನಸು ರೋಹನ್‌ಗೆ ಬಾಲ್ಯದಿಂದಲೇ ಇತ್ತು. ಇದನ್ನೆಲ್ಲ ಈ ಹುಡುಗನ ಬಾಯಿಂದಲೇ ಮೇಡಂ ಕೇಳಿದ್ದರು. ರೋಹನ್ ತನ್ನ 12ನೇ ವಯಸ್ಸಿನಲ್ಲಿಯೇ ಪೈಲಟ್ ಟ್ರೈನಿಂಗ್ ಪಡೆದು, ಆ ಗುರಿಯತ್ತ ಮುನ್ನಡೆದಿದ್ದನಂತೆ.
ಈ ಸಂಗತಿಯನ್ನು ಇತ್ತೀಚೆಗೆ, ರೋಹನ್‌ನ ತಾಯಿ, ಮಗನ ಎರಡು ಹಳೆಯ ಫೋಟೋಗಳೊಂದಿಗೆ ಟ್ವೀಟ್ ಮಾಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಇನ್ಫಿನಿಕ್ಸ್ ಹಾಟ್ 12 ಪ್ಲೇ ಬಿಡುಗಡೆ : 8,499 ರೂ.ಗೆ ಮಾರುಕಟ್ಟೆಯಲ್ಲಿ ಲಭ್ಯ
ಕುಳಿಯೊಳಗೆ ನಿಗೂಢ ಅರಣ್ಯ ಪತ್ತೆ! ಇಲ್ಲಿವೆ 130 ಮೀ. ಎತ್ತರದ ಮರಗಳು, ಚೀನಾದಲ್ಲೊಂದು ವಿಸ್ಮಯ
ಪಾಂಡ್ಯ-ಸಂಜು ಪಡೆಗಳ ಕ್ವಾಲಿಫೈಯರ್ ಪವರ್; ಇಂದು ಗುಜರಾತ್-ರಾಜಸ್ಥಾನ್ ಮುಖಾಮುಖಿ
ಚೀನ ತಡೆಗೆ ಹೊಸ ವೇದಿಕೆ: ಅಮೆರಿಕ ನೇತೃತ್ವದಲ್ಲಿ ಐಪಿಇಎಫ್ ರಚನೆ
ಹೆಬ್ರಿ-ಮಲ್ಪೆ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗೆ ಮತ್ತೆ ಸಂಕಷ್ಟ