Window ಸೀಟು: ಏಕೆ ಅಳ್ತೀರಿ?

Team Udayavani, Jan 28, 2020, 6:13 AM IST

ಅತ್ಯಂತ ಹಿರಿಯರು, ತುಂಬು ಜೀವನ ನಡೆಸಿದ ವ್ಯಕ್ತಿ ಹತ್ತಿರ ಒಂದಿಬ್ಬರು ಸಮಸ್ಯೆಗೆ ಪರಿಹಾರ ಕೇಳಲು ಬರುತ್ತಿದ್ದರು. ಆ ಹಿರಿಯರು ತಮ್ಮ ಅನುಭವವನ್ನೆಲ್ಲಾ ಸೇರಿಸಿ ಪರಿಹಾರ ಸೂಚಿಸುತ್ತಿದ್ದರು. ಒಂದಷ್ಟು ದಿನಗಳ ನಂತರ, ಮತ್ತೆ ಅದೇ ವ್ಯಕ್ತಿಗಳು, ಅದೇ ಸಮಸ್ಯೆಯೊಂದಿಗೆ ಹಾಜರಾಗುತ್ತಿದ್ದರು.

ಇದು ಪದೇ ಪದೆ ನಡೆಯುತ್ತಲೇ ಇತ್ತು. ಹಿರಿಯರಿಗೆ ದಿಕ್ಕು ತೋಚದಾಗಿ, ಕೊನೆಗೆ ಇವರಿಗೆ ಒಂದು ಜೋಕ್‌ ಹೇಳಿ, ಬದುಕು ಅಂದರೆ ಏನು ಅಂತ ಹೇಳಬೇಕಲ್ಲ ಅಂತ ಕಾಯುತ್ತಿದ್ದಾಗ ಮತ್ತೆ ಆ ಇಬ್ಬರು, ಹಳೇ ಸಮಸ್ಯೆ ಗಂಟನ್ನು ಹಿಡಿದುಕೊಂಡು ಬಂದರು.

ಹಿರಿಯರು- “ನಾನು ನಿಮಗೆ ಒಂದು ಜೋಕ್‌ ಹೇಳ್ತೀನಿ. ಅದನ್ನು ಕೇಳಿ. ಆಮೇಲೆ ನಿಮ್ಮ ಸಮಸ್ಯೆ ಬಗ್ಗೆ ಮಾತಾಡೋಣ’ ಅಂತ ಹೇಳಿ ಜೋಕ್‌ ಹೇಳಿದರು. ಬಂದವರಲ್ಲಿ ಒಂದಷ್ಟು ಜನ ನಕ್ಕರು. ಹಿರಿಯರು ಮತ್ತೆ ಅದೇ ಜೋಕನ್ನು ಹೇಳಿದರು. ಅವರು ಕೇಳಿದರು.

ಹೀಗೆ, ಎರಡು ಮೂರು ಸಲ ಅದೇ ಜೋಕನ್ನು ಹೇಳುತ್ತಿದ್ದಾಗ ಕೊನೆಗೆ ಯಾರೂ ನಗಲೇ ಇಲ್ಲ. ಆಗ ಹಿರಿಯರು, “ಒಂದೇ ಜೋಕನ್ನು ಪದೇ ಪದೆ ಹೇಳಿದರೆ ನಿಮಗೆ ನಗುವುದಕ್ಕೆ ಆಗುತ್ತಿಲ್ಲ ಅಲ್ವಾ?’ ಅಂದರು. ಬಂದವರು ಬಹಳ ಉತ್ಸಾಹಿತರಾಗಿ – “ಹೌದು, ಹಿರಿಯರೇ’ ಅಂದರು.

ಆಗ ಅವರು, “ಹಾಗಾದರೆ, ನೀವು ಹಳೇ ಸಮಸ್ಯೆಯನ್ನು ಮುಂದಿಟ್ಟು ಕೊಂಡು ಪದೇ ಪದೆ ಏಕೆ ಅಳುತ್ತೀರಿ? ಬೇರೆಯವರನ್ನು ದೂರುವುದು, ಹಳೆ ಸಮಸ್ಯೆಗಳಿಗೆ ಅಳುವುದರಿಂದ ಸಮಯ ವ್ಯರ್ಥ’ ಅಂದರು. ಆನಂತರ, ಅವರ್ಯಾರು ಹಿರಿಯರ ಬಳಿ ಸಮಸ್ಯೆ ತಗೊಂಡು ಬರಲೇ ಇಲ್ಲ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಹಣವನ್ನು ಎಲ್ಲೆಲ್ಲಿ ಹೂಡಿದರೆ, ಹೇಗೇಗೆ ಲಾಭ ಮಾಡಬಹುದು. ಕಂಪೆನಿಗೆ ನಷ್ಟವಾಗದ ರಹದಾರಿಗಳು ಯಾವುವು? ಹೀಗೆ, ಉದ್ಯಮ ಆರಂಭಿಸಲು ನಿಂತವರಿಗೆ ನಾನಾ ಮಾರ್ಗಗಳನ್ನು...

  • ನಾಳೆಯೇ ಪರೀಕ್ಷೆ. ಹೀಗಂತ ನೆನಪು ಬಂದಾಕ್ಷಣ ಮನಸ್ಸು ಬೆಚ್ಚಿ ಬೀಳುತ್ತದೆ. ಉಸಿರು ಸ್ವಲ್ಪ ಬಿಸಿಯಾಗುತ್ತದೆ. ಕೆಲವರಿಗೆ ಇದೇ ಭಯವಾಗಿ, ಓದಿದ್ದೆಲ್ಲ ಮರೆತು ಹೋಗುತ್ತದೆ....

  • ಫೋಟೋಗ್ರಫಿಯು ನಿಸರ್ಗದ ಎಂತಹುದೇ ಆಕಾರ, ರೂಪ, ವರ್ಣ, ಪ್ರಮಾಣ, ಇರುವ ಜೀವ ಅಥವಾ ನಿರ್ಜೀವ ವಸ್ತುವನ್ನು, ಕನ್ನಡಿ ಹಿಡಿದಂತೆ ಯಥಾವತ್ತು ದೃಶ್ಯದಾಖಲೆಯಾಗಿಸುವಷ್ಟಕ್ಕೇ...

  • ಕೈ ತುಂಬಾ ಕಾಸು ಇದ್ದರೂ, ಅನ್ಯರ ಕಷ್ಟಕ್ಕೆ ತುಡಿಯುವ ಮನಸ್ಸು ಎಲ್ಲರಿಗೂ ಇರಲ್ಲ. ಹಣದಲ್ಲಿ ಶ್ರೀಮಂತಿಕೆ ಇದ್ದು, ಸಮಾಜಕ್ಕೆ ಅವರಿಂದ ನಯಾ ಪೈಸೆ ಅನುಕೂಲವಿಲ್ಲ...

  • ನೀವು ಆಫೀಸಲ್ಲಿ ಕೆಲಸ ಮಾಡುವಾಗ, ಸಣ್ಣಗೆ ಕೆಮ್ಮುವುದು, ನೆಗಡಿಯಿಂದ ನಸ ನಸ ಅನ್ನುವುದು ಆದರೆ, ಎಲ್ಲ ಆಫೀಸಿನ ಎ.ಸಿ ಕಾಟ ಅಂದುಕೊಂಡು ಬಿಡ್ತೀರಿ. ಇದು ನಿಮ್ಮ ದೇಹದಲ್ಲಿನ...

ಹೊಸ ಸೇರ್ಪಡೆ

  • ಮನದ ಮೂಲೆಯಲ್ಲಿ ಇಡಿಸೂಡಿ ಹಿಡಿದ ಕೈಯೊಂದು ಮನೆಯ ಮೂಲೆಮೂಲೆಗಳನ್ನು ಸ್ವತ್ಛಗೊಳಿಸುತ್ತಿರುವಂತೆ ಭಾಸವಾದಾಗ ಒಂದು ಕ್ಷಣ ಯೋಚನೆಯಲ್ಲೇ ಮುಳುಗಿ ಹೋಯ್ತು ಮನ....

  • ಹುಬ್ಬಳ್ಳಿ: ಉತ್ತರಾಧಿಕಾರಿ ನೇಮಕ ವಿಚಾರ, ತಮ್ಮ ವಿರುದ್ಧ ಮಾಡಿರುವ ಆರೋಪಗಳ ಬಗ್ಗೆ ಸ್ಪಷ್ಟನೆ ನೀಡುವ ನಿಟ್ಟಿನಲ್ಲಿ ಬಾಲೇಹೊಸೂರು ಮಠದ ದಿಂಗಾಲೇಶ್ವರ ಸ್ವಾಮೀಜಿ,...

  • ಜಾಗತಿಕ ಮಟ್ಟದಲ್ಲಿ ಬೆಂಗಳೂರು ಬೆಳೆಯುತ್ತಿದೆ. ದೇಶದ ನಾನಾ ಭಾಗಗಳಿಂದ ಜನ ಇಲ್ಲಿಗೆ ಬಂದು ನೆಲೆಸಿದ್ದಾರೆ. ಬದುಕಿರುವಾಗ ಹೇಗೋ ನೆಲೆ ಸಿಗುತ್ತಿದೆ. ಆದರೆ ಅದೇ...

  • ಬೆಂಗಳೂರು: ವಿವಿಧ ಇಲಾಖೆಯ ಸಚಿವರು ಸುಲಭವಾಗಿ ಕಾರ್ಯಕರ್ತರಿಗೆ ಹಾಗೂ ಸಾರ್ವಜನಿಕರಿಗೆ ಲಭ್ಯವಾಗಬೇಕೆಂಬ ಸದುದ್ದೇಶದಿಂದ ಬಿಜೆಪಿ ಕೇಂದ್ರ ಕಚೇರಿಗೆ ವಾರಕ್ಕೆ...

  • ಬೆಂಗಳೂರು: ಹುಳಿಮಾವು ಕೆರೆ ದುರಂತ ಸಂಭವಿಸಿ ಇಂದಿಗೆ (ಫೆ.24)ನಾಲ್ಕು ತಿಂಗಳಾಗಲಿದೆ. ಆದರೆ, ಇದಕ್ಕೆ "ಪರೋಕ್ಷವಾಗಿ ಕಾರಣರಾದ ಪಾಲಿಕೆಯ ಕೆರೆ ವಿಭಾಗದ ಅಧಿಕಾರಿಗಳ'...