ಗೆಲ್ಲು ಗೆಲ್ಲೆನುತಾ…


Team Udayavani, Oct 17, 2017, 7:15 AM IST

17-3.jpg

ಬದುಕಿನಲ್ಲಿ ಗೆಲ್ಲಲು ನಿಮಗೊಂದು ಗೈಡ್‌ ಬೇಕು, ಮಾಹಿತಿ ಬೇಕು. ಟಿಪ್ಸ್‌ಗಳು ಬೇಕು. ನೀವು ಕೊಂಕಣ ಸುತ್ತಿ ಮೈಲಾರಕ್ಕೆ ಬರುವ ಕೆಲಸ ಆಗಬಾರದೆಂದೇ ಇಲ್ಲಿ ಕೆಲವು ಪ್ರಶ್ನೆಗಳಿವೆ. ಇವುಗಳಿಗೆ ಪ್ರಾಮಾಣಿಕ ಉತ್ತರ ಕೊಟ್ಟು,  ಗೆಲ್ಲುವ ದಾರಿಯನ್ನು ಸುಲಭವಾಗಿ ಕಂಡುಕೊಳ್ಳಿ…

ಬದುಕು ಯಾವತ್ತೂ ಕೂಡ ಗೆದ್ದವರ ಪಾಲು! ಸೋತವರಿಗೆ ಒಂದು ಸಮಾಧಾನ ಹೇಳಿ ಮತ್ತೆ ಹೋಗಿ ನಿಲ್ಲುವುದು ಗೆದ್ದವರ ಬಳಿಯೇ! ಅದಕ್ಕೆಂದೇ ಪ್ರತಿಯೊಬ್ಬರೂ ಒಂದು ಗೆಲುವಿಗಾಗಿ ತುಡಿಯುತ್ತಾರೆ. ಸೋಲು, ಗೆಲುವು ಎಂಬುವು ಇವೆಯಾದರೂ ಒಂದು ಸೋಲು ಕೂಡ ಗೆಲುವಿಗಾಗಿ ಕಾಯುತ್ತದೆ. ಗೆಲುವು ಮತ್ತೆಂದೂ ಸೋಲಿನ ಕಡೆ ಮುಖ ಮಾಡದೇ ಅದನ್ನೆ ಕಾಪಾಡಿಕೊಳ್ಳಲು ಹೆಣಗುತ್ತದೆ.

ಯಾವುದು ಗೆಲುವು? ಎಲ್ಲೋ ಹಳಿ ತಪ್ಪಿಹೋಗಿದ್ದ ಬದುಕನ್ನು ಒಂದು ಪೆಟ್ಟಿಗೆ ಅಂಗಡಿ ಇಟ್ಟುಕೊಂಡು ಮತ್ತೆ ಎದ್ದು ನಿಲ್ಲುವುದರಿಂದ ಹಿಡಿದು ಐಎಎಸ್‌ನ ಮೊದಲ ರ್‍ಯಾಂಕ್‌ ಪಡೆದವ ರ ದ್ದೂ ಗೆಲು ವೇ! ಅಂದರೆ ಬದುಕು ಬೇಡಿಕೊಳ್ಳುವ ಗೆಲುವಿನ ರೂಪಗಳು ಹಲವು. ಐಎಎಸ್‌ ಮಾತ್ರ ಗೆಲುವಲ್ಲ, ಕೈ ತುಂಬಿದ ಹಣ ಮಾತ್ರ ಗೆಲುವಲ್ಲ, ಎಲ್ಲಡೆ ನಿಮ್ಮ ಹೆಸರು ರಾರಾಜಿಸುವುದಷ್ಟೇ ಗೆಲುವಲ್ಲ, ಒಳ್ಳೆಯ ಕಂಪನಿಯಲ್ಲಿ ಕೆಲಸ ಸಿಕ್ಕಿತು ಎಂಬುದಷ್ಟೇ ಗೆಲುವಲ್ಲ. ಅದು ಅವರವರ ಗೆಲುವು ಅಷ್ಟೇ! ಒಬ್ಬ ಜವಾನನಿಗೆ ಕಾರಕೂನನಾಗಿ ಬಡ್ತಿ ಸಿಕ್ಕರೆ ಅವನ ಲೈ ಫ್ ನ ಲ್ಲಿ ಅದೊಂದು ದೊಡ್ಡ ಗೆಲುವು. ಗೆಲುವನ್ನು ಹೀಗೆಯೇ ಎಂದು ವ್ಯಾಖ್ಯಾನಿಸಲಾಗದು.

ಗೆಲುವು ಕೂಡ ಅಷ್ಟೇ ರಾತ್ರೋರಾತ್ರಿ ದಿಢೀರನೇ ಸಂಭವಿಸುವುದಲ್ಲ. ಅದು ನಿಮ್ಮಿಂದ ಏನನ್ನೊ ಬಯಸುತ್ತದೆ. ಅದನ್ನು ನೀವು ಕೊಟ್ಟಿದ್ದೆ ಆದಲ್ಲಿ ಅದು ನಿಮ್ಮ ಕೈಹಿಡಿಯುತ್ತದೆ. ನೆನಪಿರಲಿ ಗೆಲುವಿಗೆ ಅಂತ ಯಾವುದೇ ಶಾರ್ಟ್‌ ಕಟ್‌ ಅನ್ನುವುದು ಇಲ್ಲ. ಅದೇನಿದ್ದರೂ ರಾಜಮಾರ್ಗದಲ್ಲಿ ಕ್ರಮಿಸಬೇಕಾದ ಹಾದಿ. ಕ್ರಮವಹಿಸುವಾಗ ಸಿ ದ್ಧತೆಗಳು ಬೇಕು. ಅಲ್ಲದೇ, ಅಲ್ಲಲ್ಲಿ ಕವಲು ದಾರಿಗಳು ಸಿಗುತ್ತವೆ. ಅಲ್ಲಿ ನಿಮಗೊಂದು ಗೈಡ್‌ ಬೇಕು, ಮಾಹಿತಿ ಬೇಕು. ಟಿಪ್ಸ್‌ ಗಳು ಬೇಕು. ನೀವು ಕೊಂಕಣ ಸುತ್ತಿ ಮೈಲಾರಕ್ಕೆ ಬರುವ ಕೆಲಸ ಆಗಬಾರದೆಂದೇ ಇಲ್ಲಿ ಕೆಲವು ಪ್ರಶ್ನೆಗಳಿವೆ. ಇವುಗಳಿಗೆ ಪ್ರಾಮಾಣಿಕ ಉತ್ತರ ಕೊಟ್ಟು,  ಗೆಲ್ಲುವ ದಾರಿಯನ್ನು ಸುಲಭವಾಗಿ ಕಂಡುಕೊಳ್ಳಿ.

1. ನಿಮ್ಮ ಕಲಿಕೆಯ ವೇಗ ಹೇಗಿದೆ?
ನೀವು ನಿಮ್ಮ ಕಲಿಕೆಯಲ್ಲಿ ಯಾವ ಮೆಟ್ಟಿಲಲ್ಲಿದ್ದೀರಿ? ನಿಮಗೆ ಓಕೆ ಅನಿಸಿದೆಯಾ? ಏನನ್ನು ಕಲಿಯಬೇಕು ಅಷ್ಟನ್ನೇ ಕಲಿಯಲು ಸಮಯ ಸಾಕಾಗಿ ನೀವು ಸುಸ್ತಾಗಿ ಹೋಗುತ್ತೀರಾ? ಹಾಗಾದರೆ, ಗೆಲುವು ಕಷ್ಟವೇ! ಒದಗಿದ ಸಮಯದಲ್ಲಿ ಇರುವುದನ್ನು ಬೇಗ ಕಲಿತು ಮತ್ತೂಂದಿಷ್ಟನ್ನು ಮೈಮೇಲೆ ಎಳೆದುಕೊಳ್ಳಬೇಕು. ಉದಾ: ಬರೀ ಪಠ್ಯವನ್ನು ಓದುವುದು ಕಲಿಯಾಗಬಾರದು, ಅದರಾಚೆಯ ಓದಿಗೂ ಜೊತೆಯಾಗಬೇಕು.

2. ವಾಸ್ತವತೆ ಗೊತ್ತಾ?
ನಾವು ಬರೀ ಕಲ್ಪನೆಗಳಲ್ಲೇ ಕಳೆದು ಹೋಗುತ್ತೇವೆ! ಅತೀ ಕಲ್ಪನೆ ನಿಮ್ಮನ್ನು ಸೋಮಾರಿಯನ್ನಾಗಿಸಬಹುದು. ಬದುಕು ಬರೀ ಥಿಯರಿ ಅಲ್ಲ, ಅದು ಪ್ರಾಕ್ಟಿಕಲ್‌! ಪ್ರಚಲಿತ ವಿದ್ಯಮಾನಗಳನ್ನು ಅ  ರಿ ತು, ಅದರಂತೆ ಸಾಗಬೇಕು. 

3. ನಿಮ್ಮ ಆದ್ಯತೆಗಳೇನು?
ನಿಮ್ಮ ಆದ್ಯತೆಗಳ ಬಗ್ಗೆ ನಿಮಗೆ ಅರಿವಿದೆಯಾ? ಗುರಿಯ ನ್ನು ಹಿಡಿದು ಹೊರಟಾಗ ಅದೇ ನಮಗೆ   ಮೊದಲ ಆದ್ಯತೆ. ಅದಕ್ಕೆ ಸಹಾಯಕವಾಗಿ ನಿಲ್ಲುವವ ಮಾತ್ರ ನಿಮ್ಮ ಆದ್ಯತೆಯಲ್ಲಿರಬೇಕು. ಆ ಕ್ಷಣದಲ್ಲಿ ಒಂದು ಲವ್ವು, ಇನ್ಯಾವುದೊ ಕ್ಷೇತ್ರದಲ್ಲಿ ಕೈ ತೂರಿಸಿಕೊಂಡು ಕೂತರೆ ಶ್ರಮ ಹಂಚಿಹೋಗುತ್ತದೆ.

4. ಕಾಸು, ಖರ್ಚು ಹೇಗಿದೆ?
ಹಣಬೇಕು, ನಿಜ. ಆದರೆ, ಹಣವೇ ಎಲ್ಲವೂ ಅಲ್ಲ. ಹಣವಿಲ್ಲದಿದ್ದರೂ ಆಗುವುದಿಲ್ಲ! ನಿಮಗೆ ಬೇಕಾದಷ್ಟನ್ನು ಮಾತ್ರ ಹೊಂದಿಸಿಕೊಳ್ಳಿ. ಹಣ ಮಾಡುವುದೇ ನಿಮ್ಮ ಗುರಿಯಾಗಿದ್ದರೂ ಆರಂಭದಲ್ಲಿ ಒಂದಿಷ್ಟದಾರೂ ನಿಮ್ಮ ಬಳಿ ಹಣವಿರಬೇಕು ಅಲ್ಲವೇ? ಹಣವಿಲ್ಲದೇ ಎಷ್ಟೊ ಮಂದಿ ತಮ್ಮ ಪ್ರಯತ್ನಗಳನ್ನು ಕೈಬಿಟ್ಟ  ನಿ ದ ರ್ಶ ನ ಗ ಳಿ ವೆ.

5. ಎಷ್ಟು ಗಂಟೆಗೆ ಏಳ್ತೀರಿ?
ನೀವು ಮಾರ್ನಿಂಗ್‌ ಪರ್ಸನ್‌ಗಳಾಗದ ಹೊರತು ಸಾಧ ನೆ ದೂರ ವೇ. ಬೆಳಗ್ಗೆ ಬೇಗ ಎದ್ದು, ನಿಮ್ಮ ಸಾಧ ನೆ ಗಾ ಗಿ ಮಾಡು ವ ಒಂದು ಕೆಲ ಸ ನಿಮ್ಮನ್ನು ರಿಸ್ಟಾರ್ಟ್‌ ಮಾಡಿಸುತ್ತ ದೆ.

6. ಗುರಿಗಳಿಗೆ ಇಟ್ಟಿಗೆ ಇದೆಯೇ?
ನನ್ನ ಗೆಲುವಿಗಾಗಿ ಈ ದಿನವನ್ನು ಹೇಗೆ ದುಡಿಸಿಕೊಳ್ಳಬಲ್ಲೇ ಎಂಬುದರ ಬಗ್ಗೆ ಅನ್ನುವುದರ ಬಗ್ಗೆ ಪ್ರತಿದಿನದ ಆರಂಭದಲ್ಲಿ ಒಂದು ಪ್ಲಾನ್‌ ಸಿದ್ಧವಾಗಬೇಕು. ನಿಮ್ಮ ದೊಡ್ಡ ಗೆಲುವಿಗೆ ಪ್ರತಿದಿನ ಸಣ್ಣ ಸಣ್ಣ ಇಟ್ಟಿಗೆಗಳನ್ನು ಜೋಡಿಸಿಕೊಳ್ಳುತ್ತಲೇ ಹೋಗಬೇಕು.

7. ಮಾನಸಿಕವಾಗಿ ನೀವು ಸದೃಢರೇ?
ಒಂಟಿತನ, ಖನ್ನತೆ, ಉದ್ವೇಗ, ದ್ವಂದ್ವ ಇವೆಲ್ಲ ನಿಮನ್ನು ಆಳುತ್ತವೆಯಾ? ಹಾಗಾದರೆ, ಅಂದುಕೊಂಡಿದ್ದನ್ನು ಮಾಡಲಾರಿರಿ. ದೇಹದ ಆರೋಗ್ಯದಷ್ಟೇ ಮನಸಿನ ಆರೋಗ್ಯವೂ ಮುಖ್ಯ. ಇವುಗಳನ್ನು ಗೆಲ್ಲದ ಹೊರೆತು ಬೇರೆನೂ ಗೆಲ್ಲ ಬಲ್ಲಿರಿ? 

8. ಸಹ ಸಂಬಂಧಗಳು ಹೇಗಿವೆ?
ಮುಂಗೋಪಿಯಾ? ರೇಗುತ್ತೀರಾ? ಬೆರೆಯುವಿಕೆ ಕಡಿಮೆಯಾ? ಇವೆಲ್ಲ ಕೊರತೆ ಇದ್ದರೆ, ಬಿಟ್ಟು ಬಿಡಿ. ಎಲ್ಲರೊಂದಿಗೆ ಬೆರೆಯುವ ಗುಣವಿರಬೇಕು. ಇನ್ನೊಬ್ಬರನ್ನು ಪ್ರಭಾವಿಸುವ ಕಲೆ ಇರಬೇಕು. ಕೊಡುವ ಮತ್ತು ತೆಗೆದುಕೊಳ್ಳುವ ವಿಷಯದ ಬಗ್ಗೆ ಗೊತ್ತಿರಬೇಕು. ಸ್ನೇಹ ಜೀವಿಯಾಗಿ.

9. ನೀವೇಷ್ಟು ಶುದ್ಧ?
ಯಾವ ಶುದ್ಧವೆಂದಿರೊ? ಮೈ ಶುದ್ಧವಲ್ಲ, ಮನಃ ಶುದ್ಧ! ನಿಮ್ಮಲ್ಲಿ ಕಪಟತನಗಳಿದ್ದರೆ ನೀಲು ಜಾಲಿಯ ಗಿಡಗಳಾಗಿ ಬಿಡುತ್ತೀರಿ. ನಿಮ್ಮ ಸಾಧನೆ ಅವುಗಳ ಮುಂದೆ ಸೊನ್ನೆಯಾಗುತ್ತದೆ. ಮೊದಲು ನೀವೆಷ್ಟು ಶುದ್ಧವೆನ್ನುವುದು ನಿಮಗೆ ಗೊತ್ತಾಗಲಿ.

ಸದಾಶಿವ್‌ ಸೊರಟೂರು

ಟಾಪ್ ನ್ಯೂಸ್

8-pavagada

Pavagada: ಬೈಕ್ ಗೆ ‌ಕಾಡು ಹಂದಿ ‌ಡಿಕ್ಕಿಯಾಗಿ ಸವಾರ ಸಾವು

Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ

Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ

Virat Kohli and Rohit to open in t20 world cup; report

T20 World Cup; ರೋಹಿತ್‌, ವಿರಾಟ್‌ ಆರಂಭಿಕರು? ಅಚ್ಚರಿಯ ಮುಖಗಳಿಲ್ಲ?

Jammu and Kashmir: ಉಗ್ರರ ಗುಂಡಿನ ದಾಳಿಗೆ ಬಿಹಾರದ ವಲಸೆ ಕಾರ್ಮಿಕ ಮೃತ್ಯು

Jammu and Kashmir: ಉಗ್ರರ ಗುಂಡಿನ ದಾಳಿಗೆ ಬಲಿಯಾದ ವಲಸೆ ಕಾರ್ಮಿಕ

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

7-thekkatte

Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ganihara

Vijayapura; ವಿಕಸಿತ ಭಾರತದಲ್ಲಾಗಿರುವ ಅಭಿವೃದ್ಧಿ ಏನು: ಕೆಪಿಸಿಸಿ ವಕ್ತಾರ ಗಣಿಹಾರ ಪ್ರಶ್ನೆ

8-pavagada

Pavagada: ಬೈಕ್ ಗೆ ‌ಕಾಡು ಹಂದಿ ‌ಡಿಕ್ಕಿಯಾಗಿ ಸವಾರ ಸಾವು

Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ

Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ

Virat Kohli and Rohit to open in t20 world cup; report

T20 World Cup; ರೋಹಿತ್‌, ವಿರಾಟ್‌ ಆರಂಭಿಕರು? ಅಚ್ಚರಿಯ ಮುಖಗಳಿಲ್ಲ?

The Very Best Payment Techniques for Online Casinos

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.