ಆ್ಯಡ್‌ ಹುಟ್ಟುವ ಸಮಯ

ಜಾಹೀರಾತಿನ ಝಗಮಗ ಲೋಕ!

Team Udayavani, Apr 16, 2019, 6:00 AM IST

ಜಾಹೀರಾತೆಂಬುದು ಜನಸಾಮಾನ್ಯರಿಗೆ ಮಾಹಿತಿಯನ್ನು ಮುಟ್ಟಿಸುವ ಮಾರ್ಗ. ವಸ್ತು, ಸೇವೆಗಳ ಬಗ್ಗೆ ಸಾಮಾಜಿಕ ವಿಷಯಗಳ ಬಗ್ಗೆ ಜನರ ಗಮನ ಸೆಳೆಯಲು ಜಾಹೀರಾತನ್ನು ಬಳಸಬಹುದು. ಯಾವುದೇ ಇಂಡಸ್ಟ್ರಿಯ ಮುಖ್ಯ ಭಾಗವೇ ಜಾಹೀರಾತು ವಿಭಾಗ. ಕಾರ್ಪೊರೆಟ್‌ ಜಗತ್ತಿನಲ್ಲಿ ತನ್ನ ಪ್ರತಿಸ್ಪರ್ಧಿಗೆ ಸೆಡ್ಡು ಹೊಡೆಯುವುದೇ ಜಾಹೀರಾತಿನ ಮೂಲಕ. ಯಾವುದೇ ಶೈಕ್ಷಣಿಕ ಹಿನ್ನೆಲೆಯವರಿಗೂ ಜಾಹೀರಾತು ಕಂಪೆನಿಗಳು ಈ ಕ್ಷೇತ್ರದಲ್ಲಿ ಕೆಲಸ ಮಾಡಲು ಅವಕಾಶ ಮಾಡಿಕೊಡುತ್ತದೆ. ಕ್ರಿಯಾಶೀಲತೆಯೊಂದೇ ಈ ಕ್ಷೇತ್ರದ ಪ್ರಮುಖ ಮಾನದಂಡ. ಅದಲ್ಲದೆ ಉತ್ತಮ ಸಂವಹನ ಶಕ್ತಿ, ಭಾಷಾ ಪ್ರೌಢಿಮೆ, ಸ್ನೇಹಶೀಲ ವ್ಯಕ್ತಿತ್ವ, ಗ್ರಾಹಕರನ್ನು ಹ್ಯಾಂಡಲ್‌ ಮಾಡುವ ಚತುರತೆ ಇದ್ದಲ್ಲಿ ಬೆಳವಣಿಗೆಗೆ ಸಹಾಯಕಾರಿ.

ಭಾರತದ ಅಡ್ವರ್‌ಟೈಸಿಂಗ್‌ ಕ್ಷೇತ್ರದಲ್ಲಿ ಮುಖ್ಯವಾಗಿ ಮೂರು ವಿಭಾಗಗಳಿವೆ; ಗ್ರಾಹಕ ಸೇವೆ (ಕ್ಲೈಂಟ್‌ ಸರ್ವೀಸಿಂಗ್‌), ಕ್ರಿಯಾಶೀಲತೆ(ಕ್ರಿಯೇಟಿವ್‌) ಮತ್ತು ಯೋಜನೆ(ಸ್ಟ್ರಾಟೆಜಿ). ಗ್ರಾಹಕ ಸೇವಾ ವಿಭಾಗದಲ್ಲಿ ಕಾರ್ಯ ನಿರ್ವಹಿಸುವವರು ಕ್ರಿಯಾತ್ಮಕ ತಂಡ ಮತ್ತು ಗ್ರಾಹಕರ ಮಧ್ಯವರ್ತಿಗಳಾಗಿ ಕೆಲಸ ನಿರ್ವಹಿಸಬೇಕಾಗುತ್ತದೆ. ಜಾಹೀರಾತು ನೀಡಲ್ಪಡುತ್ತಿರುವ ವಸ್ತುವಿನ ವಿವರ ಮತ್ತು ಜಾಹೀರಾತುದಾರರು(ಗ್ರಾಹಕ) ಏನನ್ನು ಅಪೇಕ್ಷಿಸುತ್ತಿದ್ದಾರೆ ಎಂಬುದರ ಮಾಹಿತಿ ಮುಂತಾದ ವಿವರಗಳನ್ನು ಕ್ರಿಯೇಟಿವ್‌ ತಂಡಕ್ಕೆ ವಿವರಿಸುವುದು ಕ್ಲೈಂಟ್‌ ಸರ್ವೀಸಿಂಗ್‌ನವರ ಜವಾಬ್ದಾರಿ.

ಕ್ರಿಯೇಟಿವ್‌ ವಿಭಾಗ ಇಡೀ ವ್ಯವಸ್ಥೆಯ ಮುಖ್ಯಾಂಗ. ಅವರು ಕಾನ್ಸೆಪ್ಟ್ಗಳನ್ನು ಸೃಜಿಸಿ, ಅದನ್ನು ಬರವಣಿಗೆ, ಶಬ್ದ ಮತ್ತು ದೃಶ್ಯರೂಪಕ್ಕೆ ತರುತ್ತಾರೆ. ಪ್ರಿಂಟ್‌, ಡಿಜಿಟಲ್‌, ಫಿಲ್ಮ್, ಆಡಿಯೋ – ಯಾವುದೇ ಜಾಹೀರಾತಾದರೂ ಅದು ರೂಪಿತವಾಗುವುದು ಕ್ರಿಯಾಶಾಲ ತಂಡದಿಂದ. ಇನ್ನು ಸ್ಟ್ರಾಟೆಜಿ – ಅಂದರೆ ತಂತ್ರಗಾರಿಕೆ ರೂಪಿಸುವವರು ಎಂ.ಬಿ.ಎ. ಪದವೀಧರರು. ವಸ್ತುವಿನ ಕುರಿತು ಅಧ್ಯಯನ, ಮಾರುಕಟ್ಟೆ ಅಧ್ಯಯನ ಮಾಡಿ ಕೊನೆಗೆ ಮಾರಾಟದವರೆಗೆ ಅನುಸರಿಸಬೇಕಾದ ತಂತ್ರಗಾರಿಕೆಯನ್ನು ರೂಪಿಸುವರು ಸ್ಟ್ರಾಟೆಜಿ ತಂಡದವರು.

ಕ್ಷೇತ್ರವಾರು ವಿಂಗಡಣೆ
ಜಾಹೀರಾತು ಕ್ಷೇತ್ರದಲ್ಲಿ ಪ್ರವೇಶ ಪಡೆಯಲು ಇಚ್ಛಿಸುವವರು ಈ ಕೆಳಗಿನ ಕೋರ್ಸುಗಳನ್ನು ಆಯ್ದುಕೊಳ್ಳಬಹುದು.
– ಗ್ರಾಹಕ ಸೇವೆ: ಮಾರ್ಕೆಟಿಂಗ್‌ನಲ್ಲಿ ಎಂ.ಬಿ.ಎ. ಅಥವಾ ಪಿ.ಜಿ. ಡಿಪ್ಲೊಮಾ
– ಸ್ಟುಡಿಯೊ: ಕಮರ್ಷಿಯಲ್‌ ಆರ್ಟ್ಸ್ ಅಥವಾ ಫೈನ್‌ ಆರ್ಟ್ಸ್ನಲ್ಲಿ ಪರಿಣತಿ (ಬಿ.ಎಫ್.ಎ. ಅಥವಾ ಎಂ.ಎಫ್.ಎ)
– ಮೀಡಿಯಾ: ಜರ್ನಲಿಸಮ್‌, ಮಾಸ್‌ ಕಮ್ಯುನಿಕೇಷನ್‌ ಅಥವಾ ಎಂ.ಬಿ.ಎ.
– ಫೈನಾನ್ಸ್‌: ಸಿ.ಎ., ಐ.ಸಿ.ಡಬ್ಲೂ.ಎ, ಎಂ.ಬಿ.ಎ. (ಫೈನಾನ್ಸ್‌)
– ಫಿಲಮ್‌: ಆಡಿಯೊ ವಿಶುವಲ್‌ನಲ್ಲಿ ಪರಿಣತಿ
– ಪ್ರೊಡಕ್ಷನ್‌: ಪ್ರಿಂಟಿಂಗ್‌ ಮತ್ತು ಪ್ರಿ-ಪ್ರಸ್‌ ವಿಷಯಗಳಲ್ಲಿ ಪರಿಣತಿ

ಯಾರಿಗೆ ಸೂಕ್ತ?
ನೀವು ಉತ್ಸಾಹಿಗಳೂ, ಸೃಜನಶೀಲರೂ, ಆಶಾವಾದಿಗಳೂ ಮತ್ತು ಮಲ್ಟಿ ಟಾಸ್ಕಿಂಗ್‌(ಹೆಚ್ಚು ಜವಾಬ್ದಾರಿಗಳನ್ನು ಏಕಕಾಲಕ್ಕೆ ನಿಭಾಯಿಸುವ ಕಲೆಗಾರಿಕೆ) ಸಾಮರ್ಥ್ಯವುಳ್ಳವರೂ ಆಗಿದ್ದರೆ ನಿಮಗಿದು ಉತ್ತಮ ಕ್ಷೇತ್ರ. ಜನರ ಬೇಡಿಕೆಗಳನ್ನು, ಜಾಹೀರಾತು ಉದ್ಯಮದ ಮಿಡಿತವನ್ನು ನೀವು ಅರಿಯಬಲ್ಲಿರಾದರೆ ನಿಮ್ಮ ಕ್ಲೈಂಟ್‌ಗಳಿಗೆ ನೀವು ಉತ್ತಮ ಸೇವೆ ನೀಡಬಲ್ಲಿರಿ. ಜಾಹೀರಾತು ಕೋರ್ಸುಗಳಿಗೆ ಸಂಬಂಧಿಸಿದ ಕೌಶಲ್ಯಗಳನ್ನು ಗಳಿಸಬಲ್ಲಿರಾದರೆ ನೀವು ಈ ಕ್ಷೇತ್ರದಲ್ಲಿ ಪ್ರವೇಶ ಗಿಟ್ಟಿಸಬಲ್ಲಿರಿ; ಸಮರ್ಥ ಸಂವಹನ ಶಕ್ತಿ, ಟೀಮ್‌ ವರ್ಕ್‌ ಮತ್ತು ಟೀಮ್‌ ಲೀಡರ್‌ಶಿಪ್‌, ಒತ್ತಡ ಮತ್ತು ಸವಾಲನ್ನು ಎದುರಿಸುವ ಶಕ್ತಿ, ಆತ್ಮವಿಶ್ವಾಸ, ಒಪ್ಪಿಸುವ ಜಾಣ್ಮೆ, ನಿರ್ವಹಣಾ ಕೌಶಲ ನಿಮ್ಮಲ್ಲಿದ್ದರೆ ನಿಮಗಿದು ಸೂಕ್ತವಾದ ಕ್ಷೇತ್ರ.

ಉದ್ಯೋಗಾವಕಾಶ
ಜಾಹೀರಾತು ಕ್ಷೇತ್ರದಲ್ಲಿ ವಿಪುಲ ಅವಕಾಶಗಳಿವೆ. ಖಾಸಗಿ ಜಾಹೀರಾತು ಏಜೆನ್ಸಿಗಳು, ಸರ್ಕಾರಿ ಮತ್ತು ಖಾಸಗಿ ವಲಯದ ಜಾಹೀರಾತು ವಿಭಾಗಗಳು, ದಿನಪತ್ರಿಕೆ, ಜರ್ನಲ್‌ಗ‌ಳು, ನಿಯತಕಾಲಿಕೆಗಳು, ರೇಡಿಯೊ ಮತ್ತು ದೂರದರ್ಶನಗಳ ಕಮರ್ಷಿಯಲ್‌ ವಿಭಾಗಗಳು, ಮಾರ್ಕೆಟ್‌ ರಿಸರ್ಚ್‌ ಸಂಸ್ಥೆಗಳು – ಈ ಎಲ್ಲೆಡೆ ಉದ್ಯೋಗಾವಕಾಶಗಳು ಹೆಚ್ಚಿವೆ. ಜೊತೆಗೆ ಫ್ರೀಲಾನ್ಸರ್‌(ಸ್ವತಂತ್ರ) ಆಗಿಯೂ ಜಾಹೀರಾತು ಸೇವೆ ಸಲ್ಲಿಸಬಹುದು. ಅಡ್ವರ್‌ಟೈಸಿಂಗ್‌ ಮ್ಯಾನೇಜರ್‌, ಸೇಲ್ಸ್‌ ಮ್ಯಾನೇಜರ್‌, ಸಾರ್ವಜನಿಕ ಸಂಪರ್ಕಾಧಿಕಾರಿ, ಕ್ರಿಯೇಟಿವ್‌ ಡೈರೆಕ್ಟರ್‌, ಕಾಪಿ ರೈಟರ್‌ ಮತ್ತು ಮಾರ್ಕೆಟಿಂಗ್‌ ಕಮ್ಯುನಿಕೇಷನ್ಸ್‌ ಮ್ಯಾನೇಜರ್‌ಗಳಾಗಿ ಇಲ್ಲಿ ಹುದ್ದೆಗಳನ್ನು ಪಡೆಯಬಹುದು.

ಇಂಟರ್‌ವ್ಯೂನಲ್ಲಿ ಸೆಲೆಕ್ಟ್ ಆಗೋದು ಹೇಗೆ?
ಅಡ್ವರ್‌ಟೈಸಿಂಗ್‌ ಮತ್ತು ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಬೆಳೆಯಬೇಕೆನ್ನುವವರು ಮೊದಲಿಗೆ ಯಾವುದಾದರೊಂದು ಪ್ರತಿಷ್ಠಿತ ಸಂಸ್ಥೆಯಲ್ಲಿ ಇಂಟರ್ನ್ಶಿಪ್‌ ಮಾಡಿರುವುದು ಉತ್ತಮ. ಈ ಕ್ಷೇತ್ರದಲ್ಲಿ ಕ್ರಿಯೇಟಿವಿಟಿ ಮತ್ತು ಹೊಸ ಆಲೋಚನೆಗಳಿಗೆ ಅಗಾಧ ಅವಕಾಶವಿದೆ. ಭಾರತದಲ್ಲಿ, ಒಂದು ಒಳ್ಳೆಯ ಸಂಸ್ಥೆಯಿಂದ ಶಿಕ್ಷಣ ಮತ್ತು ಉತ್ತಮ ಸಂವಹನ ಕೌಶಲ ಹೊಂದಿದ್ದರೆ ನಿಮಗಿಲ್ಲಿ ಆಯ್ಕೆಯ ಅವಕಾಶ ಹೆಚ್ಚು. ಒಳಿತಾಗಲಿ, ಗುಡ್‌ ಲಕ್‌!

ರಘು ವಿ., ಪ್ರಾಂಶುಪಾಲರು

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಜಾಸ್ತಿ ಬರಬೇಕು ಅನ್ನೋದು ಉದ್ಯೋಗದ ನಿಯಮ. ಹೀಗಾಗಿ, ನಮ್ಮ ಬದುಕನ್ನು ನಾವೇ ಚಂದಗಾಣಿಸಿಕೊಳ್ಳಬೇಕು. ಅದಕ್ಕೆ ಡಿಸೈನಿಂಗ್‌ ಕೋರ್ಸ್‌ ಮಾಡಬೇಕು. ಬೆಳಗ್ಗೆ ಎದ್ದು...

  • ಮೊಬೈಲ್‌ ಕಿತ್ತುಕೊಂಡರು ಅಂತ ಮಗ ಅಪ್ಪನನ್ನೇ ಕೊಲೆಗೈದ ಧಾರುಣ ಘಟನೆ ಮೊನ್ನೆಯಷ್ಟೇ ನಡೆದಿದೆ. ಈ ಕಾಲದ ಮಕ್ಕಳಿಗೆ, ಹೆತ್ತು ಹೊತ್ತು ಬೆಳೆಸಿದವರ ಮೇಲೆ ಸ್ವಲ್ಪವೂ...

  • ಹಳ್ಳಿಗಳಿಂದ ಬಂದವರಿಗೆ ಬೆಂಗಳೂರಿನಂಥ ದೊಡ್ಡ ದೊಡ್ಡ ಮಹಾನಗರಗಳಲ್ಲಿ ಒಂಟಿತನ ಕಾಡಲು ಶುರುವಾಗಿಬಿಡುತ್ತದೆ. ಇಲ್ಲಿನವರಲ್ಲಿ ಬಹುತೇಕರು ತಾವಾಯ್ತು ತಮ್ಮ...

  • ಇಡೀ ವಿಶ್ವವೇ ಎದುರು ನೋಡುತ್ತಿದ್ದ ಚಂದ್ರಯಾನ-2 ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಬಿಸಿಲೂರಿನ ಬಾಲೆಯೂ ಹೋಗಿದ್ದಳು. ಆಕೆಗೆ ಐತಿಹಾಸಿಕ ಪ್ರಸಂಗಕ್ಕೆ ಸಾಕ್ಷಿಯಾಗುವ...

  • ಬಟ್ಟೇನ ಈ ಮಟ್ಟಕ್ಕೆ ಕೊಳೆ ಮಾಡ್ಕೊಂಡು ಬಂದಿದೀಯಲ್ಲ, ನಾಳೆ ಸ್ಕೂಲ್‌ಗೆ ಯಾವ ಡ್ರೆಸ್‌ನಲ್ಲಿ ಹೋಗ್ತೀಯಾ? ನಾಲ್ಕು ಬಿಟ್ರೆ ನಿಂಗೆ ಶಿಸ್ತು ಬರೋದು ಎಂದು ರೇಗುತ್ತಾ...

ಹೊಸ ಸೇರ್ಪಡೆ