ಯಕ್ಷಗಾನ ಡಿಪ್ಲೋಮಾ ಕೋರ್ಸ್‌

Team Udayavani, May 14, 2019, 6:00 AM IST

ಮೂಡಬಿದಿರೆಯ ಆಳ್ವಾಸ್‌ ಶಿಕ್ಷಣ ಸಂಸ್ಥೆಯಲ್ಲಿ ಯಕ್ಷಗಾನವನ್ನು ಕಲಿಸುವ ಕೋರ್ಸ್‌ಗೆ ಆಯ್ಕೆ ಪ್ರಕ್ರಿಯೆ ಪ್ರಾರಂಭವಾಗಿದೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಊಟ ವಸತಿ ಸಂಪೂರ್ಣ ಉಚಿತ. ಎರಡು ವರ್ಷದ ಡಿಪ್ಲೋಮಾ ಕೋರ್ಸ್‌ ಇದಾಗಿದೆ. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಪಾಸಾದವರು ಮತ್ತು ನಪಾಸಾದವರು ಇಬ್ಬರೂ ಈ ಕೋರ್ಸ್‌ಗೆ ಸೇರಬಹುದು. ಬಡಗುತಿಟ್ಟು ಹಾಗು ತೆಂಕುತಿಟ್ಟು ಭಾಗವತಿಕೆ -ನಾಟ್ಯ- ಮದ್ದಲೆ – ಚಂಡೆ ತರಬೇತಿ ಮತ್ತು ರಾಮಾಯಣ, ಮಹಾಭಾರತ, ಸಂಗೀತವನ್ನು ಕಲಿಸಲಾಗುವುದು. ಜೊತೆಗೆ ಉಚಿತ ಸಮವಸ್ತ್ರ, 500 ರೂ. ಮಾಸಿಕ ವೇತನವನ್ನು ಕೂಡಾ ನೀಡಲಾಗುವುದು.
ಸಂಪರ್ಕ: ಗುರುಪ್ರಸಾದ್‌- 9480529236, ವಿನಾಯಕ ಭಟ್ಟ ಗಾಳಿಮನೆ – 9449163561, ಸುಬ್ರಹ್ಮಣ್ಯ ಧಾರೇಶ್ವರ – 9448321871


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ