ನೀವು ಆಗಬಹುದು ಡೇಟಾ ಅನಾಲಿಟಿಕ್‌


Team Udayavani, Aug 6, 2019, 5:55 AM IST

analitics

ಡೇಟಾ ಅನಾಲಿಟಿಕ್ಸ್‌ ಕಲಿತವರಿಗೆ ಹೆಚ್ಚಿನ ಉದ್ಯೋಗಾವಕಾಶ ಮತ್ತು ದೊಡ್ಡ ಸಂಬಳದ ಕೆಲಸಗಳು ದೊರೆಯುತ್ತಿವೆ. ಬಳಕೆದಾರನಾಗಿ ಅಥವಾ ಕಂಪನಿಯ ಮುಖ್ಯಸ್ಥನಾಗಿ ಇದನ್ನು ಮಾಡಲು ಹೆಚ್ಚಿನ ಸಮಯವಿರುವುದಿಲ್ಲ. ಆಗ ಪರಿಣತಿ ಹೊಂದಿರುವವರನ್ನು ಕೆಲಸಕ್ಕೆ ನೇಮಿಸಿಕೊಂಡು, ಅತೀ ವೇಗವಾಗಿ ಮಾಹಿತಿ ಕಲೆ ಹಾಕಿ, ವಿಶ್ಲೇಷಿಸಿ ಮಾರುಕಟ್ಟೆಯ ಪೈಪೋಟಿಯನ್ನೆದುರಿಸಿ, ಸೂಕ್ತ ವ್ಯಾಪಾರೀ ನಿರ್ಧಾರ ಮಾಡಿ ವ್ಯವಹಾರಗಳಲ್ಲಿ ಲಾಭ ಪಡೆಯುವ ಪ್ರವೃತ್ತಿ ಎಲ್ಲ ಕಡೆ ಶುರುವಾಗಿರುವುದರಿಂದ ಕೋರ್ಸು ಮಾಡಿದವರಿಗೆ ಲಾಭ ಜಾಸ್ತಿ.

ಪ್ಲಾಸ್ಟಿಕ್‌ ಕಸದಿಂದ ಉಂಟಾಗುತ್ತಿರುವ ಸಮಸ್ಯೆಯ ಕುರಿತ ಮಾಹಿತಿಗೆ ಹುಡುಕಾಡುತ್ತಿದ್ದೆ. ಇಂಟರ್‌ನೆಟ್‌ನಲ್ಲಿ ರಾಶಿ ರಾಶಿ ಮಾಹಿತಿಯೇನೋ ದೊರೆಯಿತು. ಅದರಲ್ಲಿ ಸರಿಯಾವುದು, ಯಾವುದನ್ನು ನಂಬುವುದು ಎಂಬುದೇ ಗೊತ್ತಾಗಲಿಲ್ಲ. ಒಂದೇ ವಿಷಯದ ಕುರಿತು ಹಲವು ಮಾಹಿತಿ ಇದ್ದುದರಿಂದ, ಅವುಗಳನ್ನು ಸಂಕ್ಷಿಪ‌¤ಗೊಳಿಸುವುದು ಹೇಗೆ ಎಂಬ ಗೊಂದಲ ಶುರುವಾಯಿತು. ನನ್ನ ಪಡಿಪಾಟಲು ನೋಡಿದ ಮಗ ಕೂಡಲೇ ನೆರವಿಗೆ ಬಂದ. ಕೆಲವೇ ನಿಮಿಷಗಳಲ್ಲಿ ಬೇಕಾದದ್ದು, ಬೇಡವಾದದ್ದು, ಯಾವುದು ಅಥೆಂಟಿಕ್‌ ಎಂದೆಲ್ಲಾ ವಿಂಗಡಿಸಿ ಕೊಟ್ಟ. ಇಷ್ಟು ಬೇಗ ಹೇಗೆ ಸಾಧ್ಯ ಎಂದದ್ದಕ್ಕೆ “ನಾನು ಕಲಿಯುತ್ತಿರುವುದು ಡೇಟಾ ಅನಾಲಿಟಿಕ್ಸ್‌ನ್ನೇ ಅನ್ನೋದೇ! ಇರುವ ದತ್ತಾಂಶವನ್ನು ಕಲೆ ಹಾಕಿದರಷ್ಟೇ ಸಾಲದು, ಅದನ್ನು ಅನಲೈಸ್‌ ಮಾಡುವುದನ್ನು ಕಲಿತಿರಬೇಕು, ಅದಕ್ಕೆಂದೇ ಹಲವು ಸಾಫ್ಟ್ವೇರ್‌ಗಳಿವೆ. ಕಲಿಯಲು ಕೋರ್ಸ್‌ಗಳೂ ಇವೆ ಎಂದೆಲ್ಲ ವಿವರಿಸಿದ.

ಏನಿದು ಡೇಟಾ ಅನಾಲಿಟಿಕ್ಸ್‌?
ಕನ್ನಡದಲ್ಲಿ ಇದಕ್ಕೆ ದತ್ತಾಂಶ ವಿಶ್ಲೇಷಣೆ ಅಂತಾರೆ. ಇರುವ ಮಾಹಿತಿ ಅಥವಾ ದತ್ತಾಂಶವನ್ನು ಮಾರ್ಕೆಟ್‌ನಲ್ಲಿ ಲಭ್ಯವಿರುವ ಹಾಗೂ ಅತ್ಯಂತ ಮುಂದುವರೆದ ತಂತ್ರಾಂಶಗಳನ್ನು ಬಳಸಿ ವಿಶ್ಲೇಷಣೆ ನಡೆಸುವುದು. ಉದ್ಯಮ ಅಥವಾ ಸಂಸ್ಥೆಯ ಬೆಳವಣಿಗೆಗೆ ಪೂರಕವಾದ ಆಯ್ಕೆ ಯಾವುದು ಎಂಬುದನ್ನು ನಿರ್ಧರಿಸಲು ಬಳಕೆಯಾಗುವ ಕಂಪ್ಯೂಟರ್‌ ಆಧಾರಿತ ಪ್ರಕ್ರಿಯೆಯೇ ದತ್ತಾಂಶ ವಿಶ್ಲೇಷಣೆ.

ಅಗತ್ಯವಿರುವ ಮಾಹಿತಿ ರಾಶಿ ರಾಶಿ ಸಿಗಬಹುದು. ಅದರಲ್ಲಿ ನಿಖರವಾದುದನ್ನು ಆಯ್ದು, ವಿಶ್ಲೇಷಿಸಿ ಬಳಸುವುದನ್ನು ಹೇಳಿಕೊಡುವ ಶಿಕ್ಷಣ ಪ್ರಕಾರಕ್ಕೆ ಡೇಟಾ ಅನಾಲಿಟಿಕ್ಸ್‌ ಅಥವಾ ಬಿಗ್‌ ಡೇಟಾ ಅನಾಲಿಟಿಕ್ಸ್‌ ಎನ್ನುತ್ತಾರೆ. ವಿಶ್ವದ ಏಳೂ ಕಾಲು ಬಿಲಿಯನ್‌ ಜನರನ್ನೂ ಏಕಕಾಲಕ್ಕೆ ಒಂದೇ ವೇದಿಕೆಗೆ ತರಬಲ್ಲ ತಾಕತ್ತಿರುವ ಇಂಟರ್‌ನೆಟ್‌, ಅಗಾಧ ಮಾಹಿತಿ ಹೊಂದಿದೆ. ಅಲ್ಲಷ್ಟೇ ಅಲ್ಲ, ಸರ್ಕಾರ, ಸಂಸ್ಥೆಗಳು, ಶಾಲೆಗಳು, ವಿಶ್ವವಿದ್ಯಾಲಯಗಳು, ಎನ್‌.ಜಿ.ಓ ಗಳು, ಪಂಚಾಯಿತಿ ಆಫೀಸುಗಳು, ನಗರ ಪಾಲಿಕೆಗಳು ಎಲ್ಲರ ಬಳಿಯೂ ತ‌ಮ್ಮದೇ ಆದ, ಕೆಲವೊಮ್ಮೆ ತಾವೇ ಸಂಗ್ರಹಿಸಿದ ಮಾಹಿತಿ ಇರುತ್ತದೆ. ಇದನ್ನು ಅವಶ್ಯಕತೆ ಮತ್ತು ಅದ್ಯತೆಗಳ ಮೇಲೆ ಕ್ರೋಢೀಕರಿಸಿ ಉಪಯೋಗಿಸಿದರೆ ಅಭಿವೃದಿ§ಯ ಎಲ್ಲ ಕೆಲಸಗಳೂ ಸಲೀಸು.

ಕೋರ್ಸ್‌ಗಳು ಇವೆ

ಉನ್ನತ ಶಿಕ್ಷಣ ನೀಡುವ ಹಲವು ಕಾಲೇಜುಗಳಲ್ಲಿ ಡೇಟಾ ಅನಾಲಿಟಿಕ್ಸ್‌ ಕುರಿತು ಸಾಕಷ್ಟು ಕೋರ್ಸ್‌ಗಳು ಪ್ರಾರಂಭವಾಗಿವೆ. ಅವುಗಳನ್ನು ಕಲಿತವರಿಗೆ ಹೆಚ್ಚಿನ ಉದ್ಯೋಗಾವಕಾಶ ಮತ್ತು ದೊಡ್ಡ ಸಂಬಳದ ಕೆಲಸಗಳು ದೊರೆಯುತ್ತಿವೆ. ಬಳಕೆದಾರನಾಗಿ ಅಥವಾ ಕಂಪನಿಯ ಮುಖ್ಯಸ್ಥನಾಗಿ ಇದನ್ನು ಮಾಡಲು ಹೆಚ್ಚಿನ ಸಮಯವಿರುವುದಿಲ್ಲ. ಆಗ ಪರಿಣತಿ ಹೊಂದಿರುವವರನ್ನು ಕೆಲಸಕ್ಕೆ ನೇಮಿಸಿಕೊಂಡು, ಅತೀ ವೇಗವಾಗಿ ಮಾಹಿತಿ ಕಲೆ ಹಾಕಿ, ವಿಶ್ಲೇಷಿಸಿ ಮಾರುಕಟ್ಟೆಯ ಪೈಪೋಟಿಯನ್ನೆದುರಿಸಿ, ಸೂಕ್ತ ವ್ಯಾಪಾರೀ ನಿರ್ಧಾರ ಮಾಡಿ ವ್ಯವಹಾರಗಳಲ್ಲಿ ಲಾಭ ಪಡೆಯುವ ಪ್ರವೃತ್ತಿ ಎಲ್ಲ ಕಡೆ ಶುರುವಾಗಿದೆ. ಇತ್ತೀಚಿನ ದಿನಗಳಲ್ಲಿ ಗ್ರಾಹಕರಿಂದ ಹೆಚ್ಚಿನ ಹಣ ಪಡೆದು ವೇಗವಾಗಿ ಸರಕು ತಲುಪಿಸುವ ಒನ್‌ ಅವರ್‌ ಡೆಲಿವರಿ, ಒನ್‌ ಡೇ ಡೆಲಿವರಿ ನೀಡುವ ಫಾಸ್ಟ್‌ ಮೂವಿಂಗ್‌ ಕನ್‌ಸ್ಯೂಮರ್‌ ಗೂಡ್ಸ್‌ ವ್ಯವಹಾರ ಹೊಂದಿರುವ ಆನ್‌ಲೈನ್‌ ಮಾರಾಟ ಜಾಲಗಳಿಗೆ ಡೇಟಾ ಅನಾಲಿಟಿಕ್ಸ್‌ ನೆರವಾಗುತ್ತದೆ. ಪ್ರತಿಸ್ಪರ್ಧಿ ಕಂಪನಿಯ ಪ್ರಾಡ್‌ಕ್ಟ್ಗಳೇನು? ಅದರ ಬೆಲೆ, ಗುಣಮಟ್ಟ, ಬಳಕೆದಾರನ ಫೀಡ್‌ ಬ್ಯಾಕ್‌, ಇರುವ ಸ್ಟಾಕ್‌, ಕೊಡುವ ಡಿಸ್ಕೌಂಟ್‌…….. ಹೀಗೆ ಹತ್ತು ಹಲವು ವಿವಿಧ ಮಾಹಿತಿ ಪಡೆಯುವುದಲ್ಲದೆ, ತನ್ನ ಕಂಪನಿಯ ಮಾರಾಟ ತಂತ್ರ ಹೇಗಿರಬೇಕೆಂಬುದನ್ನು ನಿರ್ಧರಿಸುವಲ್ಲಿ ಡೇಟಾ ಅನಾಲಿಟಿಕ್ಸ್‌ ದೊಡ್ಡ ರೀತಿಯಲ್ಲಿ ನೆರವಾಗುತ್ತದೆ.

ಯಾವ್ಯಾವ ಕೋರ್ಸ್‌ಗಳು ಲಭ್ಯ
ಪಿಯುಸಿ ಮುಗಿದ ನಂತರ ಆರು ತಿಂಗಳ ಅವಧಿಯಿಂದ ಹಿಡಿದು ಎರಡು ವರ್ಷಗಳವರೆಗಿನ ಸರ್ಟಿಫಿಕೇಟ್‌, ಡಿಪ್ಲೊಮಾ, ಪದವಿ, ಸ್ನಾತಕೋತ್ತರ ಹಾಗೂ ಪಿಜಿ ಡಿಪ್ಲೊಮಾ ಕೋರ್ಸ್‌ಗಳ ಅಧ್ಯಯನಕ್ಕೆ ಅವಕಾಶವಿದೆ. ಐಐಟಿ, ಐಐಎಂ ಹಾಗೂ ಭಾರತ‌ದ ಬಹುತೇಕ ವಿಶ್ವವಿದ್ಯಾಲಯ ಮತ್ತು ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಡೇಟಾ ಅನಾಲಿಟಿಕ್ಸ್‌ ಕೋರ್ಸ್‌ಗಳನ್ನು ಕಲಿಸಲಾಗುತ್ತದೆ. ಆನ್‌ಲೈನ್‌ ಸರ್ಟಿಫಿಕೇಟ್‌ ಕೋರ್ಸ್‌ಗಳೂ ಲಭ್ಯ. ಮುಖ್ಯವಾದುವು ಇಲ್ಲಿವೆ.

ಎಂ.ಎಸ್ಸಿ ಇನ್‌ ಬ್ಯುಸಿನೆಸ್‌ ಅಂಡ್‌ ಡೇಟಾ ಅನಾಲಿಟಿಕ್ಸ್‌ , ಎಂ.ಬಿ.ಎ ಇನ್‌ ಡೇಟಾ ಸೈನ್ಸಸ್‌ ಅಂಡ್‌ ಡೇಟಾ ಅನಾಲಿಟಿಕ್ಸ್‌ , ಪಿ.ಜಿ. ಡಿಪ್ಲೊಮಾ ಇನ್‌ ಡೇಟಾ ಸೈನ್ಸ್‌ , ಪಿ.ಜಿ. ಡಿಪ್ಲೊಮಾ ಇನ್‌ ಬ್ಯುಸಿನೆಸ್‌ ಅನಾಲಿಟಿಕ್ಸ್‌, ಎಂ.ಎಸ್ಸಿ ಇನ್‌ ಬಿಗ್‌ ಡೇಟಾ ಅಂಡ್‌ ವಿಶುಯಲ್‌ ಅನಾಲಿಟಿಕ್ಸ್‌ ಪೋಸ್ಟ್‌ ಗ್ರ್ಯಾಜುಯೇಟ್‌ ಪೋ›ಗ್ರಾಮ್‌ ಇನ್‌ ಡೇಟಾ ಸೈನ್ಸ್‌ ಅಂಡ್‌ ಎಂಜಿನಿಯರಿಂಗ್‌ ಗ್ರ್ಯಾಜುಯೇಟ್‌ ಸರ್ಟಿಫಿಕೇಟ್‌ ಇನ್‌ ಬಿಗ್‌ ಡೇಟಾ ಅಂಡ್‌ ವಿಶುಯಲ್‌ ಅನಾಲಿಟಿಕ್ಸ್‌ ಪಿ.ಜಿ. ಡಿಪ್ಲೊಮಾ ಇನ್‌ ರಿಸರ್ಚ್‌ ಅಂಡ್‌ ಬ್ಯುಸಿನೆಸ್‌.

ಅನಾಲಿಟಿಕ್ಸ್‌ ಕೋರ್ಸ್‌ ಎಲ್ಲೆಲ್ಲಿ ಲಭ್ಯ?
ಬೆಂಗಳೂರಿನ ಮಣಿಪಾಲ್‌ ಗ್ಲೋಬಲ್‌ ಅಕಾಡೆಮಿ ಆಫ್ ಡೇಟಾ ಸೈನ್ಸ್‌, ಪುಣೆಯ ಸಿಂಬಯೋಸಿಸ್‌ ಸೆಂಟರ್‌ ಫಾರ್‌ ಇನ್‌ಫಾರ್‌ವೆುàಶನ್‌ ಟೆಕ್ನಾಲಜಿ, ತಿರುಪತಿಯ ಇಂಟರ್‌ ನ್ಯಾಷನಲ್‌ ಇನ್ಸ್ಟಿಟ್ಯೂಟ್‌ ಆಫ್ ಡಿಜಿಟಲ್‌ ಟೆಕ್ನಾಲಜೀಸ್‌, ಮುಂಬೈನ ಎಸ್‌ ಪಿ ಜೈನ್‌ ಸ್ಕೂಲ್‌ ಆಫ್ ಗ್ಲೋಬಲ್‌ ಮ್ಯಾನೇಜ್‌ಮೆಂಟ್‌, ಕೊಲ್ಕೊತ್ತಾದ ಪ್ರಾಕ್ಸಿಸ್‌ ಬ್ಯುಸಿನೆಸ್‌ ಸ್ಕೂಲ್‌, ಗೋವಾದ ಇನ್ಸ್‌$rಟ್ಯೂಟ್‌ ಆಫ್ ಮ್ಯಾನೇಜ್‌ಮೆಂಟ್‌.

ಶುದ್ಧ ಹಾಗೂ ಅನ್ವಯಕ ಗಣಿತ ಎರಡರಲ್ಲೂ ಪರಿಣಿತಿ, ಪ್ರಮಾಣಿತ ಪ್ರಶ್ನೆ ಭಾಷೆ ಗಳಾದ, ಹೈವ್‌ , ಹಡೂಪ್‌, ಮೆಶೀನ್‌ ಲರ್ನಿಂಗ್‌, ಮ್ಯಾಟ್‌ಲ್ಯಾಬ್‌, ಮೈಕ್ರೋಸಾಫ್ಟ್ನ ಎಕ್ಸೆಲ್‌ ಹಾಗೂ ಸಂಖ್ಯಾ ಶಾಸ್ತ್ರದ ನೆರವಿನೊಂದಿಗೆ ಬಳಸಲ್ಪಡುವ ಆರ್‌ – ಪೋ›ಗ್ರಾಮಿಂಗ್‌ ಹೀಗೆ ಹಲವು ಲಾಂಗ್ವೇಜ್‌ಗಳನ್ನು ಕಲಿತಿರಬೇಕು. ಜೊತೆಗೆ ಸಮಸ್ಯೆ ಬಿಡಿಸುವ ಕೌಶಲ, ತೌಲನಿಕ ಅಧ್ಯಯನ ಸಾಮರ್ಥ್ಯ, ತಾಳ್ಮೆ, ವಿಶ್ಲೇಷಣಾತ್ಮಕ ತಯಾರಿ, ಟೀಮ್‌ ವರ್ಕ್‌ ಮಾಡುವ ಮನೋಭಾವ, ಬರೆಯುವ ಮತ್ತು ಮಾತನಾಡುವ ಭಾಷೆಯ ಮೇಲಿನ ಹಿಡಿತ, ಕ್ರಿಟಿಕಲ್‌ ಥಿಂಕಿಂಗ್‌ ಹಾಗೂ ಶ್ರಮವಹಿಸಿ ದುಡಿಯುವ ಸಾಮರ್ಥ್ಯ ಎಲ್ಲವೂ ಇದ್ದರೆ ಡಾಟಾ ಅನಾಲಿಟಿಕ್ಸ್‌ನ ಕೆಲಸ ಸುಲಭವಾಗುತ್ತದೆ.

ಉದ್ಯೋಗ ಎಲ್ಲಿ?
ಡೇಟಾ ಸೈಂಟಿಸ್ಟ್‌, ಡೇಟಾ ಮೈನಿಂಗ್‌ ಇಂಜಿನಿಯರ್‌, ಡೇಟಾ ಆರ್ಕಿಟೆಕ್ಟ್, ಡೇಟಾ ಅನಾಲಿಸ್ಟ್‌, ಬ್ಯುಸಿನೆಸ್‌ ಇಂಟೆಲಿಜೆನ್ಸ್‌ ಅನಾಲಿಸ್ಟ್‌, ಬ್ಯುಸಿನೆಸ್‌ ಇಂಟೆಲಿಜೆನ್ಸ್‌ ಡೆವಲಪರ್‌, ಅಪ್ಲಿಕೇಶನ್ಸ್‌ ಆರ್ಕೆಟೆಕ್ಟ್, ಎಂಟರ್‌ ಪ್ರçಸ್‌ ಆಕೆ‌ìಟೆಕ್ಟ್, ಮೆಶೀನ್‌ ಲರ್ನಿಂಗ್‌ ಸೈಂಟಿಸ್ಟ್‌, ಮೆಶೀನ್‌ ಲರ್ನಿಂಗ್‌ ಇಂಜಿನಿಯರ್‌… ಹೀಗೆ ಹಲವು ಉದ್ಯೋಗಗಳು ಇವೆ.

ಮೆಕೆನಿjà ಅಂತರಾಷ್ಟ್ರೀಯ ಸಂಸ್ಥೆಯ ಪ್ರಕಾರ, 2020 ರ ವೇಳೆಗೆ ಅಮೆರಿಕಾದಲ್ಲಿ ಡೇಟಾ ಅನಾಲಿಟಿಕ್ಸ್‌ ಕ್ಷೇತ್ರದಲ್ಲಿ 20 ಲಕ್ಷ ಹುದ್ದೆಗಳು ಸೃಷ್ಟಿಯಾಗಲಿವೆ. ಫೋಬ್ಸ್ì ವರದಿಯಂತೆ ಭಾರತದಲ್ಲಿ ಪ್ರತಿ ತಿಂಗಳು 3000 ಡೇಟಾ ಅನಾಲಿಸ್ಟ್‌ ಹುದ್ದೆಗಳು ಸೃಷ್ಟಿಯಾಗುತ್ತಿದ್ದು ಕೆಲವೇ ವರ್ಷಗಳಲ್ಲಿ ಅದರ ಸಂಖ್ಯೆ ವರ್ಷಕ್ಕೆ ಒಂದು ಲಕ್ಷ ತಲುಪಲಿದೆ. ದೊಡ್ಡ ರಿಟೇಲ್‌ಚೈನ್‌, ಹಡಗು ನಿರ್ಮಾಣ, ವಿಮಾನಯಾನ, ಪ್ರವಾಸೋದ್ಯಮ, ಬ್ಯಾಂಕಿಂಗ್‌, ಇ-ಕಾಮರ್ಸ್‌, ಹಣಕಾಸು, ಆರೋಗ್ಯ ಕ್ಷೇತ್ರ, ಆಮದು ಮತ್ತು ರಫ್ತು, ಸರ್ಕಾರಿ ಹಾಗೂ ಸಾಫ್ಟ್ ವೇರ್‌ ಉದ್ಯಮಗಳಲ್ಲಿ ದೊಡ್ಡ ಸಂಖ್ಯೆಯ ದತ್ತಾಂಶ ವಿಶ್ಲೇಷಕರ ಅಗತ್ಯವಿದೆ. ಅವರ ಸಂಬಳ ತಿಂಗಳಿಗೆ ಕಡಿಮೆ ಎಂದರೆ ಐದು ಸಾವಿರ ಡಾಲರ್‌ (3 ಲಕ್ಷ ರೂ) ನಷ್ಟಿರುತ್ತದೆ. ಕೆಲವೊಮ್ಮೆ ಇಪ್ಪತ್ತು ಸಾವಿರ ಡಾಲರ್‌ (12 ಲಕ್ಷ ರೂ) ವರೆಗೆ ಇರುವುದು ಉಂಟು.

– ಗುರುರಾಜ್‌ ಎಸ್‌. ದಾವಣಗೆರೆ , ಪ್ರಾಚಾರ್ಯರು,

ಟಾಪ್ ನ್ಯೂಸ್

11-

Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Belagavi: ಕಣಕುಂಬಿ ಚೆಕ್ ಪೋಸ್ಟ್’ನಲ್ಲಿ ದಾಖಲೆಯಿಲ್ಲದ 7.98 ಲಕ್ಷ ರೂ ವಶಕ್ಕೆ

Belagavi: ಕಣಕುಂಬಿ ಚೆಕ್ ಪೋಸ್ಟ್’ನಲ್ಲಿ ದಾಖಲೆಯಿಲ್ಲದ 7.98 ಲಕ್ಷ ರೂ ವಶಕ್ಕೆ

11-

Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

10-editorial

Editorial: ಐಟಿ ಕಂಪೆನಿಗಳಿಗೆ ಆಹ್ವಾನ: ಕೇರಳದ ಬಾಲಿಶ ನಡೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.