ನಿನ್ನ ಕಣ್ಣಲ್ಲಿ ಕೋಪವಿರಲಿಲ್ಲ,  ಪ್ರೀತಿ ಇತ್ತಾ…?


Team Udayavani, Feb 5, 2019, 12:30 AM IST

d-8.jpg

ನೀನು ಕಾಲೇಜಿನ ಗೇಟಿನ ಮುಂದೆ ಕಾಯುತ್ತಾ ನಿಂತಿದ್ದೆ. ಜೊತೆಗೆ ಒಂದಿಬ್ಬರು ಗೆಳತಿಯರು ಬೇರೆ! ಆಟೋಗ್ರಾಫ್ ಬರೆದಿರಬಹುದಾ ಅಥವಾ ನನಗೆ ಬೈಯೋಕೆ ಅಂತ ಕಾಯ್ತಿದ್ದಾಳ ಅಂತ ತಳಮಳ ಆಯ್ತು. ಗೇಟಿನ ಹತ್ತಿರ ಬರುತ್ತಿದ್ದಂತೆ ಹೃದಯ ತಮಟೆಯಂತೆ ಬಡಿದುಕೊಳ್ಳತೊಡಗಿತು. 

ಹೇಗಿದ್ದೀಯಾ? ನಾನ್ಯಾರು ಅಂತ ಗೊತ್ತಾಯ್ತಾ? ನೆನಪಿಗೆ ಬರ್ತಾ ಇಲ್ವಾ? ಕಾಲೇಜಿನ ದಿನಗಳೊಮ್ಮೆ ನೆನಪು ಮಾಡಿಕೋ… 
ಆ ಘಟನೆ ನೆನಪಿರಬಹುದು. ಅವತ್ತು ಸಮಾಜಶಾಸ್ತ್ರ ಉಪನ್ಯಾಸಕರು ಬೋರ್ಡ್‌ ಕ್ಲೀನ್‌ ಮಾಡೋಕೆ, ಹಾಳೆ ಕೊಡಿ ಅಂದ್ರು. ನಾವಿಬ್ಬರೂ ಸ್ಪರ್ಧೆಗೆ ಬಿದ್ದವರಂತೆ, ಪರ್‌ ಅಂತ ನೋಟ್‌ ಬುಕ್ಕಿನಿಂದ ಹಾಳೆ ಹರಿದು, “ತಗೊಳ್ಳಿ ಸರ್‌’ ಎಂದು ಒಟ್ಟಿಗೆ ಕೈ ಚಾಚಿದೆವು. ಆ ಕ್ಷಣ ಇಬ್ಬರೂ ಮುಖ ನೋಡಿಕೊಂಡು ನಕ್ಕೆವು. ಆಮೇಲೆ ದಿನಂಪ್ರತಿ ಇಬ್ಬರೂ ಕದ್ದು ಮುಚ್ಚಿ, ಕಳ್ಳಗಣ್ಣಿಂದ ನೋಡ್ತಾ ಇದ್ದ, ನಗ್ತಾ ಇದ್ದ ವಿಷಯ ನಮ್ಮಿಬ್ಬರಿಗೆ ಮಾತ್ರ ಗೊತ್ತಿತ್ತು. 

ದಿನಗಳು ಕಳೆದವು. ವರ್ಷ ಕಳೆದೇ ಹೋಯ್ತು. ಇಬ್ಬರ ನಡುವೆ ನಗು ಬಿಟ್ಟರೆ, ಮಾತು-ಕಥೆ ನಡೆಯಲೇ ಇಲ್ಲ. ನಿನ್ನನ್ನು ಮಾತಾಡಿಸುವ ಧೈರ್ಯವೂ ನನಗೆ ಬರಲಿಲ್ಲ. ಆದರೆ, ಗೆಳೆಯರು ಬಿಡಬೇಕಲ್ಲ? “ಅವಳು ಮತ್ತೆ ಸಿಗುತ್ತಾಳ್ಳೋ, ಇಲ್ಲವೋ ಗೊತ್ತಿಲ್ಲ. ಹೋಗಿ ಮಾತಾಡಿಸು, ಫೋನ್‌ ನಂಬರ್‌ ಕೇಳು’ ಅಂತೆಲ್ಲಾ ಹುರಿದುಂಬಿಸಿದರು. ಈ ಮಧ್ಯೆ ಒಬ್ಬ ಗೆಳೆಯ ಹೀಗೊಂದು ಐಡಿಯಾ ಹೇಳಿದ: “ಹೇಗೂ ಕಾಲೇಜು ಮುಗೀತು. ಎಲ್ಲರೂ ಆಟೋಗ್ರಾಫ್ ಬರೆಸುತ್ತಾರೆ. ಇದೇ ಛಾನ್ಸು, ಹೋಗಿ ಅವಳಿಗೆ ಆಟೋಗ್ರಾಫ್ ಬುಕ್‌ ಕೊಡು’ ಎಂದ. 

ನನಗೂ ಅದೇ ಸರಿ ಅನ್ನಿಸಿತು. ಆಟೋಗ್ರಾಫ್ ಪುಸ್ತಕ ಖರೀದಿಸಿ, ಬಣ್ಣಬಣ್ಣದ ಸ್ಕೆಚ್‌ ಪೆನ್‌ನಿಂದ ಅದನ್ನು ಅಲಂಕರಿಸಿದೆ. ನಿನಗೇ ಮೊದಲು ಬರೆಯಲು ಕೊಟ್ಟರೆ ಡೌಟ್‌ ಬರಬಹುದೆಂದು, ಒಂದಿಬ್ಬರು ಗೆಳೆಯರ ಕೈಯಲ್ಲಿ ಬರೆಸಿದೆ. ಮರುದಿನ, ಕಾಲೇಜು ಗೇಟಿನ ಬಳಿ ನೀನು ಬರುವುದನ್ನೇ ಕಾಯುತ್ತಾ ನಿಂತಿದ್ದೆ. ಧೈರ್ಯ ಮಾಡಿ,”ರೀ, ನಿಂತ್ಕೊಳ್ಳಿ ಅಂದೆ’. ನೀನು ಸೈಕಲ್‌ಗೆ ಬ್ರೇಕ್‌ ಹಾಕಿ ನಿಲ್ಲಿಸಿ, ಹುಬ್ಬಲ್ಲೇ ಏನೆಂದು ಕೇಳಿದೆ. “ಅದೂ, ಅದೂ ಆಟೋಗ್ರಾಫ್ ಬರೆದುಕೊಡಿ’ ಅಂತ ಇದ್ದಬದ್ದ ಧೈರ್ಯವನ್ನೆಲ್ಲ ಸೇರಿಸಿ ಹೇಳಿ, ನಿನ್ನ ಉತ್ತರಕ್ಕೂ ಕಾಯದೆ ನಡೆದೇ ಬಿಟ್ಟೆ. ಮಧ್ಯಾಹ್ನವೇ ಆಟೋಗ್ರಾಫ್ ಬರೆದು ಬುಕ್‌ ವಾಪಸ್‌ ಕೊಡೊ¤àಯಾ ಅಂತ ಕಾಯ್ತಾ ಇದ್ದೆ. ನೀನು ಕೊಡಲಿಲ್ಲ. ನನ್ನ ಚಡಪಡಿಕೆ ನೋಡಿ ಕೆಲ ಗೆಳೆಯರು, “ಅವರಪ್ಪನಿಗೆ ಹೇಳಿಬಿಟ್ರೆ, ನಾಳೆ ಅವರಪ್ಪನನ್ನ ಕಾಲೇಜಿಗೇ ಕರೆಸಿದ್ರೆ..’ ಅಂತೆಲ್ಲಾ ಹೆದರಿಸಿದರು. ನಾಳೆ ಕಾಲೇಜಿಗೆ ಬರಲೇಬೇಡ ಅಂತಲೂ ಹೇಳಿದರು. ನಾನು ಅದೇನಾಗುತ್ತೋ ನೋಡೇ ಬಿಡೋಣ ಅಂತ ಕಾಲೇಜಿಗೆ ಬಂದೆ.

ನೀನು ಕಾಲೇಜಿನ ಗೇಟಿನ ಮುಂದೆ ಕಾಯುತ್ತಾ ನಿಂತಿದ್ದೆ. ಜೊತೆಗೆ ಒಂದಿಬ್ಬರು ಗೆಳತಿಯರು ಬೇರೆ! ಆಟೋಗ್ರಾಫ್ ಬರೆದಿರಬಹುದಾ ಅಥವಾ ನನಗೆ ಬೈಯೋಕೆ ಅಂತ ಕಾಯ್ತಿದ್ದಾಳ ಅಂತ ತಳಮಳ ಆಯ್ತು. ಗೇಟಿನ ಹತ್ತಿರ ಬರುತ್ತಿದ್ದಂತೆ ಹೃದಯ ತಮಟೆಯಂತೆ ಬಡಿದುಕೊಳ್ಳತೊಡಗಿತು. ನಿನ್ನನ್ನು ಕಂಡೂ ಕಾಣದಂತೆ ಗೆಳೆಯರ ಮಧ್ಯದಲ್ಲಿ ತಲೆ ತಗ್ಗಿಸಿ ಹೋಗಲು ಮುಂದಾದೆ. “ಇಲ್ಲಿ ಕೇಳಿ..’ ಅಂತ ನೀನು ಕೂಗಿದೆ. ನಾನು ಕೇಳೇ ಇಲ್ಲವೆಂಬಂತೆ ಮುಂದೆ ನಡೆದೆ. “ರೀ, ಗುರುರಾಜ್‌ ನಿಂತ್ಕೊಳ್ಳಿ’ ಅಂತ ದನಿಯೇರಿಸಿ ಕರೆದಾಗ ಹಿಂದಿರುಗಿ ನೋಡಿದೆ. ಇನ್ನೇನು ಹೊಡೆದೇ ಬಿಡ್ತೀಯ ಅಂತ ಗುರಾಯಿಸುತ್ತಾ ಹತ್ತಿರ ಬಂದು, “ರೀ ನಾನ್ಯಾಕ್ರಿ ಬರೆಯಬೇಕು ಆಟೋಗ್ರಾಫ್? ನಾ ಬರೆಯಲ್ಲ. ತಗೊಳ್ಳಿ ನಿಮ್ಮ ಬುಕ್‌’ ಅಂತ ಆಟೋಗ್ರಾಪ್‌ ಬುಕ್‌ ಅನ್ನು ನನ್ನ ಕೈಗಿಟ್ಟು ಬರ್ರನೆ ನಡೆದೇಬಿಟ್ಟೆ. 

ಅಲ್ಲಾ, ಅಷ್ಟು ದಿನವೂ ಕದ್ದುಮುಚ್ಚಿ ನನ್ನತ್ತ ನೋಡುತ್ತಿದ್ದೆ, ನಗುತ್ತಿದ್ದೆ. ಆಟೋಗ್ರಾಫ್ ಕೇಳಿದ್ದಕ್ಕೆ ಹಾಗ್ಯಾಕೆ ಸಿಟ್ಟು ಮಾಡಿಕೊಂಡೆ. ಆದರೆ, ನಿನ್ನ ಕಣ್ಣಲ್ಲಿ ಆವತ್ತು ಕೋಪವಂತೂ ಇರಲಿಲ್ಲ. ಮತ್ತೆ ಪ್ರೀತಿ ಇತ್ತಾ? ಗೊತ್ತಿಲ್ಲ… ಅದಕ್ಕೆ ನೀನೇ ಉತ್ತರ ಹೇಳಬೇಕು. 

ಇಂತಿ ನಿನ್ನ ಆಟೋಗ್ರಾಫ್ಗಾಗಿ ಕಾದಿರುವ

ಗುರುರಾಜ ದೇಸಾಯಿ, ತಲ್ಲೂರು
 

ಟಾಪ್ ನ್ಯೂಸ್

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

Team India; Not Hardik; Bhajji has suggested the name of Team India’s next T20 captain

Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

18

ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

ತಾಳಿಭಾಗ್ಯ ಯೋಜನೆ ತಂದ ಕಾಂಗ್ರೆಸ್ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

Mumbai Airport: ನ್ಯೂಡಲ್ಸ್‌ ಪ್ಯಾಕೇಟ್‌ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!

Mumbai Airport: ನ್ಯೂಡಲ್ಸ್‌ ಪ್ಯಾಕೇಟ್‌ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

Team India; Not Hardik; Bhajji has suggested the name of Team India’s next T20 captain

Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ

ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ

ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ

Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’

Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.