ಮನದಲ್ಲಿ ನಿನದೇ ಹೆಜ್ಜೆಯ ಸಪ್ಪಳ!

Team Udayavani, Dec 17, 2019, 6:06 AM IST

mnada

ಬರಿದಾಗಿದ್ದ ಮನದಲ್ಲಿ ನಿನ್ನ ಹೆಜ್ಜೆಯ ಗುರುತು ಮೂಡಿದಾಗಲೇ ನಾನೆಂದೂ ಕಾಣದ ಸಂತಸ, ಸಂಭ್ರಮದ ಅರ್ಥ ಅರಿತಿದ್ದು. ದಿನದ ಪ್ರತಿ ಕ್ಷಣದಲ್ಲೂ ನನ್ನನ್ನು ಕಾಡುವ ನಿನ್ನನ್ನು ನೆನೆದಾಗ ಅದೇನೋ, ಎಲ್ಲ ಮರೆತು ಮೊಗದಲ್ಲೊಂದು ನಗೆ ಅರಳುತ್ತದೆ. ನಾನು ನಿನ್ನನ್ನು ಕಣ್ತುಂಬಿಕೊಂಡಿದ್ದು ಎರಡೇ ಸಲ. ಆದರೂ, ಮನದಲ್ಲಿ ಅಚ್ಚಾಗಿರುವ ನಿನ್ನ ಚಿತ್ತಾರವ ನೆನೆದರೆ ಅಚ್ಚರಿಯೆನಿಸುತ್ತದೆ. ನಿನ್ನೊಟ್ಟಿಗೆ ಪ್ರತಿದಿನ ಅದೆಷ್ಟು ಹರಟಿದರೂ ಮತ್ತಷ್ಟು ಬಾಕಿ ಉಳಿದಿರುವಂತೆ ಹೃದಯ ಮತ್ತೆ ಮತ್ತೆ ನಿನ್ನ ಮಾತಿಗೆ, ನಗುವಿನ ಕಲರವಕ್ಕೆ ಹಂಬಲಿಸುತ್ತದೆ.

ನನ್ನ ಭಾವುಕತೆಯನ್ನು ತೆರದಿಡ­ಬಾರದೆಂದು ಬಚ್ಚಿಟ್ಟರೂ ನಿನ್ನೆದುರು ಮನಸು ತಾನಾಗಿಯೇ ತೆರೆದುಕೊಳ್ಳುತ್ತದೆ. ನೀನು ಕಣ್ಣೆದುರು ಸುಳಿದಾಗೆಲ್ಲಾ, ಅದ್ಯಾವುದೋ ಚೈತನ್ಯ ತುಂಬಿಕೊಂಡು ಮನದ ಬೇಸರವೆಲ್ಲಾ ಕಳೆದು ಹುಮ್ಮುಸ್ಸಿನ ಹುರುಪು ಹುಟ್ಟಿಕೊಳ್ಳುತ್ತದೆ. ಅದೆಂತಹ ಶಕ್ತಿ ನಿನ್ನದು? ಅದ್ಯಾವ ಮೋಡಿಯ ಜಾಡಿನಲ್ಲಿ ಬಲೆಯ ಬೀಸಿ ಬಿಗಿದು ಹಾಕಿರುವೆ? ಇಬ್ಬರೂ ಅದೆಷ್ಟು ಅಂತರದಲ್ಲಿದ್ದೇವೆ.

ಅಷ್ಟು ದೂರವನ್ನೂ ಸರಿಸಿ ಅದು ಹೇಗೆ ಹುರಿದುಂಬಿಸಿ ಹತಾಶೆಯ ಗಳಿಗೆಗಳನ್ನು ಅಳಿಸಿ ಹಾಕುವೆ? ನಿಜಕ್ಕೂ ನೀನೆಂದರೆ ನನ್ನ ಬದುಕಲ್ಲಿ ಮುಗಿಯದ‌ ಸಂಭ್ರಮ. ಬದುಕಿನ ಜೋಳಿಗೆಯಲ್ಲಿ ಮೊಗೆದಷ್ಟು, ಬರಿದಾಗದ ನಿನ್ನ ನೆನಪುಗಳನ್ನು ಜತನವಾಗಿ ಎತ್ತಿಟ್ಟುಕೊಂಡಿದ್ದೇನೆ. ಅದಷ್ಟು ಸಾಕು ನನ್ನ ನಾಳೆಗಳಿಗೆ. ಕಣ್ಣುಗಳು ನಿನ್ನ ಕನಸುಗಳನ್ನೇ ತುಂಬಿಕೊಂಡು ಎದೆಯೊಳಗೊಂದು ಇಂಪಾದ ಹೊಸರಾಗ ಹುಟ್ಟಿಸಿಕೊಂಡಿದೆ. ಬರಿದಾಗಿದ್ದ ಬದುಕಲ್ಲಿ ಭರವಸೆಯ ತುಂಬಿದ ನಿನ್ನ ಕನಸು ಹೊತ್ತೇ ಕಾಲ ಸವೆಸಬೇಕೆನ್ನುವ ಹಂಬಲ ಹೆಚ್ಚಾಗಿದೆ.

ಇಂತಿ
ಸೌಮ್ಯಶ್ರೀ ಎ.ಎಸ್‌.

ಟಾಪ್ ನ್ಯೂಸ್

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

Udupi; ಮಸ್ಟರಿಂಗ್‌ ಕೇಂದ್ರದಲ್ಲಿ ಸಕಲ ತಯಾರಿ

Udupi; ಮಸ್ಟರಿಂಗ್‌ ಕೇಂದ್ರದಲ್ಲಿ ಸಕಲ ತಯಾರಿ

ಮತದಾನ ಮಾಡಿದ ನಿವೃತ್ತ ಯೋಧ ನಿಧನ

Mangaluru; ಮತದಾನ ಮಾಡಿದ ನಿವೃತ್ತ ಯೋಧ ನಿಧನ

Lok Sabha ಚುನಾವಣೆ ಕರ್ತವ್ಯಕ್ಕೆ 60ಕ್ಕೂ ಅಧಿಕ ಸರಕಾರಿ ಬಸ್‌

Lok Sabha ಚುನಾವಣೆ ಕರ್ತವ್ಯಕ್ಕೆ 60ಕ್ಕೂ ಅಧಿಕ ಸರಕಾರಿ ಬಸ್‌

ದಿ| ಜಾರ್ಜ್‌ ಫೆರ್ನಾಂಡಿಸ್‌ ಆದರ್ಶ, ಅವರೇ ಸ್ಫೂರ್ತಿ: ಕ್ಯಾ| ಬ್ರಿಜೇಶ್‌ ಚೌಟ

ದಿ| ಜಾರ್ಜ್‌ ಫೆರ್ನಾಂಡಿಸ್‌ ಆದರ್ಶ, ಅವರೇ ಸ್ಫೂರ್ತಿ: ಕ್ಯಾ| ಬ್ರಿಜೇಶ್‌ ಚೌಟ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

Udupi; ಮಸ್ಟರಿಂಗ್‌ ಕೇಂದ್ರದಲ್ಲಿ ಸಕಲ ತಯಾರಿ

Udupi; ಮಸ್ಟರಿಂಗ್‌ ಕೇಂದ್ರದಲ್ಲಿ ಸಕಲ ತಯಾರಿ

ಮತದಾನ ಮಾಡಿದ ನಿವೃತ್ತ ಯೋಧ ನಿಧನ

Mangaluru; ಮತದಾನ ಮಾಡಿದ ನಿವೃತ್ತ ಯೋಧ ನಿಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.