ಗಗನದಲಿ ಒಂದು ದಿನ…

Team Udayavani, Oct 3, 2019, 9:50 AM IST

ಬಾಹ್ಯಾಕಾಶದಲ್ಲಿ ಗುರುತ್ವಾಕರ್ಷಣೆ ಇರುವುದಿಲ್ಲ. ಮನುಷ್ಯನ ದೇಹ ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಸಮಯ ಬೇಕಾಗುತ್ತದೆ. ಯಂತ್ರಗಳ ರಿಪೇರಿ ಹಾಗೂ ವೈಜ್ಞಾನಿಕ ಪ್ರಯೋಗಗಳನ್ನು ನಡೆಸುವ ಸಲುವಾಗಿ ವಾರಗಳ ಕಾಲ, ತಿಂಗಳುಗಳ ಕಾಲ ಗಗನಯಾತ್ರಿಗಳು ಅಂತರಿಕ್ಷದಲ್ಲಿ ನೆಲೆಗೊಂಡಿರುವ, ಬಾಹ್ಯಾಕಾಶ ನಿಲ್ದಾಣದಲ್ಲಿ ನೆಲೆಸುತ್ತಾರೆ. ಒಳಗೆ ಆಮ್ಲಜನಕವೇನೋ ಇರುತ್ತದೆ. ಆದರೆ, ಅಲ್ಲಿ ಅಷ್ಟು ದೀರ್ಘ‌ಕಾಲ ಅವರ ದಿನನಿತ್ಯದ ಚಟುವಟಿಕೆಗಳು ಹೇಗಿರುತ್ತವೆ, ಊಟ ತಿಂಡಿ, ನಿತ್ಯಕರ್ಮಗಳ ಹೇಗೆ ಸಾಗುತ್ತವೆ ಎಂಬುದು ಕುತೂಹಲದ ವಿಷಯ.

1 ಹಲ್ಲುಜ್ಜುವುದು
ಭೂಮಿಯಲ್ಲಿ ಇರುವ ತರಹವೇ ಇಲ್ಲಿಯೂ ಬ್ರಷ್‌ ಮತ್ತು ಟೂತ್‌ಪೇಸ್ಟ್ ಇದ್ದು ಗಗನಯಾತ್ರಿಗಳು ಹಲ್ಲುಜ್ಜುತ್ತಾರೆ. ಆದರೆ ಉಗುಳಲು ಸಿಂಕ್‌ ಇರುವುದಿಲ್ಲ! ಉಗುಳಿದರೆ ಅದು ತೇಲತೊಡಗುತ್ತೆ! ಅದಕ್ಕಾಗಿ ಕೆಲವರು ಅದನ್ನು ನುಂಗಿ ಬಿಟ್ಟರೆ ಇನ್ನು ಕೆಲವರು ಅದನ್ನು ಟಿಶ್ಯೂ ಪೇಪರಿನಲ್ಲಿ ಉಗುಳಿ (ತೆಗೆದು!) ಪೇಪರನ್ನು ವಿಸರ್ಜಿಸುತ್ತಾರೆ!

2 ನಿತ್ಯಕರ್ಮ
ಈ ಅತಿ ಮುಖ್ಯವಾದ ಕೆಲಸವನ್ನು ಪೂರೈಸಲು ಬಾಹ್ಯಾಕಾಶ ನೌಕೆಯಲ್ಲಿ ಒಂದು ಚಿಕ್ಕ ಕೋಣೆಯನ್ನು ಮೀಸಲಿಟ್ಟಿರುತ್ತಾರೆ. ಇದರಲ್ಲಿ ಮಲವಿಸರ್ಜನೆಗೆ ಚಿಕ್ಕ ಕಮೋಡ್‌ ಇದ್ದು ಅದಕ್ಕೆ ಸಕ್ಷನ್‌ ಪಂಪ್‌ ಅನ್ನು ಅಳವಡಿಸಿರುತ್ತಾರೆ. ಮೂತ್ರ ವಿಸರ್ಜನೆಗೆ ಒಂದು ಬೇರೆಯದೇ ಪೈಪ್‌ ವ್ಯವಸ್ಥೆಯಿದ್ದು ಇದನ್ನು ದೇಹದ ಮೂತ್ರದ್ವಾರಕ್ಕೆ ಸರಿಯಾಗಿ ಹೊಂದಿಸಿ ಹಿಡಿಯಬೇಕು. ಇದಕ್ಕೂ ಕೂಡ ಸಕ್ಷನ್‌ ಪಂಪ್‌ ಅಳವಡಿಕೆ ಇರುವುದರಿಂದ ವಿಸರ್ಜಿಸಿದ ಮೂತ್ರ ಪೈಪಿನಿಂದ ಮತ್ತೆ ಹೊರಬರುವುದನ್ನು ತಡೆಯುತ್ತದೆ! ಕೈ ತೊಳೆಯಲು ವೆಟ್‌ ವೈಪ್ಸ… (ಹಸಿಯಾದ ಟಿಶ್ಯೂ ಪೇರ್ಪ) ಅನ್ನು ಉಪಯೋಗಿಸಿದರೆ ಮುಗಿಯಿತು!

3 ಸ್ನಾನ
ನೀರು ಮೈ ಮೇಲೆ ಸುರಿದುಕೊಂಡರೂ ಅದು ಗಾಳಿಯಲ್ಲಿ ತೇಲುವುದರಿಂದ ಇಲ್ಲಿಯ ಸ್ನಾನ ಬೇರೆ ರೀತಿಯೇ ಇರುತ್ತದೆ. ಒಂದು ಟವೆಲ್ಲಿನ ಮೇಲೆ ನೀರಿನ ಪೌಚ್‌ (ನೀರಿನ ಪ್ಯಾಕೆಟ್‌ ಗೆ ಒಂದು ಪೈಪ್‌ ಅಳವಡಿಸಿ ಅದರ ಮೂತಿಗೆ ಮುಚ್ಚಳವನ್ನು ಹಾಕಿ, ಅದನ್ನು ತೆಗೆಯುವ ಅವಕಾಶ ನೀಡಿರುತ್ತಾರೆ. ಇದರಿಂದ ಎಷ್ಟು ಬೇಕೋ ಅಷ್ಟು ಮಾತ್ರ ನೀರನ್ನು ಹಿಸುಕಿ ಹೊರತೆಗೆಯಲು ಅನುಕೂಲವಾಗುತ್ತದೆ!)ನಿಂದ ನೀರನ್ನು ಹಿಸುಕಿ ಟವೆಲ್ಲನ್ನೆಲ್ಲ ಒ¨ªೆ ಮಾಡಿ ಬಳಸುತ್ತಾರೆ. ದ್ರವರೂಪದಲ್ಲಿರುವ ಸಾಬೂನು ಅಥವಾ ಶಾರ್ವ ಜೆಲ್ಲನ್ನು ಅದೇ ಒ¨ªೆಯಾದ ಟವೆಲ್‌ ಗೆ ಹಾಕಿ ಆ ಟವೆಲ್‌ ನಿಂದ ಮೈಯನ್ನು ಒರೆಸಿಕೊಂಡರೆ ಸ್ನಾನ ಮುಗಿದಂತೆ. ತಲೆಗೂದಲನ್ನು ಶುಚಿಗೊಳಿಸುವಾಗಲೂ ನೊರೆ ಬಾರದ ವಿಶೇಷ ಶ್ಯಾಂಪೂವನ್ನು ನೀಡುತ್ತಾರೆ.

4 ಊಟ
ಇಲ್ಲಿ ಅನ್ನ ಸಾರು ಕಲಸಿ ತಿನ್ನುವ ದೃಶ್ಯವೇ ಕಾಣುವುದಿಲ್ಲ. ಏಕೆಂದರೆ ಎಲ್ಲವೂ ಗಾಳಿಯಲ್ಲಿ ತೇಲುವುದು ಖಚಿತ. ಅದಕ್ಕಾಗಿಯೇ ಹೆಚ್ಚಿನ ಆಹಾರ ಪದಾರ್ಥಗಳನ್ನು ವಿಶೇಷ ಪ್ಯಾಕೆಟ್‌ ನಲ್ಲಿ ಪ್ಯಾಕ್‌ ಮಾಡಿರುತ್ತಾರೆ. ಈ ಪ್ಯಾಕುಗಳನ್ನು ಕತ್ತರಿಸಲು ಬಳಸುವ ಕತ್ತರಿ/ಚಾಕು ಮುಂತಾದವುಗಳನ್ನು ಒಂದು ಬೋರ್ಡ್‌ ಗೆ ತಂತಿಯಿಂದ ಬಿಗಿದಿರುತ್ತಾರೆ. ಈ ಆಹಾರದ ಪ್ಯಾಕೆಟ್‌ಗಳನ್ನು ಕತ್ತರಿಸಿ ತುದಿಯನ್ನು ನೇರವಾಗಿ ಬಾಯೊಳಗೆ ಹಾಕಿಕೊಳ್ಳಬಹುದು. ಇದೇ ತರಹ ನೀರನ್ನು ಸಹ ಕುಡಿಯುತ್ತಾರೆ. ಈ ಆಹಾರವನ್ನು ತಯಾರಿಸಲು ವಿಶೇಷ ಪರಿಣಿತಿ ಪಡೆದ ಪೋಷಕಾಂಶ ತಜ್ಞರು ಹಗಲಿರುಳು ದುಡಿದಿರುತ್ತಾರೆ.

5 ನಿದ್ದೆ
ಮಲಗಲು ಹಾಸಿಗೆಯೇನೋ ಇರಬಹುದು. ಆದರೆ ಗುರುತ್ವಾಕರ್ಷಣೆಯೇ ಇಲ್ಲವೆಂದ ಮೇಲೆ ನಿಂತೂ ಮಲಗಬಹುದು, ತೇಲಿಕೊಂಡು ಕೂಡ ಮಲಗಬಹುದು. ಮಲಗಲೆಂದು ಚಿಕ್ಕ ಚಿಕ್ಕ ಫೋನ್‌ ಬೂತ್‌ ತರಹದ ಕೋಣೆಗಳಿದ್ದು ಅದರಲ್ಲಿ ಸ್ಲಿàಪಿಂಗ್‌ ಬ್ಯಾಗ್‌ ಗಳನ್ನು ನೆಲಕ್ಕೆ (ಬಾಹ್ಯಾಕಾಶ ನೌಕೆಯ ತಳ!) ಕಟ್ಟಿ ಬಿಗಿದಿರುತ್ತಾರೆ! ಅದರೊಳಗೆ ತೂರಿಕೊಂಡು ನಿದ್ರಿಸಬಹುದು. ಆಗ ನಿದ್ದೆಯಲ್ಲಿ ತೇಲುತ್ತಾ ಎಲ್ಲೆಲ್ಲೋ ಹೋಗುವುದನ್ನು ತಪ್ಪುವುದು.

– ಅನುಪಮಾ ಬೆಣಚಿನಮರ್ಡಿ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಮೀನು ಯಾರಿಗೂ ಏನೂ ಮಾಡೋಲ್ಲ ಅನ್ನೋದೇನೋ ನಿಜ. ಆದರೆ, ಅದರಲ್ಲೂ ವಿಷಕಾರಿ ಮೀನುಗಳು ಉಂಟು ಅನ್ನೋದಕ್ಕೆ ಈ ಜೆಲ್ಲಿ ಮೀನೇ ಉದಾಹರಣೆ. ಈ ಮೀನು ಎಲ್ಲವನ್ನೂ ಕಾಲಿನ ಮೂಲಕವೇ...

  • ಹಿಮಕ್ಕೂ, ಹಿಮಕರಡಿಗಳಿಗೂ ಅವಿನಾಭಾವ ನಂಟು. ಹಿಮ ಇಲ್ಲದೇ ಹೋದರೆ ಹಿಮಕರಡಿ ಭೂಮಿಯಿಂದಲೇ ಇಲ್ಲವಾಗುವವು. ಹಿಮಕರಡಿಗಳು ಉತ್ತರಧೃವದಲ್ಲಿ ವಾಸಿಸುವ ಜೀವಿಗಳು....

  • "ಕುಮಾರ ಬಂದಾಗ, ಸೈನಿಕರು ಮತ್ತು ಸೇವಕರು ಎಲ್ಲರೂ ಸೇರಿಕೊಂಡು ರಾಜನಿಗೆ ಜಯವಾಗಲಿ ಅಂತ ಹೇಳಬೇಕು' ಎಂದು ಶಂಕರ ಹೇಳಿದ. ಎಲ್ಲರೂ ತಲೆಯಲ್ಲಾಡಿಸಿದರು. ಆದರೆ ಒಬ್ಬಳು...

  • ಪ್ರಮುಖ ವ್ಯಕ್ತಿಗಳ ಪರಿಚಯವನ್ನು ಕೇವಲ ಹತ್ತೇ ಹತ್ತು ಪಾಯಿಂಟ್‌ಗಳಲ್ಲಿ ಕಟ್ಟಿ ಕೊಡುವ ಪ್ರಯತ್ನವಿದು... 1. ಮಂಗನಿಂದ ಮಾನವ "ವಿಕಾಸವಾದ ಸಿದ್ಧಾಂತ'ವನ್ನು ಪ್ರತಿಪಾದಿಸಿದ...

  • ಬೇಕಾದ ಪರಿಕರ: ಒಂದು ಕಾರ್ಡಿನ ಮೇಲೆ ಸಂಖ್ಯೆ ಬರೆಯಲಾದ ಮುಳ್ಳಿಲ್ಲದ ಗಡಿಯಾರ. ಪರಿಣಾಮ: ನಿಮ್ಮ ಸಭಿಕರಲ್ಲಿ ಒಬ್ಬರಿಗೆ ಹನ್ನೆರಡಕ್ಕಿಂತ ಕಡಿಮೆ ಸಂಖ್ಯೆಯನ್ನು...

ಹೊಸ ಸೇರ್ಪಡೆ