335 ವರ್ಷಗಳ ಕಾಲ ನಡೆದ ಯುದ್ಧ

Team Udayavani, Jul 25, 2019, 5:00 AM IST

ಪ್ರಪಂಚದ ಅತೀ ದೀರ್ಘ‌ ಕಾಲ ನಡೆದ ಯುದ್ಧ 335 ವರ್ಷಗಳ ಕಾಲ ನಡೆದಿತ್ತು. 335 ವರ್ಷಗಳ ಕಾಲವೂ ಗನ್ನು, ಸಿಡಿಮದ್ದುಗಳನ್ನು ಬಳಸಿ ಹೊಡೆದಾಡುತ್ತಿದ್ದರಾ ಎಂದು ನೀವು ಭಾವಿಸುವುದು ಸಹಜವೇ. ಆದರೆ ಅಚ್ಚರಿಯ ಸಂಗತಿ ಏನೂ ಅಂದರೆ ಈ ಯುದ್ಧದಲ್ಲಿ ಒಂದೂ ಸಾವು ನೋವು ಸಂಭವಿಸಲಿಲ್ಲ. ಯುದ್ಧ ಅಷ್ಟು ಸುದೀರ್ಘ‌ ಅವಧಿಯವರೆಗೆ ಮುಂದುವರಿದಿದ್ದಕ್ಕೆ ಕಾರಣ ಬಹಳ ಸರಳವಾದುದು. ಅದಕ್ಕೆ ಮುಂಚೆ ಯುದ್ಧದ ಹಿನ್ನೆಲೆಯನ್ನು ತಿಳಿದುಕೊಳ್ಳಬೇಕು 1651ನೇ ಇಸವಿಯಲ್ಲಿ ಇಂಗ್ಲೆಂಡ್‌ ರಾಣಿ ತೀರಿಕೊಂಡಾಗ ಪಟ್ಟ ಆಕೆಯ ಸಹೋದರ ಜೇಮ್ಸ್‌ ಸ್ಟುವರ್ಟ್‌ನ ಪಾಲಾಯಿತು. ರಾಜಾಡಳಿತದ ಪರವಿದ್ದವರೆಲ್ಲರೂ ಜೇಮ್ಸ್‌ಗೆ ಬೆಂಬಲ ಸೂಚಿಸಿದರು. ಆದರೆ, ಪ್ರಜಾತಂತ್ರವನ್ನು ಬೆಂಬಲಿಸುವವರು ರಾಜಾಡಳಿತವನ್ನು ವಿರೋಧಿಸಿದರು. ಪ್ರಜಾತಂತ್ರದ ಬೆಂಬಲಿಗರಿಗೆ ನೆದರ್‌ಲೆಂಡ್ಸ್‌ ದೇಶ ಅಭಯಹಸ್ತ ನೀಡಿತು. ಎರಡೂ ಪಡೆಗಳವರು ಬಲ ಪ್ರದರ್ಶನಕ್ಕೆ ಇಳಿದವು. ಎರಡೂ ಕಡೆಯ ಸೇನೆಗಳು ಸಮುದ್ರದಲ್ಲಿ ನಿಯೋಜನೆಗೊಂಡವು. ಇಂಗ್ಲೆಂಡ್‌ ತಮ್ಮ ಪ್ರಾಂತ್ಯಕ್ಕೆ ಕಾಲಿಟ್ಟ ನೆದರ್‌ಲೆಂಡ್‌ ಹಡಗುಗಳ ಮೇಲೆ ಧಾಳಿ ನಡೆಸಿ ಸಾಮಗ್ರಿಯನ್ನು ವಶಪಡಿಸಿಕೊಂಡವು. ಇಂಗ್ಲೆಂಡ್‌ ವಶದಲ್ಲಿದ್ದ ಸ್ಕಿಲ್ಲಿ ದ್ವೀಪದ ಮೇಲೆ ನೆದರ್‌ಲೆಂಡಿಗರು ದಂಡೆತ್ತಿ ಹೋದರು. ಅಷ್ಟರಲ್ಲಿ ಇತ್ತ ರಾಜಾಡಲಿತದ ಪರವಾಗಿದ್ದವರೆಲ್ಲರೂ ಬೆಂಬಲ ಹಿಂತೆಗೆದುಕೊಂಡು ಪ್ರಜಾತಂತ್ರವನ್ನು ಬೆಂಬಲಿಸಿದರು. ನೆದರ್‌ಲೆಂಡ್‌ ಯುದ್ಧದಿಂದ ಕಾಲ್ತೆಗೆಯಿತು. ನಂತರ ಎಲ್ಲರೂ ಈ ವಿಷಯವನ್ನೇ ಮರೆತುಬಿಟ್ಟಿದ್ದರು. 1986ರಲ್ಲಿ ಮಹಾಶಯನೊಬ್ಬ ಸರ್ಕಾರದ ಬಳಿ ಯುದ್ಧಕ್ಕೆ ಸಂಬಂಧಿಸಿದಂತೆ ದಾಖಲೆ ಕೋರಿದಾಗ ಅಚ್ಚರಿಯ ಸಂಗತಿಯೊಂದು ಬೆಳಕಿಗೆ ಬಂದಿತ್ತು. ಯುದ್ಧ ಶುರುವಾದ ಬಗ್ಗೆ ಮಾತ್ರ ದಾಖಲೆ ಸಿಕ್ಕಿತ್ತು. ಆದರೆ ಯುದ್ಧ ಕೊನೆಗೊಂಡಿದ್ದರ ಬಗ್ಗೆ ಎಲ್ಲಿಯೂ ಮಾಹಿತಿ ಇರಲಿಲ್ಲ. ಅಂದರೆ ದಾಖಲೆಗಳ ಪ್ರಕಾರ ಯುದ್ಧ ಇನ್ನೂ ನಡೆಯುತ್ತಲೇ ಇದೆ ಎಂಬಂತಾಯಿತು. ಕಡೆಗೆ ಎಚ್ಚೆತ್ತುಕೊಂಡ ಎರಡೂ ದೇಶಗಳ ಸರ್ಕಾರ 1986ರಲ್ಲಿ, ಮುನ್ನೂರು ಚಿಲ್ಲರೆ ವರ್ಷಗಳ ಹಿಂದೆ ನಡೆದ ಯುದ್ಧವನ್ನು, ಶಾಂತಿ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಅಧಿಕೃತವಾಗಿ ಕೊನೆಗೊಳಿಸಿತು.

ಹವನ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ರಾತ್ರಿ ಝಗಮಗಿಸುವ ದೀಪಗಳಿಂದ ಮಿಂಚುವ ಸೇತುವೆಯ ವೈಭವ ಒಂದೆಡೆಯಾದರೆ, ಮುಸ್ಸಂಜೆಯಲ್ಲಿ ಮುಳುಗುವ ಸೂರ್ಯನ ಕಿರಣಗಳಿಗೆ ಬರುವ ಹೊಸ ವರ್ಣದ ಕಳೆಯನ್ನು ನೋಡಿ ಖುಷಿಪಡಲೆಂದೇ...

  • 70 ಲಕ್ಷ ವರ್ಷಗಳ ಹಿಂದೆ ಬದುಕಿದ್ದ ಆಮೆಯ ಪಳೆಯುಳಿಕೆಯನ್ನು ವಿಜ್ಞಾನಿಗಳು ಸಂಶೋಧಿಸಿದ್ದಾರೆ. ಅದು ಕಾರಿನಷ್ಟು ಗಾತ್ರವನ್ನು ಹೊಂದಿದೆ! ಇಂದು ನಾವು ನೋಡುತ್ತಿರುವ...

  • ಮೇಜಿನ ಮೇಲೆ ಒಂದು ಖಾಲಿ ಬಾಟಲ್ ಮತ್ತು ಒಂದು ಹಗ್ಗದ ತುಂಡನ್ನು ಇಟ್ಟಿದೆ. ಜಾದೂಗಾರನ ಸವಾಲೇನೆಂದರೆ ಆ ಹಗ್ಗದಿಂದ ಬಾಟಲನ್ನು ಎತ್ತಬೇಕು. ಇದೇನು ಮಹಾ? ಹಗ್ಗವನ್ನು...

  • ಪ್ರಮುಖ ವ್ಯಕ್ತಿಗಳ ಪರಿಚಯವನ್ನು ಕೇವಲ ಹತ್ತೇ ಹತ್ತು ಪಾಯಿಂಟ್‌ಗಳಲ್ಲಿ ಕಟ್ಟಿ ಕೊಡುವ ಪ್ರಯತ್ನವಿದು... 1. ವನ್ಯಜೀವಿ ತಜ್ಞ ಸ್ಟೀವ್‌ ಇರ್ವಿನ್‌ 1962ರ ಫೆಬ್ರವರಿ...

  • ಗೊಗ್ಗಯ್ಯನ ಮೂಗು ಬೆಳೆಯುತ್ತಾ ಹೋಯಿತು. ಅದನ್ನು ಹೊತ್ತುಕೊಂಡು ತಿರುಗಾಡುವುದೇ ಕಷ್ಟವಾಗತೊಡಗಿತು. ಕಡೆಗೊಂದು ದಿನ ಅದಕ್ಕೆ ಪರಿಹಾರವೂ ಸಿಕ್ಕಿತು. ಆ ಹುಡುಗ...

ಹೊಸ ಸೇರ್ಪಡೆ