ಜಾಣ ಕಳ್ಳನಿಗಿತ್ತು ಜೇನು ತಿನ್ನುವ ಚಪಲ

Team Udayavani, Sep 6, 2018, 6:00 AM IST

ಅವನು ಅಂತಿಂಥ ಕಳ್ಳನಲ್ಲ. ಯಾರ ಕಣ್ಣಿಗೂ ಬೀಳದಂತೆ, ತನ್ನ ಕೆಲಸ ಮುಗಿಸಿಕೊಂಡು, ಪುಳಕ್ಕನೆ ಎಸ್ಕೇಪ್‌ ಆಗುವ ಚೋರ. ಆತ ಇರೋದು ದಕ್ಷಿಣ ಚೀನಾದಲ್ಲಿ. ಅಲ್ಲಿನ ಯುನ್ನಾನ್‌ ಪ್ರಾಂತ್ಯದಲ್ಲಿ ದಿನಪೂರ್ತಿ ದುಡಿದು ದಣಿದ ರೈತ, ಮನೆಗೆ ಹೋಗಿ ಮಲಗುವ ವೇಳೆಯೇ, ಈತ ಬಂದು ರಾತ್ರಿಯಿಡೀ ಕಳ್ಳತನ ಮಾಡ್ತಿದ್ದ. ಅವನು ಕದಿಯುವುದು ರೈತ ಕೂಡಿಟ್ಟ ಹಣವನ್ನೋ, ಅಡಗಿಸಿಟ್ಟ ಚಿನ್ನವನ್ನೋ ಅಲ್ಲ. ಅಲ್ಲಿನ ರೈತರ ಮೂಲಾಧಾರವೇ ಜೇನುಕೃಷಿ. ಆ ರುಚಿ ರುಚಿಯಾದ ತುಪ್ಪವನ್ನು ಕದಿಯಲೆಂದೇ ಬರುತ್ತಿದ್ದ ಈ ಕಳ್ಳ, ಅಪಾರ ನಷ್ಟ ಮಾಡಿಟ್ಟು ಹೋಗ್ತಿದ್ದ.

  ಈ ವಿಚಾರವಾಗಿ ರೈತರು ಪರಸ್ಪರ ಅನುಮಾನಿಸಿಕೊಂಡು, ಜಗಳವಾಡುತ್ತಿದ್ದರಂತೆ. ಕೆಲವರು ಪಕ್ಕದ ಮನೆಯವರ ಜೊತೆ ಫೈಟಿಂಗೂ ಮಾಡಿದ್ದರು. ಒಂದು ದಿನವಂತೂ ಊರಿನವರೆಲ್ಲ ನಿದ್ದೆಬಿಟ್ಟು, ಕಾದು ಕುಳಿತರು. ಹೇಗಾದರೂ ಮಾಡಿ ಅವನನ್ನು ಇವತ್ತು ಹಿಡಿಯಲೇಬೇಕು ಅಂತ. ಆದರೆ, ಅವತ್ತು ಜೇನು ಕಳವಾಯಿತೇ ವಿನಾ ಈ ಕಳ್ಳ ಸಿಕ್ಕಿಬೀಳಲಿಲ್ಲ. ಕೊನೆಗೆ ಈ ಪ್ರಕರಣ ಪೊಲೀಸ್‌ ಠಾಣೆಯ ಮೆಟ್ಟಿಲೇರಿತು. ಹತ್ತಾರು ಪೊಲೀಸರು ಬಂದು, ರಾತ್ರಿಯಿಡೀ ಜಮೀನು ಕಾದರು. ಅವತ್ತೂ ಜೇನು ಸ್ವಾಹವಾಗಿತ್ತು. ಕಳ್ಳ ಮಾತ್ರ ಕೈಗೆ ಸಿಗಲಿಲ್ಲ. 

  ಇದೆಲ್ಲ ನೋಡಿ ನೋಡಿ ಸಾಕಾಗಿ, ಕೊನೆಗೆ ಸರ್ಕಾರವೇ ಜಮೀನಿನ ಸುತ್ತ ಸಿಸಿ ಕ್ಯಾಮೆರಾ ಹಾಕಿತು. ಅದರ ಮರುದಿನ ಎಲ್ಲರಿಗೂ ಅಚ್ಚರಿಯ ಆಘಾತ ಆಯ್ತು. ಯಾಕೆ ಗೊತ್ತಾ? ಹಾಗೆ ಜೇನು ಕದಿಯುತ್ತಿದ್ದವನು, ರೈತರು ಅನುಮಾನಿಸಿದಂತೆ ಯಾವುದೇ ಮನುಷ್ಯ ಆಗಿರಲಿಲ್ಲ. ಒಂದು ಕಪ್ಪು ಆಕೃತಿ! ಹಾಗಾದರೆ, ಭೂತನಾ? ಅಲ್ಲ. ಝೂಮ್‌ ಮಾಡಿ ನೋಡಿದಾಗಲೇ ಗೊತ್ತಾಗಿದ್ದು, ಅದೊಂದು ಕರಡಿ ಅಂತ! ಈ ಚೋರನ ಮೇಲೆ ರೈತರೆಲ್ಲ ಈಗ ಸಿಟ್ಟಾಗಿದ್ದಾರೆ. ಊರಿನ ಸುತ್ತ ಬೆಂಕಿ ಹಾಕಿ, ಮನೆಗೆ ಒಬ್ಬೊಬ್ಬರಂತೆ ಈಗ ಕಾವಲು ನಿಲ್ಲುತ್ತಿದ್ದಾರಂತೆ. ವಾರವಾಯ್ತು. ಈ ಚೋರ, ಮತ್ತೆ ಜೇನಿನ ಆಸೆಗಾಗಿ, ಜಮೀನಿನತ್ತ ಬರಲಿಲ್ಲ!

 ಹುಷಾರು ಮಕ್ಕಳೇ, ಆ ಚೋರ ನಿಮ್ಮನೆ ತೋಟಕ್ಕೂ ಬಂದಾನು!!!


ಈ ವಿಭಾಗದಿಂದ ಇನ್ನಷ್ಟು

  • ಈತಂತ್ರವನ್ನು ಹಲವೆಡೆ ಸುಲಭವಾಗಿ ಮಾಡಿ ತೋರಿಸಬಹುದು. ಕರವಸ್ತ್ರದಿಂದ ಮುಚ್ಚಿರುವ ನಿಮ್ಮ ಹೆಬ್ಬೆಟ್ಟಿಗೆ ಗುಂಡು ಪಿನ್ನುಗಳನ್ನು ಚುಚ್ಚಿ ನಿಲ್ಲಿಸುವುದೇ...

  • ಇಟಲಿಯ ಸರ್ವಾಧಿಕಾರಿ ಬೆನಿಟೊ ಮುಸೊಲಿನಿ "ದಿ ಕಾರ್ಡಿನಲ್ಸ್‌ ಮಿಸ್ಟ್ರೆಸ್‌' ಎಂಬ ಹೆಸರಿನ ಒಂದು ಪ್ರಣಯ ಕಾದಂಬರಿ ಬರೆದಿದ್ದರು ಎಂದರೆ ಎಂಥವರಿಗಾದರೂ ಚ್ಚರಿಯಾಗುವುದು...

  • ಹೊಟ್ಟೆಯೊಳಗಿದ್ದಾಗಲೇ ಯುದ್ಧದಲ್ಲಿ ಚಕ್ರವ್ಯೂಹವನ್ನು ಭೇದಿಸುವುದು ಹೇಗೆಂಬುದನ್ನು ಕಲಿತಿದ್ದ ಅಭಿಮನ್ಯು. ಅವನ ಹಾಗೆಯೇ ಪ್ರಾಣಿಗಳ ಪ್ರಪಂಚದಲ್ಲೊಂದು ಸದಸ್ಯನಿದೆ....

  • ನೂರು ದಿನದ ಕಾಲ ಇಲಿಯಾಗಿ ಬದುಕುವುದಕ್ಕಿಂತ ಒಂದು ದಿನ ಹುಲಿಯಾಗಿ ಬಾಳಿದರೆ ಸಾರ್ಥಕ ಒಂಬ ಒಂದು ಸ್ಫೂರ್ತಿದಾಯಕ ಮಾತಿದೆ. ಈ ಮಾತು ಸ್ಫೂರ್ತಿದಾಯಕವೂ ಹೌದು, ಪ್ರಾಣಘಾತುಕವೂ...

  • ಇಳಿಜಾರಿನಲ್ಲಿ ಗೋಳಾಕಾರದ ವಸ್ತು ಕೆಳಕ್ಕೆ ಚಲಿಸುವುದು ಸಾಮಾನ್ಯ. ಆದರೆ ಕೀನ್ಯಾ ದೇಶಲ್ಲೊಂದು ಜಾಗವಿದೆ. ಅಲ್ಲಿನ ಇಳಿಜಾರಿನಲ್ಲಿ ಬಾಲ್‌ ಅಥವಾ ಯಾವುದೇ ಗೋಳಾಕಾರದ...

ಹೊಸ ಸೇರ್ಪಡೆ