ಅದೇ ಬೇರೆ, ಇದೇ ಬೇರೆ!

Team Udayavani, Oct 10, 2019, 5:49 AM IST

ಜಾದೂಗಾರ ಇಸ್ಪೀಟ್‌ ಕಾರ್ಡ್‌ ಪ್ಯಾಕಿನಿಂದ ಹತ್ತು ಕಾರ್ಡುಗಳನ್ನು ಎಣಿಸಿ ತೆಗೆಯುತ್ತಾನೆ. ಹತ್ತು ಜನ ಪ್ರೇಕ್ಷಕರನ್ನು ಆರಿಸಿಕೊಂಡು ಆ ಕಾರ್ಡುಗಳನ್ನು ತೋರಿಸಿ ಒಬ್ಬೊಬ್ಬರಿಗೆ ಒಂದೊಂದು ಕಾರ್ಡನ್ನು ನೆನಪಿಟ್ಟುಕೊಳ್ಳುವಂತೆ ಹೇಳುತ್ತಾನೆ. ಆ ಪ್ರೇಕ್ಷಕರು ಜಾದೂಗಾರ ಹೇಳಿದಂತೆಯೇ ಮಾಡುತ್ತಾರೆ. ನಂತರ ಜಾದೂಗಾರ ಆ 10 ಕಾರ್ಡುಗಳನ್ನು ಹಿಂದಕ್ಕೆ ಪಡೆದುಕೊಂಡು ಚೆನ್ನಾಗಿ ಶಫ‌ಲ್‌(ಮಿಕ್ಸ್‌) ಮಾಡುತ್ತಾನೆ. ನಂತರ ಮತ್ತೆ ಅವೇ ಕಾರ್ಡುಗಳನ್ನು ಒಂದೊಂದಾಗಿ ಪ್ರೇಕ್ಷಕರಿಗೆ ತೋರಿಸುತ್ತಾನೆ. ಜಾದೂಗಾರನ ಬಳಿ ಇರುವ ಕಾರ್ಡುಗಳನ್ನು ಪ್ರೇಕ್ಷಕರು ಗುರುತಿಸುವುದೇ ಇಲ್ಲ. ಅಂದರೆ ಪ್ರೇಕ್ಷಕರು ನೆನಪಿಟ್ಟುಕೊಂಡಿದ್ದ ಕಾರ್ಡುಗಳಲ್ಲಿ ಯಾವುವೂ ಇಲ್ಲಿರುವುದಿಲ್ಲ. ಜಾದೂಗಾರನ ಬಳಿ ಬೇರೆಯದೇ ಸೆಟ್‌ನ ಕಾರ್ಡುಗಳಿರುತ್ತವೆ!

ರಹಸ್ಯ:
ಇಸ್ಪೀಟ್‌ ಪ್ಯಾಕಿನಿಂದ ಯಾವುದಾದರೂ ಇಪ್ಪತ್ತು ಕಾರ್ಡುಗಳನ್ನು ತೆಗೆದುಕೊಂಡು ಒಂದರ ಬೆನ್ನಿಗೆ ಇನ್ನೊಂದು ಕಾರ್ಡಿನ ಬೆನ್ನನ್ನು ಅಂಟಿಸಿ. ಆಗ ನಿಮಗೆ ಎರಡೂ ಬದಿಯಲ್ಲಿ ಬೇರೆ ಬೇರೆ ಮುಖವಿರುವ ಹತ್ತು ಕಾರ್ಡುಗಳು ಸಿಗುತ್ತವೆ. ಇಸ್ಪೀಟ್‌ ಪ್ಯಾಕಿನ ಮೇಲ್ಭಾಗದಲ್ಲಿ ಈ ಹತ್ತು ಕಾರ್ಡುಗಳನ್ನು ಮೊದಲೇ ಇಟ್ಟಿರಬೇಕು. ಮ್ಯಾಜಿಕ್‌ ಮಾಡುವಾಗ ಮೇಲಿನ ಹತ್ತು ಕಾರ್ಡುಗಳನ್ನು ಎಣಿಸಿ ತೆಗೆಯಿರಿ. ಎಣಿಸುವಾಗ ಕಾರ್ಡಿನ ಇನ್ನೊಂದು ಬದಿ ಪ್ರೇಕ್ಷಕರಿಗೆ ಕಾಣದಂತೆ ಎಚ್ಚರ ವಹಿಸಿ. ಒಂದೊಂದೇ ಕಾರ್ಡನ್ನು ಪ್ರೇಕ್ಷಕರಿಗೆ ತೋರಿಸಿ ನೆನಪಿಟ್ಟುಕೊಳ್ಳಲು ಹೇಳಿದ ಬಳಿಕ ನಿಮ್ಮ ಕೈಯಲ್ಲಿರುವ ಕಾರ್ಡುಗಳ ಗುಂಪನ್ನು ಶಫ‌ಲ್‌(ಮಿಕ್ಸ್‌) ಮಾಡುವ ನೆಪದಲ್ಲಿ ಉಪಾಯವಾಗಿ ಉಲ್ಟಾ ಮಾಡಿ. ನಂತರ ಒಂದೊಂದೇ ಕಾರ್ಡನ್ನು ಪ್ರೇಕ್ಷಕರಿಗೆ ತೋರಿಸಿದಲ್ಲಿ ಮೊದಲು ನೋಡಿದ ಯಾವುದೇ ಕಾರ್ಡು ಇರುವುದಿಲ್ಲ. ಯಾರೇ ಆದರೂ ಈ ನಿಮ್ಮ ಅದ್ಭುತ ಮ್ಯಾಜಿಕ್‌ ಟ್ರಿಕ್‌ಗೆ ದಂಗಾಗದಿರಲು ಸಾಧ್ಯವಿಲ್ಲ.

ನಿರೂಪಣೆ: ಉದಯ್‌ ಜಾದೂಗಾರ್‌

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ರಾತ್ರಿ ಝಗಮಗಿಸುವ ದೀಪಗಳಿಂದ ಮಿಂಚುವ ಸೇತುವೆಯ ವೈಭವ ಒಂದೆಡೆಯಾದರೆ, ಮುಸ್ಸಂಜೆಯಲ್ಲಿ ಮುಳುಗುವ ಸೂರ್ಯನ ಕಿರಣಗಳಿಗೆ ಬರುವ ಹೊಸ ವರ್ಣದ ಕಳೆಯನ್ನು ನೋಡಿ ಖುಷಿಪಡಲೆಂದೇ...

  • 70 ಲಕ್ಷ ವರ್ಷಗಳ ಹಿಂದೆ ಬದುಕಿದ್ದ ಆಮೆಯ ಪಳೆಯುಳಿಕೆಯನ್ನು ವಿಜ್ಞಾನಿಗಳು ಸಂಶೋಧಿಸಿದ್ದಾರೆ. ಅದು ಕಾರಿನಷ್ಟು ಗಾತ್ರವನ್ನು ಹೊಂದಿದೆ! ಇಂದು ನಾವು ನೋಡುತ್ತಿರುವ...

  • ಮೇಜಿನ ಮೇಲೆ ಒಂದು ಖಾಲಿ ಬಾಟಲ್ ಮತ್ತು ಒಂದು ಹಗ್ಗದ ತುಂಡನ್ನು ಇಟ್ಟಿದೆ. ಜಾದೂಗಾರನ ಸವಾಲೇನೆಂದರೆ ಆ ಹಗ್ಗದಿಂದ ಬಾಟಲನ್ನು ಎತ್ತಬೇಕು. ಇದೇನು ಮಹಾ? ಹಗ್ಗವನ್ನು...

  • ಪ್ರಮುಖ ವ್ಯಕ್ತಿಗಳ ಪರಿಚಯವನ್ನು ಕೇವಲ ಹತ್ತೇ ಹತ್ತು ಪಾಯಿಂಟ್‌ಗಳಲ್ಲಿ ಕಟ್ಟಿ ಕೊಡುವ ಪ್ರಯತ್ನವಿದು... 1. ವನ್ಯಜೀವಿ ತಜ್ಞ ಸ್ಟೀವ್‌ ಇರ್ವಿನ್‌ 1962ರ ಫೆಬ್ರವರಿ...

  • ಗೊಗ್ಗಯ್ಯನ ಮೂಗು ಬೆಳೆಯುತ್ತಾ ಹೋಯಿತು. ಅದನ್ನು ಹೊತ್ತುಕೊಂಡು ತಿರುಗಾಡುವುದೇ ಕಷ್ಟವಾಗತೊಡಗಿತು. ಕಡೆಗೊಂದು ದಿನ ಅದಕ್ಕೆ ಪರಿಹಾರವೂ ಸಿಕ್ಕಿತು. ಆ ಹುಡುಗ...

ಹೊಸ ಸೇರ್ಪಡೆ