ಜೇನುನೊಣ ಮನುಷ್ಯರ ಚಹರೆಗಳನ್ನು ಗುರುತಿಟ್ಟುಕೊಳ್ಳಬಲ್ಲದು!

Team Udayavani, Aug 30, 2018, 6:00 AM IST

ನೀವು ದಾರಿಯಲ್ಲಿ ನಡೆದು ಹೋಗುತ್ತಿರುತ್ತೀರಿ. ಯಾರೋ ನಿಮ್ಮನ್ನು ಗುರುತು ಹಿಡಿದು ಕರೆದಂತಾಗುತ್ತದೆ. ನೀವು ಸುತ್ತಲೂ ನೋಡುತ್ತೀರಿ. ಯಾರೂ ಕಾಣುವುದಿಲ್ಲ. ನಿಮಗೆ ದಿಗಿಲಾಗುವುದು ಖಂಡಿತ. ಯಾರು ಕರೆದಿರಬಹುದಪ್ಪಾ ಎಂದುಕೊಂಡು ದಿಗಿಲುಪಡುವಷ್ಟರಲ್ಲಿ ಜೇನುನೊಣ ನಿಮ್ಮ ಬಳಿ ಹಾರಾಡುವುದನ್ನು ಗಮನಿಸುತ್ತೀರಿ. ನಿಮ್ಮನ್ನು ಗುರುತಿಸಿದ್ದು ಜೇನುನೊಣವೇ ಎಂದು ಅನುಮಾನ ಬಂದರೂ ಇರಲಿಕ್ಕಿಲ್ಲ ಎಂದು ಸಾರಾಸಗಟಾಗಿ ತಳ್ಳಿ ಹಾಕಿಬಿಡುತ್ತೀರಿ. ಆದೇ ತಪ್ಪು. ಜೇನುನೊಣ ಮನುಷ್ಯರನ್ನು ಗುರುತಿಸುವುದಿಲ್ಲ ಅನ್ನೋದು ತಪ್ಪು. 

ನಾವು ನಮಗೆ ಬೇಕಾದವರ ಚಹರೆಗಳನ್ನು ನೆನಪಿಟ್ಟುಕೊಳ್ಳುವ ಹಾಗೆಯೇ ಜೇನುನೊಣವೂ ಮನುಷ್ಯರ ಮುಖಗಳನ್ನು ನೆನಪಿಟ್ಟುಕೊಳ್ಳಬಹುದಂತೆ. ಜೇನುನೊಣ ಎಷ್ಟು ಗಾತ್ರದ್ದು ಎನ್ನುವುದು ನಿಮಗೆ ಗೊತ್ತೇ ಇರುತ್ತೆ. ಅದರ ಮೆದುಳು ನಮ್ಮ ನಿಮ್ಮ ಮೆದುಳಿಗಿಂತ 20,000 ಪಟ್ಟು ಚಿಕ್ಕದು ಎಂಬ ಸಂಗತಿ ನಿಮಗೆ ಗೊತ್ತೆ. ಅಷ್ಟು ಚಿಕ್ಕ ಮೆದುಳನ್ನು ಹೊಂದಿರುವುದರ ಹೊರತಾಗಿಯೂ ಅದು ನೆನಪಿಟ್ಟುಕೊಳ್ಳುತ್ತದೆ ಎಂದರೆ ಅದು ಸೋಜಿಗವೇ ಸರಿ. ದೊಡ್ಡ ಗಾತ್ರದ ಮೆದುಳನ್ನು ಹೊಂದಿರುವ ಪ್ರಾಣಿಗಳು ಮಾತ್ರವೇ ಚಹರೆಗಳನ್ನು ಗುರುತಿಟ್ಟುಕೊಳ್ಳಬಲ್ಲವು ಎಂದೇ ಇಲ್ಲಿಯವರೆಗೂ ತಿಳಿಯಲಾಗಿತ್ತು. 

ಆದರೆ ಚಿಕ್ಕ ಮೆದುಳನ್ನು ಹೊಂದಿದ ಜೀವಿಗಳೂ ಚಹರೆಗಳನ್ನು ನೆನಪಿಟ್ಟುಕೊಳ್ಳಬಲ್ಲವು ಎಂಬುದು ಸಂಶೋಧನೆಯೊಂದರಿಂದ ತಿಳಿದುಬಂದಿದೆ. ಆದರೆ, ಒನ್‌ ಸ್ಮಾಲ್‌ ಚೇಂಜ್‌ - ಜೇನುನೊಣದ ನೆನಪುಗಳು ಕಲರ್‌ ಕಲರ್‌ ಆಗಿರುವುದಿಲ್ಲ. ಬದಲಾಗಿ ಕಪ್ಪು ಬಿಳು ಚಿತ್ರಗಳ ಸಂಯೋಜನೆಯನ್ನು ಹೊಂದಿರುತ್ತವೆ. ನಾವು ಹೇಳುವುದಿಷ್ಟೆ - ಜೇನುನೊಣಗಳ ತಂಟೆಗೆ ಹೋಗದಿರುವುದೇ ಒಳಿತು. ಹೋದಿರೆಂದರೆ ಹೇಗೋ ಚಹರೆಯನ್ನು ಗುರುತಿಟ್ಟುಕೊಳ್ಳುವುದರಿಂದ ಮುಂದೊಂದು ದಿನ ಹುಡುಕಿಕೊಂಡು ಬಂದು ಕಚ್ಚಿಬಿಟ್ಟಿತು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಮಂತ್ರಿ, ಸೈನಿಕರೊಂದಿಗೆ ಗುರು ಮಹಂತರ ಡೇರೆಗೆ ಹೋಗಿ, ರಾಜ ಗುರುಗಳನ್ನು ಆಸ್ಥಾನಕ್ಕೆ ಆಹ್ವಾನಿಸಿರುವ ಸಂಗತಿ ತಿಳಿಸಿದ. ಮಹಂತರು "ತನ್ನನ್ನು ನೋಡುವ ಇಚ್ಛೆಯಿದ್ದರೆ...

  • ಪಂಚಾಯಿತಿ ಕಟ್ಟೆ ಮೇಲೆ ಊರ ಮುಖಂಡರು ಸಭೆ ಸೇರಿ ಕಳವಿನ ಬಗ್ಗೆ ಚರ್ಚೆ ನಡೆಸುತ್ತಿದ್ದರು. ಕಳ್ಳತನ ಮಾಡಿದ್ದ ರಾಮಣ್ಣ- ಶಾಮಣ್ಣ ಇಬ್ಬರೂ ಅಲ್ಲಿಗೆ ತೆರಳಿ ಏನಾಯೆ¤ಂದು...

  • ದಿನಕ್ಕೆ 20 ಗಂಟೆ ನಿದ್ದೆ, ತಿಂಗಳುಗಟ್ಟಲೆ ಊಟ ಮಾಡೋಲ್ಲ, ಸದಾ ಮರದಲ್ಲಿ ನೇತಾಡಿಕೊಂಡೇ ಇರುತ್ತೆ. ಈ ಪ್ರಾಣಿಗೆ,"ಜಗತ್ತಿನ ಅತಿ ಸೋಂಬೇರಿ' ಎನ್ನುವ ಹೆಗ್ಗಳಿಕೆ ಇದರದ್ದು... ಈ...

  • ರಸ್ತೆ ಮೇಲೆ ವಾಹನಗಳ ಓಡಾಟ ಕೆಲ ನಿಮಿಷಗಳ ಮಟ್ಟಿಗೆ ನಿಂತರೂ ಮನಸ್ಸಿಗೆ ಅದೇನೋ ನೆಮ್ಮದಿ. ವಾಹನಗಳೇ ಓಡಾಡದ ರಸ್ತೆಗಳಿರುವ ನಗರ ಭೂಮಿ ಮೇಲೆ ಇದೆ ಎಂದರೆ ಮೊದಲ ಏಟಿಗೆ...

  • ಈ ಸಲ ಜಾದೂ ಮಾಡಲು ಹೊಸ ಅಸ್ತ್ರ ಇದೆ. ಕಾರ್ಡು, ಗೀರ್ಡು ಅಂತೆಲ್ಲ ತಲೆ ತಿನ್ನುವುದಿಲ್ಲ. ಇದು ಹೊಸ ರೀತಿಯ ಪ್ರಯತ್ನ ಅಂತಲಾದರು ತಿಳಿದು ಕೊಳ್ಳಬಹುದು. ಅಂತದ್ದೇನಪ್ಪ?...

ಹೊಸ ಸೇರ್ಪಡೆ

  • ನಾಯಿ ನಿಯತ್ತಿನ ಪ್ರಾಣಿ. ಈ ಚಿತ್ರದಲ್ಲಿ ಕಾಣುತ್ತಿರುವುದು ರೋಬೋಟ್‌ ನಾಯಿ. ಮನುಷ್ಯ ಹೇಳಿದಷ್ಟನ್ನು ಮಾತ್ರವೇ ಮಾಡುವುದರಿಂದ ಇದು ಜೀವಂತ ನಾಯಿಗಿಂತಲೂ ಹೆಚ್ಚು...

  • ಬೆಂಗಳೂರು: "ಇವನಾರವ ಇವನಾರವ ಎಂದೆನಿಸದಿರಯ್ಯ, ಇವ ನಮ್ಮವ ಇವ ನಮ್ಮವ...' ಎಂಬುದು ಸಮಾಜದ ಪ್ರಸ್ತುತ ಮೂಲಮಂತ್ರ ಆಗಬೇಕು. ಆ ಮೂಲಕ ಲೋಕ ಕಲ್ಯಾಣಕ್ಕೆ ಕಂಕಣ ತೊಡಬೇಕು... ನಗರದ...

  • ಅತ್ತ ಸರ್ಕಾರ ಮಾರ್ಚ್‌ 5ರಂದು ಮಂಡನೆಯಾಗಲಿರುವ ರಾಜ್ಯ ಬಜೆಟ್‌ಗೆ ಸಜ್ಜಾಗುತ್ತಿದ್ದರೆ, ಇತ್ತ ಸ್ಥಳೀಯ ಸಂಸ್ಥೆಗಳು ಬೆಂಗಳೂರಿಗೆ ಏನೇನು ಅವಶ್ಯಕತೆ ಇದೆ ಎಂಬುದರ...

  • ಬೆಂಗಳೂರು: ಹೊಸ ವರ್ಷದ ಮೊದಲ ವಿಧಾನಮಂಡಲದ ಜಂಟಿ ಅಧಿವೇಶನ ಸೋಮವಾರ ಆರಂಭವಾಗಲಿದ್ದು, ಬೆಳಗ್ಗೆ 11 ಗಂಟೆಗೆ ರಾಜ್ಯಪಾಲ ವಜುಭಾಯಿ ವಾಲಾ ಅವರು ಜಂಟಿ ಸದನ ಉದ್ದೇಶಿಸಿ...

  • ಬೆಂಗಳೂರು: ನಗರದ ಪಾರಂಪರಿಕ ಕಟ್ಟಡಗಳು ಹಾಗೂ ಪರಿಸರ ಸಂರಕ್ಷಣೆ ಉದ್ದೇಶದಿಂದ ತಜ್ಞರ ಸಮಿತಿ ರಚನೆ ಮಾಡಲು ಪಾಲಿಕೆ ನಿರ್ಧರಿಸಿದೆ. ಬೆಂಗಳೂರಿನಲ್ಲಿ ಕೃಷ್ಣರಾಜೇಂದ್ರ...