ಕಾರ್ಡ್‌ ಪತ್ತೆ ಹಚ್ಚುವುದು

Team Udayavani, Jan 30, 2020, 4:17 AM IST

ನಿಮಗೆ ಜಾದೂವಿನಲ್ಲಿ ಚಪ್ಪಾಳೆ ಗಿಟ್ಟಿಸಲು, ಪ್ರೇಕ್ಷಕರಲ್ಲಿ ಬೆರಗು ಮೂಡಿಸುವ ಸರಣಿ ಪ್ರಯತ್ನದಲ್ಲಿ ಮತ್ತೆ ಕಾರ್ಡ್‌ನ ಯಕ್ಷಣಿ ಬಗ್ಗೆ ಹೇಳುತ್ತೇನೆ. ಇಸ್ಪೀಟ್‌ ಕಾರ್ಡಿನಲ್ಲಿ ಹೇಗೆಲ್ಲಾ, ಏನೆಲ್ಲಾ ರೋಮಾಂಚನ ಮೂಡಿಸಬಹುದು ಗೊತ್ತಾ? ನೋಡಲು ಸುಲಭ ಅನಿಸಿದರೂ. ಸ್ವಲ್ಪ ತಲೆ ಕೆಡಿಸಿಕೊಳ್ಳಬೇಕಾಗುತ್ತದೆ. ಹೀಗೆ ಮಾಡಿದ್ದಲ್ಲಿ ನೀವು ಗ್ಯಾರಂಟಿ ಪ್ರೇಕ್ಷಕರನ್ನು ಆಶ್ಚರ್ಯದ ಸಮುದ್ರದಲ್ಲಿ ತೇಲಿಸಿಬಿಡುತ್ತೀರಿ.

ಕಾರ್ಡಿನ ಆಟ ಹೀಗೆ ಶುರು ಮಾಡಿ. ಜಾದೂಗಾರ ಇಸ್ಪೀಟ್‌ ಕಾರ್ಡಿನ ಎಲೆಗಳನ್ನು ತನ್ನ ಕೈಯಲ್ಲಿ ಹರಡಿಕೊಳ್ಳಬೇಕು. ನಂತರ, ಪ್ರೇಕ್ಷಕರಲ್ಲಿ ಒಬ್ಬನನ್ನು ಕರೆದು ಯಾವುದಾದರೂ ಒಂದು ಕಾರ್ಡ್‌ಅನ್ನು ತೆಗೆದು ಅದನ್ನು ನೆನಪಿಟ್ಟುಕೊಂಡು, ಪುನಃ ಕಾರ್ಡ್‌ಗಳ ಜೊತೆ ಸೇರಿಸಲು ಹೇಳಬೇಕು. ಮಾತ್ರವಲ್ಲ ಅದನ್ನು ಜಾದೂಗಾರನಿಗೆ ತೋರಿಸಬಾರದು ಅಂತಹೇಳಬೇಕು. ಪ್ರೇಕ್ಷಕನು ಹಾಗೆಯೇ ಮಾಡುತ್ತಾನೆ. ಜಾದೂಗಾರ ಕ್ಷಣಾರ್ಧದಲ್ಲಿ ಆ ಕಾರ್ಡ್‌ ಅನ್ನು ಉಳಿದ ಕಾರ್ಡ್‌ಗಳ ಮಧ್ಯದಿಂದ ತೆಗೆದು ತೋರಿಸುತ್ತಾನೆ!!!???

ಇದರ ಹಿಂದಿನ ರಹಸ್ಯ ಇಷ್ಟೆ.
ಇಸ್ಪೀಟ್‌ ಪ್ಯಾಕಿನ ಒಂದು ಬದಿಯಲ್ಲಿ ಸ್ಕೆಚ್‌ ಪೆನ್ನಿನಿಂದ ಮೂರು ಗೆರೆಗಳನ್ನು ಎಳೆದು ಸಿದ್ಧವಾಗಿಟ್ಟುಕೊಳ್ಳಿರಿ (ಒಂದನೇ ಚಿತ್ರವನ್ನು ಗಮನಿಸಿ). ಪ್ರೇಕ್ಷಕ ಕಾರ್ಡ್‌ಅನ್ನು ಆರಿಸುವಾಗ ಈ ಗೆರೆಗಳು ಆತನಿಗೆ ಕಾಣಿಸದಂತೆ ಎಚ್ಚರ ವಹಿಸಿ. ಆತ ಕಾರ್ಡ್‌ಅನ್ನು ತೆಗೆದು ನೋಡುವುದರೊಳಗೆ ನಿಮ್ಮ ಕೈಯಲ್ಲಿರುವ ಕಾರ್ಡ್‌ಗಳನ್ನು ಸಮನಾಗಿ ಜೋಡಿಸಿಕೊಂಡು, ಇಡೀ ಪ್ಯಾಕನ್ನು ತಿರುಗುಮುರುಗಾಗಿ ಹಿಡಿದಿಟ್ಟುಕೊಳ್ಳಿ. ಇದನ್ನು ಬಹಳ ಉಪಾಯವಾಗಿ ಮಾಡಬೇಕು. ಸ್ವಲ್ಪ ಯಡವಟ್ಟಾದರೂ ಕಷ್ಟವೇ. ನಂತರ, ಆರಿಸಿದ ಕಾರ್ಡ್‌ಅನ್ನು ಪ್ಯಾಕ್‌ನಲ್ಲಿ ಇಷ್ಟ ಬಂದ ಕಡೆ ಇಡಲು ಹೇಳಿ. ಈಗ ಆತನ ಕಾರ್ಡ್‌ಅನ್ನು ಗುರುತಿಸುವುದು ಬಹಳ ಸುಲಭ. ಆತನ ಕಾರ್ಡ್‌ ಇರುವಲ್ಲಿ ಪ್ಯಾಕಿನ ಒಂದು ಬದಿಯಲ್ಲಿ ಮೂರು ಗೆರೆಗಳು ತುಂಡಾಗಿರುತ್ತವೆ. ಇನ್ನೊಂದು ಬದಿಯಲ್ಲಿ ಮೂರು ಚುಕ್ಕೆಗಳಿರುತ್ತವೆ (ಎರಡನೇ ಚಿತ್ರವನ್ನು ಗಮನಿಸಿ).

ಉದಯ್‌ ಜಾದೂಗಾರ್‌

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಹವಳದ ದಿಬ್ಬಗಳು "ಗ್ರೇಟ್‌ ಬ್ಯಾರಿಯರ್‌ ರೀಫ್' ವಿಶ್ವದಲ್ಲೇ ಅತಿ ದೊಡ್ಡ ಹವಳದ ದಂಡೆ ಎಂಬ ಖ್ಯಾತಿಗೆ ಪಾತ್ರವಾಗಿದೆ. ಇದು 2,600 ಕಿ.ಮೀ. ಉದ್ದವಿದೆ. ಇದನ್ನು ಸಂರಕ್ಷಿಸುವ...

  • ಪ್ರಮುಖ ವ್ಯಕ್ತಿಗಳ ಪರಿಚಯವನ್ನು ಕೇವಲ ಹತ್ತೇ ಹತ್ತು ಪಾಯಿಂಟ್‌ಗಳಲ್ಲಿ ಕಟ್ಟಿ ಕೊಡುವ ಪ್ರಯತ್ನವಿದು... 1. ಕಡಿಮೆ ವೆಚ್ಚದಲ್ಲಿ ವಿಮಾನ ಪ್ರಯಾಣ ಮಾಡುವ ಭಾರತೀಯರ...

  • ಮಲೆನಾಡಿನ ಒಂದು ಸುಂದರ ಹಳ್ಳಿ ಸೋಮನಾಥಪುರ. ಅಲ್ಲಿನ ಸೋಮನಾಥ ದೇವಾಲಯವು ಸುತ್ತಲೂ ಪ್ರಸಿದ್ಧಿ ಪಡೆದಿತ್ತು. ಸೋಮನಾಥಪುರ ನದಿಯ ದಂಡೆಯ ಮೇಲೆ ಇದ್ದುದರಿಂದ ಆ ಊರವರಿಗೆ...

  • ಜಾದೂಗಾರ ತನ್ನ ತಲೆಯ ಮೇಲಿನ ಟೋಪಿಯನ್ನು ತೆಗೆಯುತ್ತಾನೆ. ಅದು ಬರೀ ಖಾಲಿಯೆಂದು ತೋರಿಸುತ್ತಾನೆ. ಅಷ್ಟಕ್ಕೆ ಸುಮ್ಮನಾಗುವುದಿಲ್ಲ. ಅದನ್ನು ಬೋರಲಾಗಿ ಮೇಜಿನ ಮೇಲಿಟ್ಟು...

  • ನೀರಿನಲ್ಲಿ ಆಟವಾಡುತ್ತಿದ್ದ ಚಿಕ್ಕ ಮೀನಿಗೆ ಒಮ್ಮೆ ಕೊಳದಿಂದ ಹೊರಕ್ಕೆ ಹೋಗಬೇಕೆಂಬ ಆಸೆ ಉಂಟಾಯಿತು. ಮುಂದೇನಾಯ್ತು? ಅದು ಪರಿಶುದ್ಧವಾದ ನೀರಿನಿಂದ ತುಂಬಿದ...

ಹೊಸ ಸೇರ್ಪಡೆ