ಬದಲಾದ ಬಸವಯ್ಯ

Team Udayavani, Feb 20, 2020, 4:00 AM IST

ಬಸವಯ್ಯ ತುಂಬಾ ಸೋಮಾರಿಯಾಗಿದ್ದನು. ತಂದೆ ತಾಯಿಗಳು ಎಷ್ಟೇ ಹೇಳಿದರೂ ಯಾವ ಕೆಲಸವನ್ನು ಮಾಡಲು ಇಷ್ಟ ಪಡುತ್ತಿರಲಿಲ್ಲ. ಊರವರು ಕೂಡಾ ಅವನನ್ನು ಸೋಮಾರಿಯೆಂದು ಹೀಯಾಳಿಸುತ್ತಿದ್ದರು. ಊರವರ ಮಾತುಗಳು ಬಸವಯ್ಯನ ತಂದೆ ತಾಯಿಯ ಕಿವಿಗೆ ಬಿದ್ದವು. ಅವರು ತುಂಬಾ ದುಃಖಪಟ್ಟರು. ಏನಾದರೂ ಮಾಡಿ ಬಸವಯ್ಯನನ್ನು ಯಾವುದೋ ಒಂದು ಕೆಲಸಕ್ಕೆ ಸೇರಿಸಬೇಕೆಂದು ನಿರ್ಣಯಿಸಿದರು. ಒಂದು ದಿನ ಬಸವಯ್ಯನನ್ನು ಕರೆದು “ನೀನು ಯಾವುದೇ ಕೆಲಸವನ್ನು ಮಾಡದೇ ಹೀಗೆ ಎಷ್ಟು ಕಾಲ ಇರುತ್ತೀಯ? ನಾವು ಇರುವಷ್ಟು ಕಾಲ ನಿನ್ನನ್ನು ಹೇಗೋ ಪೋಷಿಸುತ್ತೀವೆ. ಆದರೆ ಮುಂದಿನ ದಿನಗಳು ಹೀಗೆಯೇ ಇರುವುದಿಲ್ಲ. ನೀನು ಯಾವುದಾದರೂ ಒಂದು ಕೆಲಸವನ್ನು ಹುಡುಕಿಕೋ’ ಎಂದರು. ತಂದೆ ತಾಯಿಯ ಒತ್ತಡಕ್ಕೆ ಮಣಿದು ಅಡವಿಗೆ ಹೋಗಿ ಕಟ್ಟಿಗೆಗಳನ್ನು ತರುವ ಕೆಲಸಕ್ಕೆ ಸೇರಿಕೊಂಡ.

ಯಾವತ್ತೂ ಕೆಲಸ ಮಾಡಿರದ ಬಸವಯ್ಯನಿಗೆ ಕಟ್ಟಿಗೆಗಳನ್ನು ಹೇಗೆ ಕಡಿಯಬೇಕೆಂದು ತಿಳಿಯಲಿಲ್ಲ. ಆಗ ಅಲ್ಲಿಯೇ ಇದ್ದ ಒಂದು ಮರದ ಕೆಳಗೆ ಕುಳಿತು ಯೋಚಿಸತೊಡಗಿದನು. ಅಲ್ಲಿ ತಣ್ಣನೆಯ ಗಾಳಿ ಬೀಸುತ್ತಿದ್ದರಿಂದ ಅವನಿಗೆ ನಿದ್ದೆ ಬಂದಿತು. ಆಗ ಅವನು ಅಲ್ಲಿಯೇ ಮಲಗಿಬಿಟ್ಟ. ಸ್ವಲ್ಪ ಹೊತ್ತಿಗೆ ಮರದ ನೆರಳು ಹೋಗಿ ಬಿಸಿಲು ಬಂದಿತು. ಆದರೆ ಬಸವಯ್ಯ ಮಲಗಿದ್ದ ಜಾಗದಿಂದ ಕದಲಲಿಲ್ಲ. ಅಷ್ಟರಲ್ಲಿ ಒಂದು ಸಿಂಹ ತನ್ನ ಕಡೆಗೆ ಬರುತ್ತಿರುವುದನ್ನು ಗಮನಿಸಿದ. ಅವನಿಗೆ ಭಯದಲ್ಲಿ ಏನು ಮಾಡಬೇಕೆಂದು ತೋಚಲಿಲ್ಲ. ಕೂಡಲೆ ಅವನಿಗೆ ಒಂದು ಉಪಾಯ ಹೊಳೆಯಿತು. ಕೊಡಲಿಯ ಸಹಾಯದಿಂದ ಮರದ ಟೊಂಗೆಗಳನ್ನು ಕ್ಷಣಮಾತ್ರದಲ್ಲಿ ಕಡಿದ. ಆ ಟೊಂಗೆಯ ತುಂಡನ್ನು ಆಯುಧದಂತೆ ಬಳಸಿಕೊಂಡ. ಸಿಂಹ ಅಲ್ಲಿಂದ ಕಾಲೆ¤ಗೆಯಿತು. ಕಟ್ಟಿಗೆ ಕಡಿಯುವುದು ತನಗೆ ಬಾರದು ಎಂದುಕೊಂಡಿದ್ದವ ತನಗೆ ಅಪಾಯ ಒದಗಿದ ಕೂಡಲೆ ಕಟ್ಟಿಗೆ ಕಡಿದುದು ಅಚ್ಚರಿಯಂತೆ ತೋರಿತು. ಅದೇ ಸಮಯಕ್ಕೆ ಮನಸ್ಸಿದ್ದರೆ ಮಾರ್ಗ ಎಂದೂ ಅರ್ಥವಾಯಿತು.

– ಕೆ.ಎನ್‌. ಅಕ್ರಂ ಪಾಷ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಹವಳದ ದಿಬ್ಬಗಳು "ಗ್ರೇಟ್‌ ಬ್ಯಾರಿಯರ್‌ ರೀಫ್' ವಿಶ್ವದಲ್ಲೇ ಅತಿ ದೊಡ್ಡ ಹವಳದ ದಂಡೆ ಎಂಬ ಖ್ಯಾತಿಗೆ ಪಾತ್ರವಾಗಿದೆ. ಇದು 2,600 ಕಿ.ಮೀ. ಉದ್ದವಿದೆ. ಇದನ್ನು ಸಂರಕ್ಷಿಸುವ...

  • ಪ್ರಮುಖ ವ್ಯಕ್ತಿಗಳ ಪರಿಚಯವನ್ನು ಕೇವಲ ಹತ್ತೇ ಹತ್ತು ಪಾಯಿಂಟ್‌ಗಳಲ್ಲಿ ಕಟ್ಟಿ ಕೊಡುವ ಪ್ರಯತ್ನವಿದು... 1. ಕಡಿಮೆ ವೆಚ್ಚದಲ್ಲಿ ವಿಮಾನ ಪ್ರಯಾಣ ಮಾಡುವ ಭಾರತೀಯರ...

  • ಮಲೆನಾಡಿನ ಒಂದು ಸುಂದರ ಹಳ್ಳಿ ಸೋಮನಾಥಪುರ. ಅಲ್ಲಿನ ಸೋಮನಾಥ ದೇವಾಲಯವು ಸುತ್ತಲೂ ಪ್ರಸಿದ್ಧಿ ಪಡೆದಿತ್ತು. ಸೋಮನಾಥಪುರ ನದಿಯ ದಂಡೆಯ ಮೇಲೆ ಇದ್ದುದರಿಂದ ಆ ಊರವರಿಗೆ...

  • ಜಾದೂಗಾರ ತನ್ನ ತಲೆಯ ಮೇಲಿನ ಟೋಪಿಯನ್ನು ತೆಗೆಯುತ್ತಾನೆ. ಅದು ಬರೀ ಖಾಲಿಯೆಂದು ತೋರಿಸುತ್ತಾನೆ. ಅಷ್ಟಕ್ಕೆ ಸುಮ್ಮನಾಗುವುದಿಲ್ಲ. ಅದನ್ನು ಬೋರಲಾಗಿ ಮೇಜಿನ ಮೇಲಿಟ್ಟು...

  • ನೀರಿನಲ್ಲಿ ಆಟವಾಡುತ್ತಿದ್ದ ಚಿಕ್ಕ ಮೀನಿಗೆ ಒಮ್ಮೆ ಕೊಳದಿಂದ ಹೊರಕ್ಕೆ ಹೋಗಬೇಕೆಂಬ ಆಸೆ ಉಂಟಾಯಿತು. ಮುಂದೇನಾಯ್ತು? ಅದು ಪರಿಶುದ್ಧವಾದ ನೀರಿನಿಂದ ತುಂಬಿದ...

ಹೊಸ ಸೇರ್ಪಡೆ