ಹರಿಕತೆ ದಾಸಯ್ಯ ಮತ್ತು ಕೆಂಡದ ಮರ!

Team Udayavani, Apr 20, 2017, 3:45 AM IST

harikate-dasayya.jpg

ಒಂದೂರಿನಲ್ಲಿ ವೆಂಕಟದಾಸರೆಂಬ ಹರಿಕಥೆ ದಾಸರಿದ್ದರು. ಅವರ ಹರಿಕೀರ್ತನೆಯೆಂದರೆ ಬಹುಪ್ರಸಿದ್ಧ. ಬೇರೆಬೇರೆ ಊರುಗಳಲ್ಲಿ ಹಬ್ಬ ಹರಿದಿನ, ವಿಶೇಷ ಸಂದರ್ಭಗಳಲ್ಲಿ ಅವರದೇ ಹರಿಕೀರ್ತನೆ. ಅದೊಂದು ಏಕಾದಶಿಯ ದಿನ. ಪಕ್ಕದ ಊರಿನ ದೇವಾಲಯದ ಸಭಾಂಗಣದಲ್ಲಿ ವೆಂಕಟದಾಸರ ಹರಿಕೀರ್ತನೆ. ಯಾವಾಗಲೂ ಏನಾದರೊಂದು ಕಾರಣಕ್ಕೆ ಕೇಳಲಿಕ್ಕೆ ಆಗಿರಲಿಲ್ಲ. ಇಂದಾದರೂ ಕೇಳ್ಳೋಣ ಎಂದು ದಾಸರ ಹೆಂಡತಿಯೂ ಆ ದಿನ ಊಟಕ್ಕೆ ಅಡುಗೆಯನ್ನೆಲ್ಲ ಸಿದ್ಧ ಮಾಡಿಟ್ಟು ಹರಿಕೀರ್ತನೆ ಕೇಳಲು ಬಂದು ಕುಳಿತಿದ್ದಳು. ದಾಸರು ಏಕಾದಶಿ ದಿನದ ಮಹಾತ್ಮೆಯನ್ನು ವರ್ಣಿಸುತ್ತಾ ಹೇಳುತ್ತಿದ್ದರು… ಏಕಾದಶಿ ದಿನ ಉಪವಾಸ ಮಾಡಬೇಕು. ಬರೇ ನೀರು ಕುಡಿದುಕೊಂಡು ಇರಬೇಕು. ಉಪವಾಸ ಮಾಡಿದರೆ ಮಹಾಪುಣ್ಯ. ಅದರಿಂದ ಸ್ವರ್ಗಸುಖ ಲಭಿಸುತ್ತದೆ. ಈ ಪುಣ್ಯ ದಿನದಂದು ಊಟ ಮಾಡುವುದು, ಅದರಲ್ಲೂ ಭಕ್ಷ್ಯ ಬೋಜನಗಳನ್ನು ಸೇವಿಸುವುದು ಮಹಾಪಾಪ. ಅಂಥವರಿಗೆ ಘೋರ ನರಕ ಪ್ರಾಪ್ತಿಯಾಗುತ್ತದೆ. ಯಮದೂತರು ಉಗ್ರಶಿಕ್ಷೆಯನ್ನು ವಿಧಿಸುತ್ತಾರೆ. ನರಕದಲ್ಲಿ ಒಂದು ಅಗ್ನಿಯ ವೃಕ್ಷ ಇದೆ. ಅದು ನಿಗಿನಿಗಿ ಕೆಂಡದಂತೆ ಉರಿಯುತ್ತಾ ಇರುತ್ತದೆ.  ಏಕಾದಶಿಯಂದು ಉಪವಾಸ ಮಾಡದವರು ಕೆಂಡದ ಮರವನ್ನು ಅಪ್ಪಿಕೊಳ್ಳಬೇಕು. ಅವರ ಎರಡೂ ಕೈಗಳನ್ನು ಇನ್ನೊಂದು ಬದಿಯಿಂದ ಹಿಡಿದುಕೊಂಡು ಯಮದೂತರು ಮಜ್ಜಿಗೆ ಕಡೆದಂತೆ ಕಡೆಯುತ್ತಾರೆ. ಆಗ ಪಾಪಿಗಳು ಬೆಂಕಿಯ ಉರಿಯನ್ನು ಸಹಿಸಲಾರದೆ ಆಕ್ರಂದನ ಮಾಡುತ್ತಾರೆ..’ ಎಂದು ಮುಂತಾಗಿ ವರ್ಣಿಸಿ ಮಂಗಳ ಹಾಡಿದರು ದಾಸರು. ಹರಿಕಥೆ ಮುಗಿಯಿತು. ಭಯಭಕ್ತಿಯಿಂದ ಜನರು ಕೈ ಮುಗಿದರು. 

ದಾಸರ ಹೆಂಡತಿ ಲಗುಬಗೆಯಿಂದ ಮನೆಗೆ ಧಾವಿಸಿದರು. ಹಿಂದೆಯೇ ದಾಸರೂ ದಕ್ಷಿಣೆ ಸ್ವೀಕರಿಸಿ ಸ್ವಲ್ಪ ಹೊತ್ತಿನಲ್ಲಿಯೇ ಮನೆಗೆ ಮರಳಿದರು. ಬೆಳಗಿನಿಂದ ಉಪವಾಸ ಇದ್ದ ದಾಸರಿಗೆ ಹೊಟ್ಟೆ ತಾಳ ಹಾಕುತ್ತಿತ್ತು. ಹರಿಕಥೆ ಮಾಡುವಾಗಲೂ ಅವರಿಗೆ ಹೊಟ್ಟೆಯದ್ದೇ ಯೋಚನೆ. ಹಸಿವಿನಿಂದ ತುಂಬಾ ಬಳಲಿದ್ದ ಅವರು ಹೆಂಡತಿಗೆ ಹೇಳಿದರು “ಬೇಗ ತಟ್ಟೆ ಹಾಕು. ಕೈಕಾಲು ಮುಖ ತೊಳೆದುಕೊಂಡು ಬರುತ್ತೇನೆ..’ ಹೆಂಡತಿ ದೇವರ ಕೋಣೆಯಿಂದಲೇ ಕೂಗಿ ಹೇಳಿದಳು: “ನೀವು ಹೇಳಿದಂತೆ ಸಂಜೆ ಅಡುಗೆ ಮಾಡಿದ್ದೆ. ಉಪವಾಸಕ್ಕೆ ಶ್ಯಾವಿಗೆ ಪಾಯಸವನ್ನೂ ಮಾಡಿದ್ದೆ. ಆದರೆ ನಿಮ್ಮ ಹರಿಕಥೆ ಕೇಳಿದ ಮೇಲೆ ಭಯವಾಯಿತು. ಬೆಂಕಿ ಮರ ಅಪ್ಪುವ ಶಿಕ್ಷೆ ನನಗೆ ಬೇಡ, ನಿಮಗೂ ಬೇಡ. ಅದಕ್ಕೆ ಮಾಡಿಟ್ಟ ಭಕ್ಷಯ ಭೋಜನವನ್ನು ಹೊರಗೆ ಚೆಲ್ಲಿಬಿಟ್ಟೆ.’ ಎಂದಳು. ದಾಸರ ಜಂಘಾಬಲವೇ ಉಡುಗಿ ಹೋಯಿತು. ಕುಸಿದು ಕುಳಿತ ಅವರು ಹೇಳಿದರು “ಆ ಬೆಂಕಿಯ ಮರವನ್ನು ಎಲ್ಲರೂ ಅಪ್ಪಿ ತಣ್ಣಗಾಗಿ ಹೋಗಿರುತ್ತಿತ್ತು. ಆದ್ದರಿಂದ ನಾವು ಊಟ ಮಾಡಬಹುದಿತ್ತು. ಪಾಯಸ ಸವಿಯಬಹುದಿತ್ತು’ ಎಂದು ನಿಡುಸುಯ್ದರು. ಹೆಂಡತಿ ದಾಸರ ಮುಖವನ್ನೇ ಮಿಕಿ ಮಿಕಿ ನೋಡುತ್ತ ನಿಂತರು.

– ವನರಾಗ ಶ‌ರ್ಮಾ

ಟಾಪ್ ನ್ಯೂಸ್

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

1aaaa

IPL; ಚೆನ್ನೈ ವಿರುದ್ಧ ಲಕ್ನೋಗೆ 8 ವಿಕೆಟ್ ಗಳ ಅಮೋಘ ಜಯ

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ

Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ

Shobha, Bharathi Shetty  ಹೊರತು ಬಿಎಸ್‌ವೈ ಬೇರೆ ಯಾರನ್ನೂ ಬೆಳೆಸುತ್ತಿಲ್ಲ: ಈಶ್ವರಪ್ಪ

Shobha, Bharathi Shetty ಹೊರತು ಬಿಎಸ್‌ವೈ ಬೇರೆ ಯಾರನ್ನೂ ಬೆಳೆಸುತ್ತಿಲ್ಲ: ಈಶ್ವರಪ್ಪ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

1aaaa

IPL; ಚೆನ್ನೈ ವಿರುದ್ಧ ಲಕ್ನೋಗೆ 8 ವಿಕೆಟ್ ಗಳ ಅಮೋಘ ಜಯ

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.