ಅರಮನೆಯೊಳಗಿನ ಕಿತ್ತಳೆ ಮರದ ರಹಸ್ಯ

ಹಿಸ್ಟರಿ ಕಥೆ

Team Udayavani, Apr 11, 2019, 6:30 AM IST

ನೋಟದಿಂದ ತಪ್ಪಿಸಿಕೊಂಡ ಇತಿಹಾಸದ ಕುತೂಹಲಕಾರಿ ತುಣುಕುಗಳಿಗೊಂದು ಪುಟ್ಟ ಜಾಗ

ಅರಮನೆ ಎಂದರೆ ವಜ್ರ ವೈಢೂರ್ಯಗಳಿಂದ ಅಲಂಕೃತಗೊಂಡ ಸಿಂಹಾಸನ, ಕೊಪ್ಪರಿಗೆ ತುಂಬಾ ಬಂಗಾರದ ಆಭರಣಗಳು, ರಾಜಾಸ್ಥಾನ, ಅಂತಃಪುರ, ಸುಂದರ ಉದ್ಯಾನವನ, ಸುವಾಸನಾಯುಕ್ತ ಗಾಳಿ ಮುಂತಾದ ಶ್ರೀಮಂತ ಸುಮಧುರ ಕಲ್ಪನೆ ಕಣ್ಣಮುಂದೆ ಬರುತ್ತದೆ. ಆದರೆ, ಅದಕ್ಕೆ ವ್ಯತಿರಿಕ್ತವಾದ ಪರಿಸ್ಥಿತಿ 17 ಶತಮಾನದ ವರ್ಸ್ಯೆಲ್ಸ್‌ ಅರಮನೆಯದಾಗಿತ್ತು. ಇಂದು ಈ ಅರಮನೆ ಅದ್ಧೂರಿತನ ಮತ್ತು ವಾಸ್ತುಶಿಲ್ಪದ ಕಾರಣ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಆದರೆ, 17ನೇ ಶತಮಾನದಲ್ಲಿ ಹಾಗಿರಲಿಲ್ಲ. ಅರಮನೆಯಲ್ಲಿ ಶೌಚಾಲಯಗಳ ಕೊರತೆ ಇದ್ದವಂತೆ. ಹೀಗಾಗಿ ಅರಮನೆಗೆ ಬಂದವರು ಸಿಕ್ಕ ಸಿಕ್ಕ ಮೂಲೆಗಳೆಲ್ಲಾ ಶೌಚಕ್ಕೆ ಹೋಗುತ್ತಿದ್ದರಂತೆ. ಎರಡು ದಿನಗಳಿಗೊಮ್ಮೆ ಶೌಚವನ್ನು ಶುಚಿಗೊಳಿಸಲೆಂದೇ ಪ್ರತ್ಯೇಕ ಸೇವಕರನ್ನು ನೇಮಿಸಲಾಗಿತ್ತು. ಆದರೆ, ಇದರಿಂದ ಪರಿಸ್ಥಿತಿ ಸುಧಾರಿಸಿರಲಿಲ್ಲ. ಅರಮನೆಯಲ್ಲಿ ಪ್ರತಿನಿತ್ಯ ಔತಣಕೂಟಗಳಿರುತ್ತಿದ್ದುದರಿಂದ ಶೌಚಕ್ಕೆ ಹೋಗುವವರ ಸಂಖ್ಯೆ ಹೆಚ್ಚಿತ್ತು. ಹೀಗಾಗಿ ಅರಮನೆ ಗಬ್ಬು ನಾತ ಬೀರುತ್ತಿತ್ತು. ರಾಜ 14ನೇ ಲೂಯಿ ಪ್ರತಿನಿತ್ಯ ಶುಚಿಗೊಳಿಸುವಂತೆ ಆಜ್ಞೆ ಮಾಡಿದ. ಅಲ್ಲದೆ, ದುರ್ನಾತವನ್ನು ಮರೆಮಾಚಲು ಕಿತ್ತಳೆ ಮರಗಳನ್ನು ಅರಮನೆ ಒಳಗೆ ಬೆಳೆಸಲಾಯಿತು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಬೆಳ್ಳಂಬೆಳಗ್ಗೆ ಎಲ್ಲಾ ಪ್ರಾಣಿಗಳು ಕೊಳದ ಬಳಿ ಸೇರಿಕೊಂಡವು. ಸಭೆಗೆ ಎಲ್ಲರಿಗಿಂತ ಮೊದಲು ತೋಳ ಮಾತಾಡಿತು. ನಿನ್ನೆ ಪಕ್ಕದ ಕಾಡಿಗೆ ಹೋಗಿದ್ದೆ. ಅಲ್ಲಿದ್ದ ಗೆಳೆಯರೆಲ್ಲ...

  • ಪತ್ನಿಯರೊಡನೆ ಸಂತಸದಿಂದಿದ್ದಾಗ ಭಂಗ ತಂದದ್ದಕ್ಕೆ ಅಂಗಾರಪರ್ಣನಿಗೆ ಸಿಟ್ಟು ಬಂತು. ಪಾಂಡವರನ್ನು ತಡೆದು "ರಾತ್ರಿಯ ಹೊತ್ತು ಇಲ್ಲಿ ಯಕ್ಷ ಕಿನ್ನರರು ವಿಹರಿಸುತ್ತಾರೆ....

  • ವಿಮಾನ ನಿಲ್ದಾಣ ನಗರಪ್ರದೇಶದಿಂದ ದೂರದಲ್ಲಿ, ವಿಸ್ತಾರ ಪ್ರದೇಶವನ್ನು ಆವರಿಸಿಕೊಂಡಿರುತ್ತದೆ. ಅದಕ್ಕೆ ಬಹಳಷ್ಟು ಸಂಪನ್ಮೂಲಗಳು, ಸಮಯ ಬೇಕಾಗುತ್ತವೆ. ಅಂತಾರಾಷ್ಟ್ರೀಯ...

  • ನೋಟದಿಂದ ತಪ್ಪಿಸಿಕೊಂಡ ಇತಿಹಾಸದ ಕುತೂಹಲಕಾರಿ ತುಣುಕುಗಳಿಗೊಂದು ಪುಟ್ಟ ಜಾಗ ಜಗದ್ವಿಖ್ಯಾತ ವಿಜ್ಞಾನಿ ಐನ್‌ಸ್ಟೀನ್‌ ಅವರಿಗೆ ಪ್ರಚಾರ ಎಂದರೆ ಆಷ್ಟಕ್ಕಷ್ಟೆ....

  • ಭೂಮಿ ಮೇಲಿನ ಜೀವಜಾಲದಲ್ಲಿ ನಮಗೆ ಗೊತ್ತಿಲ್ಲದ ಸಂಗತಿಗಳು ಹಲವಾರು! ಅಷ್ಟೇ ಯಾಕೆ... ನಮ್ಮ ಸುತ್ತಮುತ್ತಲೇ ಇರುವ, ನಿತ್ಯವೂ ಕಣ್ಣಿಗೆ ಕಾಣುವ ಜೀವಿಗಳು, ಹುಳ ಹುಪ್ಪಟೆಗಳನ್ನೇ...

ಹೊಸ ಸೇರ್ಪಡೆ