ಬಂತು ಬಂತು ಸೀಪ್ಲೇನ್‌!

ನೀರಿನಲ್ಲೊಂದು ವಿಮಾನ ನಿಲ್ದಾಣ

Team Udayavani, Jun 27, 2019, 5:00 AM IST

5

ವಿಮಾನ ನಿಲ್ದಾಣ ನಗರಪ್ರದೇಶದಿಂದ ದೂರದಲ್ಲಿ, ವಿಸ್ತಾರ ಪ್ರದೇಶವನ್ನು ಆವರಿಸಿಕೊಂಡಿರುತ್ತದೆ. ಅದಕ್ಕೆ ಬಹಳಷ್ಟು ಸಂಪನ್ಮೂಲಗಳು, ಸಮಯ ಬೇಕಾಗುತ್ತವೆ. ಅಂತಾರಾಷ್ಟ್ರೀಯ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ. ಸಾರ್ವಜನಿಕರಿಗೆ, ಸಾರ್ವಜನಿಕ ಸ್ವತ್ತುಗಳಿಗೆ ತೊಂದರೆಯಾಗದಂತೆ ವಿಮಾನನಿಲ್ದಾಣವನ್ನು ಕಟ್ಟಬೇಕಾಗುತ್ತದೆ. ಇವೆಲ್ಲಾ ತಾಪತ್ರಯಗಳನ್ನು ಕೊನೆಗಾಣಿಸಿದ್ದು ಸೀಪ್ಲೇನ್‌. ಇವುಗಳ ಹಾರಾಟಕ್ಕೆ ಮತ್ತು ಇಳಿಯುವುದಕ್ಕೆ ರನ್‌ವೇಗಳು, ವಿಮಾನ ನಿಲ್ದಾಣಗಳು ಬೇಕಿಲ್ಲ. ನೀರಿನ ಮೇಲೆಯೇ ಇವುಗಳು ಇಳಿಯಬಲ್ಲವು ಮತ್ತು ಟೇಕಾಫ್ ಮಾಡಬಲ್ಲವು.

ಏನಿದು ಸೀಪ್ಲೇನ್‌?
ಈ ವಿಮಾನದ ತಳಭಾಗದಲ್ಲಿ ದೋಣಿಯಂಥ ರಚನೆಯಿದ್ದು, ಅದರ ವಿಶಾಲವಾದ ಎರಡು ರೆಕ್ಕೆಗಳೂ ನೀರಿನಲ್ಲಿ ತೇಲಿಕೊಂಡು ಹಾಗೂ ನೀರನ್ನು ಸೀಳಿಕೊಂಡು ಮುನ್ನುಗ್ಗುವಂತೆ ನಿರ್ಮಿಸಲಾಗಿದೆ. ಮಿಕ್ಕ ವಿಮಾನಗಳಿಗೆ ಇರುವಂತೆ ಇವಕ್ಕೆ ಚಕ್ರಗಳಿಲ್ಲ ಎಂದು ತಿಳಿಯಬೇಡಿ. ಚಕ್ರಗಳಿರುತ್ತವೆ, ಆದರೆ ನೀರಿನ ಮೇಲೆ ಅದರ ಉಪಯೋಗವಿಲ್ಲದ್ದರಿಂದ ಅದು ಮಡಚಿದ ಸ್ಥಿತಿಯಲ್ಲಿರುತ್ತದೆ. ಭೂಮಿ ಮೇಲೆ ಇಳಿಸುವಾಗ ಮಾತ್ರ ಚಕ್ರಗಳು ತೆರೆದುಕೊಳ್ಳುತ್ತವೆ. ನೀರಿನ ಮೇಲೆ ಇಳಿಯುವಾಗ ಸ್ಕೇಟಿಂಗ್‌ ಮಾದರಿಯ ಬ್ಲೇಡುಗಳನ್ನು ಬಳಸಿಕೊಳ್ಳಲಾಗುತ್ತದೆ. ಹತ್ತು ಮಂದಿ ಕುಳಿತುಕೊಳ್ಳಬಹುದಾದ ಈ ವಿಮಾನವು ನದಿ, ಜಲಾಶಯ, ಸಮುದ್ರ, ದೊಡ್ಡ ಕೆರೆಗಳ ನೀರಿನ ಮೇಲೆಯೂ ಕಾರ್ಯಾಚರಿಸಬಲ್ಲದು.

ಭಾರತದಲ್ಲಿ ಸೀಪ್ಲೇನ್‌ ಪರಿಕಲ್ಪನೆ
1908ರಲ್ಲಿ ಸೀಪ್ಲೇನ್‌ ಪರಿಕಲ್ಪನೆಯನ್ನು ಪ್ರಪ್ರಥಮ ಬಾರಿಗೆ ಗೇಬ್ರಿಯಲ್‌ವಾಸಿನ್‌ ಹಾಗೂ ಹೆನ್ರಿ ಫಾರ್ಮಲ್‌ ಎಂಬುವವರು ಪರಿಚಯಿಸಿದರು. ಹಿಂದೆಲ್ಲಾ ಹಾಲಿವುಡ್‌ ಸಿನಿಮಾಗಳಲ್ಲಿ ಸೀಪ್ಲೇನ್‌ಗಳನ್ನು ರೋಚಕ ಸನ್ನಿವೇಶಗಳಿಗೆ ಬಳಸಿಕೊಳ್ಳಲಾಗುತ್ತಿತ್ತು. ಭಾರತದಲ್ಲಿ ಇಂಥದ್ದೊಂದು ನೂತನ ಪ್ರಯತ್ನವನ್ನು ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಸಾಕಾರಗೊಳಿಸಿದ್ದರು. ಅವರು ಸೀಪ್ಲೇನಿನಲ್ಲಿ ಅಹಮದಾಬಾದ್‌ನ ಸಾಬರಮತಿ ನದಿಯಿಂದ ಉತ್ತರ ಗುಜರಾತಿನ ಧರೋಜಿ ಅಣೆಕಟ್ಟಿನ ನೀರಿನ ಮೇಲೈಗೆ ಬಂದು ಯಶಸ್ವಿಯಾಗಿ ಇಳಿದಿದ್ದರು. ಮೂಲಕ ಸಾಕಾರಗೊಳಿಸಿತು. ಸೀಪ್ಲೇನ್‌ ವ್ಯವಸ್ಥೆಯನ್ನು ಭಾರತದಲ್ಲೆಡೆ ಅಳವಡಿಸುವುದರಿಂದ ದೇಶದ ಸಣ್ಣ ಸಣ್ಣ ಹಳ್ಳಿಗಳ ಕೃಷಿ ಉತ್ಪನ್ನಗಳನ್ನು ಅತ್ಯಂತ ಶೀಘ್ರವಾಗಿ ಬೃಹತ್‌ ಮಾರುಕಟ್ಟೆಗೆ ತಲುಪಿಸುವುದು, ಗುಡ್ಡಗಾಡು ಪ್ರದೇಶಗಳಿಗೆ ವೈಮಾನಿಕ ಸಾರಿಗೆ ವ್ಯವಸ್ಥೆ, ಮುಂತಾದ ಹತ್ತು ಹಲವು ಪ್ರಯೋಜನಗಳು ಸಿಗಲಿವೆ.

ಸವಾಲುಗಳು ಅನೇಕ
ಸೀಪ್ಲೇನ್‌ ವ್ಯವಸ್ಥೆಯಿಂದ ಅನೇಕ ಉಪಯೋಗಗಳಿವೆ ನಿಜ. ಆದರೆ ಅನನುಕೂಲಗಳೂ ಇವೆ. ಈ ವಿಮಾನಗಳ ಹಾರಾಟದಿಂದ ಕೆರೆ, ಜಲಾಶಯ, ಅಣೆಕಟ್ಟುಗಳು ಮತ್ತು ನದಿಗಳ ಮೂಲ ಸ್ವರೂಪಕ್ಕೆ ಧಕ್ಕೆಯಾಗುವ ಅಪಾಯವೂ ಇದೆ. ಜಲಚರಗಳ ಸಂತತಿಗಳ ಅಭಿವೃದ್ಧಿಗೂ ತೊಡಕಾಗಬಹುದು. ಪರಿಣಾಮವಾಗಿ ಸಾಂಪ್ರದಾಯಿಕ ಮೀನುಗಾರಿಕೆಗೂ ಸಮಸ್ಯೆಯಾಗಬಹುದು. ಅಲ್ಲದೆ ಪರಿಸರ ಮತ್ತು ಶಬ್ದಮಾಲಿನ್ಯವೂ ಉಂಟಾಗಬಹುದು. ಆದ್ದರಿಂದ ಅನೇಕ ಸಂಗತಿಗಳನ್ನು ಗಮನದಲ್ಲಿರಿಸಿಕೊಂಡು ಸೀಪ್ಲೇನ್‌ ವ್ಯವಸ್ಥೆಯನ್ನು ಜಾರಿಗೆ ತರಬೇಕಾದ ಜರೂರತ್ತಿದೆ.

ಆಕಾಶ ಮಾರ್ಗದ ಟೆಂಪೊ
ಈ ವಿಮಾನಗಳು ಪುಟ್ಟದಾಗಿರುವುದರಿಂದ ಇದರಲ್ಲಿ ಫ‌ರ್ಸ್ಡ್ ಕ್ಲಾಸ್‌, ಎಕಾನಮಿ ಕ್ಲಾಸ್‌ ಎಂದು ಪ್ರತ್ಯೇಕ ಕ್ಯಾಬಿನ್‌ ಇರುವುದಿಲ್ಲ. ಪ್ರಯಾಣಿಕರೆಲ್ಲರೂ ಒಂದೇ. ಒಟ್ಟಿಗೆ ಎದುರು ಬದುರಾಗಿ ಕುಳಿತು ಪ್ರಯಾಣಿಸಬೇಕಾಗುತ್ತದೆ. ಒಂದೂರಿನಿಂದ ಇನ್ನೊಂದೂರಿಗೆ ಹೊರಡುವ ಟೆಂಪೋ ಹೇಗೋ ಅದೇ ರೀತಿ ಆಕಾಶಮಾರ್ಗದ ಟೆಂಪೋ ಎಂದು ಸೀಪ್ಲೇನನ್ನು ಕರೆಯಬಹುದು.

– ಸಂತೋಷ್‌ರಾವ್‌ ಪೆರ್ಮುಡ

ಟಾಪ್ ನ್ಯೂಸ್

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್‌ ಆಫ್‌ ಅಟಾರ್ನಿ, ದೂರು ದಾಖಲು

ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್‌ ಆಫ್‌ ಅಟಾರ್ನಿ, ದೂರು ದಾಖಲು

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.