ಹಾರುತಿದೆ ಡ್ರ್ಯಾಗನ್‌ ನೋಡಾ…


Team Udayavani, Nov 8, 2018, 7:00 AM IST

jeda.png

ಡ್ರ್ಯಾಗನ್‌ ಎನ್ನುವ ಹಾರುವ ರಕ್ಕಸಾಕಾರದ ಜೀವಿ ಬೆಂಕುಯನ್ನುಗುಳುತ್ತದೆ ಎನ್ನುವ ಸಂಗತಿ ಅನೇಕರಿಗೆ ತಿಳಿದಿರಬಹುದು. ಆದರೆ  ಇಲ್ಲಿಯವರೆಗೆ ಅದರ ಅಸ್ತಿತ್ವ ಬರೀ ಚಿತ್ರಗಳಿಗೆ, ಪುರಾಣ ಕತೆಗಳಿಗೆ ಸೀಮಿತವಾಗಿರುವುದರಿಂದ, ಯಾವುದೇ ಪುರಾವೆ ಇಲ್ಲಿಯವರೆಗೆ ದೊರಕದೇ ಇರುವುದರಿಂದ ಅದು ಕಾಲ್ಪನಿಕ ಜೀವಿ ಎಂದೇ ಹೆಸರಾಗಿದೆ. ಅದೇ ಹೆಸರನ್ನು ಹೊತ್ತ ಜೀವಿಯೊಂದು ದಕ್ಷಿಣಭಾರತದ ಕಾಡುಗಳಲ್ಲಿವೆ ಎಂದರೆ ನಂಬಲು ಕಷ್ಟವಾಗುತ್ತಿದೆ ಅಲ್ವಾ? ಇದರ ಇತ್ಯೋಪರಿ, ಇರುವಿಕೆ ಎಂದಿನಿಂದಲೂ ವಿಜ್ಞಾನಿಗಳಿಗೆ ದೊಡ್ಡ ಸವಾಲು.

ಪ್ರಪಂಚದಲ್ಲಿ ಕೆಲವೇ ಕಾಡುಗಳಲ್ಲಿ ಕಂಡುಬಂದಿರುವ ಈ ಜೀವಿಯ ಸಂಖ್ಯೆ ಎಷ್ಟಿವೆ ಎನ್ನುವುದು ಇಲ್ಲಿಯವರೆಗೂ ತಿಳಿದುಬಂದಿಲ್ಲ. ಪೂರ್ಣಚಂದ್ರ ತೇಜಸ್ವಿಯವರ ‘ಕರ್ವಾಲೋ’ ಕಾದಂಬರಿ ಓದಿದವರಿಗೆ ಈ ಜೀವಿಯ ಪರಿಚಯ ಇದ್ದೇ ಇರುತ್ತದೆ. ಎಸ್‌… ಇದು ‘ಹಾರುವ ಡ್ರ್ಯಾಗನ್‌’ ಅಥವಾ ‘ಹಾರುವ ಹಲ್ಲಿ’ ಎಂದೇ ಹೆಸರುವಾಸಿ. ಇವುಗಳ ಅನೇಕ ಪ್ರಭೇದಗಳನ್ನು ವಿಜ್ಞಾನಿಗಳು ಗುರುತಿಸಿದ್ದಾರೆ. ನಿಜ ಹೇಳಬೇಕೆಂದರೆ ಇದಕ್ಕೆ ರೆಕ್ಕೆಗಳಿಲ್ಲ. ಆದರೆ ಪಕ್ಕೆಲುಬಿನ ಜಾಗದಲ್ಲಿ ಚರ್ಮ ರೆಕ್ಕೆಯಂತೆ ತೆರೆದುಕೊಳ್ಳಬಲ್ಲುದು. ಇದು ಜೀವಿಯನ್ನು ಗಾಳಿಯಲ್ಲಿ ತೇಲಿಸುತ್ತದೆ.

ಈ ರೆಕ್ಕೆ ರಚನೆಯ ಉಪಯೋಗಗಳು ತುಂಬಾ ಸೀಮಿತವಾದುದು. ಹಾರುವ ಹಲ್ಲಿಗೆ ಹಕ್ಕಿಗಳಂತೆ ನೆಲದಿಂದ ಆಗಸಕ್ಕೆ ನೆಗೆಯಲಾಗುವುದಿಲ್ಲ, ಆದ್ದರಿಂದಲೇ ಈ ಜೀವಿ ಮರದ ತುತ್ತ ತುದಿಗೆ ಏರಿ ಅಲ್ಲಿಂದ ಇನ್ನೊಂದು ಮರಕ್ಕೆ ತೇಲುತ್ತಾ ಹಾರುತ್ತವೆ. ಈ ಜೀವಿ ನೆಲದ ಮೇಲೆ ಕಾಲಿಡುವುದು ಅಪರೂಪ. ಹಾರುವ ಹಲ್ಲಿ ನೆಲದ ಮೇಲೆ ಕಾಲಿಡುವುದು ಒಂದೇ ಕಾರಣಕ್ಕೆ, ಅದು ಮೊಟ್ಟೆ ಇಡಲು ಎನ್ನುವುದು ಸಂಶೋಧಕರ ಅಭಿಪ್ರಾಯ. ಇದು ತನ್ನ ಜೀವಮಾನದಲ್ಲಿ ಹೆಚ್ಚೆಂದರೆ 9 ಇಂಚುಗಳಷ್ಟು ಉದ್ದ ಬೆಳೆಯಬಲ್ಲದು ಅನ್ನೋದು ಕೂಡಾ ಸಂಶೋಧಕರ ಅಭಿಪ್ರಾಯ. ಇದರ ಮೈಯ ಹಳದಿ, ಕಿತ್ತಳೆ ಮತ್ತು ಹಸಿರು ಬಣ್ಣದ ವಿನ್ಯಾಸಗಳು ಹಿನ್ನೆಲೆಯ ಪರಿಸರದೊಂದಿಗೆ ತಾಳೆಯಾಗುವುದರಿಂದ ಬಹುತೇಕ ಸಮಯ ಇವು ಕಣ್ಣಿಗೆ ಬೀಳುವುದೇ ಇಲ್ಲ. ಕಣ್ಣಿಗೆ ಕಂಡದ್ದೆಲ್ಲವನ್ನೂ ತನ್ನ ಉಪಯೋಗಕ್ಕಾಗಿ ಸ್ವಾಧೀನ ಪಡಿಸಿಕೊಳ್ಳುವ ಮನುಷ್ಯನಿಗೆ ಇವು ಕಾಣದಿದ್ದರೇ ಒಳ್ಳೆಯದು. ಹಾರುವ ಹಲ್ಲಿಯ ರೂಪ- ರಚನೆ ಅವುಗಳನ್ನು ಕಬಳಿಸಲೆತ್ನಿಸುವ ಜೀವಿಗಳಿಂದ ಮಾತ್ರವಲ್ಲ ಮನುಷ್ಯನಿಂದಲೂ ರಕ್ಷಣೆ ನೀಡಲಿ ಎಂದಷ್ಟೇ ಆಶಿಸೋಣ!

ಜೇಡ ಬರುವ ಹೊತ್ತಿದು!
ಜೇಡ ಕೈಗೆ ವಾಚು ಕಟ್ಟಿಕೊಂಡು, ಸಮಯ ನೋಡಿಕೊಂಡು ಬರುತ್ತದೆಯೋ ಗೊತ್ತಿಲ್ಲ. ಆದರೆ ಇಂಗ್ಲೆಂಡ್‌ನ‌ಲ್ಲಿ ನಡೆದ ಒಂದು ಸಂಶೋಧನೆ ಆ ಅನುಮಾನವನ್ನು ಹುಟ್ಟುಹಾಕಿದ್ದು ಸುಳ್ಳಲ್ಲ. ಸಂಶೋಧಕರು ‘ಸ್ಪೈಡರ್‌ ಇನ್‌ ದ ಹೌಸ್‌’ ಎಂಬ ಮೊಬೈಲ್‌ ಆ್ಯಪ್‌ ಒಂದನ್ನು ರೂಪಿಸಿದರು. ಬ್ರಿಟನ್‌ನ ಮಂದಿ ಅದನ್ನು ತಮ್ಮ ಮೊಬೈಲುಗಳಲ್ಲಿ ಇನ್‌ಸ್ಟಾಲ್‌ ಮಾಡಿಕೊಂಡರು. ಆ ಆ್ಯಪ್‌ನ ಬಳಕೆದಾರರು ಮಾಡಬೇಕಾಗಿದ್ದಿಷ್ಟೆ. ಯಾವಾಗ ತಮ್ಮ ಕಣ್ಣಿಗೆ ಜೇಡ ಕಾಣುತ್ತದೆಯೋ ಆ ಕೂಡಲೆ ಆ್ಯಪ್‌ನಲ್ಲಿದ್ದ ಗುಂಡಿ ಒತ್ತುವುದು. ಲಕ್ಷಾಂತರ ಮಂದಿ ಬ್ರಿಟಿಷರು ಈ ಪ್ರಯೋಗದಲ್ಲಿ ಪಾಲ್ಗೊಂಡರು. ಅವರಲ್ಲಿ ಹೆಚ್ಚಿನವರು ಜೇಡವನ್ನು ಕಂಡರೆ ಮಾರು ದೂರ ಓಡುವವರು ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ! ಈ ಪ್ರಯೋಗದ ಫ‌ಲಿತಾಂಶ ಬಹಳ ಕುತೂಹಲಕರ ಮಾಹಿತಿ ಹೊರಬಿದ್ದಿತ್ತು. ಹೆಚ್ಚಿನವರ ಕಣ್ಣಿಗೆ ಜೇಡ ದರುಶನ ಕೊಟ್ಟಿದ್ದು ರಾತ್ರಿ 7.30ರ ಆಸುಪಾಸಿನಲ್ಲಿ! 

ಮನೆಯ ಸಂದುಗೊಂದುಗಳಲ್ಲಿ, ಕತ್ತಲ ಜಾಗಗಳಲ್ಲಿ ಗೂಡುಕಟ್ಟುವ ಜೇಡವನ್ನು ಬಹುತೇಕರು ತಮ್ಮ ಮನೆಯ ಮೇಲೆ ದಂಡೆತ್ತಿ ಬಂದ ಶತ್ರುವಂತೆ ಕಾಣುತ್ತಾರೆ. ಮನುಷ್ಯ ಪೂರ್ವಾಗ್ರಹ ಪೀಡಿತ ದೃಷ್ಟಿಯಿಂದ ಪ್ರಪಂಚವನ್ನು ನೋಡುತ್ತಾನೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಬೆಳಗ್ಗೆ ಎದ್ದಿರುವ, ರಾತ್ರಿ ಮಲಗುವ ನಮಗೆ ಅದೇ ಸಹಜ. ಬೆಳಗ್ಗೆ ಮಲಗಿ ರಾತ್ರಿ ಏಳುವುದೆಂದರೆ ಅದು ಅಸಹಜವೆಂದು ತೋರುತ್ತದೆ. ಇಂಥ ಹಲವು ಪೂರ್ವಾಗ್ರಹಗಳಿಗೆ, ಅಪನಂಬಿಕೆಗಳಿಗೆ ಬಲಿಯಾದ ಅನೇಕ ಜೀವಿಗಳಲ್ಲಿ ಜೇಡವೂ ಒಂದು. ಇಡೀ ಭೂಮಿಯನ್ನು ತನ್ನದೇ ಸ್ವತ್ತೆಂಬಂತೆ ಅಳತೆಗೋಲಿನಲ್ಲಿ ಅಳೆದಿಟ್ಟುಕೊಂಡಿರುವ ಮನುಷ್ಯನ ಅಪರಾಧಗಳ ಎದುರು, ಮೂಲೆಯಲ್ಲಿ ಪುಡಿ ಜಾಗದಲ್ಲಿ ಮನೆ ಮಾಡುವ ಜೇಡ ಏನೇನೂ ಅಲ್ಲ. ಇದನ್ನು ಅರಿತವರು ಮೇಜು ಸಂದಿನಲ್ಲೋ, ಟೀಪಾಯಿ ಕೆಳಗೋ ಗೂಡು ಕಟ್ಟುವ ಜೇಡವನ್ನು ಓಡಿಸಲಾರರು.

ಟಾಪ್ ನ್ಯೂಸ್

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

1-aaaa

Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್‌ ನಲ್ಲಿ ಬಂಧನ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

1-aaaa

Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್‌ ನಲ್ಲಿ ಬಂಧನ

ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್‌ ಹೆಗ್ಡೆ: ವಿಠಲ ಹೆಗ್ಡೆ

ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್‌ ಹೆಗ್ಡೆ: ವಿಠಲ ಹೆಗ್ಡೆ

1-C-brijesh

Dakshina Kannada; ಕ್ಯಾಪ್ಟನ್‌ ಬ್ರಿಜೇಶ್‌ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.