ಎಸ್ಕಲೇಟರ್‌ ಎಂದರೆ ವಿದೇಶಿಯರೂ ಹೆದರುತ್ತಿದ್ದರು

Team Udayavani, Oct 17, 2019, 5:00 AM IST

ನಗರಗಳಲ್ಲಿ, ಮಾಲ್‌ ಮತ್ತಿತರ ಕಟ್ಟಡಗಳಲ್ಲಿ ಚಲಿಸುವ ಮೆಟ್ಟಿಲು ಅಥವಾ ಏರು ಬಂಡಿ (ಎಸ್ಕಲೇಟರ್‌)ಯನ್ನು ನೀವು ನೋಡಿರಬಹುದು. ನಗರವಾಸಿಗಳು ಸಲೀಸಾಗಿ ಯಾವುದೇ ಭಯವಿಲ್ಲದೆ ಹತ್ತಿಕೊಳ್ಳುತ್ತಾರೆ. ಅವರಿಗೆ ಅದನ್ನು ಬಳಸಿ ಗೊತ್ತಿರುತ್ತದೆ. ಆದರೆ, ಮೊದಲ ಬಾರಿ ಅದನ್ನು ಕಂಡವರು ಅದರ ಮೇಲೆ ಹತ್ತಿಕೊಳ್ಳಲು ಹಿಂದೇಟು ಹಾಕುತ್ತಾರೆ. ಅನೇಕ ವೇಳೆ ಅವರದನ್ನು ಹತ್ತಿ ನಂತರ ಸಮತೋಲನ ಕಾಪಾಡಿಕೊಳ್ಳಲಾಗದೆ ಪರದಾಡುವುದೂ ಉಂಟು. ಲಂಡನ್‌ನಲ್ಲೂ ಇಂಥದ್ದೇ ಪರಿಸ್ಥಿತಿ ಇತ್ತು. ಆದರೆ ಈಗಲ್ಲ 1911ರಲ್ಲಿ. ಆಗ ತಾನೇ ಮೊತ್ತ ಮೊದಲ ಬಾರಿಗೆ ಲಂಡನ್‌ನಲ್ಲಿ ಎಸ್ಕಲೇಟರ್‌ ಅಳವಡಿಸಿದ್ದರು. ಜನರು ಅದನ್ನು ಬಳಸಲು ಹಿಂದೇಟು ಹಾಕಿದರು. ಸರ್ಕಾರಕ್ಕೆ ಪೀಕಲಾಟ ಶುರುವಾಯಿತು. ಒಂದೊಳ್ಳೆಯ ಸವಲತ್ತನ್ನು ಒದಗಿಸಿದರೆ ಸಾರ್ವಜನಿಕರು ಅದನ್ನು ಬಳಸುತ್ತಿಲ್ಲವಲ್ಲ ಎಂದು. ಕಡೆಗೆ ಒಂದು ಉಪಾಯ ಮಾಡಿದರು. ಜನರ ಭಯವನ್ನು ಹೋಗಲಾಡಿಸಲು ಸರ್ಕಾರಿ ನೌಕರನಾಗಿದ್ದ ವಿಲಿಯಂ ಬಂಪರ್‌ ಹ್ಯಾರಿಸ್‌ ಎಂಬಾತನನ್ನು ಎಲ್ಲರೆದುರೇ ಎಸ್ಕಲೇಟರ್‌ ಹತ್ತಿಸಿದರು. ನಂತರವೇ ಜನರು ಯಾವುದೇ ಆತಂಕವಿಲ್ಲದೆ ಎಸ್ಕಲೇಟರ್‌ ಬಳಸಲು ಶುರುಮಾಡಿದ್ದು. ವಿಲಿಯಂ ಬಂಪರ್‌ ಕುಂಟನಾಗಿದ್ದ. ಕುಂಟನೇ ಬಳಸುತ್ತಾನೆಂದರೆ ಎಸ್ಕಲೇಟರ್‌ಅನ್ನು ಯಾರು ಬೇಕಾದರೂ ಬಳಸಬಹುದು ಎಂಬ ಧೈರ್ಯ ಮೂಡಲಿ ಎಂದೇ ಸರ್ಕಾರ ಈ ಉಪಾಯವನ್ನು ಹೂಡಿತ್ತು. ಆ ಉಪಾಯ ಫ‌ಲಿಸಿತ್ತು!

ಹವನ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಆಡುವಾಗ ಬಿದ್ದು ಪೆಟ್ಟು ಮಾಡಿಕೊಂಡ ಸಂದರ್ಭದಲ್ಲಿ ಆ ಕ್ಷಣಕ್ಕೆ ನಮಗೆಲ್ಲರಿಗೂ ಬೇಕಾಗುವ ವಸ್ತು "ಬ್ಯಾಂಡ್‌ ಏಡ್‌'. ಅದು ರೂಪ ತಳೆದ ಕಥೆ ಇಲ್ಲಿದೆ. ಬ್ಯಾಂಡ್‌...

  • ಅದು ಪರಿಶುದ್ಧವಾದ ಕೊಳ. ಬಣ್ಣ ಬಣ್ಣದ ನೂರಾರು ಮೀನುಗಳು ಅಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಾ ಆನಂದದಿಂದಿದ್ದವು. ಇದೇ ಕೊಳದಲ್ಲಿ ಒಂದು ಚಿಕ್ಕ ಮೀನು ತನ್ನ...

  • ನಮಗೆ ನಿದ್ರೆ ಕಾರಣ ಎಡೆನೋಸಿಸ್‌. ಇದು ಹೆಚ್ಚಾದಷ್ಟು ನಿದ್ರೆ ಹೆಚ್ಚು, ಕಡಿಮೆ ಆದಷ್ಟು ನಿದ್ರೆ ಇಳಿಯುತ್ತದೆ. ರಾತ್ರಿ ಹೊತ್ತು ಇದು ದೇಹದಲ್ಲಿ ತುಂಬಿ ತುಳಕುವುದರಿಂದ...

  • ಚೀಟಿ ತೆರೆಯದೆಯೇ ಅದರೊಳಗೇನಿದೆ ಎನ್ನುವುದನ್ನು ಹೇಳುವ ಮ್ಯಾಜಿಕ್‌ ಇದು. ಪ್ರದರ್ಶನ: ಸಭೆಯಲ್ಲಿ ಹತ್ತು ಮಂದಿ ಪ್ರೇಕ್ಷಕರಿಗೆ ಒಂದೊಂದು ಚೀಟಿ ಮತ್ತು ಒಂದೊಂದು...

  • ಆನಂದನಿಗೆ ಮೂಗಿನ ತುದಿಯಲ್ಲೇ ಕೋಪ. ಅಮ್ಮ ಅಡುಗೆ ಮಾಡುವುದು ತಡವಾಯಿತೆಂದು ಅಮ್ಮನ ಜೊತೆ ಠೂ ಬಿಟ್ಟ. ಮುಂದೇನಾಯ್ತು? ಒಂದೂರಿನಲ್ಲಿ ಚಿಕ್ಕ ಮನೆಯಿತ್ತು. ಅಲ್ಲಿ...

ಹೊಸ ಸೇರ್ಪಡೆ