ಬೆರಳುಗಳಲ್ಲಿ ಕಣ್ಣಿದೆಯೇ?

Team Udayavani, Jul 18, 2019, 5:00 AM IST

ಬೆರಳಿಗೂ ಕಣ್ಣಿವೆ ಎಂದರೆ ನಿಮಗೆ ಅಚ್ಚರಿಯಾಗುವುದು ಸಹಜ. ಆದರೆ ಅದನ್ನು ಉಪಯೋಗಿಸಲು ತಿಳಿದಿರಬೇಕು. ಈ ವಿಚಾರ ಜಾದೂಗಾರರಿಗೆ ಮಾತ್ರವೇ ಗೊತ್ತಿರುವುದು. ಈ ಮಾತನ್ನು ನಿಮ್ಮ ಸ್ನೇಹಿತರ ಬಳಿ ಹೇಳಿ ನೋಡಿ. ಅವರು ನಗಬಹುದು. ನಂತರ ಅದನ್ನು ಜಾದೂ ಮೂಲಕ ಸಾಬೀತುಪಡಿಸಿ. ಮೊದಲಿಗೆ ಸ್ನೇಹಿತರಿಂದ ಹಲವು ನಾಣ್ಯಗಳನ್ನು ತೆಗೆದುಕೊಳ್ಳಿ. ಅನಂತರ ಯಾವುದಾದರೂ ಒಂದು ನಾಣ್ಯವನ್ನು ಮಾರ್ಕರ್‌ನಿಂದ ಗುರುತು ಮಾಡಲು ಹೇಳಿ. ಅವರು ಗುರುತು ಮಾಡಿದ ನಂತರ ಅದನ್ನು ಒಂದು ಟೋಪಿಯಲ್ಲಿ ಹಾಕಿ. ಉಳಿದ ನಾಣ್ಯಗಳನ್ನೂ ಆ ಟೋಪಿಯಲ್ಲಿ ಹಾಕಿ. ನಂತರ ನಿಮ್ಮ ಕಣ್ಣುಗಳನ್ನು ಮುಚ್ಚಿ ನಿಮ್ಮ ಕೈಯನ್ನು ಟೋಪಿಯೊಳಗೆ ಹಾಕಿ ಮಾರ್ಕರ್‌ನಿಂದ ಗುರುತು ಮಾಡಲ್ಪಟ್ಟಿರುವ ನಾಣ್ಯವನ್ನು ಹೊರ ತೆಗೆದು ತೋರಿಸಿ. ದಂಗಾಗುವ ಸರದಿ ಸ್ನೇಹಿತರದಾಗುತ್ತದೆ. “ಹೇಗೆ ಮಾಡಿದೆ?’ ಎಂದು ಕೇಳಿದರೆ, “ಮುಂಚೆಯೇ ಹೇಳಿದ್ದೆನಲ್ಲ…? ನನ್ನ ಬೆರಳಿನಲ್ಲೂ ಕಣ್ಣಿದೆ ಎಂದು. ಈಗಲಾದರೂ ನಂಬಿಕೆ ಬಂತಾ?’ ಎನ್ನಿರಿ.

ರಹಸ್ಯ:
ನಿಮ್ಮ ಹೆಬ್ಬೆರಳಿನ ಉಗುರಿಗೆ ಸ್ವಲ್ಪ ಜೇನುಮೇಣವನ್ನು ಮೆತ್ತಿರಿ. ನಿಮ್ಮ ಸ್ನೇಹಿತರು ಗುರುತು ಮಾಡಿಕೊಟ್ಟ ನಾಣ್ಯವನ್ನು ಟೋಪಿಯಲ್ಲಿ ಹಾಕುವ ಮೊದಲು ಆ ನಾಣ್ಯದ ಒಂದು ಬದಿಗೆ ಜೇನುಮೇಣವನ್ನು ಮೆತ್ತಿರಿ. ನಂತರ ಉಳಿದ ನಾಣ್ಯಗಳನ್ನು ಟೋಪಿಯಲ್ಲಿ ಹಾಕಿರಿ. ಮುಂದೆ ನೀವು ಸ್ನೇಹಿತ ಮಾರ್ಕ್‌ ಮಾಡಿದ ನಾಣ್ಯ ತೆಗೆಯುತ್ತೇನೆ ಎಂದು ಹೇಳಿ ಮಂತ್ರ ಹೇಳಿ ಟೋಪಿ ಒಳಗೆ ಕೈ ಹಾಕಿ ಮೇಣ ಇರುವ ನಾಣ್ಯವನ್ನು ಹೊರ ತೆಗೆಯಿರಿ. ನಂತರ ನಾಣ್ಯವನ್ನು ಸ್ನೇಹಿತರಿಗೆ ಪರೀಕ್ಷೆ ಮಾಡಲು ಕೊಡುವಾಗ ಮೇಣವನ್ನು ಅವರಿಗೆ ತಿಳಿಯದ ಹಾಗೆ ಒರೆಸಿ ಕೊಡಿ.

ಉದಯ್‌ ಜಾದೂಗಾರ್‌

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಇತ್ತೀಚಿಗೆ ನಿಫಾ ರೋಗಾಣು ಜಗತ್ತಿನ ಹಲವೆಡೆ ಹಬ್ಬಿದಾಗ, ಎಲ್ಲರ ಕಣ್ಣು ಬಿದ್ದದ್ದು ಬಾವಲಿಗಳ ಮೇಲೆ. ಎಷ್ಟೋ ಜನ ದುಷ್ಟ ಶಕ್ತಿಯ ರೂಪ ಅನ್ನೋ ರೀತಿ ನೋಡಿದರು. ಆದರೆ,...

  • ವಿಮಾನದ ಜೀವನಚಕ್ರ ನಿಮಗೆ ಗೊತ್ತಾ? ಬೈಕು, ಸ್ಕೂಟರ್‌ಗಳು ಕೆಟ್ಟರೆ ರಿಪೇರಿ ಮಾಡಿಸುತ್ತೇವೆ. ಇದ್ದದಿದ್ದರೆ ಗ್ಯಾರೇಜಿನವರಿಗೆ ಕೊಟ್ಟು ಒಂದು ಗತಿ ಕಾಣಿಸುತ್ತೇವೆ....

  • ಚಮತ್ಕಾರ ಇಲ್ಲದೆ ಇದ್ದರೆ ಜಾದು ಮಜ ಇರೋಲ್ಲ. ಕುತೂಹಲ ಇರಲೇಬೇಕು.ನೋಡುಗ ಕಣ್ಣನ್ನು ಆಗಾಗ ದಾರಿ ತಪ್ಪಿಸುತ್ತಲೇ ಇರಬೇಕು. ಅದಕ್ಕೆ ನಾನಾ ತಂತ್ರಗಳನ್ನು ಹೆಣೆಯ ಬೇಕು....

  • ಪುಟ್ಟಿ, ಕೇಕ್‌ ಕಟ್‌ ಮಾಡಿ ಅಪ್ಪ ಅಮ್ಮನಿಗೆ ಎರಡು ತುಣುಕು ತಿನ್ನಿಸಿದಳು. ನಂತರ ನಾಲ್ಕೈದು ಕೇಕ್‌ ತುಂಡುಗಳನ್ನು ಕವರ್‌ನಲ್ಲಿ ಹಾಕಿ ಪಾರ್ಕಿನಿಂದ ಓಡಿದಳು. ಅಮ್ಮನಿಗೆ...

  • ಒಂದು ಊರಿನಲ್ಲಿ ಒಬ್ಬ ಮೀನುಗಾರನಿದ್ದ. ಒಂದು ದಿನ ಅವನ ಬಲೆಯಲ್ಲಿ ದೊಡ್ಡದೊಂದು ಮೀನು ಸಿಕ್ಕಿಬಿದ್ದಿತು. ಅದನ್ನು ಮೀನುಗಾರ ಬಲೆಯಿಂದ ಬಿಡಿಸಿ ಎತ್ತಿಕೊಂಡ....

ಹೊಸ ಸೇರ್ಪಡೆ