ಚಮತ್ಕಾರಿ ಚಪ್ಪಟೆ ಹುಳು!

Team Udayavani, Oct 3, 2019, 9:56 AM IST

ಮನೆಯ ಕುಂಡದ ಕೆಳಗೆ ಆಗಾಗ ಈ ಹುಳುವನ್ನು ನೀವು ನೋಡಿರುತ್ತೀರಿ. ಪ್ರಪಂಚದಾದ್ಯಂತ ಹರಡಿರುವ ಸಂಬಂಧಿಗಳನ್ನು ಹೊಂದಿರುವ ಎಕೈಕ ಹುಳು ಇದು. ಹೆಸರು ಚಪ್ಪಟೆ ಹುಳು. ಹಗಲೆಲ್ಲಾ ನಿದ್ರಿಸುವ ಇಲ್ಲವೆ ತಟಸ್ಥವಾಗಿರುವ ಈ ಹುಳು ರಾತ್ರಿ ಕ್ರಿಯಾಶೀಲವಾಗುತ್ತದೆ.

ಮನೆಯ ಅಂಗಳದಲ್ಲಿ ಜೋಡಿಸಿರುವ ಹೂಕುಂಡಗಳ ಕೆಳಗಿನ ತೇವಾಂಶಯುಕ್ತ ಜಾಗದಲ್ಲಿ ಚಪ್ಪಟೆ ದೇಹ ಮತ್ತು ಸುತ್ತಿಗೆಯಾಕಾರದ ತಲೆ ಇರುವ ಹುಳುವೊಂದು ಆಗಾಗ ನೀವು ಗಮನಿಸಿದ್ದೀರಾ? ಥಟ್ಟನೆ ನೋಡಿದರೆ ನಾಗರಹಾವಿನ ಮರಿ ಇರಬಹುದು ಎಂಬ ಭಾವನೆ ಬರುತ್ತದಾದರೂ ಲೋಳೆಯುಕ್ತ ಮೈ ಮತ್ತು ಎರೆಹುಳುವಿನಂತೆ ನಿಧಾನಗತಿಯ ಚಲನೆ ಹೊಂದಿರುವುದರಿಂದ ಹಾವಿನ ಜಾತಿಗೆ ಸೇರಿದ್ದಲ್ಲ ಎಂಬುದು ದೃಢವಾಗುತ್ತದೆ. ಇದನ್ನು ಬೈಪೇಲಿಯಮ್‌, ಪ್ಲನೇರಿಯನ್‌ ಎಂದು ಕರೆಯುತ್ತಾರೆ. ಕನ್ನಡದಲ್ಲಿ ಚಪ್ಪಟೆ ಹುಳು ಇಲ್ಲವೇ ಸುತ್ತಿಗೆ ಹುಳು ಎಂಬಿತ್ಯಾದಿ ಹೆಸರುಗಳಿವೆ.

ಪ್ರಪಂಚವ್ಯಾಪಿ ಸುತ್ತಿಗೆ ಹುಳು
ಇದು ಪ್ರಪಂಚದ ಎಲ್ಲ ವಾಯುಗುಣಕ್ಕೆ ಹೊಂದಿಕೊಳ್ಳಬಲ್ಲ ಗುಣ ಹೊಂದಿರುವುದರಿಂದ ವಿಶ್ವದ ಮೂಲೆ ಮೂಲೆಯಲ್ಲೂ ಕಾಣಸಿಗುತ್ತದೆ. ಇಡೀ ಫ್ರಾನ್ಸ್‌ ದೇಶದಾದ್ಯಂತ ಇರುವ ಇವು, ಜೀವಶಾಸ್ತ್ರಜ್ಞರಿಗೇ ಅಚ್ಚರಿಯುಂಟುಮಾಡಿವೆ. ಹೊಸ ಜಾಗದಲ್ಲಿ ಯಾವ ಶತ್ರುವನ್ನೂ ಹೊಂದಿರದ ಇವು ಬೇಗನೆ ಅಲ್ಲಿಗೆ ಹೊಂದಿಕೊಂಡು ಅಸಂಖ್ಯ ಸಂಖ್ಯೆಯಲ್ಲಿ ಜಮೆಯಾಗುತ್ತವೆ. ಅಂಟಾರ್ಕ್‌ಟಿಕಾ ಪ್ರದೇಶದಲ್ಲಿ ಮಾತ್ರ ಇವು ಕಂಡು ಬಂದಿಲ್ಲ. ಸುಮಾರು 80ಕ್ಕೂ ಹೆಚ್ಚು ಪ್ರಭೇದಗಳನ್ನು ಹೊಂದಿದೆ. ಕಂದು, ಹಳದಿ, ಹಸಿರು ಮತ್ತು ಕಪ್ಪು ಬಣ್ಣಗಳಲ್ಲಿ ಇದು ಕಂಡು ಬರುತ್ತದೆ. ನಿಮ್ಮ ಮನೆಯಂಗಳದ ಪಾಟ್‌ಗಳ ಕೆಳಗೆ ಇದು ಸಿಕ್ಕರೆ ನೋಡಿ ಆನಂದಿಸಿ. ಹಾನಿ ಮಾಡಬೇಡಿ.

ಹೋದಲ್ಲೆಲ್ಲಾ ಗುರುತು
ಸುತ್ತಿಗೆಯಾಕಾರದ ತಲೆಯಲ್ಲಿ ಸೂಕ್ಷ್ಮಗಾತ್ರದ ತಂತುಗಳಿದ್ದು ತಲೆಯ ಮಂಭಾಗಕ್ಕೂ ಚಾಚಿಕೊಂಡ ಸ್ಪರ್ಶ ಮತ್ತು ರಾಸಾಯನಿಕ ವಸ್ತುವಿನ ಸಂಪರ್ಕವನ್ನು ತೀಕ್ಷ್ಣವಾಗಿ ಗ್ರಹಿಸುತ್ತವೆ. ವಿಕಾಸದ ಹಂತದಲ್ಲಿ ತೀರಾ ಕೆಳಮಟ್ಟದಲ್ಲಿರುವ ಇವುಗಳಿಗೆ ಯಾವುದೇ ರಕ್ತ ಪರಿಚಲನೆ, ಉಸಿರಾಟ ಮತ್ತು ಅಸ್ಥಿಪಂಜರ ವ್ಯವಸ್ಥೆಯಾಗಲೀ ಇರುವುದಿಲ್ಲ. ಇಡೀ ದೇಹ ಲೋಳೆ ಪದಾರ್ಥವನ್ನು ಹೊಂದಿರುವುದರಿಂದ ಹುಳು ನೆಲದ ಮೇಲೆಯೇ ತೆವಳುತ್ತಾ ಮುಂದುವರಿದಂತೆಲ್ಲಾ ಬೆಳ್ಳಿ ಬಿಳಿಯ ಲೋಳೆಯ ಅಚ್ಚನ್ನು ಬಿಡುತ್ತದೆ.

ರೈತನ ಮಿತ್ರರೇ ಇವುಗಳಿಗೆ ಆಹಾರ
ರೈತನ ಮಿತ್ರ ಎಂದೇ ಕರೆಯಲ್ಪಡುವ ಎರೆಹುಳುಗಳೇ ಇದರ ಆಹಾರ. ಎರೆಹುಳು ಕಂಡೊಡನೆ ಆಕ್ರಮಣ ಮಾಡಿ, ಮೈಯ ಅಂಟಿನಿಂದ ಬಂಧಿಸಿ ಅವನ್ನು ನುಂಗುತ್ತವೆ. ವಿನೇಗರ್‌ ಮತ್ತು ಉಪ್ಪು ಇದರ ಶತ್ರು. ಈ ಜೀವಿ ಒಂದು ವರ್ಷದವರೆಗೂ ಆಹಾರ ಇಲ್ಲದೆ ಜೀವಿಸಬಲ್ಲದು. ಉತ್ತರ ಅಮೇರಿಕ, ಯುರೋಪ್‌ಗ್ಳ ಜೀವಿ ಆವಾಸಗಳಲ್ಲಿ ಇದು ದೊಂಬಿ ಎಂಬಿಸಿದೆ. ಅಲ್ಲಿನ ಮೂಲ ನಿವಾಸಿಗಳಾದ ಗೊಣ್ಣೆ ಹುಳು, ಶಂಖದ ಹುಳು ಮತ್ತು ಎರೆಹುಳುಗಳ ವಂಶವನ್ನೇ ನಿರ್ನಾಮ ಮಾಡಿದ ಅಪಕೀರ್ತಿ ಇದರದ್ದು. ನಮ್ಮ ಪಶ್ಚಿಮಘಟ್ಟ, ಮಲೆನಾಡು ಪ್ರದೇಶ, ಉತ್ತರ ಭಾರತದ ಪರ್ವತಶ್ರೇಣಿ ಮತ್ತು ಪಶ್ಚಿಮ ಭಾರತದ ಬಹುತೇಕ ಭಾಗಗಳಲ್ಲಿ ಇವನ್ನು ಹೆಚ್ಚಿನ ಸಂಖ್ಯೆಯಲ್ಲಿ ಕಾಣಬಹುದು.

-ಗುರುರಾಜ್‌ ಎಸ್‌. ದಾವಣಗೆರೆ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಇತ್ತೀಚಿಗೆ ಅಂತರಿಕ್ಷದ ಸೂಯೆಝ್ ನೌಕೆಗೆ ಹೊಸ ಅತಿಥಿ ಪ್ರಯಾಣಿಕ ಬಂದಿದ್ದ. ಭೂಮಿಯಿಂದ ಅವನನ್ನು ಏಕಾಂಗಿಯಾಗಿ ಕಳಿಸಲಾಗಿತ್ತು. ಅಷ್ಟು ದೂರದಿಂದ ಒಬ್ಬನೇ ಬಂದಿದ್ದರೂ...

  • ಜಾದೂ ಮಾಡೋರಿಗೆ ಚಪ್ಪಾಳೆಯೇ ಜೀವಾಳ. ಜಾಸ್ತಿ ಚಪ್ಪಾಳೆ ಯಾವ ಪ್ರಯೋಗಕ್ಕೆ ಬೀಳುತ್ತದೆ. ಯಾವುದಕ್ಕೆ ಬೀಳುವುದಿಲ್ಲ. ಈ ರೀತಿ ಜಾದೂ ಮಾಡಬೇಕಾದರೆ, ಟಾರ್ಗೆಟ್‌ ಯಾರನ್ನು...

  • ಆನಂದವನ ಎಂಬ ಕಾನನವು ಬಲು ಸುಂದರವಾಗಿತ್ತು. ಅಲ್ಲಿನ ಅರಳಿ ಮರದ ಮೇಲೆ ಬಲಿಜ ಮತ್ತು ಸಮುರ ಎಂಬ ಎರಡು ಪಕ್ಷಿಗಳು ಬೇರೆ ಬೇರೆ ಗೂಡುಗಳನ್ನು ಕಟ್ಟಿಕೊಂಡು ವಾಸ ಮಾಡುತ್ತಿದ್ದವು....

  • ಪುಟ್ಟನ ಮನೆಯಂಗಳದಲ್ಲಿ ಇಳಿದ ರಾಕೆಟ್‌ನಿಂದ ದನಿ ಕೇಳಿ ಬಂತು. "ನಾವು ಚಂದ್ರನಲ್ಲಿ ಕಳೆದುಹೋಗಿರುವ ದೇಶದ ವಿಕ್ರಮ್‌ ಲ್ಯಾಂಡರ್‌ ಆಕಾಶ ನೌಕೆಯನ್ನು ಪತ್ತೆ ಹಚ್ಚೋಣಾ....

  • ಜೀವನದಲ್ಲಿ ಬಹಳ ಎತ್ತರಕ್ಕೆ ಬೆಳೆಯಬೇಕು ಅಂತ ಎಲ್ಲರೂ ಆಸೆ ಪಡುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ಬೆಳವಣಿಗೆ ನಿಂತರೆ ಸಾಕೆಂದು ಪ್ರಾರ್ಥಿಸಿದ್ದ. ದೈಹಿಕವಾಗಿ...

ಹೊಸ ಸೇರ್ಪಡೆ

  • ಬೆಂಗಳೂರು: ಹಿಂಗಾರು ಮಾರುತಗಳ ಭರ್ಜರಿ ಪ್ರವೇಶ ದಿಂದ ಕಳೆದೆರಡು ದಿನಗಳಿಂದ ರಾಜ್ಯಾದ್ಯಂತ ಮಳೆ ಅಬ್ಬರಿ ಸುತ್ತಿದೆ. ಇನ್ನೂ ಮೂರ್‍ನಾಲ್ಕು ದಿನಗಳು ಇದೇ ವಾತಾವರಣ...

  • ಏಷಿಯಾದ ಮೊದಲ "ಬಿಪಿಎಲ್‌'ಗೆ ಭಾನುವಾರ ಪ್ರಾಯೋಗಿಕ ಚಾಲನೆ ಸಿಕ್ಕಿದೆ. ಈ ಒಂದು ಪಥ ಯಶಸ್ವಿಯಾದರೆ, ನಗರ ಸಂಚಾರ ವ್ಯವಸ್ಥೆಯಲ್ಲಿ ಹಲವು ಬದಲಾವಣೆಗಳಿಗೆ ಮುನ್ನುಡಿ...

  • ಬೆಂಗಳೂರು: ಅಲಯನ್ಸ್‌ ವಿವಿಯ ವಿಶ್ರಾಂತ ಕುಲಪತಿ ಹಾಗೂ ರಾಜಕಾರಣಿ ಡಾ.ಅಯ್ಯಪ್ಪ ದೊರೆ ಕೊಲೆ ಪ್ರಕರಣದ ಎರಡನೇ ಪ್ರಮುಖ ಆರೋಪಿ ಹಾಗೂ ಸುಪಾರಿ ಹಂತಕನಿಗೆ ಉತ್ತರ...

  • ವೀರ ಸಾವರ್ಕರ್‌ಗೆ "ಭಾರತ ರತ್ನ' ನೀಡುವ ಮಹಾರಾಷ್ಟ್ರ ಬಿಜೆಪಿ ಪ್ರಣಾಳಿಕೆಯ ಅಂಶದ ಬಗ್ಗೆ ರಾಜಕೀಯ ನಾಯಕರ ವಾಕ್ಸಮರ ಭಾನುವಾರವೂ ಮುಂದುವರಿದಿದೆ. ಇದೇ ವಿಚಾರವಾಗಿ...

  • ಬೆಂಗಳೂರು: ಅನಿಷ್ಠ ಹಾಗೂ ನಿಷೇಧಿತ ದೇವದಾಸಿ ಪದ್ಧತಿಯಿಂದ ಮುಕ್ತಿ ಪಡೆದು ಸಮಾಜದ ಮುಖ್ಯ ವಾಹಿನಿಗೆ ಬಂದು ಗೌರವ ಹಾಗೂ ಘನತೆಯ ಬದುಕು ಕಟ್ಟಿಕೊಳ್ಳುತ್ತಿರುವ...