ತೋಳದ ಅತಿಯಾಸೆ


Team Udayavani, Jul 20, 2017, 5:25 AM IST

chinnari-2.jpg

ಕಾಡಿನಲ್ಲಿದ್ದ ತೋಳ ಹಸಿವಿನಿಂದ ಕಂಗಾಲಾಗಿತ್ತು. ಹಲವು ದಿನಗಳಿಂದ ಅದಕ್ಕೆ ಸರಿಯಾಗಿ ಆಹಾರ ಸಿಕ್ಕಿರಲಿಲ್ಲ. ಅದಕ್ಕೇ ಹಳ್ಳಿಯ ಕಡೆಗೆ ಹೆಜ್ಜೆ ಹಾಕಿತು. ಕಾಡಿನ ಅಂಚಿನಲ್ಲಿದ್ದ ರೈತನ ಮನೆಯ ಮುಂದೆ ಹೊಂಚು ಹಾಕತೊಡಗಿತು. ರೈತ ಇದನ್ನು ಗಮನಿಸಿ, “ಏನಪ್ಪಾ ಮಾರಾಯ? ಬೆಳಗ್ಗೆನೇ ಬಂದು ಮನೆ ಮುಂದೆ ನಿಂತಿದ್ದೀಯಾ’ ಅಂದನು. ಅದಕ್ಕೆ ತೋಳವು, “ಮೂರು- ನಾಲ್ಕು ದಿನಗಳಿಂದ ಆಹಾರ ಸಿಕ್ಕಿಲ್ಲ, ಹಸಿವಿನಿಂದ ಕಂಗಾಲಾಗಿದ್ದೇನೆ.’ ಎಂದಿತು. ರೈತನು ಸ್ವಲ್ಪ ಹೊತ್ತು ಯೋಚಿಸಿ, ತನಗೆಂದು ಮಾಡಿಕೊಂಡಿದ್ದ ಮಾಂಸಾಹಾರದಲ್ಲಿ ಸ್ವಲ್ಪ ಪಾಲನ್ನು ಕೊಟ್ಟನು. ಗಬಗಬನೆ ತಿಂದ ತೋಳ “ಇನ್ನೂ ಬೇಕೆಂದಿತು.’. ರೈತ ಒಳಕ್ಕೆ ಹೋಗಿ ಇನ್ನೂ ಸ್ವಲ್ಪ ಕೊಟ್ಟನು. ತೋಳಕ್ಕೆ ಎಷ್ಟು ತಿಂದರೂ ತೃಪ್ತಿಯೇ ಆಗುತ್ತಿರಲಿಲ್ಲ. ಕೊನೆಗೆ ಹಾಲು, ಸೊಪ್ಪು, ತರಕಾರಿ, ಹಣ್ಣು, ಹಂಪಲು, ಮುದ್ದೆ, ಸಾರು ಅದನ್ನೂ ಬಿಡಲಿಲ್ಲ. ರೈತನಿಗೇ ಆ ದಿನ ಊಟ ಇಲ್ಲದಾಯಿತು. ರೈತ ತನ್ನ ಬಗ್ಗೆ ಯೋಚಿಸದೆ, ತೋಳದ ಹಸಿವು ನೀಗಿತಲ್ಲ ಎಂದು ಸಂತಸಪಟ್ಟನು..

ಅದೇ ದಿನ ರಾತ್ರಿ ರೈತ ನೀರು ಕುಡಿದು ಮಲಗಿದ್ದಾಗ ತೋಳ ಕಳ್ಳ ಹೆಜ್ಜೆಯನ್ನಿಡುತ್ತಾ ಮನೆಯಂಗಳಕ್ಕೆ ಬಂದಿತು. ತೋಳದ ಮನಸ್ಸಿನಲ್ಲಿ ದುರಾಸೆ ಮನೆ ಮಾಡಿತ್ತು. ರೈತನ ಸಾಕುಪ್ರಾಣಿಗಳ ಮೇಲೆ ತೋಳದ ಕಣ್ಣು ಬಿದ್ದಿತ್ತು. ಇನ್ನೇನು ಅದು ಲಾಯದಲ್ಲಿದ್ದ ಕುದುರೆಯ ಮೈಮೇಲೆ ಬೀಳಬೇಕು, ಅಷ್ಟರಲ್ಲಿ ರೈತ ಬಂದುಬಿಟ್ಟನು. ಲಾಯದಲ್ಲಿ ತೋಳವನ್ನು ನೋಡಿ ಅವನಿಗೆಲ್ಲವೂ ಅರ್ಥವಾಯಿತು. ತೋಳ ತಲೆಬಗ್ಗಿಸಿತು. ರೈತ “ಕುದುರೆಯನ್ನು ತಿನ್ನಲೆಂದು ಬಂದೆಯಲ್ಲವೇ? ಧಾರಾಳವಾಗಿ ತಿನ್ನು. ನನ್ನದೇನೂ ಅಭ್ಯಂತರವಿಲ್ಲ’ ಎಂದು ಕುದುರೆಯತ್ತ ಕಣ್ಣು ಮಿಟುಕಿಸಿದನು. ಸಂತಸಗೊಂಡ ತೋಳ ಕುದುರೆ ಬಳಿಗೆ ತೆರಳಿತು. ಕುದುರೆ “ತೋಳಪ್ಪ ನೀನು ನನ್ನನ್ನು ಹಿಂದಿನಿಂದ ತಿನ್ನು.’ ಎಂದಿತು. ತೋಳಕ್ಕೆ ಇನ್ನೂ ಖುಷಿಯಾಯಿತು. ಕುದುರೆಯ ಬಾಲಕ್ಕೆ ಬಾಯಿ ಹಾಕುವಷ್ಟರಲ್ಲಿ ಕುದುರೆ ತನ್ನ ಬಲಶಾಲಿ ಕಾಲುಗಳಿಂದ ಜೋರಾಗಿ ಒದ್ದಿತು. ಅದರ ಒದೆತಕ್ಕೆ ತೋಳ ದೂರ ಹೋಗಿ ಬಿದ್ದಿತು. ಅದರ ಹಲ್ಲುಗಳೆಲ್ಲಾ ಮುರಿದವು. ಅಲ್ಲಿಂದ ಓಡಿಹೋದ ತೋಳ ಮತ್ತೆ ಆ ಕಡೆ ತಲೆ ಹಾಕಲಿಲ್ಲ.

– ಆದಿತ್ಯ ಹೆಚ್‌.ಎಸ್‌. ಹಾಲ್ಮತ್ತೂರು

ಟಾಪ್ ನ್ಯೂಸ್

11-

Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

11-

Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

10-editorial

Editorial: ಐಟಿ ಕಂಪೆನಿಗಳಿಗೆ ಆಹ್ವಾನ: ಕೇರಳದ ಬಾಲಿಶ ನಡೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

9-tmpl

Malpe: ವಡಭಾಂಡೇಶ್ವರ ಭಕ್ತವೃಂದ; ಉತ್ತಿಷ್ಠ ಭಾರತ, ಸಾಧಕರಿಗೆ ಸಮ್ಮಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.