ಹೆಣ್ಣೊಬ್ಬಳ ಕಣ್ಣೀರು ಲಕ್ಷ ಮಂದಿಯ ಬಲಿ ಪಡೆಯಿತು

ಹಿಸ್ಟರಿ ಕಥೆ

Team Udayavani, May 16, 2019, 6:00 AM IST

ನಿಶಾಪುರ ಪರ್ಶಿಯಾದ ಸಮೃದ್ಧ ನಗರಗಳಲ್ಲೊಂದಾಗಿತ್ತು, ಮಂಗೋಲಿಯನ್‌ ರಾಜ ಚೆಂಗೀಸ್‌ ಖಾನ್‌ನ ಕಣ್ಣು ಈ ನಗರದ ಮೇಲೆ ಬೀಳುವ ತನಕ. ಕ್ರೂರತನಕ್ಕೆ ಹೆಸರುವಾಸಿಯಾದ ಚೆಂಗೀಸ್‌ ಖಾನ್‌ ನಿಶಾಪುರದ ರಾಜನನ್ನು ಶರಣಾಗಲು ತಿಳಿಸಿದ. ಆದರೆ ರಾಜರಿಗೆ ತಮ್ಮ ಆತ್ಮಗೌರವ ಪ್ರತಿಷ್ಠೆ ಪ್ರಾಣಕ್ಕಿಂತಲೂ ಹೆಚ್ಚು. ಇತಿಹಾಸ ಗಮನಸಿದರೆ ಈ ಸಂಗತಿ ಸ್ಪಷ್ಟವಾಗುತ್ತದೆ. ಅಂತೆಯೇ ನಿಶಾಪುರದ ರಾಜ ಶರಣಾಗಲು ನಿರಾಕರಿಸಿದ. ಯುದ್ಧ ಶುರುವಾಯಿತು. ಈ ಕಾದಾಟದಲ್ಲಿ ಖಾನನ ಅಳಿಯ ಟೊಕೊಚರ್‌ ಶತ್ರುವಿನ ಬಾಣದಿಂದ ಮೃತಪಟ್ಟ. ಆತ ಚೆಂಗೀಸ್‌ ಖಾನನಿಗೆ ಅತ್ಯಂತ ಪ್ರೀತಿಪಾತ್ರನಾಗಿದ್ದ. ಆತನ ಸಾವು ಅವನ ಮನಸ್ಸನ್ನು ಕದಡಿತು. ಪತಿಯನ್ನು ಕಳೆದುಕೊಂಡ ಖಾನನ ಮಗಳು ರೋಷದಿಂದ “ಎದುರು ಸಿಗುವ ನಿಶಾಪುರದ ಪ್ರತಿಯೊಬ್ಬ ಪ್ರಜೆಯ ರುಂಡ ಚೆಂಡಾಡಿ’ ಎಂದು ಅಬ್ಬರಿಸಿದಳು. ಮಗಳಿಗೆ ಬಂದೊದಗಿದ ಪರಿಸ್ಥಿತಿಯಿಂದ ಕ್ರುದ್ಧನಾದ ಚೆಂಗೀಸ್‌ ಖಾನ್‌ ಮಗಳ ಆಸೆಯನ್ನು ಅಕ್ಷರಶಃ ಪೂರೈಸಲು ಇಳಿದುಬಿಟ್ಟ. ತಂಗಿಯ ಮಾತನ್ನು ಪಾಲಿಸಿ ಎಂದು ತನ್ನ ಸೈನಿಕರಿಗೆ ಆಜ್ಞಾಪಿಸಿದ. ಇದರ ಪರಿಣಾಮ ಒಂದು ಗಂಟೆಯ ಅವಧಿಯಲ್ಲಿ ಲಕ್ಷ ಮಂದಿಯ ಮಾರಣಹೋಮವಾಯಿತು ಎಂದು ಇತಿಹಾಸದಲ್ಲಿ ದಾಖಲಾಗಿದೆ. ಸತ್ತ ಸೈನಿಕರ ಸಂಖ್ಯೆಯ ಕುರಿತು ಅನುಮಾನಗಳಿದ್ದರೂ, ಅಂದು ರುಂಡಗಳ ಪಿರಮಿಡ್ಡೇ ನಿರ್ಮಾಣವಾಗಿತ್ತು ಎಂದು ಇತಿಹಾಸಕಾರರು ಬರೆದಿದ್ದಾರೆ.

ಹವನ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಮೀನು ಯಾರಿಗೂ ಏನೂ ಮಾಡೋಲ್ಲ ಅನ್ನೋದೇನೋ ನಿಜ. ಆದರೆ, ಅದರಲ್ಲೂ ವಿಷಕಾರಿ ಮೀನುಗಳು ಉಂಟು ಅನ್ನೋದಕ್ಕೆ ಈ ಜೆಲ್ಲಿ ಮೀನೇ ಉದಾಹರಣೆ. ಈ ಮೀನು ಎಲ್ಲವನ್ನೂ ಕಾಲಿನ ಮೂಲಕವೇ...

  • ಹಿಮಕ್ಕೂ, ಹಿಮಕರಡಿಗಳಿಗೂ ಅವಿನಾಭಾವ ನಂಟು. ಹಿಮ ಇಲ್ಲದೇ ಹೋದರೆ ಹಿಮಕರಡಿ ಭೂಮಿಯಿಂದಲೇ ಇಲ್ಲವಾಗುವವು. ಹಿಮಕರಡಿಗಳು ಉತ್ತರಧೃವದಲ್ಲಿ ವಾಸಿಸುವ ಜೀವಿಗಳು....

  • "ಕುಮಾರ ಬಂದಾಗ, ಸೈನಿಕರು ಮತ್ತು ಸೇವಕರು ಎಲ್ಲರೂ ಸೇರಿಕೊಂಡು ರಾಜನಿಗೆ ಜಯವಾಗಲಿ ಅಂತ ಹೇಳಬೇಕು' ಎಂದು ಶಂಕರ ಹೇಳಿದ. ಎಲ್ಲರೂ ತಲೆಯಲ್ಲಾಡಿಸಿದರು. ಆದರೆ ಒಬ್ಬಳು...

  • ಪ್ರಮುಖ ವ್ಯಕ್ತಿಗಳ ಪರಿಚಯವನ್ನು ಕೇವಲ ಹತ್ತೇ ಹತ್ತು ಪಾಯಿಂಟ್‌ಗಳಲ್ಲಿ ಕಟ್ಟಿ ಕೊಡುವ ಪ್ರಯತ್ನವಿದು... 1. ಮಂಗನಿಂದ ಮಾನವ "ವಿಕಾಸವಾದ ಸಿದ್ಧಾಂತ'ವನ್ನು ಪ್ರತಿಪಾದಿಸಿದ...

  • ಬೇಕಾದ ಪರಿಕರ: ಒಂದು ಕಾರ್ಡಿನ ಮೇಲೆ ಸಂಖ್ಯೆ ಬರೆಯಲಾದ ಮುಳ್ಳಿಲ್ಲದ ಗಡಿಯಾರ. ಪರಿಣಾಮ: ನಿಮ್ಮ ಸಭಿಕರಲ್ಲಿ ಒಬ್ಬರಿಗೆ ಹನ್ನೆರಡಕ್ಕಿಂತ ಕಡಿಮೆ ಸಂಖ್ಯೆಯನ್ನು...

ಹೊಸ ಸೇರ್ಪಡೆ