ಕುಂಗ್‌ಫ‌ು ಎಂದರೆ ಹೊಡೆದಾಟದಿಂದ ತಪ್ಪಿಸಿಕೊಳ್ಳುವುದು

Team Udayavani, Aug 22, 2019, 5:55 AM IST

“ಜೀವನದಲ್ಲಿ ಯಶಸ್ಸು ಗಳಿಸಲು ಮುಂದೆ ಗುರಿ ಇರಬೇಕು, ಹಿಂದೆ ಗುರು ಇರಬೇಕು’ ಎಂಬ ಮಾತೊಂದಿದೆ. ಸಾಧನೆಗೈದಿರುವವರ ಬದುಕನ್ನು ವಿಶ್ಲೇಷಿಸಿದಾಗ ಆ ಮಾತು ನಿಜವೆಂದು ತಿಳಿದುಬರುತ್ತದೆ. ನಿಜವಾದ ಗುರು ತನ್ನೆಲ್ಲಾ ಶಿಷ್ಯಂದಿರನ್ನು ಸಮಾನರಾಗಿ ಕಾಣುತ್ತಾನೆ, ಅವರ ಕಷ್ಟಸುಖಗಳಲ್ಲಿ ಭಾಗಿಯಾಗುತ್ತಾನೆ. ಆ ಸಾಲಿಗೆ ಸೇರುವಂಥ ಗುರು ಇಪ್‌ ಮ್ಯಾನ್‌. 1940- 50ರ ದಶಕದಲ್ಲಿ ಅವರು ಚೀನಾದಲ್ಲಿ “ಲೀ ವಿಂಗ್‌ ಚುನ್‌ ಕುಂಗ್‌ ಫ‌ು’ ಎಂಬ ಆತ್ಮರಕ್ಷಣಾ ಕಲೆಯನ್ನು ಬೋಧಿಸುತ್ತಿದ್ದರು. ಅವರೆಂದೂ ಹಣಕ್ಕಾಗಿ ವಿದ್ಯೆ ಬೋಧಿಸಿದವರಲ್ಲ. ಅವರ ಬಗ್ಗೆ ಅನೇಕ ದಂತಕಥೆಗಳು ಚಾಲ್ತಿಯಲ್ಲಿದ್ದವು. ಅವರು ಶಿಷ್ಯಂದಿರನ್ನು ಪರೀಕ್ಷೆಗೊಳಪಡಿಸಿಯೇ ಆರಿಸುತ್ತಿದ್ದರು. ಆ ಸಮಯದಲ್ಲಿ ಅವರ ಬಳಿಗೆ 16ರ ಹರೆಯದ ಯುವಕ ಶಿಷ್ಯನಾಗಿ ಸೇರಿಕೊಂಡಿದ್ದ. ಬೀದಿ ಬದಿಯ ಹೋರಾಟಗಳಲ್ಲಿ ಭಾಗಿಯಾಗಿ ಪುಂಡನೆಂಬ ಕುಖ್ಯಾತಿಗೆ ಪಾತ್ರನಾಗಿದ್ದ ಅವನು ಪ್ರತಿ ಬಾರಿಯೂ ಎದುರಾಳಿಗಳಿಂದ ಏಟು ತಿನ್ನುತ್ತಿದ್ದ. ಹೀಗಾಗಿ ಇಪ್‌ ಮ್ಯಾನ್‌ ಬಳಿ ತರಬೇತಿ ಪಡೆದು ಎದುರಾಳಿಗಳನ್ನು ಸದೆಬಡಿಯುವುದು ಅವನ ಉದ್ದೇಶವಾಗಿತ್ತು. ಇಪ್‌ ಮ್ಯಾನ್‌ ಹೇಳಿಕೊಡುತ್ತಿದ್ದ ಚುನ್‌ ಕುಂಗ್‌ ಫ‌ುವಿನ ಮೂಲ ಉದ್ದೇಶ ಯಾವನೇ ವ್ಯಕ್ತಿ ತನ್ನನ್ನು ತಾನು ರಕ್ಷಿಸಿಕೊಳ್ಳುವುದು, ಹೊಡೆದಾಟದಿಂದ ದೂರ ಉಳಿಯುವುದು. ಆದರೆ ಆ ಹುಡುಗ ಈ ಆತ್ಮರಕ್ಷಣಾ ಕಲೆಯನ್ನು ಹಿಂಸಾತ್ಮಕವಾಗಿ ಬಳಸಿಕೊಳ್ಳಬೇಕೆಂದಿದ್ದ. ಇದು ಗುರುವಿಗೆ ಸರಿ ತೋರಲಿಲ್ಲ. ಆದರೆ ಆ ಹುಡುಗನಲ್ಲಿದ್ದ ಏಕಾಗ್ರತೆ, ಆಸಕ್ತಿ ಕಂಡು ಗುರು ಇಪ್‌ ಮ್ಯಾನ್‌ ದಂಗಾಗಿದ್ದರು. ಏನಾದರಾಗಲಿ ಅವನಿಗೆ ತಾವು ಕಲಿತ ವಿದ್ಯೆಯನ್ನು ಕಲಿಸಲು ನಿರ್ಧರಿಸಿದರು. ಆ ಹುಡುಗನೇ ಜಗತ್ತಿನ ಅಸಂಖ್ಯ ಮಂದಿಗೆ ಮಾರ್ಷಲ್‌ ಆರ್ಟ್ಸ್ ಕಲಿಯಲು ಪ್ರೇರಣೆಯಾಗಿರುವ ಹಾಲಿವುಡ್‌ ನಟ “ಬ್ರೂಸ್‌ ಲೀ’. ಒಬ್ಬರು ಸಿನಿಮಾಗಳ ಮೂಲಕ ಸ್ಫೂರ್ತಿ ತುಂಬಿದರೆ ಮತ್ತೂಬ್ಬರ ಬದುಕೇ ನಮಗೆ ಸ್ಫೂರ್ತಿ.

ಹವನ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಮೀನು ಯಾರಿಗೂ ಏನೂ ಮಾಡೋಲ್ಲ ಅನ್ನೋದೇನೋ ನಿಜ. ಆದರೆ, ಅದರಲ್ಲೂ ವಿಷಕಾರಿ ಮೀನುಗಳು ಉಂಟು ಅನ್ನೋದಕ್ಕೆ ಈ ಜೆಲ್ಲಿ ಮೀನೇ ಉದಾಹರಣೆ. ಈ ಮೀನು ಎಲ್ಲವನ್ನೂ ಕಾಲಿನ ಮೂಲಕವೇ...

  • ಹಿಮಕ್ಕೂ, ಹಿಮಕರಡಿಗಳಿಗೂ ಅವಿನಾಭಾವ ನಂಟು. ಹಿಮ ಇಲ್ಲದೇ ಹೋದರೆ ಹಿಮಕರಡಿ ಭೂಮಿಯಿಂದಲೇ ಇಲ್ಲವಾಗುವವು. ಹಿಮಕರಡಿಗಳು ಉತ್ತರಧೃವದಲ್ಲಿ ವಾಸಿಸುವ ಜೀವಿಗಳು....

  • "ಕುಮಾರ ಬಂದಾಗ, ಸೈನಿಕರು ಮತ್ತು ಸೇವಕರು ಎಲ್ಲರೂ ಸೇರಿಕೊಂಡು ರಾಜನಿಗೆ ಜಯವಾಗಲಿ ಅಂತ ಹೇಳಬೇಕು' ಎಂದು ಶಂಕರ ಹೇಳಿದ. ಎಲ್ಲರೂ ತಲೆಯಲ್ಲಾಡಿಸಿದರು. ಆದರೆ ಒಬ್ಬಳು...

  • ಪ್ರಮುಖ ವ್ಯಕ್ತಿಗಳ ಪರಿಚಯವನ್ನು ಕೇವಲ ಹತ್ತೇ ಹತ್ತು ಪಾಯಿಂಟ್‌ಗಳಲ್ಲಿ ಕಟ್ಟಿ ಕೊಡುವ ಪ್ರಯತ್ನವಿದು... 1. ಮಂಗನಿಂದ ಮಾನವ "ವಿಕಾಸವಾದ ಸಿದ್ಧಾಂತ'ವನ್ನು ಪ್ರತಿಪಾದಿಸಿದ...

  • ಬೇಕಾದ ಪರಿಕರ: ಒಂದು ಕಾರ್ಡಿನ ಮೇಲೆ ಸಂಖ್ಯೆ ಬರೆಯಲಾದ ಮುಳ್ಳಿಲ್ಲದ ಗಡಿಯಾರ. ಪರಿಣಾಮ: ನಿಮ್ಮ ಸಭಿಕರಲ್ಲಿ ಒಬ್ಬರಿಗೆ ಹನ್ನೆರಡಕ್ಕಿಂತ ಕಡಿಮೆ ಸಂಖ್ಯೆಯನ್ನು...

ಹೊಸ ಸೇರ್ಪಡೆ