ದಾಳದಲ್ಲಿ ಬಿದ್ದ ಸಂಖ್ಯೆ ಎಷ್ಟು?

Team Udayavani, Nov 21, 2019, 4:05 AM IST

ಒಂದು ಮೇಜಿನ ಸುತ್ತಲೂ ನಾಲ್ಕೈದು ಮಂದಿ ಕುಳಿತುಕೊಂಡಿರುತ್ತಾರೆ. ಜಾದೂಗಾರ ಮೇಜಿನ ಕೆಳಗೆ ಕುಳಿತುಕೊಂಡಿದ್ದಾನೆ. ಮೇಜಿನ ಸುತ್ತಲೂ ಕುಳಿತವರಲ್ಲಿ ಪ್ರತಿಯೊಬ್ಬರೂ ಒಬ್ಬೊಬ್ಬರಾಗಿ ದಾಳವನ್ನು ಮೇಜಿನ ಮೇಲೆ ಉರುಳಿಸುತ್ತಾರೆ. ಪ್ರತಿ ಬಾರಿ ದಾಳ ಉರುಳಿಸಿದಾಗಲೂ ದಾಳದಲ್ಲಿ ಎಷ್ಟು ಸಂಖ್ಯೆ ಬಿದ್ದಿರುತ್ತದೆ ಎನ್ನುವುದನ್ನು ಮೇಜಿನ ಅಡಿ ಕುಳಿತ ಜಾದೂಗಾರ ಸರಿಯಾಗಿ ಹೇಳುತ್ತಾನೆ. ಮೇಜಿನ ಮೇಲೆ ಬಿದ್ದ ದಾಳದ ಸಂಖ್ಯೆ, ಅಡಿ ಕುಳಿತ ಜಾದೂಗಾರನಿಗೆ ತಿಳಿಯುವುದಾದರೂ ಹೇಗೆ? ಅದುವೇ ಮ್ಯಾಜಿಕ್‌!

ರಹಸ್ಯ:
ಮೇಜಿನ ಸುತ್ತ ಕುಳಿತಿರುವವರಲ್ಲಿ ಒಬ್ಟಾತ ಜಾದೂಗಾರನ ಸಹಾಯಕನೇ(ಪರಿಚಿತ) ಆಗಿರುತ್ತಾನೆ. ಆತ ಮೇಜಿನ ಮೇಲೆ ಎಸೆದ ದಾಳದ ಸಂಖ್ಯೆಯನ್ನು ಅಡಿ ಕುಳಿತ ಜಾದೂಗಾರನಿಗೆ ತಿಳಿಸುತ್ತಾನೆ. ಸಹಾಯಕನೇನು ಜಾದೂಗಾರನ ಕಿವಿಯಲ್ಲಿ ಬಂದು ಹೇಳುವುದಿಲ್ಲ. ಹಾಗೆ ಮಾಡಿದರೆ ಅದು ಪ್ರೇಕ್ಷಕರಿಗೆ ತಿಳಿದುಬಿಡುತ್ತದೆ. ಹೀಗಾಗಿ ಜಾದೂಗಾರ ಯಾರಿಗೂ ಗೊತ್ತಾಗದ ರೀತಿಯಲ್ಲಿ ದಾಳದಲ್ಲಿ ಬಿದ್ದ ಸಂಖ್ಯೆಯನ್ನು ಜಾದೂಗಾರನಿಗೆ ಅರ್ಥ ಮಾಡಿಸುತ್ತಾನೆ. ಅದು ಹೇಗೆ ಎಂದರೆ, ಆತ ಒಂದು ಕೈಯನ್ನು ಮೇಜಿನ ಮೇಲಿಟ್ಟು ಮತ್ತೂಂದು ಕೈಯನ್ನು ತೊಡೆಯ ಮೇಲೆ ಇಟ್ಟುಕೊಂಡಿರುತ್ತಾನೆ. ಸಹಜವಾದ ಭಂಗಿಯಲ್ಲಿ ಕೂತಿರುವುದರಿಂದ ಅಕ್ಕಪಕ್ಕದವರಿಗೆ ಅನುಮಾನವೂ ಬರುವುದಿಲ್ಲ. ಪ್ರತಿ ಬಾರಿ ದಾಳವನ್ನು ಉರುಳಿಸಿದಾಗಲೂ ಮೇಲ್ಬದಿ ತೋರುವ ಸಂಖ್ಯೆಯನ್ನು ಸಹಾಯಕ ತೊಡೆಯ ಮೇಲಿಟ್ಟ ಕೈಗಳ ಸಹಾಯದಿಂದ ಸಂಜ್ಞೆ ಮಾಡಿ ತೋರಿಸುತ್ತಾನೆ. ಒಂದು ಬಿದ್ದರೆ ತೋರು ಬೆರಳನ್ನು ಬಿಡಿಸುತ್ತಾನೆ. ಎರಡು ಸಂಖ್ಯೆ ಬಿದ್ದರೆ ತೋರು ಬೆರಳು ಮತ್ತು ನಡುಬೆರಳನ್ನು ತೋರುತ್ತಾನೆ. ಹೀಗೆ ಒಂದುದೊಂದು ಸಂಖ್ಯೆಗೂ ಅಷ್ಟೇ ಬೆರಳನ್ನು ಬಿಡಿಸುವ ಮೂಲಕ ಜಾದೂಗಾರ ಮೇಲೆ ಹಾಕಿದ ದಾಳದಲ್ಲಿ ಎಷ್ಟು ಸಂಖ್ಯೆ ಬಿದ್ದವು ಎಂಬುದನ್ನು ಗೊತ್ತುಮಾಡಿಕೊಳ್ಳುತ್ತಾನೆ. ಸಂಖ್ಯೆ ಆರು ಬಿದ್ದರೆ ಹೆಬ್ಬೆರಳನ್ನು ಬಿಡಿಸುತ್ತಾನೆ! ಅದನ್ನೇ ಜಾದೂಗಾರ ಗಟ್ಟಿಯಾಗಿ ಕೂಗಿ ಹೇಳುತ್ತಾನೆ.

ನಿರೂಪಣೆ: ಉದಯ್‌ ಜಾದೂಗಾರ್‌


ಈ ವಿಭಾಗದಿಂದ ಇನ್ನಷ್ಟು

  • "ಅಜ್ಜೀ, ನನ್ನ ಹೊಸ ಗೆಳೆಯರು ಬಂದಿದ್ದಾರೆ. ಏನಾದ್ರೂ ಕೊಡು ' ಎಂದು ಸಿರಿ ಹೇಳಿದಳು. "ಐದೇ ನಿಮಿಷ ಮಕ್ಕಳಾ... ಇದೋ ಬಂದೆ ' ಎಂದ ಅಜ್ಜಿ ಲಗುಬಗೆಯಿಂದ ಅಡುಗೆಮನೆಗೆ ಹೀಗೆ...

  • ಚಿನ್ನು ಕೈಲಿ ಸ್ಕೇಲ್‌ ಹಿಡಿದು ಮೋತಿ ನಾಯಿಯ ಬಳಿ "ನಿನ್ನ ಹೆಸರು ಹೇಳು' ಎಂದು ಅಪ್ಪಣೆ ಹೊರಡಿಸುತ್ತಿದ್ದಳು. ಅದಕ್ಕೋ... ಈ ಮಗು ಏನು ಮಾಡಿದರೂ ಚಂದವೇ. ಬಾಲ ಅಲ್ಲಾಡಿಸುತ್ತ...

  • ಮ್ಯಾಜಿಕ್‌ ಪ್ರದರ್ಶನಕ್ಕೆ ಬಂದವರನ್ನು ನಿಮ್ಮ ಕಡೆ ಸೆಳೆಯಬೇಕು. ಅದಕ್ಕೆ ಏನು ಮಾಡ್ತೀರ? ತಲೆ ಬಿಸಿ ಬೇಡ. ಹೀಗೆ ಮಾಡಿ, ನೀವು ಮ್ಯಾಜಿಕ್‌ ಪ್ರದರ್ಶನವನ್ನು ನೀಡುತ್ತಿರುವಾಗ...

  • ವ್ಯಾಪಾರಿ "ಈ ನಾಯಿಮರಿಗೆ ಒಂದು ಕಾಲಿಲ್ಲ. ಆದ್ದರಿಂದ ನನಗೆ ದುಡ್ಡೇನು ಬೇಡ. ಇದನ್ನು ಉಚಿತವಾಗಿಯೋ ತಗೊಂಡು ಹೋಗು' ಎಂದು ಹೇಳಿದ. ಅರುಣ "ಉಚಿತವಾಗಿ ಬೇಡ. ಇದಕ್ಕೂ...

  • ಅವತಾರವೆಂದು ಹೇಳಿಕೊಳ್ಳುವ ಮಂತ್ರವಾದಿಯೊಬ್ಬನ ಸುತ್ತ ಭಕ್ತಾದಿಗಳು ಜಮಾಯಿಸಿದ್ದಾರೆ. ಒಬ್ಟಾತ ತನ್ನ ಕಷ್ಟಗಳನ್ನು ಹೇಳಿಕೊಳ್ಳುತ್ತಿದ್ದಾನೆ. ಮಂತ್ರವಾದಿಯು...

ಹೊಸ ಸೇರ್ಪಡೆ