ಕಣ್‌ ತೆರೆದು ನೋಡಿ!


Team Udayavani, Apr 11, 2019, 6:00 AM IST

China-Harsha-1

ಭೂಮಿ ಮೇಲಿನ ಜೀವಜಾಲದಲ್ಲಿ ನಮಗೆ ಗೊತ್ತಿಲ್ಲದ ಸಂಗತಿಗಳು ಹಲವಾರು! ಅಷ್ಟೇ ಯಾಕೆ… ನಮ್ಮ ಸುತ್ತಮುತ್ತಲೇ ಇರುವ, ನಿತ್ಯವೂ ಕಣ್ಣಿಗೆ ಕಾಣುವ ಜೀವಿಗಳು, ಹುಳ ಹುಪ್ಪಟೆಗಳನ್ನೇ ನಾವು ಸರಿಯಾಗಿ ತಿಳಿದುಕೊಂಡಿರುವುದಿಲ್ಲ. ಅಂಥ ಸೋಜಿಗದ ಜಗತ್ತಿನೊಳಗೊಂದು ಸುತ್ತು…

ಹಂಸಕ್ಕೆ ಪೇಂಟು ಬಳಿದವರಾರು?
ಯಾವತ್ತಾದರೂ ಹಂಸದ ಚಿತ್ರ ಬರೆದಿದ್ದೀರಾ? ಬರೆದಿದ್ದರೆ ಆ ಚಿತ್ರಕ್ಕೆ ಬಣ್ಣ ತುಂಬುವುದು ಬಹಳ ಸುಲಭ ಎನ್ನುವ ಸಂಗತಿಯೂ ತಿಳಿದಿರುತ್ತದೆ. ಏಕೆಂದರೆ, ಬಿಳಿ ಹಾಳೆಯ ಮೇಲೆ ಚಿತ್ರ ಬಿಡಿಸುವುದರಿಂದ, ಹಂಸದ ಬಣ್ಣವೂ ಬಿಳಿಯೇ ಆಗಿರುವುದರಿಂದ ಬಣ್ಣ ಬಳಿಯುವ ಅಗತ್ಯವೇ ಬೀಳುವುದಿಲ್ಲ. ಬರೀ ನೀರು ಮತ್ತು ಆಕಾಶಕ್ಕೆ ಬಣ್ಣ ತುಂಬಿದರೆ ಆಯಿತು. ಆದರೆ ಹಂಸಗಳನ್ನು ಕಣ್ಣಾರೆ ಕಂಡಾಗ ಮಾತ್ರ ಅವುಗಳ ಮೈಮೇಲೆ ಬಿಳಿ ಗಾಢವಾಗಿದ್ದರೂ ಕೆಂಪು, ಹಳದಿ ಅಥವಾ ಕೇಸರಿ ಮೂರರಲ್ಲೊಂದು ಬಣ್ಣದ ಲೇಪನ ಇರುವುದು ಗಮನಕ್ಕೆ ಬಂದಿರುತ್ತದೆ. ಬಣ್ಣ ನೋಡಿ ಮರುಳಾಗದಿರಿ ಎಂಬ ಹಿರಿಯರ ಮಾತು ನೆನಪಿದೆ ತಾನೇ? ಆ ಮಾತನ್ನು ಹಂಸಗಳ ವಿಚಾರದಲ್ಲೂ ಅಳವಡಿಸಿಕೊಳ್ಳತಕ್ಕದ್ದು. ಏಕೆಂದರೆ, ಹಂಸಗಳ ಮೈಮೇಲೆ ಯಾವ ಬಣ್ಣದ ಲೇಪನ ಕಂಡುಬಂದರೂ ಅದು ಅದರ ನಿಜವಾದ ಬಣ್ಣವಲ್ಲ. ಹಾಗೆಂದು ಆ ಬಣ್ಣ ಹೋಳಿಯಾಟದಿಂದ ಬಂದಿದ್ದೂ ಅಲ್ಲ. ಅವುಗಳು ತಿನ್ನುವ ಆಹಾರದಿಂದ ಬಂದಿದ್ದು. ಹಂಸಗಳು ಆಹಾರ ಕ್ಕಾಗಿ ಆಲ್ಗೇಯನ್ನು ತಿನ್ನುತ್ತವೆ. ಆಲ್ಗೇಗಳಲ್ಲಿ ಕೆರೋಟಿನಾಯ್ಡ ಪಿಗ್‌ಮೆಂಟುಗಳಿರುತ್ತವೆ. ಹಂಸಗಳ ಮೈಮೇಲೆ ಬಣ್ಣ ಬರಲು ಇವುಗಳೇ ಕಾರಣ. ಯಾವ ಯಾವ ರೀತಿಯ ಆಹಾರವನ್ನು ಸೇವಿಸುತ್ತವೆ ಎನ್ನುವುದರ ಮೇಲೆ ಅವುಗಳ ಬಣ್ಣ ನಿರ್ಧರಿತವಾಗುತ್ತದೆ!

ಬೆಕ್ಕು ಮ್ಯಾಂವ್‌ ಎಂದೇಕೆ ಹೇಳುತ್ತೆ?

ಯಾವುದೇ ಪ್ರಾಣಿ ಹೊರಡಿಸುವ ದನಿ ತಮ್ಮ ಸಹವರ್ತಿ ಯೊಡನೆ ಸಂವಹಿಸಲು ಎಂದು ನಾವು ತಿಳಿದಿದ್ದೇವೆ. ಆದರೆ, ಅದು ನಿಜವಾಗಲೇಬೇಕಿಲ್ಲ ಎನ್ನುವುದನ್ನು ತಿಳಿಸುತ್ತದೆ ಈ ಪ್ರಾಣಿ. ಇದು ಬೆಕ್ಕು. ನಾವು ಯಾವ ನೆಲದಲ್ಲಿ ವಾಸಿಸುತ್ತೇವೋ, ಯಾವ ಪ್ರದೇಶದ ನೀರು ಗಾಳಿ ಸೇವಿಸುತ್ತೇವೋ ಆ ನೆಲದ ಭಾಷೆಯನ್ನು ಕಲಿಯಬೇಕಾಗಿದ್ದು ನ್ಯಾಯ ಎನ್ನುವುದು ಹಲವರ ಅಭಿಪ್ರಾಯ. ಅದರಲ್ಲೂ ಕನ್ನಡಿಗರು ಈ ವಿಚಾರದಲ್ಲಿ ಹೃದಯವಂತರು. ಎಲ್ಲಿ ವಾಸಿಸುತ್ತೇವೋ, ಯಾರೊಡನೆ ಸಂವಹಿಸುತ್ತೇವೋ ಅವರ ಭಾಷೆಯನ್ನು ಕಲಿತು ಮಾತನಾಡುತ್ತೇವೆ. ಕನ್ನಡಿಗರಷ್ಟೇ ಹೃದಯ ವೈಶಾಲ್ಯತೆ ಇರುವುದು ಬೆಕ್ಕಿಗೆ. ಅದು ಮೀಯಾಂವ್‌ ಮೀಯಾಂವ್‌ ಸದ್ದು ಮಾಡುತ್ತದೆ ಎನ್ನುವುದು ಪುಟ್ಟ ಮಗುವಿಗೂ ಗೊತ್ತಿರುತ್ತೆ. ಆದರೆ, ಬೆಕ್ಕು ಆ ಸದ್ದನ್ನು ಹೊರಡಿಸುವುದು ಸಹಜೀವಿಗಾಗಿ ಅಲ್ಲ. ಇನ್ನೊಂದು ಬೆಕ್ಕಿನ ಜೊತೆ ಸಂವಹನ ನಡೆಸಲಲ್ಲ. ಅದು ಮ್ಯಾಂವ್‌ ಎನ್ನುವುದು ಮನುಷ್ಯನಿಗಾಗಿ, ಅವನ ಜೊತೆ ಸಂವಹನ ನಡೆಸಲು. ಇದು ಅಚ್ಚರಿ ಎನ್ನಿಸಬಹುದು. ಆದರೆ, ಬೆಕ್ಕುಗಳು ತನ್ನ ಯಜಮಾನನಿಗೆ ವಂದನೆ ಸಲ್ಲಿಸಲು, ಮನುಷ್ಯರ ಗಮನವನ್ನು ತನ್ನತ್ತ ಸೆಳೆಯಲು, ಹಸಿವಾಗಿರುವುದನ್ನು ಸೂಚಿಸಲು ಮುಚ್ಚಿದ ಬಾಗಿಲು/ ಕಿಟಕಿ ತೆರೆಯಲು ಹಾಗೂ ಇಂಥವೇ ಕಾರಣಗಳಿಗೆ ಬೆಕ್ಕುಗಳು ಮ್ಯಾಂವ್‌ ಎನ್ನುತ್ತವೆ.

— ಹರ್ಷವರ್ಧನ್‌ ಸುಳ್ಯ

ಟಾಪ್ ನ್ಯೂಸ್

it

Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

20-

Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ

Bidar; The man jumps into the water tank

Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ

19-gobi

Gobi Manchurian ಬ್ಯಾನ್‌ ಎಫೆಕ್ಟ್: ಚಾಟ್ಸ್‌ ಮಾರಾಟ ಕುಸಿತ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

Chitradurga; We are not waiting for anyone, nomination is sure…: M. Chandrappa

Chitradurga; ನಾವು ಯಾರನ್ನೂ ಕಾಯಲ್ಲ, ನಾಮಿನೇಷನ್ ಪಕ್ಕಾ…: ಎಂ.ಚಂದ್ರಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

it

Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್

Belagavi; ಬಸವಜಯ ಮೃತ್ಯುಂಜಯ ಸ್ವಾಮೀಜಿ ಭೆಟಿಯಾದ ಜಗದೀಶ್ ಶೆಟ್ಟರ್

Belagavi; ಬಸವಜಯ ಮೃತ್ಯುಂಜಯ ಸ್ವಾಮೀಜಿ ಭೇಟಿಯಾದ ಜಗದೀಶ್ ಶೆಟ್ಟರ್

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

20-

Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ

Bidar; The man jumps into the water tank

Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.