ಟೆನ್ ಟೆನ್ ಟೆನ್

ಹತ್ತು ಪಾಯಿಂಟ್‌ಗಳಲ್ಲಿ ವ್ಯಕ್ತಿ ಪರಿಚಯ!

Team Udayavani, Aug 1, 2019, 5:04 AM IST

ಹತ್ತು ಪಾಯಿಂಟ್‌ಗಳಲ್ಲಿ ವ್ಯಕ್ತಿ ಪರಿಚಯ!

ಪ್ರಮುಖ ವ್ಯಕ್ತಿಗಳ ಪರಿಚಯವನ್ನು ಕೇವಲ ಹತ್ತೇ ಹತ್ತು ಪಾಯಿಂಟ್‌ಗಳಲ್ಲಿ ಕಟ್ಟಿ ಕೊಡುವ ಪ್ರಯತ್ನವಿದು…

1. ಡಾ. ವಿಕ್ರಮ್‌ ಸಾರಾಭಾಯಿ ಅವರನ್ನು, ಭಾರತ ಬಾಹ್ಯಾಕಾಶ ಕಾರ್ಯಕ್ರಮಗಳ ಪಿತಾಮಹ ಎನ್ನುತ್ತಾರೆ.
2. ಸಾರಾಭಾಯಿ ಅವರು 1919ರ ಆಗಸ್ಟ್‌ 12ರಂದು, ಗುಜರಾತ್‌ನ ಶ್ರೀಮಂತ ಉದ್ಯಮಿಗಳ ಕುಟುಂಬದಲ್ಲಿ ಜನಿಸಿದರು.
3. ವಿಕ್ರಮ್‌ರ ಇಡೀ ಕುಟುಂಬ ಸ್ವಾತಂತ್ರ್ಯ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿತ್ತು.
4. ವಿಕ್ರಮ್‌ ಮದುವೆಯಾಗಿದ್ದು, ಹೆಸರಾಂತ ನೃತ್ಯ ಕಲಾವಿದೆ ಮೃಣಾಲಿನಿ ಸಾರಾಭಾಯಿ ಅವರನ್ನು.
5. ಅಚ್ಚರಿಯೆಂದರೆ, ಸಾರಾಭಾಯಿ ಕುಟುಂಬದವರೇ ಆ ಮದುವೆಗೆ ಹಾಜರಿರಲಿಲ್ಲ. ಯಾಕಂದ್ರೆ, ಅವರೆಲ್ಲ ಕ್ವಿಟ್‌ ಇಂಡಿಯಾ ಚಳವಳಿಯಲ್ಲಿ ತೊಡಗಿಕೊಂಡಿದ್ದರು.
6. ಸ್ವಾತಂತ್ರ್ಯಾ ನಂತರ, ವೈಜ್ಞಾನಿಕ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ವಿಕ್ರಮ್‌ ಸಾರಾಭಾಯಿ, ಅಹಮದಾಬಾದ್‌ನಲ್ಲಿ ಚಾರಿಟಬಲ್‌ ಟ್ರಸ್ಟ್‌ ಒಂದನ್ನು ಪ್ರಾರಂಭಿಸಿದರು.
7. ಇಸ್ರೋದ ಸ್ಥಾಪಕರು ಕೂಡಾ ಅವರೇ.
8. ಕೇಬಲ್‌ ಟಿ.ವಿ.ಗಳು ಭಾರತಕ್ಕೆ ಕಾಲಿಟ್ಟಿದ್ದು ವಿಕ್ರಮ್‌ ಸಾರಾಭಾಯಿಯವರ ಪರಿಶ್ರಮದಿಂದ.
9. ಭಾರತದ ಮೊದಲ ಉಪಗ್ರಹ ಆರ್ಯಭಟ, ಸಾರಾಭಾಯಿಯ ಕನಸಿನ ಕೂಸು.
10. ಅಹಮದಾಬಾದ್‌ನ, ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಮ್ಯಾನೇಜ್‌ಮೆಂಟ್‌ನ ಸ್ಥಾಪಕ ಸದಸ್ಯರಲ್ಲೊಬ್ಬರು.
11. ವಿಕ್ರಮ್‌ ಸಾರಾಭಾಯಿ ಅವರು ಪಿಎಚ್‌.ಡಿ ಪದವಿ ಪಡೆದದ್ದು, ಸಿ.ವಿ. ರಾಮನ್‌ರ ಮಾರ್ಗದರ್ಶನದಲ್ಲಿ.
12. ತಿರುವನಂತಪುರಂನ ಥುಂಬಾ ರಾಕೆಟ್‌ ಉಡಾವಣಾ ಕೇಂದ್ರದ ಶಂಕುಸ್ಥಾಪನೆಗೆಂದು ಕೇರಳಕ್ಕೆ ಬಂದಿದ್ದಾಗ ವಿಕ್ರಮ್‌, ತೀವ್ರ ಹೃದಯಾಘಾತದಿಂದ ತೀರಿಕೊಂಡರು. ಆಗ ಅವರಿಗೆ ಕೇವಲ 52 ವರ್ಷ.
13. ಸಾರಾಭಾಯಿ ಅವರಿಗೆ ಶಾಂತಿ ಸ್ವರೂಪ ಭಟ್ನಾಗರ್‌ ಪುರಸ್ಕಾರ, ಪದ್ಮಭೂಷಣ, ಪದ್ಮವಿಭೂಷಣ (ಮರಣೋತ್ತರ) ಸಿಕ್ಕಿದೆ.
ಮಗ ಕಾರ್ತಿಕೇಯ ಸಾರಾಭಾಯಿ ಪರಿಸರ ತಜ್ಞರಾದರೆ, ಮಗಳು ಮಲ್ಲಿಕಾ ಸಾರಾಭಾಯಿ ನೃತ್ಯ ಕಲಾವಿದೆ.

ಸಂಗ್ರಹ: ಪ್ರಿಯಾಂಕ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಶಾಲೆಯಿಂದ ಮರಳಿ ಮನೆಗೆ ಬಂದ ರೋಹನ್‌ ತನ್ನ ತಾಯಿ ಬಳಿ ಹೋಗಿ, "ಅಮ್ಮಾ, ನಾಳೆ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದ ದಿನ. ಅದಕ್ಕೆ ಶಾಲೆಯಲ್ಲಿ ಒಂದು ಪುಟ್ಟ ಕಥೆ ಹೇಳಬೇಕಂತೆ....

  • ಜಾದೂಗಾರ ಒಂದು ಖಾಲಿ ಬೆಂಕಿಪೊಟ್ಟಣದೊಳಗೆ ಕೇಸರಿ, ಬಿಳಿ, ಹಸಿರು, ನೀಲಿ ರಿಬ್ಬನ್‌ಗಳನ್ನು ಹಾಕಿ ಮುಚ್ಚುತ್ತಾನೆ. ಎಲ್ಲರೂ ವಂದೇ ಮಾತರಂ ಎಂಬ ಉದ್ಘೋಷವನ್ನು ಮಾಡುತ್ತಿದ್ದಂತೆಯೇ...

  • ಅತಿಥಿಯಾಗಿ ಬಂದಿದ್ದ ಶಾಸಕರು ಧ್ವಜಾರೋಹಣವನ್ನು ನಡೆಸಿಕೊಟ್ಟರು. ನಂತರ ಶಾಲೆಯ ಜನಪ್ರಿಯ ಕಥೆಗಾರ ಸಲೀಂ ಕಥೆ ಹೇಳುವ ಕಾರ್ಯಕ್ರಮ. ಅದಕ್ಕಾಗಿ ಎಲ್ಲರೂ ಕಾದಿದ್ದರು....

  • ಭಾರತೀಯ ಸ್ವಾತಂತ್ರ್ಯ ಸಂಗ್ರಾಮದಲ್ಲಿ ದೊಡ್ಡ ಪಾತ್ರ ವಹಿಸಿದ ಮಹಾತ್ಮ ಗಾಂಧೀಜಿಯ ಎಂಬ ಆಲದ ಮರದ ನೆರಳಿನಲ್ಲಿ ಬಹಳಷ್ಟು ಮಂದಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು....

  • ಕತ್ತಲಾದ ಕೂಡಲೆ ಮಿಡತೆ ತನ್ನ ಮುಂಗಾಲಿನಿಂದ ಬಾಯಿಯನ್ನು ಒರೆಸಿಕೊಳ್ಳುತ್ತಾ "ಚಿರ್ಪ್‌ ಚಿರ್ಪ್‌' ಎಂದು ಸದ್ದು ಮಾಡುತ್ತಿತ್ತು. ಆ ಸದ್ದು ಎಷ್ಟು ಜೋರಾಗಿರುತ್ತಿತ್ತೆಂದರೆ...

ಹೊಸ ಸೇರ್ಪಡೆ