ಹತ್ತು ಪಾಯಿಂಟ್‌ಗಳಲ್ಲಿ ವ್ಯಕ್ತಿ ಪರಿಚಯ!

Team Udayavani, Aug 8, 2019, 5:00 AM IST

ಪ್ರಮುಖ ವ್ಯಕ್ತಿಗಳ ಪರಿಚಯವನ್ನು ಕೇವಲ ಹತ್ತೇ ಹತ್ತು ಪಾಯಿಂಟ್‌ಗಳಲ್ಲಿ ಕಟ್ಟಿ ಕೊಡುವ ಪ್ರಯತ್ನವಿದು…

1. ಒಮರ್‌ ಖಯ್ನಾಮ್‌ ಪರ್ಷಿಯಾದ ಹೆಸರಾಂತ ಕವಿ, ಗಣಿತಜ್ಞ, ಖಗೋಳ ಶಾಸ್ತ್ರಜ್ಞ ಮತ್ತು ತತ್ವಜ್ಞಾನಿ.
2. ಆತ, 1048 ಇಸವಿಯಲ್ಲಿ ಪರ್ಷಿಯಾದ ನಿಶಾಪುರ್‌ ಎಂಬಲ್ಲಿ ಜನಿಸಿದ್ದ. ಆ ಪ್ರದೇಶ ಈಗ ಇರಾನ್‌ನಲ್ಲಿದೆ.
3. ಗಣಿತ ಮತ್ತು ಖಗೋಳಶಾಸ್ತ್ರದ ಶಿಕ್ಷಕನಾಗಿ ಹಾಗೂ ಜ್ಯೋತಿಷಿಯಾಗಿಯೂ ಆತ ಕೆಲಸ ಮಾಡಿದ್ದರು.
4. ಒಮರ್‌ನ ತಂದೆ ಇಬ್ರಾಹಿಂ ಖಯಾಮಿ, ವೈದ್ಯರಾಗಿದ್ದರು. ಒಮರ್‌ ಕೆಲ ಸಮಯ, ತಂದೆಯ ಕೆಲಸದಲ್ಲಿ ಸಹಾಯಕನಾಗಿದ್ದ.
5. ಖಗೋಳಶಾಸ್ತ್ರಜ್ಞನಾಗಿ ಆತ ಜಲಾಲಿ ಕ್ಯಾಲೆಂಡರ್‌ ಅನ್ನು ವಿನ್ಯಾಸಗೊಳಿಸಿದ.
6. ಆ ಕ್ಯಾಲೆಂಡರ್‌ನಲ್ಲಿ ಪ್ರತಿ 33 ವರ್ಷಗಳಿಗೊಮ್ಮೆ 8 ಅಧಿಕ ವರ್ಷಗಳನ್ನು ಗುರುತಿಸಲಾಗಿತ್ತು.
7. ಜಲಾಲಿ ಕ್ಯಾಲೆಂಡರ್‌ನಲ್ಲಿ ವರ್ಷಕ್ಕೆ 365.2424 ದಿನಗಳಿದ್ದವು. ಆಧುನಿಕ ಇರಾನಿನ ಕ್ಯಾಲೆಂಡರ್‌ ಕೂಡಾ ಒಮರ್‌ನ ಲೆಕ್ಕಾಚಾರಗಳನ್ನೇ ಆಧರಿಸಿದ್ದಾಗಿದೆ.
8. ಈಗ ಬಹುತೇಕ ಕಡೆ ಬಳಕೆಯಲ್ಲಿರುವ ಗ್ರೆಗೋರಿಯನ್‌ ಕ್ಯಾಲೆಂಡರ್‌ಗಿಂತಲೂ ಒಮರ್‌ನ ಕ್ಯಾಲೆಂಡರ್‌ ಹೆಚ್ಚು ನಿಖರವಾಗಿತ್ತು.
9. ಒಮರ್‌ಖಯಾಮ್‌ನ ರುಬಾಯತ್‌ (ಪರ್ಷಿಯನ್‌ ಕವಿತೆಗಳು)ಗಳನ್ನು ಎಡ್ವರ್ಡ್‌ ಫಿಟ್ಜೆರಾಲ್ಡ್ ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ.
10. 1970ರಲ್ಲಿ ಚಂದ್ರನ ಮೇಲಿನ ಕುಳಿಯೊಂದಕ್ಕೆ ಒಮರ್‌ನ ಹೆಸರು ಇಡಲಾಗಿದೆ.

ಸಂಗ್ರಹ: ಪ್ರಿಯಾಂಕ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ರಾತ್ರಿ ಝಗಮಗಿಸುವ ದೀಪಗಳಿಂದ ಮಿಂಚುವ ಸೇತುವೆಯ ವೈಭವ ಒಂದೆಡೆಯಾದರೆ, ಮುಸ್ಸಂಜೆಯಲ್ಲಿ ಮುಳುಗುವ ಸೂರ್ಯನ ಕಿರಣಗಳಿಗೆ ಬರುವ ಹೊಸ ವರ್ಣದ ಕಳೆಯನ್ನು ನೋಡಿ ಖುಷಿಪಡಲೆಂದೇ...

  • 70 ಲಕ್ಷ ವರ್ಷಗಳ ಹಿಂದೆ ಬದುಕಿದ್ದ ಆಮೆಯ ಪಳೆಯುಳಿಕೆಯನ್ನು ವಿಜ್ಞಾನಿಗಳು ಸಂಶೋಧಿಸಿದ್ದಾರೆ. ಅದು ಕಾರಿನಷ್ಟು ಗಾತ್ರವನ್ನು ಹೊಂದಿದೆ! ಇಂದು ನಾವು ನೋಡುತ್ತಿರುವ...

  • ಮೇಜಿನ ಮೇಲೆ ಒಂದು ಖಾಲಿ ಬಾಟಲ್ ಮತ್ತು ಒಂದು ಹಗ್ಗದ ತುಂಡನ್ನು ಇಟ್ಟಿದೆ. ಜಾದೂಗಾರನ ಸವಾಲೇನೆಂದರೆ ಆ ಹಗ್ಗದಿಂದ ಬಾಟಲನ್ನು ಎತ್ತಬೇಕು. ಇದೇನು ಮಹಾ? ಹಗ್ಗವನ್ನು...

  • ಪ್ರಮುಖ ವ್ಯಕ್ತಿಗಳ ಪರಿಚಯವನ್ನು ಕೇವಲ ಹತ್ತೇ ಹತ್ತು ಪಾಯಿಂಟ್‌ಗಳಲ್ಲಿ ಕಟ್ಟಿ ಕೊಡುವ ಪ್ರಯತ್ನವಿದು... 1. ವನ್ಯಜೀವಿ ತಜ್ಞ ಸ್ಟೀವ್‌ ಇರ್ವಿನ್‌ 1962ರ ಫೆಬ್ರವರಿ...

  • ಗೊಗ್ಗಯ್ಯನ ಮೂಗು ಬೆಳೆಯುತ್ತಾ ಹೋಯಿತು. ಅದನ್ನು ಹೊತ್ತುಕೊಂಡು ತಿರುಗಾಡುವುದೇ ಕಷ್ಟವಾಗತೊಡಗಿತು. ಕಡೆಗೊಂದು ದಿನ ಅದಕ್ಕೆ ಪರಿಹಾರವೂ ಸಿಕ್ಕಿತು. ಆ ಹುಡುಗ...

ಹೊಸ ಸೇರ್ಪಡೆ