ಟೆನ್ ಟೆನ್ ಟೆನ್

Team Udayavani, Jul 4, 2019, 5:00 AM IST

ಪ್ರಮುಖ ವ್ಯಕ್ತಿಗಳ ಪರಿಚಯವನ್ನು ಕೇವಲ ಹತ್ತೇ ಹತ್ತು ಪಾಯಿಂಟ್‌ಗಳಲ್ಲಿ ಕಟ್ಟಿ ಕೊಡುವ ಪ್ರಯತ್ನವಿದು…

1. ಆಟದ ವೇಳೆ ಒತ್ತಡ, ಉದ್ವೇಗಕ್ಕೊಳಗಾಗದ ಭಾರತ ಕ್ರಿಕೆಟ್‌ ತಂಡದ ಕಪ್ತಾನ ಮಹೇಂದ್ರ ಸಿಂಗ್‌ ಧೋನಿಯವರನ್ನು, “ಕ್ಯಾಪ್ಟನ್‌ ಕೂಲ್‌’ ಎಂದು ಕರೆಯುತ್ತಾರೆ.
2. ಧೋನಿಗೆ 2011ರಲ್ಲಿ ಭಾರತೀಯ ಪ್ರಾದೇಶಿಕ ಸೇನೆಯಿಂದ ಲೆಫ್ಟಿನೆಂಟ್‌ ಕರ್ನಲ್‌ ಗೌರವ ಸಿಕ್ಕಿದೆ. ಕಪಿಲ್‌ದೇವ್‌ ನಂತರ ಈ ಗೌರವಕ್ಕೆ ಭಾಜನರಾದ ಎರಡನೇ ಭಾರತೀಯ ಅವರು.
3. ಕ್ರೀಡಾರಂಗಕ್ಕೆ ಬರುವ ಮುನ್ನ ಧೋನಿ, ಖರಗಪುರ ರೈಲ್ವೆ ಸ್ಟೇಷನ್‌ನಲ್ಲಿ 2 ವರ್ಷ ಟಿಕೆಟ್‌ ಕಲೆಕ್ಟರ್‌ ಆಗಿ ಕೆಲಸ ಮಾಡಿದ್ದರು
4. ಹೆಲಿಕಾಪ್ಟರ್‌ ಶಾಟ್‌ಗೆ ಹೆಸರಾಗಿರೋ ಧೋನಿ, ಅದನ್ನು ಕಲಿತಿದ್ದು ಜಾರ್ಖಂಡ್‌ ಕ್ರಿಕೆಟಿಗ ಸಂತೋಷ್‌ ಲಾಲ್‌ ಅವರಿಂದ.
5. ಧೋನಿ ಶ್ವಾನ ಪ್ರೇಮಿಯೂ ಆಗಿದ್ದಾರೆ. ಅವರ ಮುದ್ದಿನ ನಾಯಿಗಳ ಹೆಸರು ಝಾರ ಮತ್ತು ಸ್ಯಾಂ.
6. ಧೋನಿಗೆ ಹಳೆಯ ಹಿಂದಿ ಹಾಡುಗಳನ್ನು ಕೇಳುವುದು ಇಷ್ಟದ ಹವ್ಯಾಸ. ಅವರು ಗಾಯಕ ಕಿಶೋರ್‌ ಕುಮಾರ್‌ ಅವರ ದೊಡ್ಡ ಅಭಿಮಾನಿ.
7. ಕ್ರಿಕೆಟ್‌ ಅಷ್ಟೇ ಅಲ್ಲ, ಫ‌ುಟ್‌ಬಾಲ್‌ ಮತ್ತು ಬ್ಯಾಡ್ಮಿಂಟನ್‌ನಲ್ಲೂ ಧೋನಿ ಪರಿಣತರು.
8. ಧೋನಿಯ ಫ‌ುಟ್‌ಬಾಲ್‌ ಗೋಲ್‌ ಕೀಪಿಂಗ್‌ನ ಶೈಲಿಯನ್ನು ಗಮನಿಸಿದ ಕೋಚ್‌ ಕೇಶವ್‌ ಬ್ಯಾನರ್ಜಿ, ಕ್ರಿಕೆಟ್‌ ಆಡುವಂತೆ ಒತ್ತಾಯಿಸಿದರು.
9. ಬಾಂಗ್ಲಾದ ವಿರುದ್ಧ ಏಕದಿನ ಪಂದ್ಯ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಧೋನಿ, ಆ ಪಂದ್ಯದಲ್ಲಿ ಮೊದಲ ಬಾಲ್‌ಗೇ ರನ್‌ಔಟ್‌ ಆಗಿದ್ದರು.
10. ಧೋನಿ ಬಳಿ ಮೋಟಾರ್‌ ಬೈಕ್‌ಗಳ ದೊಡ್ಡ ಸಂಗ್ರಹವೇ ಇದೆ

ಸಂಗ್ರಹ: ಪ್ರಿಯಾ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಹವಳದ ದಿಬ್ಬಗಳು "ಗ್ರೇಟ್‌ ಬ್ಯಾರಿಯರ್‌ ರೀಫ್' ವಿಶ್ವದಲ್ಲೇ ಅತಿ ದೊಡ್ಡ ಹವಳದ ದಂಡೆ ಎಂಬ ಖ್ಯಾತಿಗೆ ಪಾತ್ರವಾಗಿದೆ. ಇದು 2,600 ಕಿ.ಮೀ. ಉದ್ದವಿದೆ. ಇದನ್ನು ಸಂರಕ್ಷಿಸುವ...

  • ಪ್ರಮುಖ ವ್ಯಕ್ತಿಗಳ ಪರಿಚಯವನ್ನು ಕೇವಲ ಹತ್ತೇ ಹತ್ತು ಪಾಯಿಂಟ್‌ಗಳಲ್ಲಿ ಕಟ್ಟಿ ಕೊಡುವ ಪ್ರಯತ್ನವಿದು... 1. ಕಡಿಮೆ ವೆಚ್ಚದಲ್ಲಿ ವಿಮಾನ ಪ್ರಯಾಣ ಮಾಡುವ ಭಾರತೀಯರ...

  • ಮಲೆನಾಡಿನ ಒಂದು ಸುಂದರ ಹಳ್ಳಿ ಸೋಮನಾಥಪುರ. ಅಲ್ಲಿನ ಸೋಮನಾಥ ದೇವಾಲಯವು ಸುತ್ತಲೂ ಪ್ರಸಿದ್ಧಿ ಪಡೆದಿತ್ತು. ಸೋಮನಾಥಪುರ ನದಿಯ ದಂಡೆಯ ಮೇಲೆ ಇದ್ದುದರಿಂದ ಆ ಊರವರಿಗೆ...

  • ಜಾದೂಗಾರ ತನ್ನ ತಲೆಯ ಮೇಲಿನ ಟೋಪಿಯನ್ನು ತೆಗೆಯುತ್ತಾನೆ. ಅದು ಬರೀ ಖಾಲಿಯೆಂದು ತೋರಿಸುತ್ತಾನೆ. ಅಷ್ಟಕ್ಕೆ ಸುಮ್ಮನಾಗುವುದಿಲ್ಲ. ಅದನ್ನು ಬೋರಲಾಗಿ ಮೇಜಿನ ಮೇಲಿಟ್ಟು...

  • ನೀರಿನಲ್ಲಿ ಆಟವಾಡುತ್ತಿದ್ದ ಚಿಕ್ಕ ಮೀನಿಗೆ ಒಮ್ಮೆ ಕೊಳದಿಂದ ಹೊರಕ್ಕೆ ಹೋಗಬೇಕೆಂಬ ಆಸೆ ಉಂಟಾಯಿತು. ಮುಂದೇನಾಯ್ತು? ಅದು ಪರಿಶುದ್ಧವಾದ ನೀರಿನಿಂದ ತುಂಬಿದ...

ಹೊಸ ಸೇರ್ಪಡೆ