ಲಾವಾ ಪ್ರವಾಹ

Team Udayavani, Oct 10, 2019, 5:57 AM IST

ಕಳೆದ ವರ್ಷ ಹವಾಯಿಯಲ್ಲಿ ಸ್ಫೋಟಿಸಿದ ಜ್ವಾಲಾಮುಖೀಯಿಂದ ಅಚ್ಚರಿಯ ಬೆಳವಣಿಗೆಗಳು ಘಟಿಸಿದ್ದವು. ಲಾವಾ ರಸ ಚಿಮ್ಮಿ ದಾರಿಯಲ್ಲಿ ಸಿಕ್ಕದ್ದೆಲ್ಲವನ್ನೂ ಆಹುತಿ ತಗೆದುಕೊಳ್ಳುತ್ತಾ ಪೆಸಿಫಿಕ್‌ ಸಾಗರ ಸೇರುವ ತನಕ ವಿಜ್ಞಾನಿಗಳು ಹಗಲು ರಾತ್ರಿ ಅದರ ಸಂಶೋಧನೆಯಲ್ಲಿ ತೊಡಗಿದ್ದರು. ಜ್ವಾಲಾಮುಖೀ ಇಂದಿಗೂ ಕುತೂಹಲದ ಕಣಜ.

ಕೆಂಪಗೆ ಕುದಿಯುವ ದ್ರವವನ್ನು ಹೊರಸೂಸುತ್ತಾ ಪರ್ವತಗಳು ಆರ್ಭಟಿಸುವುದನ್ನು “ಜ್ವಾಲಾಮುಖೀ ಸ್ಫೋಟ’ ಎಂದು ಕರೆಯುತ್ತಾರೆ. ಆ ಪರ್ವತವನ್ನು ಅಗ್ನಿ ಪರ್ವತ ಎಂದು ಎನ್ನುತ್ತಾರೆ. ಸಾವಿರಾರು ಕಿ.ಮೀ ವ್ಯಾಪಿಸಿ ಜೀವಸಂಕುಲವನ್ನು ನಾಶಮಾಡುವ ದೈತ್ಯ ಜ್ವಾಲಾಮುಖೀಗಳು ಎಂದಿನಿಂದಲೂ ಭೂಮಿಯ ಮೇಲೆ ತನ್ನ ಕರಾಳಮುಖವನ್ನು ತೋರಿವೆ. ಡೈನೋಸಾರ್‌ ಅವಸಾನ ಹೊಂದುವುದಕ್ಕೆ ಏನೇನು ಕಾರಣವಾಗಿರಬಹುದು ಎಂಬ ಪಟ್ಟಿಯಲ್ಲಿ ಜ್ವಾಲಾಮುಖೀ ಕೂಡಾ ಸೇರಿದೆ ಎಂದರೆ ಜ್ವಾಲಾಮುಖೀಯ ಶಕ್ತಿಯ ಆಗಾಧತೆಯನ್ನು ನಾವು ತಿಳಿಯಬಹುದು. ಸಮುದ್ರದÇÉಾಗುವ ಜ್ವಾಲಾಮುಖೀಗಳು ಬೃಹತ್‌ ಸುನಾಮಿಯನ್ನು ಸೃಷ್ಟಿಸಬಹುದು, ತೀವ್ರ ಪ್ರಮಾಣದ ಭೂಕಂಪನವನ್ನೂ ಉಂಟು ಮಾಡಬಹುದು.

ಅಗ್ನಿಪರ್ವತಗಳೇ ಕಿಂಡಿ
ಭೂಮಿಯ ಅಡಿಯಲ್ಲಿ ಟೆಕ್ಟಾನಿಕ್‌ ತಟ್ಟೆಗಳಿವೆ. ಅದಕ್ಕೂ ಕೆಳಗೆ ಕುದಿಯುವ ಲಾವಾ ರಸವಿದೆ. ಟೆಕ್ಟಾನಿಕ್‌ ತಟ್ಟೆಗಳು ದೂರ ದೂರ ಸರಿದಾಗ ಅದರಡಿಯಲ್ಲಿ ಕುದಿಯುತ್ತಿರುವ ಲಾವಾ ಹೊರಚಿಮ್ಮಲು ಅಣಿಯಾಗುತ್ತದೆ. ಆ ಸಂದರ್ಭದಲ್ಲಿ ಭೂಮಿಯಡಿ ಒತ್ತಡ ಸೃಷ್ಟಿಯಾಗುತ್ತದೆ. ಕಬ್ಬಿಣ, ನಿಕ್ಕೆಲ್‌ ಮುಂತಾದ ಲೋಹಗಳಿಂದ ರೂಪಿತವಾಗಿದೆ. ಭೂಮಿಯಡಿಯಿಂದ ಲಾವಾ ಹೊರಕ್ಕೆ ಬರಲು ಕಿಂಡಿಗಳನ್ನು ತಡಕಾಡುತ್ತದೆ. ಈ ಕಿಂಡಿಗಳೇ ಅಗ್ನಿಪರ್ವತಗಳು. ಭೂಮಿಯಡಿ ಹರಿಯುವ ಲಾವಾ ರಸ ಇರುವ ಪದರದ ಉಷ್ಣತೆ ಸೂರ್ಯನ ಹೊರ ಮೈ ಉಷ್ಣತೆಯಷ್ಟಿರಬಹುದೆಂದು ಅಂದಾಜಿಸಲಾಗಿದೆ. ಭಾರತದ ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪದಲ್ಲಿಯೂ ಜ್ವಾಲಾಮುಖೀಯಿದ್ದು, ಅದು ದೇಶದ ಏಕೈಕ ಜ್ವಾಲಾಮುಖೀ ಎಂಬ ಖ್ಯಾತಿಗೆ ಪಾತ್ರವಾಗಿದೆ.

ರಿಂಗ್‌ ಆಫ್ ಫೈರ್‌
ಪೆಸಿಫಿಕ್‌ ಮಹಾಸಾಗರವನ್ನು ಶಾಂತ ಸಾಗರ ಎಂದು ಕರೆಯಲಾಗುತ್ತದೆ. ಆದರೆ ಅದರ ತಳದಲ್ಲಿ ಸುಮಾರು 40,000 ಕಿ.ಮೀ ಉದ್ದ ಪ್ರದೇಶವನ್ನು ವಿಜ್ಞಾನಿಗಳು “ರಿಂಗ್‌ ಆಫ್ ಫೈರ್‌’ ಎಂದು ಗುರುತಿಸಿದ್ದಾರೆ. ರಿಂಗ್‌ ಎಂದು ಕರೆದರೂ ಇದು ನಿಜಕ್ಕೂ ಇಂಗ್ಲಿಷ್‌ನ “ಯು’ ಆಕಾರದಲ್ಲಿ ಕಂಡುಬರುತ್ತದೆ. ಜಗತ್ತಿನ ಶೇ.90ರಷ್ಟು ಭೂಕಂಪನಗಳು ಈ ಪ್ರದೇಶದಲ್ಲೇ ಘಟಿಸುವುದು. ಕಳೆದ 10,000 ವರ್ಷಗಳಲ್ಲಿ ಭೂಮಿ ಕಂಡ ಅತ್ಯಂತ ಭೀಕರ ಭೂಕಂಪಗಳು ಆಗಿರುವುದು ಈ ಪ್ರದೇಶದಲ್ಲೇ ಎನ್ನುವುದು ಆತಂಕಕಾರಿ ಸಂಗತಿ. ರಿಂಗ್‌ ಆಫ್ ಫೈರ್‌ ಪ್ರದೇಶ, ಅಮೆರಿಕದ ಪಶ್ಚಿಮ ಕರಾವಳಿ, ನ್ಯೂಝಿಲೆಂಡ್‌, ಫಿಲಿಪೈನ್ಸ್‌ ದ್ವೀಪ, ರಷ್ಯಾ, ಮೆಕ್ಸಿಕೊ ಏಷ್ಯಾದ ತೀರವನ್ನು ಹಾದು ಹೋಗುತ್ತದೆ.

ಅತಿ ಹೆಚ್ಚು ಜ್ವಾಲಾಮುಖೀ ಪರ್ವತಗಳನ್ನೊಳಗೊಂಡ ಟಾಪ್‌ಟೆನ್‌ ದೇಶಗಳು 
ಅಮೆರಿಕ- 173
ರಷ್ಯಾ- 166
ಇಂಡೋನೇಷ್ಯಾ- 139
ಐಸ್‌ಲ್ಯಾಂಡ್‌- 130
ಜಪಾನ್‌- 112
ಚಿಲಿ- 104
ಇಥಿಯೋಪಿಯಾ- 57
ಪಪುವಾ ನ್ಯೂಗಿನಿಯಾ- 53
ಫಿಲಿಪೈ®Õ…- 50
ಮೆಕ್ಸಿಕೊ- 43

– ಅರ್ಚನಾ ಎಚ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಇತ್ತೀಚಿಗೆ ಅಂತರಿಕ್ಷದ ಸೂಯೆಝ್ ನೌಕೆಗೆ ಹೊಸ ಅತಿಥಿ ಪ್ರಯಾಣಿಕ ಬಂದಿದ್ದ. ಭೂಮಿಯಿಂದ ಅವನನ್ನು ಏಕಾಂಗಿಯಾಗಿ ಕಳಿಸಲಾಗಿತ್ತು. ಅಷ್ಟು ದೂರದಿಂದ ಒಬ್ಬನೇ ಬಂದಿದ್ದರೂ...

  • ಜಾದೂ ಮಾಡೋರಿಗೆ ಚಪ್ಪಾಳೆಯೇ ಜೀವಾಳ. ಜಾಸ್ತಿ ಚಪ್ಪಾಳೆ ಯಾವ ಪ್ರಯೋಗಕ್ಕೆ ಬೀಳುತ್ತದೆ. ಯಾವುದಕ್ಕೆ ಬೀಳುವುದಿಲ್ಲ. ಈ ರೀತಿ ಜಾದೂ ಮಾಡಬೇಕಾದರೆ, ಟಾರ್ಗೆಟ್‌ ಯಾರನ್ನು...

  • ಆನಂದವನ ಎಂಬ ಕಾನನವು ಬಲು ಸುಂದರವಾಗಿತ್ತು. ಅಲ್ಲಿನ ಅರಳಿ ಮರದ ಮೇಲೆ ಬಲಿಜ ಮತ್ತು ಸಮುರ ಎಂಬ ಎರಡು ಪಕ್ಷಿಗಳು ಬೇರೆ ಬೇರೆ ಗೂಡುಗಳನ್ನು ಕಟ್ಟಿಕೊಂಡು ವಾಸ ಮಾಡುತ್ತಿದ್ದವು....

  • ಪುಟ್ಟನ ಮನೆಯಂಗಳದಲ್ಲಿ ಇಳಿದ ರಾಕೆಟ್‌ನಿಂದ ದನಿ ಕೇಳಿ ಬಂತು. "ನಾವು ಚಂದ್ರನಲ್ಲಿ ಕಳೆದುಹೋಗಿರುವ ದೇಶದ ವಿಕ್ರಮ್‌ ಲ್ಯಾಂಡರ್‌ ಆಕಾಶ ನೌಕೆಯನ್ನು ಪತ್ತೆ ಹಚ್ಚೋಣಾ....

  • ಜೀವನದಲ್ಲಿ ಬಹಳ ಎತ್ತರಕ್ಕೆ ಬೆಳೆಯಬೇಕು ಅಂತ ಎಲ್ಲರೂ ಆಸೆ ಪಡುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ಬೆಳವಣಿಗೆ ನಿಂತರೆ ಸಾಕೆಂದು ಪ್ರಾರ್ಥಿಸಿದ್ದ. ದೈಹಿಕವಾಗಿ...

ಹೊಸ ಸೇರ್ಪಡೆ