ಮಳೆನಾಡಿನ ಜೀವಂತ ಸೇತುವೆಗಳು!

ಏಕಕಾಲಕ್ಕೆ 50 ಮಂದಿಯ ಭಾರ ತಡೆಯುತ್ತೆ

Team Udayavani, Aug 1, 2019, 5:02 AM IST

ಪ್ರಪಂಚದಾದ್ಯಂತ ಅತ್ಯದ್ಭುತ ಮಾನವ ನಿರ್ಮಿತ ಸೇತುವೆಗಳು ಹಲವಾರಿರಬಹುದು. ಆದರೆ ಪ್ರಕೃತಿ ನಿರ್ಮಿತ ಸೇತುವೆಗಳು ಅತಿ ವಿರಳವಾದುದು. ಅವುಗಳಲ್ಲೊಂದು ಭಾರತದ ಮೇಘಾಲಯದಲ್ಲಿದೆ. ಇದನ್ನು ಜೀವಂತ ಸೇತುವೆ ಎಂದೂ ಕರೆಯುತ್ತಾರೆ. ಏಕೆಂದರೆ ಇದು ವರ್ಷಗಳಿಂದಲೂ ಬೆಳೆಯುತ್ತಲೇ ಇದೆ.

ಮಳೆನಾಡು ಎಂದೇ ಹೆಸರಾಗಿರುವ ಮೇಘಾಲಯ ಕೇವಲ ಮಳೆಗೆ ಮಾತ್ರವಲ್ಲ ನೈಸರ್ಗಿಕ ಸೇತುವೆಗಳಿಗೂ ಖ್ಯಾತಿ ಪಡೆದಿದೆ. ಮೇಘಾಲಯಕ್ಕೆ ಭೇಟಿ ನೀಡುವ ಪ್ರವಾಸಿಗರು ಇವುಗಳನ್ನು ನೋಡದೆ ಹೋಗುವುದಿಲ್ಲ. ಈ ನೈಸರ್ಗಿಕ ಸೇತುವೆಗಳು ಮರದ ಬೇರುಗಳಿಂದ ರೂಪಿತವಾಗಿದೆ.

ಸೇತುವೆಯ ಇತಿಹಾಸ
ಮೇಘಾಲಯದ ಜೀವಂತ ಸೇತುವೆಗಳು ಸುಮಾರು ಎರಡು ಶತಮಾನಗಳ ಹಿಂದೆ ಅಸ್ತಿತ್ವಕ್ಕೆ ಬಂತು. ಮೇಘಾಲಯದಲ್ಲಿ ವಾಸಿಸುವ ಖಾಸಿ ಪಂಗಡದ ಹಿರಿಯರು ಎರಡು ಪಕ್ಕ ಪಕ್ಕದ ಗುಡ್ಡಗಳನ್ನು ಸಂಪರ್ಕಿಸಲು ಒಂದು ಉಪಾಯವನ್ನು ಹುಡುಕಿಕೊಂಡರು. ಎತ್ತರದ ಗುಡ್ಡದಲ್ಲಿ ಬೆಳೆಯುತ್ತಿದ್ದ ರಬ್ಬರ್‌ ಮರದ ಬೇರುಗಳನ್ನು ಅಡಕೆ ಟೊಳ್ಳು ಕಾಂಡದೊಳಗೆ ಹಾಕಿ ಅವುಗಳಿಗೆ ಬೆಳೆಯಲು ಬೇಕಾದ ಅಗತ್ಯ ಪೋಷಣೆ ಹಾಗು ಆರೈಕೆಯನ್ನು ನೀಡತೊಡಗಿದರು. ಈ ಬೇರುಗಳು ಎದುರಿನ ದಂಡೆಯನ್ನು ತಲುಪಿ, ಭದ್ರವಾಗಿ ಇನ್ನೊಂದು ಗುಡ್ಡವನ್ನು ಕಚ್ಚಿಕೊಳ್ಳುವಂತೆ ಬೆಳೆಸುತ್ತಿದ್ದರು. ಹೆಚ್ಚು ಭಾರವನ್ನು ತಡೆದುಕೊಳ್ಳುವಂಥ ಶಕ್ತಿ ಬರುವವರೆಗೆ ಬೇರುಗಳನ್ನು ಚೆನ್ನಾಗಿ ಪೋಷಿಸುತ್ತಿದ್ದರು. ಇದನ್ನೇ ಮುಂದೆ ಸೇತುವೆಯನ್ನಾಗಿ ಬಳಸಲು ಶುರುಮಾಡಿದರು. ಇಂದು ಈ ಸೇತುವೆಗಳು ಒಂದರೊಳಗೆ ಒಂದರಂತೆ ಬೆಸೆದುಕೊಂಡು ಬಲಿಷ್ಠವಾಗಿದೆ.

ಉಳಿಸಬೇಕೆಂಬ ಕಾಳಜಿ
ಬೇರುಗಳ ಸೇತುವೆಗಳು ವೈವಿಧ್ಯಮಯ ಆಕಾರ ಮತ್ತು ಗಾತ್ರಗಳನ್ನು ಹೊಂದಿವೆ. ಇವು 170 ಅಡಿಗಳಷ್ಟು ಉದ್ದ ಹಾಗು ತೊರೆಗಳಿಂದ 80 ಅಡಿಯಷ್ಟು ಎತ್ತರಕ್ಕೂ ಇರುತ್ತವೆ. ಈಗ ಉಳಿದಿರುವ ನೈಸರ್ಗಿಕ ಸೇತುವೆಗಳು ಎಲ್ಲವೂ ಹಳೆಯ ಕಾಲದವು. ಹೊಸ ಜೀವಂತ ಸೇತುವೆಗಳನ್ನು ರಚಿಸುವ ಹಾಗು ಹಳೆಯವುಗಳನ್ನು ಸಂರಕ್ಷಿಸುವ ಅಭ್ಯಾಸ ನಿಧಾನವಾಗಿ ಮರೆಯಾಗುತ್ತಿರುವುದು ವಿಪರ್ಯಾಸ. ಪ್ರವಾಸೋದ್ಯಮದ ನೆಪದಿಂದ ಈಗೀಗ ಸ್ಥಳೀಯರಲ್ಲಿ ನೈಸರ್ಗಿಕ ಸೇತುವೆಗಳನ್ನು ಸಂರಕ್ಷಿಸುವ ಬಗ್ಗೆ ಕಾಳಜಿ ಮೂಡುತ್ತಿದೆ.

-ಈ ಸೇತುವೆಗಳು ಪರಿಪೂರ್ಣವಾಗಿ ಬೆಳೆಯಲು 10 ರಿಂದ 15 ವರ್ಷಗಳನ್ನು ತೆಗೆದುಕೊಳ್ಳುತ್ತವೆ.
-500 ವರ್ಷಗಳ ಕಾಲ ಇವು ಬಾಳಿಕೆ ಬರುತ್ತದೆ ಎನ್ನುತ್ತಾರೆ ಸ್ಥಳೀಯರು
-ನೀರಿನ ನಿರಂತರ ಒಡನಾಟದಿಂದಾಗಿ ಬೇರು ಕೊಳೆತಾಗ ಅದರ ಅದರ ಮೇಲೆ ಹೊಸ ಬೇರಿನ ಎಳೆಗಳು ಬೆಳೆದು ಸ್ಥಿರತೆ ಕಾಪಾಡುತ್ತದೆ.
-ಇವುಗಳಲ್ಲಿ ಚಿರಾಪುಂಜಿಯ ಡಬಲ್‌ ಡೆಕ್ಕರ್‌ ರೂಟ್‌ ಬ್ರಿಜ್‌ ಹಾಗೂ ಶಿಲ್ಲಾಂಗ್‌ನ ಸಿಂಗಲ್‌ ಡೆಕ್ಕರ್‌ ರೂಟ್‌ ಸೇತುವೆ ಬಹಳ ಪ್ರಖ್ಯಾತವಾದುದು
-ಈ ಜೀವಂತ ಸೇತುವೆಗಳನ್ನು ಜಾಗತಿಕ ಸಂಸ್ಥೆ ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂದು ಗುರುತಿಸಿದೆ.

ಭಾನು ನಾಗರಾಜ್‌

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ರಾತ್ರಿ ಝಗಮಗಿಸುವ ದೀಪಗಳಿಂದ ಮಿಂಚುವ ಸೇತುವೆಯ ವೈಭವ ಒಂದೆಡೆಯಾದರೆ, ಮುಸ್ಸಂಜೆಯಲ್ಲಿ ಮುಳುಗುವ ಸೂರ್ಯನ ಕಿರಣಗಳಿಗೆ ಬರುವ ಹೊಸ ವರ್ಣದ ಕಳೆಯನ್ನು ನೋಡಿ ಖುಷಿಪಡಲೆಂದೇ...

  • 70 ಲಕ್ಷ ವರ್ಷಗಳ ಹಿಂದೆ ಬದುಕಿದ್ದ ಆಮೆಯ ಪಳೆಯುಳಿಕೆಯನ್ನು ವಿಜ್ಞಾನಿಗಳು ಸಂಶೋಧಿಸಿದ್ದಾರೆ. ಅದು ಕಾರಿನಷ್ಟು ಗಾತ್ರವನ್ನು ಹೊಂದಿದೆ! ಇಂದು ನಾವು ನೋಡುತ್ತಿರುವ...

  • ಮೇಜಿನ ಮೇಲೆ ಒಂದು ಖಾಲಿ ಬಾಟಲ್ ಮತ್ತು ಒಂದು ಹಗ್ಗದ ತುಂಡನ್ನು ಇಟ್ಟಿದೆ. ಜಾದೂಗಾರನ ಸವಾಲೇನೆಂದರೆ ಆ ಹಗ್ಗದಿಂದ ಬಾಟಲನ್ನು ಎತ್ತಬೇಕು. ಇದೇನು ಮಹಾ? ಹಗ್ಗವನ್ನು...

  • ಪ್ರಮುಖ ವ್ಯಕ್ತಿಗಳ ಪರಿಚಯವನ್ನು ಕೇವಲ ಹತ್ತೇ ಹತ್ತು ಪಾಯಿಂಟ್‌ಗಳಲ್ಲಿ ಕಟ್ಟಿ ಕೊಡುವ ಪ್ರಯತ್ನವಿದು... 1. ವನ್ಯಜೀವಿ ತಜ್ಞ ಸ್ಟೀವ್‌ ಇರ್ವಿನ್‌ 1962ರ ಫೆಬ್ರವರಿ...

  • ಗೊಗ್ಗಯ್ಯನ ಮೂಗು ಬೆಳೆಯುತ್ತಾ ಹೋಯಿತು. ಅದನ್ನು ಹೊತ್ತುಕೊಂಡು ತಿರುಗಾಡುವುದೇ ಕಷ್ಟವಾಗತೊಡಗಿತು. ಕಡೆಗೊಂದು ದಿನ ಅದಕ್ಕೆ ಪರಿಹಾರವೂ ಸಿಕ್ಕಿತು. ಆ ಹುಡುಗ...

ಹೊಸ ಸೇರ್ಪಡೆ