ಟೆನ್ ಟೆನ್ ಟೆನ್

ಹತ್ತು ಪಾಯಿಂಟ್‌ಗಳಲ್ಲಿ ವ್ಯಕ್ತಿ ಪರಿಚಯ!

Team Udayavani, Sep 26, 2019, 5:24 AM IST

ಪ್ರಮುಖ ವ್ಯಕ್ತಿಗಳ ಪರಿಚಯವನ್ನು ಕೇವಲ ಹತ್ತೇ ಹತ್ತು ಪಾಯಿಂಟ್‌ಗಳಲ್ಲಿ ಕಟ್ಟಿ ಕೊಡುವ ಪ್ರಯತ್ನವಿದು…

1. ಹುಚ್ಚುನಾಯಿ ಕಡಿತದಿಂದ ಉಂಟಾಗುವ ರೇಬೀಸ್‌ ಕಾಯಿಲೆಗೆ ಲಸಿಕೆ ಕಂಡುಹಿಡಿದ ವಿಜ್ಞಾನಿ ಲೂಯಿಸ್‌ ಪಾಶ್ಚರ್‌ ಹುಟ್ಟಿದ್ದು ಫ್ರಾನ್ಸ್‌ನಲ್ಲಿ.
2. ಸೂಕ್ಷ್ಮ ಜೀವ ವಿಜ್ಞಾನ (ಮೈಕ್ರೋಬಯಾಲಜಿ)ದ ಪಿತಾಮಹ ಎಂದು ಆವರನ್ನು ಕರೆಯುತ್ತಾರೆ.
3. ಸಣ್ಣವನಿದ್ದಾಗ ಲೂಯಿಸ್‌ಗೆ ಚಿತ್ರಕಲೆಯಲ್ಲಿ ಬಹಳ ಆಸಕ್ತಿಯಿತ್ತು. 15ನೇ ವಯಸ್ಸಿನಲ್ಲಿ ಆವರು ಬಿಡಿಸಿದ್ದ ಚಿತ್ರಗಳು ಈಗ ಪ್ಯಾರಿಸ್‌ನ ಮ್ಯೂಸಿಯಂನಲ್ಲಿವೆ.
4. 26ನೇ ವಯಸ್ಸಿನಲ್ಲಿ ಮೇರಿ ಲಾರೆಂಟ್‌ ಎಂಬಾಕೆಯನ್ನು ಲೂಯಿಸ್‌ ಮದುವೆಯಾದರು. ದುರದೃಷ್ಟವಶಾತ್‌ ಅವರ ಐವರು ಮಕ್ಕಳಲ್ಲಿ, ಮೂವರು ಟೈಫಾಯ್ಡನಿಂದ ತೀರಿಕೊಂಡರು.
5. ಪಾಶ್ಚರೀಕರಣ ಪ್ರಕ್ರಿಯೆ ಮೂಲಕ ಹಾಲನ್ನು ಸಂರಕ್ಷಿಸುವ ವಿಧಾನವನ್ನು ಅವರು ಕಂಡು ಹಿಡಿದರು. ಪಾಶ್ಚರೀಕರಣದಲ್ಲಿ ಹಾಲನ್ನು 60 ರಿಂದ 100 ಡಿಗ್ರಿ ಸೆ. ನಡುವಿನ ತಾಪಮಾನದಲ್ಲಿ ಬಿಸಿ ಮಾಡಿ, ಸೂಕ್ಷ್ಮ ಜೀವಿಗಳನ್ನು ಕೊಲ್ಲಲಾಗುತ್ತದೆ.
6. ಈ ವಿಧಾನವನ್ನು ಮೊದಲ ಬಾರಿಗೆ, ಫ್ರೆಂಚ್‌ ವೈನ್‌ ಕಾರ್ಖಾನೆಯಲ್ಲಿ ಬಳಸಲಾಯ್ತು. ಈಗಲೂ ಪಾಶ್ಚರೀಕರಣವನ್ನು ಡೇರಿ ಮತ್ತು ಇತರೆ ಆಹಾರ ಸಂರಕ್ಷಣೆಯಲ್ಲಿ ಬಳಸಲಾಗುತ್ತದೆ.
7. ಆಂಥ್ರಾಕ್ಸ್‌, ರೇಬಿಸ್‌ ಮುಂತಾದ ಕಾಯಿಲೆಗಳಿಗೆ ಲಸಿಕೆ ಕಂಡುಹಿಡಿದ ಶ್ರೇಯ ಕೂಡಾ ಲೂಯಿಸ್‌ಗೆ ಸಲ್ಲುತ್ತದೆ.
8. ಆಂಥ್ರಾಕ್ಸ್‌ಗೆ ಲಸಿಕೆ ಕಂಡು ಹಿಡಿದಿದ್ದು ಫ್ರೆಂಚ್‌ ಪಶುವೈದ್ಯ ಜೀನ್‌ ಜೋಸೆಫ್ ಹೆನ್ರಿ ಟೌಸೆಂಟ್‌ ಎಂದೂ, ಅದರ ಶ್ರೇಯ ಲೂಯಿಸ್‌ಗೆ ಸಿಕ್ಕಿತೆಂದೂ ಹೇಳುವರು.
9. ಸಾಂಕ್ರಾಮಿಕ ರೋಗಗಳ ಕುರಿತಾದ ಸಂಶೋಧನೆಗಾಗಿ ಅವರು 1887ರಲ್ಲಿ ಪಾಶ್ಚರ್‌ ಇನ್‌ಸ್ಟಿಟ್ಯೂಟ್‌ ಅನ್ನು ಪ್ರಾರಂಭಿಸಿದರು.
10. ರೋಗ ಹರಡುವ ಭಯದಲ್ಲಿ ಲೂಯಿಸ್‌ ಯಾರೊಂದಿಗೂ ಹಸ್ತಲಾಘವ ಮಾಡುತ್ತಿರಲಿಲ್ಲವಂತೆ!

ಸಂಗ್ರಹ: ಪ್ರಿಯಾಂಕ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಮಂದರ ಪರ್ವತ ಸಾಲಿನಲ್ಲಿದ್ದ ಬುಡದ ಬಂಡೆಗಳ ನಡುವೆ ಹತ್ತಾರು ಕರಡಿಗಳು ವಾಸವಾಗಿದ್ದವು. ಒಂದು ದಿನ ತನ್ನ ಪರಿವಾರದೊಂದಿಗೆ ಹೊರಟ ಮರಿ ಕರಡಿ ಆಕಸ್ಮಿಕವಾಗಿ ಗುಂಪಿನಿಂದ...

  • ಕಳೆದ ವರ್ಷ ಹವಾಯಿಯಲ್ಲಿ ಸ್ಫೋಟಿಸಿದ ಜ್ವಾಲಾಮುಖೀಯಿಂದ ಅಚ್ಚರಿಯ ಬೆಳವಣಿಗೆಗಳು ಘಟಿಸಿದ್ದವು. ಲಾವಾ ರಸ ಚಿಮ್ಮಿ ದಾರಿಯಲ್ಲಿ ಸಿಕ್ಕದ್ದೆಲ್ಲವನ್ನೂ ಆಹುತಿ...

  • ವಿಜ್ಞಾನಿಗಳು, ಕ್ರಿಯಾಶೀಲ ವ್ಯಕ್ತಿಗಳು ವಿಭಿನ್ನ ಸ್ವಭಾವವನ್ನು ಹೊಂದಿರುತ್ತಾರೆ ಎಂಬ ಮಾತಿದೆ. ಐನ್‌ಸ್ಟಿನ್‌ ಅದಕ್ಕೆ ಹೊರತಾಗಿರಲಿಲ್ಲ. ಆದರೆ ಒಂದು ದಿನ...

  • ಜಾದೂಗಾರ ಇಸ್ಪೀಟ್‌ ಕಾರ್ಡ್‌ ಪ್ಯಾಕಿನಿಂದ ಹತ್ತು ಕಾರ್ಡುಗಳನ್ನು ಎಣಿಸಿ ತೆಗೆಯುತ್ತಾನೆ. ಹತ್ತು ಜನ ಪ್ರೇಕ್ಷಕರನ್ನು ಆರಿಸಿಕೊಂಡು ಆ ಕಾರ್ಡುಗಳನ್ನು ತೋರಿಸಿ...

  • ಚಿಂದಿ ಆಯುತ್ತಿದ್ದ ಪಚ್ಚಿಗೆ ಜಾದೂ ವಿಮಾನ ಸಿಕ್ಕಿತ್ತು. ಅದು ಅವನನ್ನು ಎಲ್ಲೆಲ್ಲಿಗೆ ಕೊಂಡೊಯ್ಯಿತು ಗೊತ್ತಾ? ಚಿಂದಿ ಆಯುವ ಬಾಲಕ ಪಚ್ಚಿ ಒಂದು ಶಾಲೆಯ ಗೇಟಿನ...

ಹೊಸ ಸೇರ್ಪಡೆ