ಹರಿಯದ ನೋಟು

Team Udayavani, Jun 28, 2018, 6:00 AM IST

e-1.jpg

ಪೆನ್ಸಿಲ್‌ ತೆಗೆದುಕೊಂಡು, ಹಾಳೆಗೆ ಚುಚ್ಚಿದರೆ ಏನಾಗುತ್ತದೆ? ಹಾಳೆ ತೂತಾಗುತ್ತದೆ. ಅದೇ ಪೆನ್ಸಿಲ್‌ನಿಂದ ನೋಟಿಗೆ (ಕರೆನ್ಸಿ ನೋಟು) ಚುಚ್ಚಿದರೆ ಏನಾಗುತ್ತೆ? ಅದೂ ಕೂಡಾ ತೂತಾಗುತ್ತೆ ಅನ್ನೋದು ಸಾಮಾನ್ಯವಾಗಿ ಎಲ್ಲರೂ ಕೊಡುವ ಉತ್ತರ. ಆದರೆ ಏನೂ ಆಗುವುದಿಲ್ಲ ಎಂದು ನಾವು ಹೇಳುತ್ತಿದ್ದೇವೆ. ಆಶ್ಚರ್ಯ ಆಗುತ್ತಿದೆ ಇಲ್ವಾ? ಅದೇ ಈ ಮ್ಯಾಜಿಕ್‌ ಸ್ವಾರಸ್ಯ. 

ಬೇಕಾಗುವ ವಸ್ತು: ವಿದೇಶಿ ನೋಟು(ಆಟವಾಡಲು ಬಳಸುವ ಡಮ್ಮಿ ಕರೆನ್ಸಿ), ಪೆನ್ಸಿಲ್‌ ಹಾಗೂ ಪೇಪರ್‌/ ಹಾಳೆ. 

ಪ್ರದರ್ಶನ: ನೋಟಿನ ಮೇಲೆ ತೂತು ಮಾಡಬೇಕಾಗಿರುವುದರಿಂದ ಈ ಮ್ಯಾಜಿಕ್‌ಗೆ ನಿಜವಾದ ಭಾರತೀಯ ನೋಟನ್ನು ಬಳಸಬಾರದು. ಅದರ ಬದಲಾಗಿ ಫ್ಯಾನ್ಸಿ ಸ್ಟೋರುಗಳಲ್ಲಿ ದೊರೆಯುವ ಆಟದ ವಿದೇಶಿ ನೋಟನ್ನು ಬಳಸಬಹುದು. ಜಾದೂಗಾರನ ಕೈಯಲ್ಲಿ ಒಂದು ನೋಟು ಹಾಗೂ ನೋಟಿಗಿಂತ ಸ್ವಲ್ಪ ದೊಡ್ಡದಾದ ಒಂದು ಪೇಪರ್‌ ಇದೆ. ಆತ, ನೋಟನ್ನು ಪ್ರೇಕ್ಷಕರಿಗೆ ತೋರಿಸುತ್ತಾ, ಅದನ್ನು ಪೇಪರ್‌ನೊಳಗೆ ಇಟ್ಟು (ಪರ್ಸ್‌ನಲ್ಲಿ ನೋಟುಗಳನ್ನು ಒಂದರ ಮೇಲೆ ಒಂದು ಇಡುವಂತೆ) ಅದನ್ನು ಒಂದು ಬಾರಿ ಮಡಚುತ್ತಾನೆ. ನಂತರ ಚೂಪಾದ ಪೆನ್ಸಿಲ್‌ ತೆಗೆದುಕೊಂಡು, ಪೇಪರ್‌ ಹಾಗೂ ನೋಟನ್ನು ಸೇರಿಸಿ ಒಳಗಿನಿಂದ ಚುಚ್ಚುತ್ತಾನೆ. ಪೇಪರ್‌ ಹಾಗೂ ನೋಟನ್ನು ಛೇದಿಸಿಕೊಂಡು ಪೆನ್ಸಿಲ್‌ ಹೊರಕ್ಕೆ ಬರುತ್ತದೆ. ನಂತರ ಪೆನ್ಸಿಲ್‌ ಅನ್ನು ಹೊರಕ್ಕೆ ತೆಗೆದು, ಪೇಪರ್‌ ಹಾಗೂ ನೋಟನ್ನು ಬೇರೆ ಬೇರೆ ಮಾಡಿ ತೋರಿಸುತ್ತಾನೆ. ಪೆನ್ಸಿಲ್‌ನಿಂದ ಚುಚ್ಚಲ್ಪಟ್ಟ ಪೇಪರ್‌ಗೆ ರಂಧ್ರವಾಗಿರುತ್ತದೆ. ಆದರೆ, ನೋಟಿಗೆ ಯಾವುದೇ ತೊಂದರೆಯಾಗಿರುವುದಿಲ್ಲ.
  
ತಯಾರಿ: ನೀವು ತೆಗೆದುಕೊಳ್ಳುವ ನೋಟನ್ನು ಚಿತ್ರದಲ್ಲಿ ತೋರಿಸಿರುವಂತೆ ಮಧ್ಯದಲ್ಲಿ ಒಂದಿಂಚು ಉದ್ದ ಕತ್ತರಿಸಬೇಕು. ನಂತರ ನೋಟನ್ನು, ಪೇಪರ್‌ನೊಳಗೆ ಇಟ್ಟು ಮಡಚಿರಿ. ಈಗ ನೋಟಿನಲ್ಲಿ ಕೊರೆದ ರಂಧ್ರದ ಒಳಗಿನಿಂದ ಪೆನ್ಸಿಲ್‌ ತೂರಿಸಿ. ಅಲ್ಲಿಂದ ತೂರಿ ಬಂದ ಪೆನ್ಸಿಲ್‌, ಪೇಪರ್‌ ಅನ್ನು ಛೇದಿಸಿ ಹೊರಕ್ಕೆ ಬರುತ್ತದೆ. ಕೊನೆಗೆ, ಪೇಪರ್‌ ಹಾಗೂ ನೋಟನ್ನು ಪ್ರೇಕ್ಷಕರಿಗೆ ತೋರಿಸುವಾಗ, ಪೇಪರ್‌ ಮೇಲಿನ ರಂಧ್ರ ಕಾಣಿಸುತ್ತದೆ. ಆದರೆ, ನೋಟಿನ ಮೇಲೆ ನೀವು ಮೊದಲೇ ಮಾಡಿದ್ದ ಕತ್ತರಿ ಕೆಲಸ ಯಾರಿಗೂ ಕಾಣಿಸುವುದಿಲ್ಲ. ಪೆನ್ಸಿಲ್‌ಅನ್ನು ನೋಟಿನ ರಂಧ್ರದೊಳಗೆ ತೂರಿಸುವಾಗ, ಜಾಗೃತೆ ವಹಿಸಿ.

ವಿನ್ಸೆಂಟ್‌ ಲೋಬೋ

ಟಾಪ್ ನ್ಯೂಸ್

Council-horatti

Council: ಸದನದಲ್ಲಿ ಮುಡಾ ಗಲಾಟೆ: ಇಕ್ಕಟ್ಟಿಗೆ ಸಿಲುಕಿದ ಸಭಾಪತಿ

Budget ಕೇಂದ್ರ Vs ವಿಪಕ್ಷ ಬಜೆಟಾಪಟಿ; ಸಂಸತ್‌ನ ಒಳಗೂ ಹೊರಗೂ ಐಎನ್‌ಡಿಐಎ ಮಿತ್ರಕೂಟ ಹೋರಾಟ

Budget ಕೇಂದ್ರ Vs ವಿಪಕ್ಷ ಬಜೆಟಾಪಟಿ; ಸಂಸತ್‌ನ ಒಳಗೂ ಹೊರಗೂ ಐಎನ್‌ಡಿಐಎ ಮಿತ್ರಕೂಟ ಹೋರಾಟ

Government ವಿಪಕ್ಷ ಮುಡಾ ಫೈಟ್‌: ಚರ್ಚೆಗೆ ಆಗ್ರಹಿಸಿ ಉಭಯ ಸದನಗಳಲ್ಲಿ ಕದನ

Government ವಿಪಕ್ಷ ಮುಡಾ ಫೈಟ್‌: ಚರ್ಚೆಗೆ ಆಗ್ರಹಿಸಿ ಉಭಯ ಸದನಗಳಲ್ಲಿ ಕದನ

World’s Most Powerful Passports: 82ನೇ ಸ್ಥಾನಕ್ಕೇರಿದ ಭಾರತ

World’s Most Powerful Passports: 82ನೇ ಸ್ಥಾನಕ್ಕೇರಿದ ಭಾರತ

Heavy-Rain

Heavy Rain: ಉತ್ತರ ಕರ್ನಾಟಕದಲ್ಲಿ ಮತ್ತೆ ನೆರೆ ಭೀತಿ

fetosd

Karnataka: ರಾಜ್ಯದಲ್ಲಿ ಮತ್ತಷ್ಟು ಭ್ರೂಣಹತ್ಯೆ ಪ್ರಕರಣ ಆತಂಕಕಾರಿ

M.Bhandary

Union Budget: ರಾಜಕೀಯ ದೃಷ್ಟಿಕೋನದ ಬಜೆಟ್‌: ಮಂಜುನಾಥ ಭಂಡಾರಿ ಕಿಡಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

udayavani youtube

ಅಘನಾಶಿನಿ ಆರ್ಭಟ

udayavani youtube

ತಾನು ಪ್ರವಾಸಿಸಿದ ಊರಿನ ಹೆಸರುಗಳನ್ನೆಲ್ಲ ನೆನಪಿಸಿಕೊಂಡ ಡಾ. ರಾಜ್‌ಕುಮಾರ್

ಹೊಸ ಸೇರ್ಪಡೆ

Council-horatti

Council: ಸದನದಲ್ಲಿ ಮುಡಾ ಗಲಾಟೆ: ಇಕ್ಕಟ್ಟಿಗೆ ಸಿಲುಕಿದ ಸಭಾಪತಿ

Budget ಕೇಂದ್ರ Vs ವಿಪಕ್ಷ ಬಜೆಟಾಪಟಿ; ಸಂಸತ್‌ನ ಒಳಗೂ ಹೊರಗೂ ಐಎನ್‌ಡಿಐಎ ಮಿತ್ರಕೂಟ ಹೋರಾಟ

Budget ಕೇಂದ್ರ Vs ವಿಪಕ್ಷ ಬಜೆಟಾಪಟಿ; ಸಂಸತ್‌ನ ಒಳಗೂ ಹೊರಗೂ ಐಎನ್‌ಡಿಐಎ ಮಿತ್ರಕೂಟ ಹೋರಾಟ

Government ವಿಪಕ್ಷ ಮುಡಾ ಫೈಟ್‌: ಚರ್ಚೆಗೆ ಆಗ್ರಹಿಸಿ ಉಭಯ ಸದನಗಳಲ್ಲಿ ಕದನ

Government ವಿಪಕ್ಷ ಮುಡಾ ಫೈಟ್‌: ಚರ್ಚೆಗೆ ಆಗ್ರಹಿಸಿ ಉಭಯ ಸದನಗಳಲ್ಲಿ ಕದನ

World’s Most Powerful Passports: 82ನೇ ಸ್ಥಾನಕ್ಕೇರಿದ ಭಾರತ

World’s Most Powerful Passports: 82ನೇ ಸ್ಥಾನಕ್ಕೇರಿದ ಭಾರತ

Heavy-Rain

Heavy Rain: ಉತ್ತರ ಕರ್ನಾಟಕದಲ್ಲಿ ಮತ್ತೆ ನೆರೆ ಭೀತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.