ಅಂತರಿಕ್ಷದ ಭಯೋತ್ಪಾದಕ!

ಭೂಮಿಯ ಸಮೀಪದಲ್ಲಿ ಕ್ಷುದ್ರಗ್ರಹ! 250- 969 ಮೀಟರ್‌ ಸುತ್ತಳತೆ

Team Udayavani, Aug 29, 2019, 5:42 AM IST

ಡೈನೋಸಾರ್‌ಗಳು ಭೂಮಿ ಮೇಲಿಂದ ಹೇಗೆ ನಶಿಸಿದವು ಹೇಳಿ. ಅದಕ್ಕೆ ಖಚಿತ ಕಾರಣ ಈವರೆಗೆ ಪತ್ತೆ ಹಚ್ಚಿಲ್ಲ. ಈ ಬಗ್ಗೆ ಅನೇಕ ಸಿದ್ಧಾಂತಗಳಿವೆ. ಅವುಗಳಲ್ಲಿ ಜನಪ್ರಿಯವಾದ ಸಿದ್ಧಾಂತ ಎಂದರೆ ಕ್ಷುದ್ರಗ್ರಹವೊಂದು ಭೂಮಿಗೆ ಬಡಿದು ಅದರಿಂದ ಸೃಷ್ಟಿಯಾದ ಪ್ರಳಯಕ್ಕೆ ಡೈನೋಸಾರ್‌ಗಳು ಬಲಿಯಾದವು ಎನ್ನುವುದು. ಈ ವಿಚಾರ ಈಗ ಯಾಕೆ ಬಂತೆಂದರೆ ಜಗತ್ತಿನ ಅತಿ ದೊಡ್ಡ ಕಟ್ಟಡ ಎಂಬ ಖ್ಯಾತಿಯ ಭುರ್ಜ್‌ ಖಲೀಫಾಗಿಂತ ಒಂಚೂರು ಕಡಿಮೆ ಎತ್ತರದ ಆಕಾಶಕಾಯವೊಂದು ಭೂಮಿಯತ್ತ ಬರುತ್ತಿದೆ. ಆದರೆ ಭಯ ಬೇಡ ಅದೇನು ಭೂಮಿಗೆ ಅಪ್ಪಳಿಸುವುದಿಲ್ಲ. ಭೂಮಿಯ ಸಮೀಪದಲ್ಲಿ ಹಾದು ಹೋಗುತ್ತದಷ್ಟೆ. ಈ ಕ್ಷುದ್ರಗ್ರಹಕ್ಕೆ “2000QW7′ ಎಂದು ನಾಮಕರಣ ಮಾಡಲಾಗಿದೆ.

ಎಷ್ಟು ಹತ್ತಿರ ಬರುತ್ತಿದೆ?
ಭೂಮಿಯ ಹತ್ತಿರ ಬರಲಿದೆ ಎಂದಾಕ್ಷಣ ನೂರಿನ್ನೂರು ಕಿ.ಮೀ ದೂರ ಎಂದುಕೊಳ್ಳಬೇಡಿ. 30 ಲಕ್ಷ ಮೈಲಿಗಳಷ್ಟು ದೂರದಲ್ಲೇ ಅದು ಹಾದು ಹೋಗಲಿದೆ. ಅಯ್ಯೋ ಲಕ್ಷ ಮೈಲಿಯಷ್ಟು ದೂರದವರೆಗೆ ಬಂದು ಟಾಟಾ ಬೈಬೈ ಹೇಳುವ ಕಲ್ಲೊಂದಕ್ಕೆ ಯಾಕಿಷ್ಟು ಆತಂಕ ಎಂದುಕೊಳ್ಳಬೇಡಿ. ಎಕೆಂದರೆ ಸುಮಾರು 40 ಲಕ್ಷ ಮೈಲಿಗಳ ಅಂತರದ ಒಳಗೆ ಹಾದು ಹೋಗುವ ಯಾವುದೇ ಆಕಾಶಕಾಯವನ್ನು ಬಾಹ್ಯಾಕಾಶ ಸಂಸ್ಥೆಗಳು “ಅಪಾಯಕಾರಿ’ ಎಂದು ಪರಿಗಣಿಸುತ್ತವೆ. ಈ ಕ್ಷುದ್ರಗ್ರಹ ಆಪಾಯಕಾರಿ ವಲಯದೊಳಗೆ ಬಂದರೂ, ಭೂಮಿಗೆ ಗಂಡಾಂತರ ತರುವ ಆಕಾಶಕಾಯಗಳ ಪಟ್ಟಿ ಉದ್ದವಿದೆ. ಆದರಲ್ಲಿ 2000ಕಿಗ7 ಇಲ್ಲ!

ಇದೇ ಮೊದಲಲ್ಲ
ಗಂಟೆಗೆ 23,100 ಕಿ.ಮೀ ವೇಗದಲ್ಲಿ ಇದು ಚಲಿಸುತ್ತಿದೆ. ಈ ಹಿಂದೆಯೂ 2000ಕಿಗ7 ಕ್ಷುದ್ರಗ್ರಹ ಭೂಮಿಯ ಸಮೀಪದಲ್ಲಿ ಹಾದು ಹೋಗಿತ್ತು. ಅದು ಸೆಪ್ಟೆಂಬರ್‌ 1, 2000 ನೇ ಇಸವಿಯಲ್ಲಿ. ಈ ಬಾರಿಯೂ ಸೆಪ್ಟೆಂಬರ್‌ 1ರಂದೇ ಭೂಮಿಯನ್ನು ಹಾದು ಹೋಗಲಿದೆ. ಅದರ ಮುಂದಿನ ಭೇಟಿ ಅಕ್ಟೋಬರ್‌ 19, 2038ನೇ ಇಸವಿಗೆ.

ಕ್ಷುದ್ರಗ್ರಹ ಮತ್ತು ಉಲ್ಕೆಗಳು
ಕ್ಷುದ್ರಗ್ರಹ ಎಂದರೆ, ಗ್ರಹಗಳಂತೆಯೇ ಸೂರ್ಯನನ್ನು ಸುತ್ತು ಹಾಕುವ ಕಲ್ಲಿನ ತುಣುಕು. ಯಾವ ರೀತಿ ಸೌರಮಂಡಲದ ಪ್ರತಿಯೊಂದು ಗ್ರಹಗಳಿಗೆ ಅದರದ್ದೇ ಆದ ಪಧ ಇದೆಯೋ ಅದೇ ರೀತಿ ಕ್ಷುದ್ರಗ್ರಹಗಳಿಗೂ ಅದರದ್ದೇ ಆದ ಪಥ ಇರುತ್ತದೆ. ಕ್ಷುದ್ರಗ್ರಹಗಳು, ಸಾಮಾನ್ಯವಾಗಿ ಮಂಗಳ ಮತ್ತು ಗುರು ಗ್ರಹದ ಪಥದಲ್ಲಿ ಇವು ಕಂಡುಬರುತ್ತವೆ. ಎರಡು ಕ್ಷುದ್ರಗ್ರಹಗಳು ಒಂದಕ್ಕೊಂದು ಢಿಕ್ಕಿ ಹೊಡೆದಾಗ ಸಿಡಿಯುವ ಚೂರುಗಳೇ ಉಲ್ಕೆಗಳು. ಪ್ರತಿನಿತ್ಯ ಚಿಕ್ಕ ಗಾತ್ರದ ಉಲ್ಕೆಗಳು ಭೂಮಿಗೆ ಬೀಳುತ್ತಲೇ ಇರುತ್ತವೆ. ಆದರೆ, ಇವು ಭೂಮಿಯ ವಾತಾವರಣವನ್ನು ಪ್ರವೇಶಿಸುವ ಮುನ್ನವೇ ಉರಿದು ನಾಶವಾಗುತ್ತವೆ. ಕ್ಷುದ್ರಗ್ರಹಗಳ ಉಗಮ ಸೌರಮಂಡಲದ ಉಗಮದ ಸಮಯದಲ್ಲೇ ಆಗಿತ್ತು.

ಹರ್ಷ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಡೈನೋಸಾರ್‌ ಅಂದಾಕ್ಷ ಣ ಕಣ್ಣ ಮುಂದೆ ಬರುವುದು ದೈತ್ಯಾಕಾರದ ಪ್ರಾಣಿ. ಇದು ಬದುಕಿತ್ತ? ಬದುಕಿದ್ದರೆ ಯಾವಾಗ? ಹೇಗೆ ಅಂತೆಲ್ಲ ಕುತೂಹಲ ಹುಟ್ಟುತ್ತದೆ. ಇದನ್ನು ತಣಿಸಲೆಂದೇ...

  • ಪ್ರಪಂಚದಲ್ಲಿ ಎಷ್ಟು ಭೂಖಂಡಗಳಿವೆ ಎಂದು ಕೇಳಿದರೆ ಯಾರು ಬೇಕಾದರೂ "ಏಳು' ಎಂಬ ಉತ್ತರವನ್ನು ನೀಡುತ್ತಾರೆ. ಭೂಗೋಳ, ನಕಾಶೆ ಪುಸ್ತಕವನ್ನು ನೋಡಿದರೆ ಈ 7 ಖಂಡಗಳು ಭೂಮಿಯ...

  • ಪ್ರಮುಖ ವ್ಯಕ್ತಿಗಳ ಪರಿಚಯವನ್ನು ಕೇವಲ ಹತ್ತೇ ಹತ್ತು ಪಾಯಿಂಟ್‌ಗಳಲ್ಲಿ ಕಟ್ಟಿ ಕೊಡುವ ಪ್ರಯತ್ನವಿದು... 1. ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ)ಯ ಈಗಿನ ಅಧ್ಯಕ್ಷ,...

  • ನೀವು ಗಮನಿಸಿರಬಹುದು. ಈ ಜಾದೂಗಾರ ಅಂದಾಕ್ಷಣ ಕಣ್ಣ ಮುಂದೆ ಬರುವ ಚಿತ್ರ ಕೈಯಲ್ಲೊಂದಷ್ಟು ಇಸ್ಪೀಟ್‌ ಕಾರ್ಡ್‌ಗಳು. ಹೌದು, ಇದು ಜಾದುವಿನ ಚುಂಬಕ ಚಿಹ್ನೆ. ಕಾಲಿ...

  • ಕಾಡಿನ ನಡುವೆ ವನರಾಜ ಸಿಂಹದ ನೇತೃತ್ವದಲ್ಲಿ ಪ್ರಾಣಿಗಳ ಸಭೆ ನಡೆಯುತ್ತಿತ್ತು. ಜಿಂಕೆ "ಇತ್ತೀಚೆಗೆ ಬೇಟೆಗಾರನ ಉಪಟಳ ವಿಪರೀತವಾಗುತ್ತಿದೆ. ಇದು ಹೀಗೆ ಮುಂದುವರಿದರೆ...

ಹೊಸ ಸೇರ್ಪಡೆ