Udayavni Special

ಮಾಯಾ ಕಾಡು


Team Udayavani, Jun 13, 2019, 5:00 AM IST

t-6

ರಾತ್ರಿ ಎನೋ ಸದ್ದಾದಂತಾಗಿ ಸಿಂಚನಾಳಿಗೆ ಎಚ್ಚರವಾಯಿತು. ಗೋಡೆ ಬಳಿ ಬಂದು ನೋಡಿದರೆ ಅವರು ಬಿಡಿಸಿದ್ದ ಚಿತ್ರ ನಿಜವಾದ ಕಾಡಾಗಿ ಬದಲಾಗಿತ್ತು. ಮೂವರೂ ಕಾಡಿನೊಳಗೆ ಹೊಕ್ಕರು. ಕಾಡಿನ ದೇವತೆ ಪ್ರತ್ಯಕ್ಷಳಾಗಿ “ನೀವು ಪರಿಸರಪ್ರೇಮಿಗಳಾಗಿದ್ದರಿಂದ ನನಗೆ ನಿಮ್ಮನ್ನು ಕಂಡರೆ ಇಷ್ಟ’ ಎಂದಳು. ಅವರಿಗೆ ಕೈಪಟ್ಟಿಯೊಂದನ್ನು ನೀಡಿ “ಇನ್ನು ಮುಂದೆ ನೀವು ಒಳಗೆ ಬರುವಾಗ ಇದನ್ನು ಕೈಗೆ ಕಟ್ಟಿಕೊಂಡು ಬನ್ನಿ. ಆಗ ಕಾಡಿನಲ್ಲಿ ನಿಮಗೆ ಯಾವುದೇ ತರಹದ ಅಪಾಯ ಆಗುವುದಿಲ್ಲ’ ಎಂದು ಭರವಸೆ ಕೊಟ್ಟಳು.

ಸಿಂಚನಾ ಒಬ್ಬಳು ಪುಟ್ಟ ಹುಡುಗಿ. ತುಂಬಾ ಜಾಣೆ. ತಿಳಿಸಿ ಹೇಳಿದರೆ ಅರ್ಥ ಮಾಡಿಕೊಳ್ಳುವ ಸ್ವಭಾವ. ಅವಳಿಗೆ ಮರಗಿಡಗಳು , ಪ್ರಾಣಿ ಪಕ್ಷಿಗಳೆಂದರೆ ಪಂಚಪ್ರಾಣ. ಅವರ ಮನೆಯಲ್ಲಿ ಇದ್ದ ಇಣಚಿ ರಾಮು ಹಾಗೂ ನಾಯಿ ಸೋಮು ಅವಳ ಸಂಗಾತಿಗಳಾಗಿದ್ದರು. ಉಳಿದ ಮಕ್ಕಳಂತೆ ಟಿ.ವಿ, ಮೊಬೈಲ್‌ ಜತೆ ಕಾಲವನ್ನು ಹಾಳು ಮಾಡುತ್ತಿರಲಿಲ್ಲ. ಅವಳ ಸ್ನೇಹಿತೆಯರೆಲ್ಲಾ ಕಾರ್ಟೂನ್‌ ನೋಡುತ್ತಿದ್ದರೆ, ಇವಳು ಮಾತ್ರ ಹೂವಿನ ಗಿಡ, ತರಕಾರಿ ಗಿಡಗಳನ್ನು ಬೆಳೆಸುವುದು, ಪ್ರಾಣಿಪಕ್ಷಿಗಳಿಗೆ ನೀರು ಕೊಡುವುದು ಮುಂತಾದ ಕೆಲಸಗಳಲ್ಲಿ ತೊಡಗುತ್ತಿದ್ದಳು.

ಶಾಲೆ ರಜಾ ಬಂತೆಂದರೆ ಪರಿಸರದ ಮಧ್ಯದಲ್ಲೇ ಕಾಲ ಕಳೆಯುತಿದ್ದಳು. ದಿನ ಬೆಳಿಗ್ಗೆ ಎದ್ದು ಮುಖ ತೊಳೆದು ದೇವರಿಗೆ ಕೈಮುಗಿದು, ದೇವರ ಪೂಜೆಗೆ ಹೂಗಳನ್ನು ಕೊಯ್ದ ನಂತರವೇ ತಿಂಡಿ ತಿನ್ನುತ್ತಿದ್ದಳು. ಕಿಟ್ಟಿ ಪಕ್ಕದ ಮನೆಯ ಹುಡುಗ. ಆಗಾಗ ಸಿಂಚನಾಳ ಮನೆಗೆ ಆಡೋಕೆ ಬರುತಿದ್ದ. ಇಬ್ಬರೂ ಸೇರಿ ಬಣ್ಣಬಣ್ಣದ ಚಿತ್ರಗಳನ್ನು ಬಿಡಿಸುತ್ತಿದ್ದರು, ಕಣ್ಣಾಮುಚ್ಚಾಲೆ, ಕುಂಟಾಟ ಆಟಗಳನ್ನು ಆಡುತಿದ್ದರು. ಒಂದು ದಿನ ಸಿಂಚನಾ ಹಾಗೂ ಕಿಟ್ಟಿಯ ನಡುವೆ ಜಗಳವಾಯಿತು. ಕಿಟ್ಟಿ ಸಿಟ್ಟಿನಿಂದ ಅವಳ ಮನೆಯಿಂದ ಹೋಗುವಾಗ ಅವಳು ಬೆಳೆಸಿದ್ದ ಗಿಡಗಳನ್ನು ಕಿತ್ತುಹಾಕಿದ. ಇದರಿಂದ ಸಿಂಚನಾಳಿಗೆ ತುಂಬಾ ದುಃಖವಾಯಿತು.

ರಾಮು, ಸೋಮು ಕೂಡ ಬೇಸರಿಸಿಕೊಂಡು ಸಿಂಚನಾಳ ಜೊತೆ ಮಂಕಾಗಿ ಕುಳಿತಿದ್ದವು. ಕೆಲ ಸಮಯದ ನಂತರ ರಾಮು ಸೋಮು ಇಬ್ಬರೂ ಸಿಂಚನಾಳನ್ನು ಖುಷಿಪಡಿಸಲು ಉಪಾಯವನ್ನು ಯೋಚಿಸತೊಡಗಿದರು. ರಾಮು ಅವಳ ಕೈ ಎಳೆಯತೊಡಗಿದ, ಸೋಮು ಅವಳ ಅಂಗಿಯನ್ನು ಎಳೆಯತೊಡಗಿದ. ಅವಳಿಗೆ ಏನೂ ತೋಚಲಿಲ್ಲ. ಆಮೇಲೆ ರಾಮು ಸೋಮು ಕಾಲಿಗೆ ಬಣ್ಣ ಮೆತ್ತಿಕೊಂಡು ಗೋಡೆಗೆ ಬಳಿಯ ಹತ್ತಿದರು. ಆಗ ಸಿಂಚನಾಳಿಗೆ ಗೋಡೆಯ ಮೇಲೆ ಚಿತ್ರಬಿಡಿಸುವ ಅವನ ಪ್ರಯತ್ನದ ಬಗ್ಗೆ ಗೊತ್ತಾಯಿತು. ಮೂವರೂ ಸೇರಿ ಮರ ಗಿಡ ಪಕ್ಷಿಪ್ರಾಣಿಗಳ ಚಿತ್ರವನ್ನು ಗೋಡೆ ತುಂಬ ಬಿಡಿಸಿದರು.

ರಾಮು- ಸೋಮು ಸಿಂಚನಾಳ ಜೊತೆ ಅವಳ ಕೋಣೆಯಲ್ಲೇ ಮಲಗುತ್ತಿದ್ದರು. ಆ ದಿನ ರಾತ್ರಿ ಎನೋ ಸದ್ದಾದಂತಾಗಿ ಮೂವರಿಗೂ ಎಚ್ಚರವಾಯಿತು. ಗೋಡೆ ಬಳಿ ಬಂದು ನೋಡಿದರೆ ಅವರು ಬಿಡಿಸಿದ್ದ ಚಿತ್ರ ನಿಜವಾದ ಕಾಡಾಗಿ ಬದಲಾಗಿತ್ತು. ಮೂವರೂ ಕಾಡಿನೊಳಗೆ ಹೊಕ್ಕರು. ಅವರಿಗೆ ಕಾಡಿನ ದೇವತೆ ಪ್ರತ್ಯಕ್ಷಳಾಗಿ “ನೀವು ಪರಿಸರಪ್ರೇಮಿಗಳಾಗಿದ್ದರಿಂದ ನನಗೆ ನಿಮ್ಮನ್ನು ಕಂಡರೆ ಇಷ್ಟ’ ಎಂದಳು. ಅವರಿಗೆ ಕೈಪಟ್ಟಿಯೊಂದನ್ನು ನೀಡಿ “ಇನ್ನುಮುಂದೆ ನೀವು ಒಳಗೆ ಬರುವಾಗ ಇದನ್ನು ಕೈಗೆ ಕಟ್ಟಿಕೊಂಡು ಬನ್ನಿ. ಆಗ ಕಾಡಿನಲ್ಲಿ ನಿಮಗೆ ಯಾವುದೇ ತರಹದ ಅಪಾಯ ಆಗುವುದಿಲ್ಲ’ ಎಂದು ಭರವಸೆ ಕೊಟ್ಟಳು. ಆವತ್ತಿನಿಂದ ಸಿಂಚನಾ ಕಾಡಿಗೆ ಹೋಗಿ ಅಪರೂಪದ ಬಣ್ಣ ಬಣ್ಣದ ಗಿಡಗಳು, ಹಣ್ಣುಗಳನ್ನೆಲ್ಲಾ ತಂದು ಮನೆ ಮುಂದೆ ನೆಡಲು ಶುರುಮಾಡಿದಳು. ಅಲ್ಲದೆ ಪರಿಚಿತರಿಗೂ ಕೊಟ್ಟಳು.

ಕಿಟ್ಟಿಗೆ ಸಿಂಚನಾಳ ವರ್ತನೆ ಕಂಡು ಅನುಮಾನ ಬಂದಿತು. ಅನುಮಾನ ಪರಿಹರಿಸಿಕೊಳ್ಳಲು ಸಿಂಚನಾಳ ಮೇಲೆ ಒಂದು ಕಣ್ಣಿಟ್ಟ. ಒಂದು ದಿನ ರಾತ್ರಿ ಸಿಂಚನಾ ಗೋಡೆ ಮೇಲೆ ಬರೆದ ಚಿತ್ರ ಕಾಡಾಗಿ ಬದಲಾಗುವುದನ್ನೂ, ಅದರೊಳಗೆ ಸಿಂಚನಾ ಹೋಗುವುದನ್ನೂ ಕಿಟ್ಟಿ ನೋಡಿದ. ಮಾರನೇ ದಿನ ಸಿಂಚನಾ ಗೋಡೆಯ ಮಾಯಾ ಕಾಡಿನೊಳಗೆ ಹೋಗುವುದನ್ನೇ ಕಾದು ಕುಳಿತ ಕಿಟ್ಟಿ ತಾನೂ ಅವಳನ್ನು ಹಿಂಬಾಲಿಸಿದ. ಒಂದಷ್ಟು ದೂರ ಹೋದ ಮೇಲೆ ಸಿಂಚನಾ ಅವನ ಕಣ್ಣಿನಿಂದ ಮರೆಯಾದಳು. ಕಿಟ್ಟಿ ಕಾಡಿನಲ್ಲಿ ದಾರಿ ತಪ್ಪಿ ಅಲೆಯತೊಡಗಿದ. ಪ್ರಾಣಿಗಳಿಗೆ ಹೆದರಿ ಓಡತೊಡಗಿದ. ಇತ್ತ ಸಿಂಚನಾ ಆ ಕಾಡಿನಿಂದ ಮರಳಿ ಬಂದಳು.

ಮರುದಿನ ಅವಳಿಗೆ ಕಿಟ್ಟಿ ಕಾಣೆಯಾಗಿರುವ ಸುದ್ದಿ ಕಿವಿಗೆ ಬಿತ್ತು. ತನ್ನ ಗೆಳೆಯ ಕಳೆದುಹೊಗಿದ್ದಾನೆ ಎಂದು ಕೇಳಿ ಬೇಸರವಾಯಿತು. ಅಷ್ಟರಲ್ಲಿ ಗೋಡೆಯ ಬಳಿ ಕಿಟ್ಟಿಯ ವಾಚ್‌ ಸಿಕ್ಕಿತು. ಆಗ ಅವಳಿಗೆ ಕಿಟ್ಟಿ ಗೋಡೆಯೊಳಗೆ ಸಿಕ್ಕಿಕೊಂಡಿರಬಹುದು ಎಂಬ ಅನುಮಾನ ಬಂದಿತು. ರಾತ್ರಿ ಗೋಡೆ ಮೇಲೆ ಚಿತ್ರ ಬರೆದು ಮಾಯಾ ಕಾಡಿನೊಳಗೆ ಹೊಕ್ಕಳು. “ಕಿಟ್ಟಿ… ಕಿಟ್ಟಿ… ಎಲ್ಲಿದ್ದೀಯಾ?’ ಎಂದು ಕೂಗುತ್ತಾ ಹೊರಟಳು. ಕಿಟ್ಟಿ ಭಯದಿಂದ ಮರ ಹತ್ತಿ ಕುಳಿತಿದ್ದ. ಅವನಿಗೆ ಸಿಂಚನಾಳ ದನಿ ಕೇಳಿತು. ಮೇಲಿಂದಲೇ ಸಿಂಚನಾಳ ಕೂಗು ಹಾಕಿದ. ಸಿಂಚನಾಳನ್ನು ನೋಡುತ್ತಿದ್ದಂತೆಯೇ ಕಿಟ್ಟಿ ಮರದಿಂದ ಚಂಗನೆ ಹಾರಿ ಕೆಳಕ್ಕಿಳಿದ. ಇಬ್ಬರೂ ಅಲ್ಲಿಂದ ಸುರಕ್ಷಿತವಾಗಿ ವಾಪಸ್ಸಾದರು. ಕಿಟ್ಟಿ ತಾನು ಗಿಡಗಳನ್ನು ಕಿತ್ತು ಹಾಕಿದ್ದಕ್ಕೆ ಸಿಂಚನಾಳ ಕ್ಷಮೆ ಕೇಳಿದ. ಇಬ್ಬರೂ ಮತ್ತೆ ಸ್ನೇಹಿತರಾದರು. ಇಬ್ಬರೂ ಗಿಡಗಳನ್ನು ಇತರರಿಗೆ ಹಂಚುವ ಕೆಲಸದಲ್ಲಿ ಒಬ್ಬರಿಗೊಬ್ಬರು ಸಹಾಯ ಮಾಡತೊಡಗಿದರು.

– ನಿತಿಶ್ರೀ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

92 ದೇಶಗಳಿಗೆ ಹತ್ತು ಕೋಟಿ ಕೋವಿಡ್ ಲಸಿಕೆ; ಸೀರಂ ಇನ್‌ಸ್ಟಿಟ್ಯೂಟ್‌ನಿಂದ ಉತ್ಪಾದನೆ

92 ದೇಶಗಳಿಗೆ ಹತ್ತು ಕೋಟಿ ಕೋವಿಡ್ ಲಸಿಕೆ; ಸೀರಂ ಇನ್‌ಸ್ಟಿಟ್ಯೂಟ್‌ನಿಂದ ಉತ್ಪಾದನೆ

ಪ್ರವಾಹ ಪರಿಸ್ಥಿತಿ: 165 ಕುರಿಗಳೊಂದಿಗೆ ನಡುಗಡ್ಡೆಯಲ್ಲಿ ಸಿಲುಕಿದ ಕುರಿಗಾಹಿ ಟೋಪಣ್ಣ!

ಪ್ರವಾಹ ಪರಿಸ್ಥಿತಿ: 165 ಕುರಿಗಳೊಂದಿಗೆ ನಡುಗಡ್ಡೆಯಲ್ಲಿ ಸಿಲುಕಿದ ಕುರಿಗಾಹಿ ಟೋಪಣ್ಣ!

ಕೇರಳ ವಿಮಾನ ದುರಂತ: ಮಂಗಳೂರು ದುರಂತ ನೆನಪಿಸಿಕೊಂಡ ಟ್ವೀಟಿಗರು

ಕೇರಳ ವಿಮಾನ ದುರಂತ: ಮಂಗಳೂರು ದುರಂತ ನೆನಪಿಸಿಕೊಂಡ ಟ್ವೀಟಿಗರು

ನೋವಿನ ಚೀರಾಟ, ಹೊರಬರಲು ಒದ್ದಾಟ, ರಕ್ತ ಮೆತ್ತಿದ ಬಟ್ಟೆಗಳು:ಪ್ರತ್ಯಕ್ಷದರ್ಶಿ ಹೇಳಿದ್ದಿಷ್ಟು!

ನೋವಿನ ಚೀರಾಟ, ಹೊರಬರಲು ಒದ್ದಾಟ, ರಕ್ತ ಮೆತ್ತಿದ ಬಟ್ಟೆಗಳು:ಪ್ರತ್ಯಕ್ಷದರ್ಶಿ ಹೇಳಿದ್ದಿಷ್ಟು!

ಏನಿದು ಟೇಬಲ್ ಟಾಪ್ ರನ್ ವೇ? ಭಾರತದಲ್ಲಿ ಎಷ್ಟಿವೆ? ಇವು ಯಾಕೆ ಅಪಾಯಕಾರಿ?

ಏನಿದು ಟೇಬಲ್ ಟಾಪ್ ರನ್ ವೇ? ಭಾರತದಲ್ಲಿ ಎಷ್ಟಿವೆ? ಇವು ಯಾಕೆ ಅಪಾಯಕಾರಿ?

qulcomm-main

ಲಕ್ಷಾಂತರ ಆ್ಯಂಡ್ರಾಯ್ಡ್ ಫೋನ್‌ ಗಳಿಗೆ ಅಪಾಯ: Qualcomm chip ನಲ್ಲಿ ಭದ್ರತಾ ದೋಷ !

ಉದ್ಯಮಿ ಮಿಹಿಕಾ ಜತೆ ಇಂದು ರಾಣಾ ದಗ್ಗುಬಾಟಿ ವಿವಾಹ

ಉದ್ಯಮಿ ಮಿಹಿಕಾ ಜತೆ ಇಂದು ರಾಣಾ ದಗ್ಗುಬಾಟಿ ವಿವಾಹ
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vishmaya

ಪ್ರಪಂಚ ಪರ್ಯಟನೆ; ಅಚ್ಚರಿಯ ಜಗತ್ತು ಇದು…

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

MUST WATCH

udayavani youtube

VP NAGARAದ 75 CENTS ಜಾಗದಲ್ಲಿ ಮಾದರಿ ಕೃಷಿ ತೋಟ| Udayavani

udayavani youtube

ಹೈನುಗಾರಿಕೆಯಿಂದ ಬದುಕು ಕಟ್ಟಿಕೊಂಡ ಕುಟುಂಬ | Interview with successful Dairy Farmer

udayavani youtube

ಮಕ್ಕಳನ್ನು ಬೆಳೆಸಬೇಡಿ; ಬೆಳೆಯಲು ಬಿಡಿ | How to Nurture a Child | Udayavani

udayavani youtube

ಆಸ್ಪತ್ರೆಯಲ್ಲೂ B. S. Yediyurappa ಕರ್ತವ್ಯ ಪ್ರಜ್ಞೆ ; ಪ್ರಮುಖ Files ಪರಿಶೀಲನೆ

udayavani youtube

MGM ಕಾಲೇಜಿನ ನವೀಕೃತ ನೂತನ ರವೀಂದ್ರ ಮಂಟಪದ ಪ್ರಾರಂಭೋತ್ಸವ | Udayavaniಹೊಸ ಸೇರ್ಪಡೆ

Mysuru-tdy-2

ಜಿಲ್ಲೆಯಲ್ಲಿ ಮಳೆ ಅಬ್ಬರ; ಮತ್ತೆ ಪ್ರವಾಹ ಭೀತಿ

ಲಡಾಖ್‌ ಗಡಿಯಲ್ಲಿ ಕಾವಲು ಮುಂದುವರಿಸಲು ನಿರ್ಧಾರ

ಲಡಾಖ್‌ ಗಡಿಯಲ್ಲಿ ಕಾವಲು ಮುಂದುವರಿಸಲು ನಿರ್ಧಾರ

ಬಸವಸಾಗರ ಜಲಾಶಯದಿಂದ 2.20 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ: ನದಿಪಾತ್ರಕ್ಕೆ ತೆರಳದಂತೆ ಸೂಚನೆ

ಬಸವಸಾಗರ ಜಲಾಶಯದಿಂದ 2.20 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ: ನದಿಪಾತ್ರಕ್ಕೆ ತೆರಳದಂತೆ ಸೂಚನೆ

ದಲಿತ ಕುಟುಂಬಕ್ಕೆ ಸಿಕ್ಕಿತು ಶ್ರೀರಾಮನ ಮೊದಲ ಪ್ರಸಾದ

ದಲಿತ ಕುಟುಂಬಕ್ಕೆ ಸಿಕ್ಕಿತು ಶ್ರೀರಾಮನ ಮೊದಲ ಪ್ರಸಾದ

ಜನ, ಜಾನುವಾರು ರಕ್ಷಣೆಗೆ ಮುಂದಾಗಿ

ಜನ, ಜಾನುವಾರು ರಕ್ಷಣೆಗೆ ಮುಂದಾಗಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.