ಕಣ್‌ ತೆರೆದು ನೋಡಿ

Team Udayavani, May 16, 2019, 6:00 AM IST

ಭೂಮಿ ಮೇಲಿನ ಜೀವಜಾಲದಲ್ಲಿ ನಮಗೆ ಗೊತ್ತಿಲ್ಲದ ಸಂಗತಿಗಳು ಹಲವಾರು! ಅಷ್ಟೇ ಯಾಕೆ… ನಮ್ಮ ಸುತ್ತಮುತ್ತಲೇ ಇರುವ, ನಿತ್ಯವೂ ಕಣ್ಣಿಗೆ ಕಾಣುವ ಜೀವಿಗಳು, ಹುಳ ಹುಪ್ಪಟೆಗಳನ್ನೇ ನಾವು ಸರಿಯಾಗಿ ತಿಳಿದುಕೊಂಡಿರುವುದಿಲ್ಲ. ಅಂಥ ಸೋಜಿಗದ
ಜಗತ್ತಿನೊಳಗೊಂದು ಸುತ್ತು…

ಆನೆಗಳ ಸನ್‌ಸ್ಕ್ರೀನ್‌ ಕ್ರೀಮು!
ಹೊರಗಡೆ ಮಳೆ ಬರುವಾಗ ಕೈಯಲ್ಲಿ ಛತ್ರಿ ಇಲ್ಲದಿದ್ದರೆ ರಕ್ಷಣೆ ಪಡೆಯಲು ನಾವೆಲ್ಲರೂ ಸೂರು ಇರುವಲ್ಲಿ ಓಡುತ್ತೇವೆ. ಅದು ಸಹಜ. ಆದರೆ ಬಿಸಿಲಿಗೂ ಓಡುವುದುಂಟೆ? ಉಂಟು! ಬಿಸಿಲಿಂದ ರಕ್ಷಣೆ ಪಡೆಯಲು ಹೆಣಗಾಡುವ ವರ್ಗವೂ ಒಂದಿದೆ. ಅದರಲ್ಲೂ ಸಮುದ್ರ ತೀರಕ್ಕೆ ಭೇಟಿ ನೀಡುವ ಪ್ರವಾಸಿಗರನ್ನು ಈ ಮಾತಿಗೆ ಸಾಕ್ಷಿಯಾಗಿ ತೆಗೆದುಕೊಳ್ಳಬಹುದು. ಏಕೆಂದರೆ, ಅವರಲ್ಲಿ ಬಹುತೇಕರು ಬಿಸಿಲ ಝಳದಿಂದ ತಪ್ಪಿಸಿಕೊಳ್ಳಲು ಸನ್‌ ಸ್ಕ್ರೀನ್‌ ಕ್ರೀಮನ್ನು ಮೈಯೆಲ್ಲಾ ಹಚ್ಚಿಕೊಂಡಿರುತ್ತಾರೆ. ಇದರಿಂದ ಚರ್ಮ ಕಪ್ಪಾಗುವುದಿಲ್ಲ. ವಿದೇಶಗಳಲ್ಲಿ ಜನರು ದುಡ್ಡು ಕೊಟ್ಟು ಚರ್ಮವನ್ನು ಕಪ್ಪಾಗಿಸಿಕೊಳ್ಳುತ್ತಾರೆ. ಅದನ್ನು ಟ್ಯಾನಿಂಗ್‌ ಎನ್ನುವರು. ಇರಲಿ, ಮನುಷ್ಯರೇನೋ ಕ್ರೀಮುಗಳಿಗೆ ಮೊರೆ ಹೋಗುವರು, ಆದರೆ ಪ್ರಾಣಿಗಳು ಸೂರ್ಯನ ಪ್ರಖರ ಕಿರಣಗಳಿಂದ ತಮ್ಮನ್ನು ತಾವು ಹೇಗೆ ಕಾಪಾಡಿಕೊಳ್ಳುತ್ತವೆ? ಚಿಕ್ಕಪುಟ್ಟ ಪ್ರಾಣಿಗಳಾದರೆ ಗಿಡ ಮರ ಪೊದೆಗಳ ಮೊರೆ ಹೋಗುತ್ತವೆ. ಆದರೆ ಆನೆ, ಘೇಂಡಾಮೃಗದಂಥ ದೊಡ್ಡ ಗಾತ್ರದ ಪ್ರಾಣಿಗಳಿಗೆ ಆ ಅದೃಷ್ಟವಿಲ್ಲ. ಅದಕ್ಕೇ ಅವು ಮೈಮೇಲೆ ಮಣ್ಣನ್ನು ಎರಚಿಕೊಳ್ಳುತ್ತವೆ. ಮಣ್ಣಿನಲ್ಲಿ ತಂಪು ಗುಣವಿದೆ ಎಂಬುದು ಮಡಕೆಯನ್ನು ಬಳಸುವ ನಮಗೆ ಗೊತ್ತಿರಲೇಬೇಕು. ಅದಕ್ಕೇ ಕೆಲ ಪ್ರಾಣಿಗಳು ಬಿಸಿಲಿನ ಝಳದಿಂದ ತಪ್ಪಿಸಿಕೊಳ್ಳಲು ಮಣ್ಣನ್ನೇ ಸನ್‌ಸ್ಕ್ರೀನ್‌ ಕ್ರೀಮಿನಂತೆ ಪೂಸಿಕೊಳ್ಳುತ್ತವೆ.

ತವರಿಗೆ ಬಾ ಪೆಂಗ್ವಿನ್‌!
ಮನುಷ್ಯ ಭಾವುಕ ಜೀವಿಯಾಗಿರಬಹುದು, ಸೆಂಟಿಮೆಂಟು ಸಿನಿಮಾಗಳನ್ನು ಮಾಡಿರಬಹುದು. ಆದರೆ, ಸೆಂಟಿಮೆಂಟ್‌ ಎನ್ನುವುದು ಮನುಷ್ಯರಿಗೆ ಮಾತ್ರವೆ ಸೀಮಿತವಾಗಿಲ್ಲ ಕೆಲ ಪ್ರಾಣಿಗಳೂ ಭಾವುಕ ಜೀವಿಗಳಾಗಿವೆ ಎನ್ನುವುದ
ಈಗಾಗಲೇ ನಮಗೆ ಗೊತ್ತಿರುವ ಸಂಗತಿ. ನಾವು ಆನೆ ಮತ್ತು ಕೆಲ ಪ್ರಾಣಿಗಳು ಭಾವುಕತೆಯನ್ನು ವ್ಯಕ್ತಪಡಿಸುತ್ತವೆ ಎನ್ನುವುದು ಈಗಾಗಲೇ ಸಾಬೀತಾಗಿರ
ವಿಷಯ. ಆದರೆ, ಪೆಂಗ್ವಿನ್‌ ಕೂಡಾ ಭಾವುಕ ಜೀವಿ ಎನ್ನುವುದು ಬಹುತೇಕರಿ ಗೆ ಗೊತ್ತಿರಲಿಕ್ಕಿಲ್ಲ, ತಾಯಿಯಾದವಳ ಹೃದಯದಲ್ಲಿ ತವರಿಗೆ  ಯಾವತ್ತಿಗೂ ವಿಶೇಷವಾದ ಸ್ಥಾನ. ಯಾರೇ ಆದರೂ ತನ್ನ ತವರಿನ ಕುರಿತು ಒಂದು ಮಾತು ಹೆಚ್ಚಿಗೆ ಆಡಿದರೆ ಅವರ ವಿರುದ್ದ ಜಗಳಕ್ಕೇ ನಿಂತುಬಿಡುವಳು. ಅಂಥದೇ ವರ್ತನೆಯನ್ನು ತಾಯಿ ಪೆಂಗ್ವಿನ್‌ನಲ್ಲಿ ಕಾಣಬಹುದು. ತಾನು ಯಾವ ಜಾಗದಲ್ಲಿ ಹುಟ್ಟಿದ್ದೆನೋ ಅದೇ ಜಾಗವನ್ನು ಮೊಟ್ಟೆ ಇಡಲು ಆರಿಸಿಕೊಳ್ಳುವ ಪೆಂಗ್ವಿನ್‌ನ ಪ್ರವೃತ್ತಿಯನ್ನು ಸಂಶೋಧಕರು ಪತ್ತೆ ಹಚ್ಚಿರುವುದು ಅದಕ್ಕೆ ಸಾಕ್ಷಿ.

ಹರ್ಷವರ್ಧನ್‌ ಸುಳ್ಯ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಮೀನು ಯಾರಿಗೂ ಏನೂ ಮಾಡೋಲ್ಲ ಅನ್ನೋದೇನೋ ನಿಜ. ಆದರೆ, ಅದರಲ್ಲೂ ವಿಷಕಾರಿ ಮೀನುಗಳು ಉಂಟು ಅನ್ನೋದಕ್ಕೆ ಈ ಜೆಲ್ಲಿ ಮೀನೇ ಉದಾಹರಣೆ. ಈ ಮೀನು ಎಲ್ಲವನ್ನೂ ಕಾಲಿನ ಮೂಲಕವೇ...

  • ಹಿಮಕ್ಕೂ, ಹಿಮಕರಡಿಗಳಿಗೂ ಅವಿನಾಭಾವ ನಂಟು. ಹಿಮ ಇಲ್ಲದೇ ಹೋದರೆ ಹಿಮಕರಡಿ ಭೂಮಿಯಿಂದಲೇ ಇಲ್ಲವಾಗುವವು. ಹಿಮಕರಡಿಗಳು ಉತ್ತರಧೃವದಲ್ಲಿ ವಾಸಿಸುವ ಜೀವಿಗಳು....

  • "ಕುಮಾರ ಬಂದಾಗ, ಸೈನಿಕರು ಮತ್ತು ಸೇವಕರು ಎಲ್ಲರೂ ಸೇರಿಕೊಂಡು ರಾಜನಿಗೆ ಜಯವಾಗಲಿ ಅಂತ ಹೇಳಬೇಕು' ಎಂದು ಶಂಕರ ಹೇಳಿದ. ಎಲ್ಲರೂ ತಲೆಯಲ್ಲಾಡಿಸಿದರು. ಆದರೆ ಒಬ್ಬಳು...

  • ಪ್ರಮುಖ ವ್ಯಕ್ತಿಗಳ ಪರಿಚಯವನ್ನು ಕೇವಲ ಹತ್ತೇ ಹತ್ತು ಪಾಯಿಂಟ್‌ಗಳಲ್ಲಿ ಕಟ್ಟಿ ಕೊಡುವ ಪ್ರಯತ್ನವಿದು... 1. ಮಂಗನಿಂದ ಮಾನವ "ವಿಕಾಸವಾದ ಸಿದ್ಧಾಂತ'ವನ್ನು ಪ್ರತಿಪಾದಿಸಿದ...

  • ಬೇಕಾದ ಪರಿಕರ: ಒಂದು ಕಾರ್ಡಿನ ಮೇಲೆ ಸಂಖ್ಯೆ ಬರೆಯಲಾದ ಮುಳ್ಳಿಲ್ಲದ ಗಡಿಯಾರ. ಪರಿಣಾಮ: ನಿಮ್ಮ ಸಭಿಕರಲ್ಲಿ ಒಬ್ಬರಿಗೆ ಹನ್ನೆರಡಕ್ಕಿಂತ ಕಡಿಮೆ ಸಂಖ್ಯೆಯನ್ನು...

ಹೊಸ ಸೇರ್ಪಡೆ