ಶರ್ಯಾತಿ


Team Udayavani, Mar 23, 2017, 3:45 AM IST

puraana-kathe.jpg

ಶರ್ಯಾತಿ ಎಂಬುವವನು ಮಹಾಜ್ಞಾನಿಯಾದ ರಾಜ. ಸುಕನ್ಯೆ ಅವನ ಮಗಳು ಬಹಳ ಸುಂದರಿ. ಒಂದು ದಿನ ರಾಜನೂ, ಸುಕನ್ಯೆಯೂ ಪರಿವಾರದವರೂ ಚ್ಯವನ ಎಂಬ ಮಹರ್ಷಿಯ ಆಶ್ರಮಕ್ಕೆ ಹೋದರು. ಅಲ್ಲಿ ಸುಕನ್ಯೆಯೂ ಅವರ ಸಖೀಯರೂ ಒಡಾಡುತ್ತಿರುವಾಗ ಅವಳು ಒಂದು ದೊಡ್ಡ ಹುತ್ತವನ್ನು ಕಂಡಳು. ಅದರ ಹತ್ತಿರ ಹೋದಾಗ ವಜ್ರಗಳಂತೆ ಹೊಳೆಯುತ್ತಿದ್ದ ಎರಡು ವಸ್ತುಗಳನ್ನು ಕಂಡಳು. ಅವಳು ಕುತೂಹಲದಿಂದ ಒಂದು ಮುಳ್ಳನ್ನು ತೆಗೆದುಕೊಂಡು ಅವುಗಳಿಗೆ ಚುಚ್ಚಿದಳು. ತಕ್ಷಣವೇ ರಕ್ತ ಹರಿಯಲು ಪ್ರಾರಂಭವಾಯಿತು. ಅವಳು ಅಲ್ಲಿಂದ ಓಡಿಬಿಟ್ಟಳು.

ರಾಜನಿಗೂ ರಾಜನ ಪರಿವಾರದವರಿಗೂ ತೀವ್ರ ಅಸ್ವಸ್ಥತೆಯಾಯಿತು. ಯಾರೋ ಮಹರ್ಷಿಗೆ ಅಪಚಾರ ಮಾಡಿರಬೇಕು ಎಂದು ರಾಜನಿಗೆ ಆತಂಕವಾಯಿತು. ಎಲ್ಲರನ್ನೂ ಕರೆದು ಕೇಳಿದ. ಕಡೆಗೆ ಸುಕನ್ಯೆಯು ನಡೆದ ಸಂಗತಿಯನ್ನು ಹೇಳಿದಳು. ರಾಜನಿಗೆ ಆಘಾತವಾಯಿತು. ಹುತ್ತದಲ್ಲಿ ಚ್ಯವನ ಮಹರ್ಷಿಗಳು  ತಪಸ್ಸು ಮಾಡುತ್ತಿದ್ದರು. ವಜ್ರಗಳಂತೆ ಹೊಳೆಯುತ್ತಿದ್ದುದು ಅವರ ಕಣ್ಣುಗಳು. ಈಗ ಅವರು ಕುರುಡರಾದರು. ರಾಜನು ಅವರ ಕಾಲುಗಳನ್ನು ಹಿಡಿದು ತನ್ನ ಮಗಳನ್ನು ಕ್ಷಮಿಸುವಂತೆ ಬೇಡಿದ. ಅವಳೇ ಅವರನ್ನು ಮದುವೆಯಾಗಿ ಅವರನ್ನು ನೋಡಿಕೊಳ್ಳುವಳೆಂದು ಹೇಳಿದ. ಸುಕನ್ಯೆಯು ಮುದುಕರೂ, ಕುರುಡರೂ ಆದ ಚ್ಯವನರ ಪತ್ನಿಯಾದಳು.

ಸುಕನ್ಯೆಯು ಬೇಸರಪಡಲಿಲ್ಲ, ದುಃಖಪಡಲಿಲ್ಲ. ಚ್ಯವನ ಮಹರ್ಷಿಗಳಿಗೆ ಸಂತೋಷವಾಗುವಂತೆ ಅವರನ್ನು ನೋಡಿಕೊಳ್ಳುತ್ತಿದ್ದಳು. ಒಂದು ದಿನ ಅಶ್ವಿ‌ನಿ ದೇವತೆಗಳು ಅವರ ಮನೆಗೆ ಬಂದರು. ಅವರು ದೇವಲೋಕದ ವೈದ್ಯರು. ಗಂಡ ಹೆಂಡತಿಯರು ಅವರನ್ನು ಸತ್ಕರಿಸಿದರು. ಚ್ಯವನ ಮಹರ್ಷಿಗಳು ಅವರಿಗೆ “ಮುದುಕನಾದ ನನ್ನನ್ನು ಯುವಕನನ್ನಾಗಿ ಮಾಡಿ. ಇನ್ನು ಮುಂದೆ ಯಜ್ಞಗಳಲ್ಲಿ ನಿಮಗೂ ಸೋಮದಲ್ಲಿ ಭಾಗ ದೊರೆಯುವಂತೆ ಮಾಡುತ್ತೇನೆ’ ಎಂದರು. ಅಶ್ವಿ‌ನಿ ದೇವತೆಗಳಿಗೆ ಸಂತೋಷವಾಯಿತು. ಅವರು ಋಷಿಗಳನ್ನು ಸುಂದರ ಯುವಕರನ್ನಾಗಿ ಮಾಡಿದರು. ದೇವತೆಗಳೂ ಸುಂದರ ಯುವಕರಾದರು.

ಸುಕನ್ಯೆಗೆ ಮೂವರಲ್ಲಿ ತನ್ನ ಪತಿ ಯಾರೆಂದು ತಿಳಿಯಲಿಲ್ಲ. ತನ್ನ ಗಂಡನನ್ನು ತೋರಿಸುವಂತೆ ದೇವತೆಗಳನ್ನು ಬೇಡಿದಳು. ಅವರು ತಮ್ಮ ನಿಜ ಸ್ವರೂಪಗಳನ್ನು ಪಡೆದು, ದಂಪತಿಗಲನ್ನು ಬೀಲ್ಕೊಂಡು ಹೊರಟುಹೋದರು.
ಚ್ಯವನ ಋಷಿಗಳೂ ಸುಕನ್ಯೆಯೂ ಸಂತೋಷವಾಗಿ ಸಂಸಾರ ನಡೆಸುತ್ತಿದ್ದರು.

ಸುಕನ್ಯೆಯ ತಂದೆ ಶರ್ಯಾತಿ ಮಹಾರಾಜನು ತಾನು ನಡೆಸಲಿದ್ದ ಒಂದು ಯಾಗಕ್ಕೆ ಮಗಳನ್ನೂ, ಅಳಿಯನನ್ನೂ ಆಹ್ವಾನಿಸಲು ಅವರ ಆಶ್ರಮಕ್ಕೆ ಬಂದನು. ಅಲ್ಲಿ ತನ್ನ ಮಗಳು ಒಬ್ಬ ಸುಂದರ ಯುವಕನೊಡನೆ ಇರುವುದನ್ನು ಕಂಡು ಕೋಪದಿಂದ ಅವಳನ್ನು ಬಯ್ದನು. ಅವಳು ನಡೆದ ಸಂಗತಿಯನ್ನು ತಿಳಿಸಿದಾಗ ಅವನಿಗೂ ಬಹು ಸಂತೋಷವಾಯಿತು. 
ಶರ್ಯಾತಿಯ ಯಾಗಕ್ಕೆ ಚ್ಯವನರೇ ಪುರೋಹಿತರಾಗಿ ನಡೆಸಿಕೊಟ್ಟರು. ಕಡೆಯಲ್ಲಿ ಸೋಮವನ್ನು ಅರ್ಪಿಸುವಾಗ ಅಶ್ವಿ‌ನೀ ದೇವತೆಗಳಿಗೂ ಅರ್ಪಿಸಿದರು. ಇದರಿಂದ ಕೋಪಗೊಂಡ ಇಂದ್ರನು ಚ್ಯವನರನ್ನು ಕೊಂದೇಬಿಡುವೆನೆಂದು ವಜ್ರಾಯುಧವನ್ನು ಎತ್ತಿಕೊಳ್ಳಲು ಹೋದನು. ಆದರೆ ಮಹರ್ಷಿಗಳ ಪ್ರಭಾವದಿಂದ ಅವನು ಕೈಯನ್ನು ಅಲ್ಲಾಡಿಸಲು ಸಾಧ್ಯವಾಗಲಿಲ್ಲ. ಆಗ ದೋವತೆಗಳು, ಅಂದಿನಿಂದ ಶ್ವಿ‌ನಿ ದೇವತೆಗಳಿಗೂ ಸೋಮಭಾಗವನ್ನು ಕೊಡಬಹುದೆಂದು ಒಪ್ಪಿದರು.

ಚ್ಯವನರೂ ಸುಕನ್ಯೆಯೂ ಬಹುಕಾಲ ಸಂತೋಷವಾಗಿದ್ದರು.

(ಪ್ರೊ. ಎಲ್‌. ಎಸ್‌. ಶೇಷಗಿರಿರಾವ್‌ ಅವರ “ಕಿರಿಯರ ಭಾಗವತ’ ಪುಸ್ತಕದಿಂದ)

ಟಾಪ್ ನ್ಯೂಸ್

ಬಾಲಕನ ಮಾತಿಗೆ ಫಿದಾ ಆದ ಮಹಿಂದ್ರಾ

ಬಾಲಕನ ಮಾತಿಗೆ ಫಿದಾ ಆದ ಮಹಿಂದ್ರಾ

ಇಂಡೋನೇಷ್ಯಾಕ್ಕೆ ಹೊಸ ರಾಜಧಾನಿ

ಇಂಡೋನೇಷ್ಯಾಕ್ಕೆ ಹೊಸ ರಾಜಧಾನಿ

ರಾಜ್ಯಕ್ಕೆ ಶುಭ ಸುದ್ದಿ : 1200ಕೋ.ರೂ. ವೆಚ್ಚದಲ್ಲಿ ಶಿರಾಡಿ ಘಾಟ್ ರಸ್ತೆ ಮೇಲ್ದರ್ಜೆಗೆ

ರಾಜ್ಯಕ್ಕೆ ಶುಭ ಸುದ್ದಿ : 1200ಕೋ.ರೂ. ವೆಚ್ಚದಲ್ಲಿ ಶಿರಾಡಿ ಘಾಟ್ ರಸ್ತೆ ಮೇಲ್ದರ್ಜೆಗೆ

ಪ್ರವಾದಿ ಮೊಹಮ್ಮದ್‌ ಬಗ್ಗೆ ನಿಂದನೆ : ಪಾಕ್‌ ಮಹಿಳೆಗೆ ಗಲ್ಲು

ಪ್ರವಾದಿ ಮೊಹಮ್ಮದ್‌ ಬಗ್ಗೆ ನಿಂದನೆ : ಪಾಕ್‌ ಮಹಿಳೆಗೆ ಗಲ್ಲು

ಹಿಜಾಬ್‌ ವಿವಾದ : ಭಿತ್ತಿಪತ್ರ ಪ್ರದರ್ಶಿಸಿ ಪ್ರತಿಭಟಿಸಿದ ವಿದ್ಯಾರ್ಥಿನಿಯರು

ಹಿಜಾಬ್‌ ವಿವಾದ : ಭಿತ್ತಿಪತ್ರ ಪ್ರದರ್ಶಿಸಿ ಪ್ರತಿಭಟಿಸಿದ ವಿದ್ಯಾರ್ಥಿನಿಯರು

ಕುಡಿದ ಮತ್ತಿನಲ್ಲಿ ಮಾರಣಾಂತಿಕ ಹಲ್ಲೆ, ವ್ಯಕ್ತಿ ಸಾವು : ಆರೋಪಿ ಪರಾರಿ

ಕುಡಿದ ಮತ್ತಿನಲ್ಲಿ ಮಾರಣಾಂತಿಕ ಹಲ್ಲೆ, ವ್ಯಕ್ತಿ ಸಾವು : ಆರೋಪಿ ಪರಾರಿ

1-mu

ಮುರ್ಡೇಶ್ವರ : ಕಟ್ಟುನಿಟ್ಟಿನ ಕ್ರಮಗಳ ನಡುವೆ ವಾರ್ಷಿಕ ರಥೋತ್ಸವ ಸಂಪನ್ನಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ನಿಯಮ ಉಲ್ಲಂಘಿಸಿದ ಬಿಜೆಪಿ ವಿರುದ್ಧವೂ ಪ್ರಕರಣ ದಾಖಲಾಗಬೇಕು: ಡಿಕೆಶಿ ಎಚ್ಚರಿಕೆ

udayavani youtube

ಆಕರ್ಷಕ ಕುರ್ತಿ(1000 – 1500 Rs. Only!!)| Umbrella Kurthis

udayavani youtube

ದಾಂಡೇಲಿಯ ಬೈಲುಪಾರಿನಲ್ಲಿ ವಿದ್ಯುತ್ ತಂತಿಯ ಮೇಲಿಂದ ಬಿದ್ದು ಗಾಯ ಮಾಡಿಕೊಂಡ ಕೋತಿ

udayavani youtube

ವಾಕಿಂಗ್‌ ವಿಚಾರಕ್ಕೆ ಪ್ರಾಂಶುಪಾಲ-ಪ್ರಾಧ್ಯಾಪಕ ಫೈಟಿಂಗ್‌-ವಿಡಿಯೋ ವೈರಲ್‌

udayavani youtube

ನಾಳೆ ರಾಜ್ಯದ ಕರ್ಫ್ಯೂ ಭವಿಷ್ಯ ನಿರ್ಧಾರ : ಇಕ್ಕಟ್ಟಿಗೆ ಸಿಲುಕಿದ ಸಿಎಂ

ಹೊಸ ಸೇರ್ಪಡೆ

ಬಾಲಕನ ಮಾತಿಗೆ ಫಿದಾ ಆದ ಮಹಿಂದ್ರಾ

ಬಾಲಕನ ಮಾತಿಗೆ ಫಿದಾ ಆದ ಮಹಿಂದ್ರಾ

ಇಂಡೋನೇಷ್ಯಾಕ್ಕೆ ಹೊಸ ರಾಜಧಾನಿ

ಇಂಡೋನೇಷ್ಯಾಕ್ಕೆ ಹೊಸ ರಾಜಧಾನಿ

ರಾಜ್ಯಕ್ಕೆ ಶುಭ ಸುದ್ದಿ : 1200ಕೋ.ರೂ. ವೆಚ್ಚದಲ್ಲಿ ಶಿರಾಡಿ ಘಾಟ್ ರಸ್ತೆ ಮೇಲ್ದರ್ಜೆಗೆ

ರಾಜ್ಯಕ್ಕೆ ಶುಭ ಸುದ್ದಿ : 1200ಕೋ.ರೂ. ವೆಚ್ಚದಲ್ಲಿ ಶಿರಾಡಿ ಘಾಟ್ ರಸ್ತೆ ಮೇಲ್ದರ್ಜೆಗೆ

ಪ್ರವಾದಿ ಮೊಹಮ್ಮದ್‌ ಬಗ್ಗೆ ನಿಂದನೆ : ಪಾಕ್‌ ಮಹಿಳೆಗೆ ಗಲ್ಲು

ಪ್ರವಾದಿ ಮೊಹಮ್ಮದ್‌ ಬಗ್ಗೆ ನಿಂದನೆ : ಪಾಕ್‌ ಮಹಿಳೆಗೆ ಗಲ್ಲು

ಹಿಜಾಬ್‌ ವಿವಾದ : ಭಿತ್ತಿಪತ್ರ ಪ್ರದರ್ಶಿಸಿ ಪ್ರತಿಭಟಿಸಿದ ವಿದ್ಯಾರ್ಥಿನಿಯರು

ಹಿಜಾಬ್‌ ವಿವಾದ : ಭಿತ್ತಿಪತ್ರ ಪ್ರದರ್ಶಿಸಿ ಪ್ರತಿಭಟಿಸಿದ ವಿದ್ಯಾರ್ಥಿನಿಯರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.