ಬೈಕರ್‌ಗಳ ಫೇವರಿಟ್‌ ಸುಝುಕಿ ಜಿಕ್ಸರ್‌ ಎಸ್‌ಎಫ್ 250

Team Udayavani, May 27, 2019, 6:00 AM IST

ಸುಗಮ ಸವಾರಿಗೆ ಈ ಬೈಕ್‌ ಉತ್ತಮವಾಗಿದೆ. ಟೂರಿಂಗ್‌ಗೆ ಕೂಡ ಇದನ್ನು ಬಳಸಬಹುದಾಗಿದೆ. 152 ಕಿ.ಮೀ. ಟಾಪ್‌ಸ್ಪೀಡ್‌ ಆಗಿದ್ದು, 110-120 ಕಿ.ಮೀ. ವೇಗದಲ್ಲಿ ಸುಲಲಿತವಾಗಿ ಈ ಬೈಕ್‌ ಚಾಲನೆ ಮಾಡಬಹುದು.

ಭಾರತದಲ್ಲಿ ಹೆಚ್ಚು ಸಾಮರ್ಥ್ಯದ ಬೈಕ್‌ಗಳಿಗೆ ದೊಡ್ಡ ಗ್ರಾಹಕವರ್ಗವೊಂದು ರೂಪುಗೊಳ್ಳುತ್ತಿದೆ. ಇತ್ತೀಚೆಗೆ ಮಾರುಕಟ್ಟೆ ಅಂಕಿಂಶಗಳೂ ಇದನ್ನೇ ಹೇಳಿವೆ. 2014ರಲ್ಲಿ ಸುಝುಕಿ ಇನ್‌jಮಾ ಮಾಡೆಲ್‌ ಅನ್ನು ಪರಿಚಯಿಸಿದ ಬಳಿಕ ಅದು ಅಷ್ಟಾಗಿ ಬೇಡಿಕೆ ಪಡೆದುಕೊಂಡಿರಲಿಲ್ಲ. ಕೊನೆಗೆ ಮಾರುಕಟ್ಟೆಯಿಂದ ಅದನ್ನು ಸುಝುಕಿ ಹಿಂಪಡೆಯಿತು. ಈಗ 250 ಸಿಸಿ ಬೈಕ್‌ಗಳಿಗೆ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇರುವುದನ್ನು ಮನಗಂಡು ಹೊಸ ತಲೆಮಾರಿನ ಜಿಕ್ಸರ್‌ ಎಸ್‌ಎಫ್ 250 ಬೈಕನ್ನು ಬಿಡುಗಡೆ ಮಾಡಲಾಗಿದೆ.

ಏನು ವಿಶೇಷ?
ಇದೊಂದು ಫ‌ುಲ್‌ಫೇರಿಂಗ್‌ ಇರುವ ರೇಸ್‌ಬೈಕ್‌ ಮಾದರಿಯ ಬೈಕ್‌. ಭಾರತೀಯ ಯುವ ಸಮುದಾಯ ಇಂತಹ ಬೈಕ್‌ಗಳನ್ನು ಹೆಚ್ಚು ಇಷ್ಟಪಡುತ್ತಿದ್ದು, ಆದ್ದರಿಂದ ಕೆಟಿಎಂ, ಯಮಹಾ, ಟಿವಿಎಸ್‌ಗಳಿಗೆ ಪೈಪೋಟಿ ನೀಡುವ ಉದ್ದೇಶದಿಂದ ಸುಝುಕಿ ಕೂಡ ಇಂತಹ ಬೈಕನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಫ‌ುಲ್‌ಫೇರಿಂಗ್‌ನ 150 ಸಿಸಿ ಬೈಕನ್ನು ಈಗಾಗಲೇ ಸುಝಕಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದು, ಅದರಲ್ಲಿ ಒಂದಿಷ್ಟು ಪರಿಷ್ಕರಣೆಯೊಂದಿಗೆ ಹೊಸ ಮಾಡೆಲ್‌ ಅನ್ನು ಬಿಡುಗಡೆ ಮಾಡದೆ. ಈ ಬೈಕ್‌ , ಹಿಂಭಾಗ ಮತ್ತು ಮುಂಭಾಗ ಎಲ್‌ಇಡಿ ಲೈಟ್‌ಗಳನ್ನು ಹೊಂದಿದೆ. ಆಕರ್ಷಕ ವಿನ್ಯಾಸವಿದೆ. ಎಲ್‌ಇಡಿ ಮೀಟರ್‌ ಹೊಂದಿದೆ. ಅಗಲವಾದ ಟಯರ್‌ಗಳಿದ್ದು ಮೋಟೋ ಜಿಪಿ ಬೈಕ್‌ಗಳಂತೆ ನೋಡಲು ಭಾಸವಾಗುತ್ತದೆ. ಎರಡು ಡಿಸ್ಕ್ ಬ್ರೇಕ್‌ಗಳನ್ನು ಹೊಂದಿದ್ದು ಡ್ಯುಎಲ್‌ ಚಾನೆಲ್‌ ಎಬಿಎಸ್‌ ಹೊಂದಿದೆ. ಹಿಂದಿನ ಜಿಕ್ಸರ್‌ 150 ರೀತಿಯ ಸೈಲೆನ್ಸರ್‌ ಹೊಂದಿದ್ದು ಸ್ವಲ್ಪ ಬೀಟ್‌ ಹೊಂದಿದೆ. ಇದರಿಂದ ಬೈಕ್‌ ಶಬ್ದ ಕೇಳಲು ಉತ್ತಮವಾಗಿದೆ. ಕ್ಲಿಪ್‌ ಹ್ಯಾಂಡಲ್‌ ಬಾರ್‌ಗಳನ್ನು ಹೊಂದಿದ್ದು ರೇಸಿಂಗ್‌ ಬೈಕ್‌ ಅನುಭವವನ್ನು ಕೊಡುತ್ತದೆ.

ತಾಂತ್ರಿಕ ಸೌಲಭ್ಯಗಳು
ಟ್ರ್ಯಾಕ್‌ ಬೈಕ್‌ನಂತೆ ಜಿಕ್ಸರ್‌ 250ಯನ್ನು ರೂಪಿಸಲಾಗಿದ್ದರೂ ಇದರ ವಿನ್ಯಾಸ, ಮಾದರಿಗಳು ನ್ಪೋರ್ಟ್ಸ್ ಟೂರಿಂಗ್‌ನಂತೆ ಇವೆ. ಇದಕ್ಕೆ ತಕ್ಕಂತೆ ಅಸೆರೀಸ್‌ಗಳೂ ಲಭ್ಯವಿವೆ ಎಂದು ಸುಝುಕಿ ಹೇಳಿಕೊಂಡಿದೆ. 249 ಸಿಸಿಯ ಈ ಬೈಕ್‌ 26 ಎಚ್‌ಪಿಯಷ್ಟು ಶಕ್ತಿಯನ್ನು ಉತ್ಪಾದನೆ ಮಾಡುತ್ತದೆ. 7500 ಆರ್‌ಪಿಎಂನಲ್ಲಿ 22.6ರಷ್ಟು ಟಾರ್ಕ್‌ ಅನ್ನು ನೀಡುತ್ತದೆ. 6 ಸ್ಪೀಡ್‌ ಗಿಯರ್‌ ಇದೆ. ಫ‌ುÂಎಲ್‌ ಇಂಜೆಕ್ಷನ್‌ ವ್ಯವಸ್ಥೆ ಹೊಂದಿದ್ದು ಆಯಿಲ್‌ ಕೂಲ್ಡ್‌ ಸಿಂಗಲ್‌ ಸಿಲಿಂಡರ್‌ ಎಂಜಿನ್‌ ಇದೆ. 17 ಇಂಚಿನ ಅಲಾಯ್‌ಗಳು ಮತ್ತು ಎಬಿಎಸ್‌ ವ್ಯವಸ್ಥೆ ಇದರಲ್ಲಿದೆ. 12 ಲೀ. ಪೆಟ್ರೋಲ್‌ ಟ್ಯಾಂಕ್‌ ಇದೆ. ಮೀಟರ್‌ನಲ್ಲಿ ಗಿಯರ್‌ ಇಂಡಿಕೇಟರ್‌, ಮೈಲೇಜ್‌ ನೋಡುವ ವ್ಯವಸ್ಥೆ, ಇತರ ಸೆಟ್ಟಿಂಗ್‌ಗಳನ್ನು ಹೊಂದಿದೆ.

ರೈಡಿಂಗ್‌ ಕಂಫ‌ರ್ಟ್‌
ಸುಗಮ ಸವಾರಿಗೆ ಈ ಬೈಕ್‌ ಉತ್ತಮವಾಗಿದೆ. ಟೂರಿಂಗ್‌ಗೆ ಕೂಡ ಇದನ್ನು ಬಳಸಬಹುದಾಗಿದೆ. 152 ಕಿ.ಮೀ. ಟಾಪ್‌ಸ್ಪೀಡ್‌ ಆಗಿದ್ದು, 110-120 ಕಿ.ಮೀ. ವೇಗದಲ್ಲಿ ಸುಲಲಿತವಾಗಿ ಈ ಬೈಕ್‌ ಚಾಲನೆ ಮಾಡಬಹುದು. ಉತ್ತಮ ಕಾರ್ನರಿಂಗ್‌ ಹೊಂದಿದೆ. ಮುಂಭಾಗ ಅಗಲವಾದ 110/70 ಮತ್ತು ಹಿಂಭಾಗ 150/60 ಗಾತ್ರದ ಎಮ್‌ಆರ್‌ಎಫ್ ರೇಡಿಯಲ್‌ ಟಯರ್‌ ಹೊಂದಿರುವುದರಿಂದ ರಸ್ತೆ ದೃಢತೆ ಉತ್ತಮವಾಗಿದೆ. ಕೇವಲ 161 ಕೆ.ಜಿ. ಭಾರ ಹೊಂದಿದ್ದು ಹ್ಯಾಂಡ್ಲಿಗ್‌ಗೆ ಹೆಚ್ಚು ಚಿಂತೆ ಇಲ್ಲ.

ಯಾರಿಗೆ ಬೆಸ್ಟ್‌
ಫ‌ುಲ್‌ ಫೇರಿಂಗ್‌ ಹೊಂದಿರುವ ರೇಸ್‌ ಮಾದರಿಯ ಬೈಕ್‌ ಬೇಕು ಎನ್ನುವವರಿಗೆ, ನ್ಪೋರ್ಟ್ಸ್ ಟೂರಿಂಗ್‌ ಇಷ್ಟ ಪಡುವ ಯುವಕರು ಈ ಬೈಕ್‌ ಅನ್ನು ಖರೀದಿ ಆಯ್ಕೆಗೆ ಪರಿಗಣಿಸಬಹುದು. 1.71 ಎಕ್ಸ್‌ ಶೋರೂಂ ದರ ಹೊಂದಿದೆ. ಆರಾಮದಾಯಕ ಸವಾರಿಗೆ ಈ ಬೈಕ್‌ ಪೂರಕವಾಗಿದೆ. ಸುಮಾರು 38 ಕಿ.ಮೀ.ನಷ್ಟು ಮೈಲೇಜ್‌ ಕೊಡಬಲ್ಲದು.

ತಾಂತ್ರಿಕತೆ
249 ಸಿಸಿ
26 ಎಚ್‌ಪಿ
22.6 ಟಾರ್ಕ್‌
161 ಕೆ.ಜಿ. ಭಾರ
17 ಇಂಚಿನ ಅಲಾಯ್‌ಗಳು
12 ಲೀ. ಇಂಧನ ಟ್ಯಾಂಕ್‌

ಈಶ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಜಲಮುನಿಗಳು ಅನ್ನುವ ಒಬ್ಬ ಗುರುಗಳಿದ್ದರು. ಅವರು ನೀರಿನ ಮೇಲೆ ನಡೆದಾಡುವ, ಓಡುವ, ಕುಳಿತುಕೊಳ್ಳುವ, ನಿದ್ದೆ ಮಾಡುವ ಸಿದ್ದಿಯನ್ನು ಗಳಿಸಿಕೊಂಡಿದ್ದರು. ಅದನ್ನು...

  • ಆಗಸದ ಚಂದ್ರನಿಗೂ ಬೆಳವಣಿಗೆ ಇದೆ. ಅವನು ದೊಡ್ಡವನಾಗುತ್ತಾನೆ, ಚಿಕ್ಕವನಾಗುತ್ತಾನೆ. ತುಂಬಾ ದೊಡ್ಡವನಾದಾಗ ಅವನನ್ನು ಸೂಪರ್‌ ಮೂನ್‌ ಎಂದು ಕರೆಯುತ್ತಾರೆ. ಚಂದ್ರನನ್ನು...

  • ಪ್ರಮುಖ ವ್ಯಕ್ತಿಗಳ ಪರಿಚಯವನ್ನು ಕೇವಲ ಹತ್ತೇ ಹತ್ತು ಪಾಯಿಂಟ್‌ಗಳಲ್ಲಿ ಕಟ್ಟಿ ಕೊಡುವ ಪ್ರಯತ್ನವಿದು... 1. ಭಾರತದ ಸಮಾಜ ಸುಧಾರಕರ ಸಾಲಿನಲ್ಲಿ, ಕಮಲಾದೇವಿ ಚಟ್ಟೋಪಾಧ್ಯಾಯರು...

  • ವಿಲಿಯಂ ಶಾಂಕ್ಸ್‌ 18ನೇ ಶತಮಾನದಲ್ಲಿ ಜೀವಿಸಿದ್ದ ಬ್ರಿಟಿಷ್‌ ಗಣಿತಜ್ಞ. ಆತ ಶಾಲೆಯಲ್ಲಿ ಶಿಕ್ಷಕನೂ ಆಗಿದ್ದ. ತನ್ನ ಜೀವಮಾನದ ಮುಕ್ಕಾಲು ಭಾಗವನ್ನು "ಪೈ'ನ ಮೊತ್ತವನ್ನು...

  • ಒಂದು ದಟ್ಟ ಕಾಡಿತ್ತು. ಅ ಕಾಡಿನಲ್ಲಿ ಒಂದು ದೊಡ್ಡ ಮರವಿತ್ತು. ಅ ಮರ ಬಹಳ ವರ್ಷಗಳಿಂದ ಜೀವಿಸಿದ್ದರಿಂದ ಹಿರಿಯನಂತೆ ವರ್ತಿಸುತ್ತಿತ್ತು. ಅದೇ ವಿಷಯವಾಗಿ ಅದಕ್ಕೆ...

ಹೊಸ ಸೇರ್ಪಡೆ

  • ಕೇಂದ್ರೀಯ ಪ್ರತ್ಯಕ್ಷ ತೆರಿಗೆ ಮಂಡಳಿ ವಾರ್ಷಿಕ ತೆರಿಗೆ ಸಂಗ್ರಹದ ಅಂಕಿಅಂಶವನ್ನು ಇಂದು ಬಿಡುಗಡೆಗೊಳಿಸಿದೆ. ಮಹಾರಾಷ್ಟ್ರ, ದಿಲ್ಲಿ ಮತ್ತು ಕರ್ನಾಟಕ ಈ ಮೂರು...

  • ಉಡುಪಿ: ಮಣಿಪಾಲ ಕೆಎಂಸಿಯ ಫಾರ್ಮಕಾಲಜಿ ವಿಭಾಗ ಮತ್ತು ಎಂಐಟಿಯ ಮಾಹಿತಿ ಮತ್ತು ಸಂವಹನ ವಿಭಾಗಗಳು ರೋಗಿಗಳ ಸುರಕ್ಷೆಗಾಗಿ ಔಷಧಗಳ ಪ್ರತಿಕೂಲ ಪರಿಣಾಮಗಳನ್ನು ವರದಿ...

  • ಜಲಮುನಿಗಳು ಅನ್ನುವ ಒಬ್ಬ ಗುರುಗಳಿದ್ದರು. ಅವರು ನೀರಿನ ಮೇಲೆ ನಡೆದಾಡುವ, ಓಡುವ, ಕುಳಿತುಕೊಳ್ಳುವ, ನಿದ್ದೆ ಮಾಡುವ ಸಿದ್ದಿಯನ್ನು ಗಳಿಸಿಕೊಂಡಿದ್ದರು. ಅದನ್ನು...

  • ಮಂಗಳೂರು: ಬಹುಭಾಷಾ ನಟ ಅರ್ಜುನ್‌ ಸರ್ಜಾ ಅವರು ಚೆನ್ನೈಯ ಗೇರುಗಂಬಕ್ಕಂನಲ್ಲಿ ನಿರ್ಮಿಸುತ್ತಿರುವ ಬೃಹತ್‌ ಹನುಮಾನ್‌ ದೇವಸ್ಥಾನಕ್ಕೆ ಅಗತ್ಯವಾಗಿರುವ ಮರದ...

  • ಬಂಟ್ವಾಳ/ ಮಂಗಳೂರು: ರಾಜ್ಯ ಗೃಹಸಚಿವ ಬಸವರಾಜ ಬೊಮ್ಮಾಯಿ ಅವರು ಅ. 24ರಂದು ದ.ಕ. ಜಿಲ್ಲಾ ಪ್ರವಾಸ ನಡೆಸಲಿದ್ದು, ಬೆಳಗ್ಗೆ 8.40ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ...