ನರಿ ಆನೆಯ ತಿಂದುದು…


Team Udayavani, Jun 6, 2019, 6:10 AM IST

nari

ಹಸಿದಿದ್ದ ನರಿ, ಸತ್ತು ಬಿದ್ದಿದ್ದ ಆನೆ ಮಾಂಸವನ್ನು ತಿನ್ನಲು ಪ್ರಯತ್ನಿಸಿತು. ಆದರೆ ಆನೆಯ ಚರ್ಮ ಬಹಳ ಗಟ್ಟಿಯಾಗಿದ್ದರಿಂದ ತಿನ್ನಲು ಸಾಧ್ಯವಾಗಲಿಲ್ಲ. ಏನು ಮಾಡುವುದೆಂದು ಚಿಂತಿಸುತ್ತೇ ನರಿ ಅಲ್ಲೇ ಕುಳಿತುಕೊಂಡಿತು.

ಕಾಡಿನಲ್ಲಿ ಒಂದು ಜಾಣ ನರಿಯು ವಾಸಿಸುತ್ತಿತ್ತು. ಒಮ್ಮೆ ಸುತ್ತಾಡುತ್ತಿ¨ªಾಗ ಆನೆಯೊಂದು ಸತ್ತುಬಿದ್ದಿರುವುದು ಕಂಡಿತು. ಹಸಿದಿದ್ದ ನರಿಯು ಸತ್ತು ಬಿದ್ದಿದ್ದ ಆನೆ ಮಾಂಸವನ್ನು ತಿನ್ನಲು ಪ್ರಯತ್ನಿಸಿತು. ಆದರೆ ಆನೆಯ ಚರ್ಮ ಬಹಳ ಗಟ್ಟಿಯಾಗಿದ್ದರಿಂದ ತಿನ್ನಲು ಸಾಧ್ಯವಾಗಲಿಲ್ಲ. ಏನು ಮಾಡುವುದೆಂದು ಚಿಂತಿಸುತ್ತೇ ನರಿ ಅಲ್ಲೇ ಕುಳಿತುಕೊಂಡಿತು. ಅದೇ ಸಮಯದಲ್ಲಿ ಕಾಡಿನ ರಾಜನಾದ ಸಿಂಹ ಅದೇ ದಾರಿಯಲ್ಲಿ ಬಂದಿತು. ನರಿಯು ರಾಜನ ಬಳಿ ತೆರಳಿ “ಇಲ್ಲೊಂದು ಆನೆ ಸತ್ತು ಬಿದ್ದಿದೆ. ಮೊದಲು ನೀವು ತಿನ್ನುವ ಕೃಪೆ ಮಾಡಬೇಕು. ನಂತರ ಉಳಿದದ್ದನ್ನು ನಾನು ತಿನ್ನುತ್ತೇನೆ. ದಯವಿಟ್ಟು ನನ್ನ ಕೋರಿಕೆ ಮನ್ನಿಸಿ ಮಹಾಸ್ವಾಮಿ’ ಎಂದು ಬೇಡಿಕೊಂಡಿತು.

ಕಾಡಿನ ರಾಜನಾದ ಸಿಂಹ ಘರ್ಜಿಸುತ್ತಾ “ನಾನು ಇತರ ಪ್ರಾಣಿಗಳಿಂದ ಕೊಲ್ಲಲ್ಪಟ್ಟ ಪ್ರಾಣಿಗಳನ್ನು ಎಂದಿಗೂ ತಿನ್ನುವುದಿಲ್ಲ ಎಂದು ನಿನಗೆ ಚೆನ್ನಾಗಿಯೇ ತಿಳಿದಿದೆ’ ಎಂದು ಹೇಳಿ ಅಲ್ಲಿಂದ ಹೊರಟು ಹೋಯಿತು. ಆನೆ ಚರ್ಮವನ್ನು ಸಿಂಹದ ಬಾಯಲ್ಲಿ ಛೇದಿಸಿ ನಂತರ ತಾನು ಮಾಂಸ ತಿನ್ನುವ ನರಿಯ ಆಸೆ ಹಾಗೆಯೇ ಉಳಿದುಕೊಂಡಿತು.

ಸ್ವಲ್ಪ ಹೊತ್ತಿನÇÉೇ ಅಲ್ಲಿಗೆ ಚಿರತೆಯು ಆಹಾರವನ್ನು ಅರಸುತ್ತಾ ಬರುತ್ತಿರುವುದು ನರಿಗೆ ಕಂಡಿತು. ಚಾಣಾಕ್ಷ ನರಿಗೆ ಚಿರತೆಯು ಅತ್ಯಂತ ಚೂಪಾದ ಹಲ್ಲುಗಳನ್ನು ಹೊಂದಿರುವುದು ಮೊದಲೇ ತಿಳಿದಿತ್ತು. ಚಿರತೆಯು ಆನೆಯ ಚರ್ಮವನ್ನು ಹರಿಯುವ ನನ್ನ ಸಮಸ್ಯೆ ಬಗೆಹರಿಸಬಲ್ಲುದೆಂದು ಸ್ಪಷ್ಟವಾಯಿತು. ಆದರೆ ಚಿರತೆ ಯಾರಿಗೂ ಉಳಿಸದಂತೆ ಆನೆಯನ್ನು ತಿನ್ನುವ ಸಂಗತಿ ನರಿಗೆ ನೆನಪಾಯಿತು. ಅದಕ್ಕೇ ಒಂದು ಉಪಾಯ ಹೂಡಿತು. ನರಿ, ಚಿರತೆ ಬಳಿ “ಗೆಳೆಯಾ ಬೇಗ ಬಾ ನಾನು ನಿನ್ನನ್ನು ಬಹಳ ದಿನಗಳಿಂದ ಎದುರು ನೋಡುತ್ತಿದೆ‌ª. ನೀನು ಆಹಾರವಿಲ್ಲದೆ ತುಂಬಾ ಸೊರಗಿದಂತೆ ಕಾಣುತ್ತಿದ್ದೀಯಾ. ಸಿಂಹ ಬೇಟೆಯಾಡಿರುವ ಆನೆಯೊಂದು ಇಲ್ಲೇ ಹತ್ತಿರದಲ್ಲಿದೆ. ಸಿಂಹ ಸ್ನಾನಕ್ಕೆಂದು ಹೊಳೆಗೆ ಹೋಗಿದ್ದಾನೆ. ಅವನು ಬರುವ ಮುಂಚೆ ನೀನೇ ತಿಂದುಬಿಡು’ ಎಂದು ಹೇಳಿತು. ಆಗ ಚಿರತೆಯು ಭಯದಿಂದ “ಸಿಂಹರಾಜನ ಆಹಾರವನ್ನು ನಾನೇಕೆ ತಿನ್ನಲಿ? ನಾನು ತಿನ್ನುವುದನ್ನು ನೋಡಿದರೆ ಖಂಡಿತವಾಗಿಯೂ ರಾಜ ನನ್ನನ್ನು ಕೊಂದೇ ಬಿಡುತ್ತಾನೆ’ ಎಂದು ಹೇಳಿತು.

ನರಿಯು ನಗುತ್ತಾ “ಚಿರತೆರಾಯ ನೀನೇಕೆ ಅದರ ಚಿಂತೆಯನ್ನು ಮಾಡುತ್ತೀಯಾ. ನಾನು ಆ ಕುರಿತು ಮುಂಜಾಗ್ರತೆಯನ್ನು ತೆಗೆದುಕೊಳ್ಳುತ್ತೇನೆ. ಸಿಂಹವೇನಾದರೂ ಸ್ನಾನ ಮುಗಿಸಿ ಬಂದಲ್ಲಿ ದೂರದಿಂದ ನಾನು ನಿನಗೆ ಎಚ್ಚರಿಕೆಯ ಕೂಗನ್ನು ಹಾಕುತ್ತೇನೆ. ಆಗ ನೀನು ಸುಲಭವಾಗಿ ಓಡಿ ಹೋಗಬಹುದು’ ಎಂದು ಚಿರತೆಗೆ ಹೇಳುತ್ತದೆ. ಅದಾಗಲೇ ಹಸಿದಿದ್ದ ಚಿರತೆ ಇದಕ್ಕೆ ಒಪ್ಪಿ ಇಂತಹ ಭೂರಿ ಭೋಜನವನ್ನು ಒದಗಿಸಿದ ನರಿಗೆ ಮನಸ್ಸಿನÇÉೇ ವಂದನೆಯನ್ನು ಸಲ್ಲಿಸಿತು. ಆನೆಯ ದಪ್ಪವಾದ ಚರ್ಮವನ್ನು ಚಿರತೆಯೂ ಹರಿಯುವುದನ್ನೇ ನರಿ ಕಾದು ಕುಳಿತಿತ್ತು. ಚಿರತೆಯು ಆನೆಯ ಚರ್ಮವನ್ನು ಸಂಪೂರ್ಣವಾಗಿ ಹರಿಯುತ್ತಿದ್ದಂತೆ ನರಿಯು “ಎಚ್ಚರಿಕೆ ಚಿರತೆರಾಯ ಎಚ್ಚರಿಕೆ… ಸಿಂಹರಾಜ ಬರುತ್ತಿದ್ದಾನೆ’ ಎಂದು ಕೂಗು ಹಾಕಿತು. ಮರುಕ್ಷಣವೇ ಚಿರತೆಯು ಮಿಂಚಿನ ವೇಗದಲ್ಲಿ ಛಂಗನೆ ಜಿಗಿದು ಅಲ್ಲಿಂದ ಓಡಿ ಹೋಯಿತು. ಚಾಣಾಕ್ಷನಾದ ನರಿಯು ನಗುತ್ತಾ ತನ್ನ ಭರ್ಜರಿ ಊಟಕ್ಕೆ ಸಿದ್ಧವಾಯಿತು.

– ಸಂತೋಷ್‌ ರಾವ್‌ ಪೆರ್ಮುಡ

ಟಾಪ್ ನ್ಯೂಸ್

ಪಾಕಿಸ್ತಾನಕ್ಕೂ, ದೆಹಲಿ ವಾಯುಗುಣಮಟ್ಟ ಕಲುಷಿತಗೊಳ್ಳಲು ಏನು ಸಂಬಂಧ: ಸುಪ್ರೀಂಕೋರ್ಟ್

ಪಾಕಿಸ್ತಾನಕ್ಕೂ, ದೆಹಲಿ ವಾಯುಗುಣಮಟ್ಟ ಕಲುಷಿತಗೊಳ್ಳಲು ಏನು ಸಂಬಂಧ: ಸುಪ್ರೀಂಕೋರ್ಟ್

h vishwanath

7ನೇ ತರಗತಿವರೆಗಿನ ಮಕ್ಕಳಿಗೆ ಆನ್ ಲೈನ್ ಪಾಠ ಮಾಡಿ: ಎಚ್.ವಿಶ್ವನಾಥ್

ಕಾಂಗ್ರೆಸ್ ಸೇರುವ ಜನರು ಎಷ್ಟು ಸಮರ್ಥರು?: ಡಿಕೆಶಿ ಗೆ ಬಿಜೆಪಿ ಪ್ರಶ್ನೆ

ಕಾಂಗ್ರೆಸ್ ಸೇರುವ ಜನರು ಎಷ್ಟು ಸಮರ್ಥರು?: ಡಿಕೆಶಿ ಗೆ ಬಿಜೆಪಿ ಪ್ರಶ್ನೆ

ನಾಳೆ ಪೂರ್ಣ ಸೂರ್ಯಗ್ರಹಣ

2021ರ ಕೊನೆಯ ಗ್ರಹಣ: ನವೆಂಬರ್ 4ರಂದು ಪೂರ್ಣ ಸೂರ್ಯಗ್ರಹಣ

1-fdsfds

ಹೊಂಡಗುಂಡಿ ರಸ್ತೆ; ಆ್ಯಂಬುಲೆನ್ಸ್‌ನಲ್ಲಿ ವಿಚಿತ್ರ ಹೆರಿಗೆ !

ಜನತಂತ್ರದ ಉಳಿವಿಗೆ ಗಂಭೀರ ಚಿಂತನೆ ಅಗತ್ಯ

ಜನತಂತ್ರದ ಉಳಿವಿಗೆ ಗಂಭೀರ ಚಿಂತನೆ ಅಗತ್ಯ

ಕೊನೆಗೂ ಪಂದ್ಯ ಆರಂಭ: ಭಾರತ ತಂಡದಲ್ಲಿ 3 ಬದಲಾವಣೆ, ಕಿವೀಸ್ ಗೂ ಹೊಸ ನಾಯಕ

ಕೊನೆಗೂ ಪಂದ್ಯ ಆರಂಭ: ಭಾರತ ತಂಡದಲ್ಲಿ 3 ಬದಲಾವಣೆ, ಕಿವೀಸ್ ಗೂ ಹೊಸ ನಾಯಕಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಸರ್ಕಾರಿ ಕಚೇರಿಯಲ್ಲಿನ ಕಾಗದ ಹೊತ್ತೊಯ್ದ ಮೇಕೆ ಹಿಂದೆ ಓಡುತ್ತಿರುವ ನೌಕರರು

udayavani youtube

ಅಜ್ಜಂಪುರ ತಾಲೂಕಿನ ಹಲವೆಡೆ ವರುಣನ ಅಬ್ಬರ

udayavani youtube

‘Car’bar with Merwyn Shirva | Episode 2|

udayavani youtube

ಕರ್ನಾಟಕಕ್ಕೂ ಎಂಟ್ರಿ ಕೊಟ್ಟ ಒಮಿಕ್ರಾನ್ ವೈರಸ್ : ಇಬ್ಬರಲ್ಲಿ ಪತ್ತೆಯಾದ ಸೋಂಕು

udayavani youtube

ಕ್ಲಾಸ್​ ರೂಂನೊಳಗೆ ನುಗ್ಗಿ ವಿದ್ಯಾರ್ಥಿ ಮೇಲೆ ದಾಳಿ ಮಾಡಿದ ಚಿರತೆ

ಹೊಸ ಸೇರ್ಪಡೆ

ಪಾಕಿಸ್ತಾನಕ್ಕೂ, ದೆಹಲಿ ವಾಯುಗುಣಮಟ್ಟ ಕಲುಷಿತಗೊಳ್ಳಲು ಏನು ಸಂಬಂಧ: ಸುಪ್ರೀಂಕೋರ್ಟ್

ಪಾಕಿಸ್ತಾನಕ್ಕೂ, ದೆಹಲಿ ವಾಯುಗುಣಮಟ್ಟ ಕಲುಷಿತಗೊಳ್ಳಲು ಏನು ಸಂಬಂಧ: ಸುಪ್ರೀಂಕೋರ್ಟ್

h vishwanath

7ನೇ ತರಗತಿವರೆಗಿನ ಮಕ್ಕಳಿಗೆ ಆನ್ ಲೈನ್ ಪಾಠ ಮಾಡಿ: ಎಚ್.ವಿಶ್ವನಾಥ್

1-ggfdg-a

ಕೊಲ್ಲೂರು, ಕೃಷ್ಣಮಠಕ್ಕೆ ರಾಜ್ಯಪಾಲ ಗೆಹ್ಲೋಟ್ ಭೇಟಿ, ವಿಶೇಷ ಪ್ರಾರ್ಥನೆ

ಶ್ರೀ ಗಂಧ ಅಕ್ರಮ

ಶ್ರೀಗಂಧ ಚೋರರ ಮೇಲೆ ಗುಂಡಿನ ದಾಳಿ..!

shivaram karanda building

ಶಿವರಾಮಕಾರಂತ ಬಡಾವಣೆ 300 ಕಟ್ಟಡ ಸಕ್ರಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.