ಜಂಪ್‌ ಮಾಡಿಸುವ ಜಲ್‌ಜಲಿ ನದಿ

Team Udayavani, Jul 11, 2019, 5:00 AM IST

ಸಾಮಾನ್ಯವಾಗಿ ನದಿಯ ದಂಡೆಯು ಕೆಸರಿನಿಂದ ಆವೃತವಾಗಿರುತ್ತದೆ, ಅಥವಾ ನೀರಿಲ್ಲದೆ ಒಣಗಿ ಹೋಗಿರುತ್ತದೆ. ಎರಡೂ ಸಮಯದಲ್ಲೂ ಓಡಾಡಲು ನಮಗೆ ಕಷ್ಟವೆನಿಸಬಹುದು. ಯಾಕೆಂದರೆ, ಆ ಕೆಸರಿನಲ್ಲಿ ಕಾಲು ಹೂತು ಹೋದರೆ ಎಂಬ ಭಯ. ಇಲ್ಲವೇ ಕೊರಕಲಿನಲ್ಲಿ ಗಾಯವಾಗಬಹುದು ಎಂಬುದು ಅದಕ್ಕೆ ಕಾರಣವಿರಬಹುದು. ಆದರೆ ಛತ್ತೀಸ್‌ಗಡ ರಾಜ್ಯದಲ್ಲಿರುವ ಶಿಮ್ಲಾ ಎನ್ನುವ ಪ್ರದೇಶದಲ್ಲಿನ “ಜಲ್‌ಜಲಿ ‘ ಎಂಬ ನದಿಗೆ ಜನ ತಂಡೋಪತಂಡವಾಗಿ ಆಗಮಿಸಿ ಅಲ್ಲಿನ ದಡದ ಮೇಲೆ ಕುಣಿದು ಕುಪ್ಪಳಿಸುತ್ತಾರೆ. ಅರೇ, ಇದೇನಿದು? ನದಿಯ ದಡದಲ್ಲೇಕೆ ಕುಣಿದು ಕುಪ್ಪಳಿಸುತ್ತಾರೆ ಎಂದು ಆಶ್ಚರ್ಯವಾಗು ತ್ತದೆಯಲ್ಲವೇ? ಈ ನದಿ ದಂಡೆಯ ಮೇಲೆ ಕಾಲಿಟ್ಟಾಗ ಕಾಲು ಹೂಳಲ್ಲಿ ಸಿಕ್ಕಿಹಾಕಿಕೊಳ್ಳುವುದಿಲ್ಲ. ಬದಲಾಗಿ ಚೆಂಡಿನಂತೆ ಮೇಲಕ್ಕೆ ಪುಟಿದು ನೆಗೆಯುವಂತೆ ಮಾಡು ತ್ತದೆ. ಅದೇ ಈ ನದಿ ದಂಡೆಯ ವೈಶಿಷ್ಟ್ಯ ಹಾಗೂ ವಿಸ್ಮಯ.

ಈ ನದಿಯನ್ನು ನೋಡಲಿಕ್ಕಾಗಿಯೇ ಪ್ರವಾಸಿಗರು ದೂರದೂರಿನಿಂದ ಬರುತ್ತಾರೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಸ್ಥಳೀಯರು ಹೇಳುವ ಪ್ರಕಾರ, ಈ ಜಾಗವು ಹಿಂದೆ ಒಣಗಿಹೋಗಿದ್ದ ನದಿಯ ಜೌಗು ಪ್ರದೇಶವಾಗಿತ್ತಂತೆ. ಕಾಲಾಂತರದಲ್ಲಿ ಭೂಮಿಯ
ಅಂತರಾಳದಲ್ಲಿ ಉಕ್ಕುವ ನೀರಿನ ಸೆಲೆಯಿಂದ ಮತ್ತೆ ನೀರನ್ನು ಹಿಡಿದಿಟ್ಟುಕೊಂಡು ನಿಂತಿದೆ. ಹಾಗಾಗಿ ಈ ನೀರಿನ ಮೇಲ್ಮೆ„ ಸ್ಪಂಜಿನಂತೆ ವರ್ತಿಸುತ್ತದೆ. ಕೆಲವರ ಪ್ರಕಾರ ಈ ಸ್ಥಳವು ಭೂಕಂಪನದಿಂದ ಉಂಟಾಗಿದೆ ಎಂದು ಹೇಳುತ್ತಾರೆ. ಏನೇ ಆದರೂ
ಈ ತಾಣ ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾಗಿ ಮಾರ್ಪಟ್ಟಿದೆ.

ಪುರುಷೋತ್ತಮ್‌

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಮೀನು ಯಾರಿಗೂ ಏನೂ ಮಾಡೋಲ್ಲ ಅನ್ನೋದೇನೋ ನಿಜ. ಆದರೆ, ಅದರಲ್ಲೂ ವಿಷಕಾರಿ ಮೀನುಗಳು ಉಂಟು ಅನ್ನೋದಕ್ಕೆ ಈ ಜೆಲ್ಲಿ ಮೀನೇ ಉದಾಹರಣೆ. ಈ ಮೀನು ಎಲ್ಲವನ್ನೂ ಕಾಲಿನ ಮೂಲಕವೇ...

  • ಹಿಮಕ್ಕೂ, ಹಿಮಕರಡಿಗಳಿಗೂ ಅವಿನಾಭಾವ ನಂಟು. ಹಿಮ ಇಲ್ಲದೇ ಹೋದರೆ ಹಿಮಕರಡಿ ಭೂಮಿಯಿಂದಲೇ ಇಲ್ಲವಾಗುವವು. ಹಿಮಕರಡಿಗಳು ಉತ್ತರಧೃವದಲ್ಲಿ ವಾಸಿಸುವ ಜೀವಿಗಳು....

  • "ಕುಮಾರ ಬಂದಾಗ, ಸೈನಿಕರು ಮತ್ತು ಸೇವಕರು ಎಲ್ಲರೂ ಸೇರಿಕೊಂಡು ರಾಜನಿಗೆ ಜಯವಾಗಲಿ ಅಂತ ಹೇಳಬೇಕು' ಎಂದು ಶಂಕರ ಹೇಳಿದ. ಎಲ್ಲರೂ ತಲೆಯಲ್ಲಾಡಿಸಿದರು. ಆದರೆ ಒಬ್ಬಳು...

  • ಪ್ರಮುಖ ವ್ಯಕ್ತಿಗಳ ಪರಿಚಯವನ್ನು ಕೇವಲ ಹತ್ತೇ ಹತ್ತು ಪಾಯಿಂಟ್‌ಗಳಲ್ಲಿ ಕಟ್ಟಿ ಕೊಡುವ ಪ್ರಯತ್ನವಿದು... 1. ಮಂಗನಿಂದ ಮಾನವ "ವಿಕಾಸವಾದ ಸಿದ್ಧಾಂತ'ವನ್ನು ಪ್ರತಿಪಾದಿಸಿದ...

  • ಬೇಕಾದ ಪರಿಕರ: ಒಂದು ಕಾರ್ಡಿನ ಮೇಲೆ ಸಂಖ್ಯೆ ಬರೆಯಲಾದ ಮುಳ್ಳಿಲ್ಲದ ಗಡಿಯಾರ. ಪರಿಣಾಮ: ನಿಮ್ಮ ಸಭಿಕರಲ್ಲಿ ಒಬ್ಬರಿಗೆ ಹನ್ನೆರಡಕ್ಕಿಂತ ಕಡಿಮೆ ಸಂಖ್ಯೆಯನ್ನು...

ಹೊಸ ಸೇರ್ಪಡೆ