ದುಷ್ಟರನ್ನು ದೂರವಿಡಬೇಕು

Team Udayavani, Jan 16, 2020, 5:35 AM IST

ಅದೊಂದು ಪಟ್ಟಣ. ಹತ್ತಾರು ಪುಟ್ಟ ಪುಟ್ಟ ಮನೆಗಳಿದ್ದವು. ಅಲ್ಲಿ ವಾಸವಿದ್ದವರೆಲ್ಲ ಪಟ್ಟಣದ ಫ್ಯಾಕ್ಟರಿಯೊಂದರಲ್ಲಿ ಕಾರ್ಮಿಕರು. ಕಡಿಮೆ ಸಂಬಳದಲ್ಲಿ ಹೇಗೋ ಜೀವನ ಸಾಗಿಸುತ್ತಿದ್ದರು. ಪಟ್ಟಣದ ದುಬಾರಿ ವಸ್ತುಗಳು ಅವರ ಜೀವನವನ್ನು ದುಸ್ತರಗೊಳಿಸಿದ್ದವು. ಹೀಗಾಗಿ ಅವರು ದುಂದುವೆಚ್ಚ ಮಾಡದೇ ಸರಳವಾಗಿ ಬದುಕಿದ್ದರು.

ಅವರ ಮನೆಗಳಿಗೆ ನಿತ್ಯ ಹಾಲು ತರುತ್ತಿದ್ದ ಹಾಲಪ್ಪ ಲೀಟರ್‌ ಹಾಲಿಗೆ ಹೆಚ್ಚುವರಿಯಾಗಿ ಎರಡು ರೂಪಾಯಿ ಪಡೆಯುತ್ತಿದ್ದವ “ನಾಳೆಯಿಂದ ಐದು ರೂಪಾಯಿ ಹೆಚ್ಚಿಗೆ ಕೊಟ್ಟರೆ ಮಾತ್ರ ಹಾಲು ಕೊಡುತ್ತೇನೆ. ಇಲ್ಲದಿದ್ದರೆ ಆಗದು’ ಎಂದು ಕಡ್ಡಿ ಮುರಿದಂತೆ ಹೇಳಿಬಿಟ್ಟ. ಮೊದಲೇ ಲೆಕ್ಕ ಹಾಕಿ ಖರ್ಚು ಮಾಡುತ್ತಿದ್ದ ಆ ಬಡ ಕಾರ್ಮಿಕರಿಗೆ ಇದು ಭಾರವೆನಿಸಿತು. ಆ ಸಂಜೆ ಎಲ್ಲರೂ ಸಭೆ ಸೇರಿ ತಲಾ ಎರಡು ಸಾವಿರ ರೂಪಾಯಿ ಸೇರಿಸಿ ಒಂದು ಜರ್ಸಿ ಹಸು ಖರೀದಿಸಲು ತೀರ್ಮಾನಿಸಿದರು. ಸಹಕಾರ ತತ್ವದಂತೆ ಅದರ ಜವಾಬ್ದಾರಿ ಹಂಚಿಕೊಳ್ಳುವುದು ಎಂದು ನಿರ್ಧರಿಸಿದರು. ಆದರೆ ಇದು ಜಿಪುಣ ಶಂಕ್ರಪ್ಪನಿಗೆ ಇಷ್ಟವಿರಲಿಲ್ಲ. ಕೈಯಿಂದ ಹಣ ಖರ್ಚು ಮಾಡುವುದೆಂದರೆ ಅವನಿಗೆ ಆಗುತ್ತಿರಲಿಲ್ಲ. ಬಡವರ ಅವಶ್ಯಕತೆಯನ್ನೇ ಬಂಡವಾಳ ಮಾಡಿಕೊಂಡು ಬಡ್ಡಿ ಸಾಲ ನೀಡುತ್ತ ಅವನು ಶಿåàಮಂತನಾಗಿದ್ದ.

ಎಲ್ಲರೂ ಒಪ್ಪಂದದಂತೆ ಎರಡು ಸಾವಿರ ಕೊಟ್ಟರೆ ಶಂಕ್ರಪ್ಪ ನಂತರ ಕೊಡುತ್ತೇನೆಂದ. ಅವನ ಗುಣ ಗೊತ್ತಿದ್ದ ಎಲ್ಲರೂ ತಾವೇ ಹಣ ಹಾಕಿ ಹಸು ತಂದು ಪಾಳಿ ಮೇಲೆ ನಿರ್ವಹಣೆ ಹಂಚಿಕೊಂಡರು. ದಿನಕ್ಕೊಬ್ಬರು ಹಸು ಮೇಯಿಸುವುದು, ಹಾಲು ಕರೆದು ಎಲ್ಲರಿಗೂ ಸಮವಾಗಿ ಹಂಚುವುದು ಎಂದು ಒಪ್ಪಂದವಾಗಿತ್ತು. ಎಲ್ಲರೂ ತಮ್ಮ ಜವಾಬ್ದಾರಿಯನ್ನು ಪ್ರಾಮಾಣಿಕತೆಯಿಂದ ನಿರ್ವಹಿಸಿದರೆ ಶಂಕ್ರಪ್ಪ ಹಸುವಿಗೆ ಸರಿಯಾಗಿ ಮೇಯಿಸದಿರುವುದು. ಅರ್ಧದಷ್ಟು ಹಾಲು ಕದ್ದು ಹೊರಗಡೆ ಮಾರುವುದು. ಉಳಿದ ಹಾಲಿಗೆ ನೀರು ಬೆರೆಸಿ ಪಾಲುದಾರರಿಗೆ ಹಂಚುವುದು ಮಾಡುತ್ತಿದ್ದ. ಸರಿಯಾದ ಸಮಯ ನೋಡಿ ಅವನಿಗೆ ಪಾಠ ಕಲಿಸಬೇಕೆಂದು ಹಿರಿಯರು ನಿರ್ಧರಿಸಿದರು.

ಶಂಕ್ರಪ್ಪ ಹಾಲು ಕರೆಯುವ ದಿನ ಹಿರಿಯರು ಹಸುವನ್ನು ಕೆರಳುವಂತೆ ಮಾಡಿ ಹೋದರು. ಶಂಕ್ರಪ್ಪ ಹಾಲನ್ನು ಕರೆದ ನಂತರ ಚೊಂಬನ್ನು ನೆಲದ ಮೇಲೆ ಇಡುವ ಸಂದರ್ಭದಲ್ಲಿ ಹಸು ಅವನನ್ನು ಜೋರಾಗಿ ಒದೆಯಿತು. ಆಗ ಚೊಂಬಿನಲ್ಲಿದ್ದ ಹಾಲು ಕೂಡಾ ಚೆಲ್ಲಿಹೋಯಿತು. ಪ್ರತೀ ಸಲ ಶಂಕ್ರಪ್ಪ ಹಾಲು ಕರೆದಾಗಲೂ ಇದು ಮುಂದುವರಿಯಿತು. ಅವನಿಗೆ ಹಾಲು ಸಿಗದಾಯಿತು. ಅವನು ಹಿರಿಯರ ಬಳಿ ತನ್ನ ಸಮಸ್ಯೆಯನ್ನು ತೋಡಿಕೊಂಡ. ಅವರು ಹಸುವಿಗೆ ಚೆನ್ನಾಗಿ ಮೇವು ಹಾಕಿದರೆ, ಅನಾಚಾರ ಮಾಡದೇ ಇದ್ದರೆ ಇಂಥ ಸಮಸ್ಯೆಗಳು ಬರುವುದಿಲ್ಲ ಎಂದರು. ಶಂಕ್ರಪ್ಪನಿಗೆ ಎಲ್ಲವೂ ಅರ್ಥವಾಯಿತು. ಅವನು ತನ್ನ ತಪ್ಪನ್ನು ಸರಿಪಡಿಸಿಕೊಂಡ.

-ಅಶೋಕ ವಿ. ಬಳ್ಳಾ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ರಾತ್ರಿ ಝಗಮಗಿಸುವ ದೀಪಗಳಿಂದ ಮಿಂಚುವ ಸೇತುವೆಯ ವೈಭವ ಒಂದೆಡೆಯಾದರೆ, ಮುಸ್ಸಂಜೆಯಲ್ಲಿ ಮುಳುಗುವ ಸೂರ್ಯನ ಕಿರಣಗಳಿಗೆ ಬರುವ ಹೊಸ ವರ್ಣದ ಕಳೆಯನ್ನು ನೋಡಿ ಖುಷಿಪಡಲೆಂದೇ...

  • 70 ಲಕ್ಷ ವರ್ಷಗಳ ಹಿಂದೆ ಬದುಕಿದ್ದ ಆಮೆಯ ಪಳೆಯುಳಿಕೆಯನ್ನು ವಿಜ್ಞಾನಿಗಳು ಸಂಶೋಧಿಸಿದ್ದಾರೆ. ಅದು ಕಾರಿನಷ್ಟು ಗಾತ್ರವನ್ನು ಹೊಂದಿದೆ! ಇಂದು ನಾವು ನೋಡುತ್ತಿರುವ...

  • ಮೇಜಿನ ಮೇಲೆ ಒಂದು ಖಾಲಿ ಬಾಟಲ್ ಮತ್ತು ಒಂದು ಹಗ್ಗದ ತುಂಡನ್ನು ಇಟ್ಟಿದೆ. ಜಾದೂಗಾರನ ಸವಾಲೇನೆಂದರೆ ಆ ಹಗ್ಗದಿಂದ ಬಾಟಲನ್ನು ಎತ್ತಬೇಕು. ಇದೇನು ಮಹಾ? ಹಗ್ಗವನ್ನು...

  • ಪ್ರಮುಖ ವ್ಯಕ್ತಿಗಳ ಪರಿಚಯವನ್ನು ಕೇವಲ ಹತ್ತೇ ಹತ್ತು ಪಾಯಿಂಟ್‌ಗಳಲ್ಲಿ ಕಟ್ಟಿ ಕೊಡುವ ಪ್ರಯತ್ನವಿದು... 1. ವನ್ಯಜೀವಿ ತಜ್ಞ ಸ್ಟೀವ್‌ ಇರ್ವಿನ್‌ 1962ರ ಫೆಬ್ರವರಿ...

  • ಗೊಗ್ಗಯ್ಯನ ಮೂಗು ಬೆಳೆಯುತ್ತಾ ಹೋಯಿತು. ಅದನ್ನು ಹೊತ್ತುಕೊಂಡು ತಿರುಗಾಡುವುದೇ ಕಷ್ಟವಾಗತೊಡಗಿತು. ಕಡೆಗೊಂದು ದಿನ ಅದಕ್ಕೆ ಪರಿಹಾರವೂ ಸಿಕ್ಕಿತು. ಆ ಹುಡುಗ...

ಹೊಸ ಸೇರ್ಪಡೆ

  • ಬೆಂಗಳೂರು: ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಸಹಾಯಾನುದಾನ ಮತ್ತು ವಂತಿಗೆ ಹಾಗೂ ತೆರಿಗೆ ಪಾಲಿನ ಕಡಿತದ ಪರಿಣಾಮ 2020-21 ನೇ ಸಾಲಿನ ಬಜೆಟ್‌ ಮೇಲೆ ಪರಿಣಾಮ ಬೀರಲಿದ್ದು...

  • ಹುಬ್ಬಳ್ಳಿ: ಮಹದಾಯಿ ಕುರಿತು ಕೇಂದ್ರದಿಂದ ಅಧಿಸೂಚನೆ ಹೊರಡಿಸುವುದು ವಿಶೇಷವಾಗಿ ಇಬ್ಬರು ಸಚಿವರಿಗೆ ಪ್ರತಿಷ್ಠೆಯಾಗಿತ್ತು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ,...

  • ಕಾರವಾರ: ಕೊರೊನಾ ವೈರಸ್‌ ಕಾರಣಕ್ಕೆ ಜಪಾನ್‌ನ ಯೊಕೊಹಾಮಾದಲ್ಲಿ ಡೈಮಂಡ್‌ ಪ್ರಿನ್ಸಸ್‌ ಎಂಬ ಕ್ರೂಸ್‌ ಹಡಗಿನಲ್ಲಿ ಬಂಧಿಯಾಗಿದ್ದ ಕಾರವಾರ ಮೂಲದ ಅಭಿಷೇಕ್‌...

  • ಮುದಗಲ್ಲ (ರಾಯಚೂರು): ಚೀನಾದಲ್ಲಿ ಮಾರಣಹೋಮ ನಡೆಸಿರುವ ಕೊರೊನಾ ವೈರಸ್‌ ಪರಿಣಾಮ ಇಲ್ಲಿನ ಕಲ್ಲು ಗಣಿಗಾರಿಕೆ ಮೇಲೂ ಆಗಿದೆ. ಕೊರೊನಾ ವೈರಸ್‌ ಪರಿಣಾಮ ಚೀನಾ ಸೇರಿ...

  • ಬೆಂಗಳೂರು: ಸಿದ್ದರಾಮಯ್ಯ ಹೇಳಿದ ಕೂಡಲೇ ಕಾಂಗ್ರೆಸ್‌ ಬಿಟ್ಟು ಹೋಗಿರುವವರು ವಾಪಸ್‌ ಬರ್ತಾರೆ ಎಂದು ಕಾಂಗ್ರೆಸ್‌ ಹಿರಿಯ ನಾಯಕಿ ಮಾರ್ಗರೇಟ್‌ ಆಳ್ವಾ ಹೇಳಿಕೆಯನ್ನು...