ಯಂತ್ರದ ಹುಲಿಯ ಗರ್ಜನೆ

ಟಿಪ್ಪು ಸುಲ್ತಾನ ಮಾಡಿಸಿದ್ದ ಆಟಿಕೆ

Team Udayavani, May 30, 2019, 6:00 AM IST

LEAD-TIGER-(5)

ಇಂಗ್ಲೆಂಡಿನ ವಿಕ್ಟೋರಿಯಾ ಮತ್ತು ಆಲ್ಬರ್ಟ್‌ ವಸ್ತು ಸಂಗ್ರಹಾಲಯ ನೋಡಲು ಹೋದರೆ ಇಂದಿಗೂ ಹೆಚ್ಚು ಸಂಖ್ಯೆಯ ಜನರ ಗಮನ ಸೆಳೆಯುವುದು ಅಲ್ಲಿರುವ “ಯಂತ್ರದ ಹುಲಿ’. “ಮೈಸೂರಿನ ಹುಲಿ’ ಎನಿಸಿಕೊಂಡ ಟಿಪ್ಪು ಸುಲ್ತಾನನ ಬೇಸಗೆಯ ವಿರಾಮದ ಮನೆಯಿಂದ ಅದನ್ನು ಲಂಡನ್ನಿಗೆ ಸಾಗಿಸಿದ್ದರು. 68 ಇಂಚು ಉದ್ದ, 28 ಇಂಚು ಎತ್ತರವಿರುವ ಈ ಮರದ ವಿಗ್ರಹಕ್ಕೆ ಹಳದಿ ವರ್ಣವನ್ನು ಬಳಿಯಲಾಗಿದೆ. ನೆಲದ ಮೇಲೆ ಬಿದ್ದಿರುವ ಒಬ್ಬ ಆಂಗ್ಲ ಯೋಧನ ಗಂಟಲಿಗೆ ಬಾಯಿ ಹಾಕಿ ಹಲ್ಲುಗಳನ್ನು ಊರುತ್ತಿರುವ ಭಂಗಿಯಲ್ಲಿದೆ ಈ ಯಂತ್ರ.

ಗರ್ಜಿಸುತ್ತಿದ್ದ ಹುಲಿ
ಯಂತ್ರದ ಹುಲಿಗೆ ಒಂದು ಕೀಲಿ ಇದೆ. ಈಗ ಅದು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಇತಿಹಾಸದಲ್ಲಿ ದಾಖಲಾಗಿರುವ ಮಾಹಿತಿಯ ಪ್ರಕಾರ ಕೀಲಿಯನ್ನು ತಿರುಗಿಸಿದಾಗ ಹುಲಿ ಭೀಕರವಾಗಿ ಗರ್ಜಿಸುತ್ತಿತ್ತು. ನೆಲಕ್ಕುರುಳಿದ ಬ್ರಿಟಿಷ್‌ ಸೈನಿಕನ ಗಂಟಲಿಗೆ ಬಾಯಿ ಹಾಕುತ್ತಿತ್ತು. ಆಗ ಅಸಹಾಯಕ ಯೋಧ ನೋವಿನಿಂದ ನರಳುವ ದನಿ ಕೇಳಿಸುತ್ತಿತ್ತು.

ಸದ್ದು ಬರುತ್ತಿದ್ದು ಹೇಗೆ?
ಈ ಯಂತ್ರದ ಹುಲಿಯ ಕೀಲಿ ಕೈ ತಿರುಗಿಸಿ ತಿರುಗಿಸಿ ಟಿಪ್ಪು ತನ್ನ ವೈರಿ ಪಡೆಯ ಯೋಧ ಅನುಭವಿಸುವ ಸಂಕಟದ ದನಿಯನ್ನು ಕೇಳುತ್ತಾ ಖುಷಿಪಡುತ್ತಿದ್ದನಂತೆ. ಹುಲಿಯ ಬೆನ್ನಿನ ಬಳಿಯಿರುವ 4 ತಿರುಪು ಮೊಳೆಗಳನ್ನು ತೆಗೆದರೆ ಅಲ್ಲಿರುವ ಮರದ ಜೋಡಣೆಯನ್ನು ಕಳಚಬಹುದು. ಒಳಗೆ ಕಂಚು ಬಳಸಿ ತಯಾರಾಗಿರುವ ಪೈಪ್‌ ಅರ್ಗನ್‌ ವಾದ್ಯ ಇದೆ. ಯೋಧನ ಕೊರಳಿಗೆ ಹುಲಿ ಬಾಯಿ ಹಚ್ಚಿದಾಗ ಅವನ ಕೈ ಹದಿನೆಂಟು ಅಳವಡಿಕೆಗಳಿರುವ ಆನೆ ದಂತದಲ್ಲಿ ಮಾಡಿದ ಕೀ ಬೋರ್ಡನ್ನು ತಡವುತ್ತದೆ. ಆಗ ಪೈಪ್‌ ಆರ್ಗನ್‌ ಒಳಗೆ ಗಾಳಿ ತುಂಬಿ ಯೋಧನ ಆರ್ತನಾದ ಮತ್ತು ಹುಲಿಯ ಗರ್ಜನೆಯ ಸದ್ದು ಕೇಳಿಬರುವ ಹಾಗೆ ಸ್ವಯಂಚಾಲಿತ ವ್ಯವಸ್ಥೆ ಮಾಡಲಾಗಿತ್ತು.

ಹಾಳಾಗಿದ್ದು ಹೇಗೆ?
ಈಸ್ಟ್‌ ಇಂಡಿಯಾ ಕಂಪೆನಿ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯದಲ್ಲಿ ಟಿಪ್ಪುವಿನ ಹುಲಿ 1808ರ ಬಳಿಕ ಪ್ರದರ್ಶಿತವಾಗುತ್ತಿತ್ತು. 1880ರಲ್ಲಿ ಅದನ್ನು ವಿಕ್ಟೋರಿಯಾ ಮತ್ತು ಆಲ್ಬರ್ಟ್‌ ಸಂಗ್ರಹಾಲಯಕ್ಕೆ ವರ್ಗಾಯಿಸಲಾಯಿತು. ದ್ವಿತೀಯ ಮಹಾಯುದ್ಧದ ಕಾಲದವರೆಗೂ ಯಂತ್ರ ಚೆನ್ನಾಗಿ ಕಾರ್ಯನಿರ್ವಹಿಸುತ್ತಿತ್ತು. ಆದರೆ ವಸ್ತು ಸಂಗ್ರಹಾಲಯದ ಛಾವಣಿ ಕುಸಿದಾಗ ಯಂತ್ರದ ಹುಲಿ ಹಲವು ತುಂಡುಗಳಾಗಿತ್ತು. ಆವತ್ತಿನಿಂದ ಹುಲಿ ಮತ್ತು ಆಂಗ್ಲ ಸೈನಿಕ ತಮ್ಮ ದನಿಯನ್ನು ಕಳೆದುಕೊಂಡುಬಿಟ್ಟಿದ್ದರು.
ಯಂತ್ರದ ಹುಲಿ ತಮ್ಮ ವಿರುದ್ಧದ ಕ್ರೌರ್ಯದ ಪ್ರತೀಕವಾಗಿದ್ದರೂ ಆಂಗ್ಲರು ಯಂತ್ರವನ್ನು ಇಂದಿಗೂ ಜೋಪಾನವಾಗಿಟ್ಟಿದ್ದಾರೆ. ಅಮೆರಿಕ, ಯುರೋಪು ಮೊದಲಾದ ಹಲವು ದೇಶಗಳ ವಿಶೇಷ ಉತ್ಸವಗಳಲ್ಲಿ ಅದರ ಪ್ರದರ್ಶನವೂ ನಡೆದಿದೆ. ಈ ಹುಲಿಯ ಚಿತ್ರವಿರುವ ಅಂಚೆಚೀಟಿಗಳು, ಗೊಂಬೆಗಳು ಸೇರಿದಂತೆ ಹಲವಾರು ಸಾಮಗ್ರಿ ತಯಾರಾಗಿ ಇಂದಿಗೂ ಮಾರಾಟಗೊಳ್ಳುತ್ತಲೇ ಇವೆ.

ಹುಲಿ ಲಂಡನ್ನಿಗೆ ಹೋದ ಕತೆ
ಈ ಯಂತ್ರವನ್ನು ತಯಾರಿಸಿ ಕೊಟ್ಟವರು ಫ್ರಾನ್ಸಿನ ನಿವೃತ್ತ ಸೇನಾ ತಂತ್ರಜ್ಞರು, ಕುಶಲಕರ್ಮಿಗಳು ಹಾಗೂ ಬಡಗಿಗಳು. ಹುಲಿಯನ್ನು ಮರದಿಂದ ತಯಾರಿಸಲು ಮೈಸೂರು ಕಲೆಯ ಶೈಲಿಯನ್ನು ಬಳಸಲಾಗಿದೆ. 1799ರ ಮೇ 4ರಂದು ಈಸ್ಟ್‌ ಇಂಡಿಯಾ ಕಂಪೆನಿಯ ಸೈನಿಕರು ಟಿಪ್ಪುವಿನ ಅರಮನೆಗೆ ನುಗ್ಗಿದರು. ಅವರೊಂದಿಗೆ ನಡೆದ ಘರ್ಷಣೆಯು ಟಿಪ್ಪುವಿನ ಸಾವಿನೊಡನೆ ಅಂತ್ಯವಾಯಿತು. ಟಿಪ್ಪುವಿಗೆ ಸೇರಿದ ಹಲವಾರು ವಸ್ತು ವಿಶೇಷಗಳ ಜೊತೆಗೆ ಸಂಗೀತ, ನೃತ್ಯಗಳ ಕೊಠಡಿಯಲ್ಲಿದ್ದ ಈ ಯಂತ್ರದಹುಲಿ ಕೂಡ ವೈರಿಗಳ ವಶವಾಯಿತು. 1800ರಲ್ಲಿ ಅದನ್ನು ಇಂಗ್ಲೆಂಡಿಗೆ ಸಾಗಿಸಲಾಯಿತು. ಈಸ್ಟ್‌ ಇಂಡಿಯಾ ಕಂಪನಿಯ ಗವರ್ನರ್‌ ಜನರಲ್‌ “ಈ ಯಂತ್ರದ ಹುಲಿ ಟಿಪ್ಪುವಿನ ಅಹಂಕಾರ ಮತ್ತು ಆಂಗ್ಲ ವಿರೋಧಿ ಕ್ರೌರ್ಯದ ಪ್ರತಿರೂಪ’ ಎಂದು ಹೇಳಿದ.

-ಪ.ರಾಮಕೃಷ್ಣ ಶಾಸ್ತ್ರಿ

ಟಾಪ್ ನ್ಯೂಸ್

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-qwewqeqwe

Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.