ವಿಧೇಯ ನಾಣ್ಯ

Team Udayavani, Oct 17, 2019, 5:36 AM IST

f-1

ಜಾದೂ ಮಾಡೋರಿಗೆ ಚಪ್ಪಾಳೆಯೇ ಜೀವಾಳ. ಜಾಸ್ತಿ ಚಪ್ಪಾಳೆ ಯಾವ ಪ್ರಯೋಗಕ್ಕೆ ಬೀಳುತ್ತದೆ. ಯಾವುದಕ್ಕೆ ಬೀಳುವುದಿಲ್ಲ. ಈ ರೀತಿ ಜಾದೂ ಮಾಡಬೇಕಾದರೆ, ಟಾರ್ಗೆಟ್‌ ಯಾರನ್ನು ಮಾಡಬೇಕು? ಹೇಗೆ ಅವರನ್ನು ತಲುಪಬೇಕು ಇವೆಲ್ಲವೂ ಇವರಿಗೆ ತಿಳಿದಿರುತ್ತದೆ. ಇಂಥ ಚಪ್ಪಾಳೆ ತಂದುಕೊಡುವ ಜಾದೂ ಪ್ರಯೋಗಗಳಲ್ಲಿ ಪ್ರಮುಖವಾದದ್ದು ಈ ನಾಣ್ಯ ಜಾದೂ ಕೂಡ ಒಂದು. ಅದು ಹೇಗೆಂದರೆ, ಪ್ರೇಕ್ಷಕರಿಂದ ಒಂದು ನಾಣ್ಯವನ್ನು ತೆಗೆದುಕೊಳ್ಳಿ. ಅದನ್ನು ಅವರ ಕಣ್ಣೆದುರಲ್ಲೇ ಒಂದು ಗಾಜಿನ ಲೋಟದೊಳಗೆ ಹಾಕಿ. ಈಗ ನಿಮ್ಮ ಕೈಯನ್ನು ಆ ಲೋಟದ ಮೇಲೆ ಆಡಿಸುತ್ತಾ, “ಮೇಲೆ ಬಾ’ ಅಂದರೆ ನಾಣ್ಯ ಮೇಲೆ ಬರುತ್ತದೆ. “ಕೆಳಗೆ ಹೋಗು’ ಅಂದರೆ ಕೆಳಗೆ ಹೋಗುತ್ತದೆ. ನಾಣ್ಯ, ನೀವು ಹೇಳಿದಂತೆ ಕೇಳಿದಾಗ ಪ್ರೇಕ್ಷರಿಂದ ಚಪ್ಪಾಳೆಯೋ ಚಪ್ಪಾಳೆ.

ಈ ನಾಣ್ಯದ ಹಿಂದಿನ ಜಾದೂ ರಹಸ್ಯ ಇಷ್ಟೇ.

ಒಂದು ಉದ್ದವಾದ ತಲೆ ಕೂದಲಿಗೆ (ಹೆಂಗಸರ ಉದ್ದ ತಲೆಗೂದಲನ್ನು ಮೊದಲೇ ವ್ಯವಸ್ಥೆ ಮಾಡಿಟ್ಟುಕೊಳ್ಳಿ) ಎರಡೂ ತುದಿಯಲ್ಲಿ ಜೇನು ಮೇಣವನ್ನು ಸಣ್ಣ ಉಂಡೆಯಾಗಿ ಮಾಡಿ ಅಂಟಿಸಿ. ಅದರ ಒಂದು ತುದಿಯನ್ನು ನಿಮ್ಮ ಅಂಗಿಯ ಒಂದು ಗುಂಡಿಗೆ ಅಂಟಿಸಿಟ್ಟುಕೊಳ್ಳಿ. ಇದೆಲ್ಲವನ್ನು ನೀವು ಮೊದಲೇ ಮಾಡಿ ಸಿದ್ಧರಾಗಿರಬೇಕು. ಪ್ರೇಕ್ಷಕನಿಂದ ನಾಣ್ಯವನ್ನು ತೆಗೆದುಕೊಂಡ ತಕ್ಷಣ ಮೇಣದ ಇನ್ನೊಂದು ತುದಿಯನ್ನು ಅದಕ್ಕೆ ಉಪಾಯವಾಗಿ ಅಂಟಿಸಬೇಕು. ಆನಂತರ ನಾಣ್ಯವನ್ನು ಒಂದು ಗಾಜಿನ ಲೋಟಕ್ಕೆ ಹಾಕಿ. ನೀವು ಲೋಟವನ್ನು ಸ್ವಲ್ಪ ತಗ್ಗಿನಲ್ಲಿ ಹಿಡಿದುಕೊಂಡು, ಬಲಗೈಯ ಬೆರಳಿನಿಂದ ಮಂತ್ರ ಹಾಕುವವರಂತೆ ನಟಿಸುತ್ತಾ ಆ ಕೂದಲನ್ನು ಮೇಲೆ, ಕೆಳಗೆ ಚಲಿಸುವಂತೆ ಮಾಡಿದರೆ ನಾಣ್ಯ ಕೂಡಾ ಲೋಟದಲ್ಲಿ ಮೇಲೆ, ಕೆಳಗೆ ಹೋಗುತ್ತದೆ.

ಕೊನೆಗೆ, ನಾಣ್ಯವನ್ನು ಮತ್ತೆ ವಾಪಸ್‌ ಪ್ರೇಕ್ಷಕರಿಗೆ ಕೊಡಬೇಕು. ಆಗ ಏನು ಮಾಡಬೇಕೆಂದರೆ, ಗ್ಲಾಸ್‌ನಿಂದ ಎತ್ತಿ ಆನಂತರ, ಅದರ ಮೇಲೆ ಹರಡಿರುವ ಮೇಣವನ್ನು ಬೆರಳಿನಿಂದ ಉಪಾಯವಾಗಿ, ಯಾರಿಗೂ ಕಾಣದಂತೆ ಒರಸಿಕೊಡಿ. ಆಗ ನಿಮ್ಮ ಜಾದೂ ಪ್ರಯತ್ನ ಶೇ.ನೂರಕ್ಕೆ ನೂರರಷ್ಟು ಸಕ್ಸಸ್‌.

ಉದಯ್‌ ಜಾದೂಗಾರ್‌

ಟಾಪ್ ನ್ಯೂಸ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.