ಕೆಟ್ಟ ಮೇಲೆ ಬುದ್ಧಿ ಬಂತು


Team Udayavani, Nov 16, 2017, 6:30 AM IST

lead.jpg

ಒಂದೂರಲ್ಲಿ ವೋಹಿ ಎಂಬ ಯುವಕನಿದ್ದ. ಊಟಕ್ಕೆ ಕುಳಿತರೆ ನಾಲ್ಕು ಮಂದಿ ತಿನ್ನುವ ಆಹಾರವನ್ನು ಒಬ್ಬನೇ ಕಬಳಿಸುತ್ತಿದ್ದ. ಕೆಲಸ ಮಾತ್ರ ಮಾಡುತ್ತಿರಲಿಲ್ಲ. ಅವನ ಬಳಿ ಒಂದು ಆಮೆ ಇತ್ತು. ಆ ಆಮೆಯ ಸ್ವಭಾವವೂ, ಇವನ ಸ್ವಭಾವವೂ ಒಂದೇ ಆಗಿತ್ತು. ಹೀಗಾಗಿ ಅವನ ಸೋಮಾರಿತನದಿಂದಾಗಿ ಊರಿನವರು ಅವನಿಗೆ 
“ಆಮೆ’ ಎಂಬ ಅಡ್ಡ ಹೆಸರು ದಯಪಾಲಿಸಿದ್ದರು. ಆಮೆಯೊಡನೆ ಆಟ ಮತ್ತು ಕನಸು ಕಾಣುವುದು ಇವೆರಡೇ ಅವನು ಮಾಡುತ್ತಿದ್ದ ಕೆಲಸಗಳು.

ವೋಹಿ°ಯ ಸೋಮಾರಿತನದಿಂದ ಆತನ ತಾಯಿಯೂ ರೋಸಿ ಹೋಗಿದ್ದಳು. ಆಕೆ ಎಷ್ಟು ಬುದ್ಧಿವಾದ ಹೇಳಿದರೂ ಅವನು ಕೇಳುತ್ತಿರಲಿಲ್ಲ. ಅದಕ್ಕೆ ವೋಹಿ°, “ನಾನೇನು ಸುಮ್ಮನೆ ಮಲಗಿ ಗೊರಕೆ ಹೊಡೆಯುತ್ತೇನೆಂದು ಭಾವಿಸಿದೆಯಾ? ನಿದ್ರೆ ಮಾಡುವಾಗ ಎಂತೆಂಥ ಸುಂದರವಾದ ಕನಸುಗಳು ಬೀಳುತ್ತವೆ ಗೊತ್ತಾ? ಚೆಲುವಾದ ಅಪ್ಸರೆಯರನ್ನು ಕಂಡು, ಅವರಲ್ಲಿ ಒಬ್ಬಳನ್ನು ಆರಿಸಿ ಮದುವೆಯಾದಂತೆ, ಈ ದೇಶದ ರಾಜನಾಗಿ ಆನೆಯ ಮೇಲೆ ಸವಾರಿ ಮಾಡಿದಂತೆ, ಬಂಗಾರದ ನಾಣ್ಯಗಳ ರಾಶಿಯ ಮೇಲೆ ಮಲಗಿದಂತೆ ಕನಸುಗಳನ್ನು ಕಂಡು ಸಂತೋಷಪಡುತ್ತೇನೆ. ಮುಂದೊಂದು ದಿನ ಈ ಕನಸುಗಳೆಲ್ಲ ದಿಟವಾಗಲಿವೆ’ ಎನ್ನುತ್ತಿದ್ದ. 

ಮಗನ ಉದ್ಧಟತನವನ್ನು ನೋಡಿ ನೋಡಿ ತಾಯಿಯೂ ಬುದ್ಧಿವಾದ ಹೇಳುವುದನ್ನು ನಿಲ್ಲಿಸಿದಳು. ಅನಾರೋಗ್ಯಗೊಂಡ ತಾಯಿ ಹಠಾತ್ತನೆ ಒಂದು ದಿನ ನಿಧನ ಹೊಂದಿದಳು. ಒಂದೆರಡು ದಿನ ಬೇಜಾರಿನಲ್ಲಿದ್ದ ವೋಹಿ° ಮೂರನೆ ದಿನಕ್ಕೆ ಯಥಾಸ್ಥಿತಿಗೆ ಮರಳಿದ. ಮನೆಯಲ್ಲಿದ್ದ ಆಹಾರದ ದಾಸ್ತಾನು ಮುಗಿಯುವವರೆಗೆ ಕಾದ. ಆಮೇಲೆ ಆಮೆಯನ್ನು ಹಣಕ್ಕೆ ಮಾರಿದ. ಆ ಹಣವೂ  ಖರ್ಚಾದ ಮೇಲೆ ಅಕ್ಕಪಕ್ಕದವರ ಮನೆಯವರ ಬಳಿ ಕೈಚಾಚಿದ. ಇವನ ಬಂಡವಾಳ ತಿಳಿದಿದ್ದರಿಂದ ಅವರಲ್ಲಿ ಯಾರೊಬ್ಬರೂ ಸಹಾಯ ಮಾಡಲಿಲ್ಲ. ಬದಲಿಗೆ “ದುಡಿದು ತಿನ್ನಲು ಏನು ಧಾಡಿ ನಿನಗೆ’ ಎಂದು ಬೈದು ಕಳಿಸಿದರು.

ಆದರೂ ಅವನಿಗೆ ದುಡಿಯಲು ಮನಸ್ಸಾಗಲಿಲ್ಲ. ಆಹಾರ ಹುಡುಕುತ್ತ ಮುಂದೆ ಹೋದಾಗ ಒಂದೆಡೆ ಮದುವೆಯೊಂದು ನಡೆಯುತ್ತಿತ್ತು. ಬಂದವರು ಊಟಕ್ಕೆ ಕುಳಿತಿದ್ದರು. ಅವನು ಅವರ ಪಂಕ್ತಿಯಲ್ಲಿ ಸೇರಿಕೊಂಡ. ಬಗೆಬಗೆಯ ಕಜ್ಜಾಯಗಳ ರುಚಿಕರವಾದ ಭೋಜನದಿಂದ ಹೊಟ್ಟೆ ತುಂಬಿತು. ಆಗ ಅವನಿಗೆ ತಾನೂ ಮದುವೆಯಾದರೆ ಇಂತಹ ಊಟ ಮಾಡಬಹುದೆಂಬ ಯೋಚನೆಯುಂಟಾಯಿತು. ಅಲ್ಲಿದ್ದ ಒಬ್ಬ ಯುವತಿಯೊಂದಿಗೆ, “ನೀನು ನನ್ನನ್ನು ಮದುವೆಯಾಗುತ್ತೀಯಾ?’ ಎಂದು ಕೇಳಿದ. ಯುವತಿ ಕಿಸಕ್ಕನೆ ನಕ್ಕಳು. “ಯಾವ ಸೀಮೆಯ ರಾಜಕುಮಾರ ಅಂತ ನಿನ್ನನ್ನು ಮದುವೆಯಾಗಲಿ? ನಿನಗೆ ದುಡಿಯಲು ಬರುವುದಿಲ್ಲ. ವಾಸಕ್ಕೊಂದು ಮನೆಯಿಲ್ಲ. ತಾಯಿಯನ್ನು ದುಡಿಸಿ ತಿಂದು ಹಗಲಿರುಳೂ ಮಲಗಿ ಕನಸು ಕಾಣುತ್ತಿದ್ದ ನಿನಗೆ ಜೊತೆಯಾಗಲು ಯಾರೂ ಬರುವುದಿಲ್ಲ’ ಎಂದು ಕಟುವಾಗಿ ಹೇಳಿದಳು.

ಯುವತಿಯ ಮಾತು ಕೇಳಿ ವೋಹಿ°ಗೆ ಬೇಸರವಾಯಿತು. ತನಗೂ ದುಡಿಯಲು ಬರುತ್ತದೆಂಬುದನ್ನು ಈ ಯುವತಿಗೆ ತೋರಿಸಿ ಕೊಟ್ಟು ಅವಳನ್ನೇ ಮದುವೆಯಾಗುವಂತೆ ಮನಮೊಲಿಸ ಬೇಕೆಂದು ನಿರ್ಧರಿಸಿದ. ಕೆಲಸ ಹುಡುಕಿಕೊಂಡು ಹೊರಟ. ಆದರೆ ಯಾವ ಕೆಲಸವೂ ಅವನಿಗೆ ಇಷ್ಟವಾಗಲಿಲ್ಲ. ಆಗ ಒಂದೆಡೆ ಮಣ್ಣಿನ ಗಡಿಗೆಗಳನ್ನು ಮಾರಲು ಕುಳಿತವನನ್ನು ವೋಹಿ° ನೋಡಿದ. ಅವನು ನೂರಾರು ಗಡಿಗೆಗಳನ್ನು ಹರಡಿಕೊಂಡಿದ್ದರೂ ಏನೂ ಶ್ರಮವಿಲ್ಲದೆ ಅರೆ ಘಳಿಗೆಯಲ್ಲಿ ಅವೆಲ್ಲವೂ ಮಾರಾಟವಾಯಿತು. ಮಾರಾಟಗಾರ ಚೀಲದಲ್ಲಿ ಹಣ ತುಂಬಿಕೊಂಡು ಮನೆಗೆ ಹೊರಟ. ಇದು ಸುಲಭವಾದ ಕೆಲಸ ಅಂತ ಅನಿಸಿತು ಅವನಿಗೆ. ಅವನ ಬಳಿಗೆ ಹೋದ. “ಈ ಗಡಿಗೆಗಳನ್ನು ನೀನು ಶ್ರಮಪಟ್ಟು ಮಾಡಿದ್ದೀಯಾ?’ ಎಂದು ಕೇಳಿದ. “ಇಲ್ಲ, ಸಮೀಪದಲ್ಲಿ ಒಬ್ಬ ಕುಂಬಾರನಿದ್ದಾನೆ. ಅವನು ಇವನ್ನೆಲ್ಲ ತಯಾರಿಸಿ ನನಗೆ ಕೊಡುತ್ತಾನೆ. ಮಾರಾಟದಲ್ಲಿ ಬಂದ ಹಣದಲ್ಲಿ ಅರ್ಧ ಪಾಲನ್ನು ಅವನಿಗೆ ಕೊಡುತ್ತೇನೆ. ಇದು ತುಂಬ ಸುಲಭವಾದ ವ್ಯಾಪಾರ’ ಎಂದು ಹೇಳಿದ ಮಾರಾಟಗಾರ.

ಇದು ಹಣ ಸಂಪಾದನೆಗೆ ಯೋಗ್ಯವಾದ ಮಾರ್ಗ ಎಂದು ವೋಹಿ°ಗೆ ಅನಿಸಿತು. ಕುಂಬಾರನ ಬಳಿಗೆ ಹೋದ. ತನಗೂ ಮಾರಾಟ ಮಾಡಲು ಗಡಿಗೆಗಳನ್ನು ಕೊಡಬೇಕು, ಸಿಕ್ಕಿದ ಹಣದಲ್ಲಿ ಸಮಪಾಲು ಕೊಡುವುದಾಗಿ ಹೇಳಿದ. ಕುಂಬಾರ ಸಂತೋಷದಿಂದ ಬಿದಿರಿನ ಗಳುವಿಗೆ ಮಡಕೆಗಳನ್ನು ಕಟ್ಟಿ ಅವನಿಗೆ ಕೊಟ್ಟ. ಅದನ್ನು ಹೊತ್ತು ಮನೆಗೆ ತರುವಾಗ   ವೋಹಿ°ಗೆ ತುಂಬ ಆಯಾಸವಾಯಿತು. ಮಡಕೆಗಳನ್ನು ಕೆಳಗಿಳಿಸಿ ಕಾಲು ಚಾಚಿ ಮಲಗಿಕೊಂಡ. ಗಾಢವಾದ ನಿದ್ರೆ ಬಂದಿತು. ನಿದ್ರೆಯಲ್ಲಿ ಕನಸೊಂದನ್ನು ಕಂಡ. ಮಕ್ಕಳಿಲ್ಲದ ರಾಜ ತನ್ನ ಉತ್ತರಾಧಿಕಾರಿಯನ್ನು  ಹುಡುಕುತ್ತಿದ್ದ. ಆಗ ಅರಮನೆಯ ಆನೆ ಬಂದು ವೋಹಿ°ಯ ಕೊರಳಿಗೆ ಹೂಮಾಲೆ ಹಾಕಿತು. ರಾಜ ವೋಹಿ°ಯನ್ನೇ ಉತ್ತರಾಧಿಕಾರಿಯನ್ನಾಗಿ ಮಾಡಿದ. ಆಗ ಅವನನ್ನು ಮದುವೆಯಾಗಲು ನಿರಾಕರಿಸಿದ್ದ ಯುವತಿ ಎದುರಿಗೆ ಬಂದು ತನ್ನನ್ನು ಜೊತೆಗೆ ಕರೆದೊಯ್ಯುವಂತೆ ಗೋಗರೆದಳು. ಅವನು ತಿರಸ್ಕಾರದಿಂದ ಅವಳಿಗೆ ಬಲವಾಗಿ ಜಾಡಿಸಿ ಒದ್ದ. 
ಹೀಗೆ ಮಲಗಿ ಕನಸು ಕಾಣುತ್ತಿದ್ದಾಗ ದೊಡ್ಡ ಸದ್ದಾಯಿತು. ಆ ಸದ್ದಿಗೆ ಬೆಚ್ಚಿದ ವೋಹಿ°ಗೆ ತಕ್ಷಣ  ಎಚ್ಚರವಾಯಿತು. ಕನಸಿನಲ್ಲಿ ಅವನು ಯುವತಿ ಎಂದುಕೊಂಡು  ತಾನು ತಂದಿಟ್ಟ ಗಡಿಗೆಗಳಿಗೆ ಒದ್ದಿದ್ದ. ಅವೆಲ್ಲವೂ ಒಡೆದು ಚೂರುಚೂರಾಗಿ ಬಿದ್ದಿದ್ದವು.

ವೋಹಿ°ಗೆ ಇದನ್ನು ಕಂಡು ದುಃಖವೂ, ನಾಚಿಕೆಯೂ ಏಕಕಾಲದಲ್ಲಿ ಆಯಿತು. ಆ ಕ್ಷಣವೇ ಆಲಸ್ಯವನ್ನು ತೊರೆದ. ಇನ್ನುಮುಂದೆ ಮೈ ಮುರಿದು ಕೆಲಸ ಮಾಡಿಯೇ ಜೀವನ ನಡೆಸುತ್ತೇನೆಂದು ನಿರ್ಧರಿಸಿದ ಮತ್ತು ಹಾಗೆಯೇ ಬದುಕು ನಡೆಸಿದ. 

– ಪ. ರಾಮಕೃಷ್ಣ ಶಾಸ್ತ್ರಿ

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-qweqwewq

Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು

1-wewqe

Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್

2-aa

ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.