ಹದಿನಾಲ್ಕು ರಾಜದೋಷಗಳು ಯಾವುವು?

Team Udayavani, Jun 1, 2019, 11:32 AM IST

ರಾಮಾಯಣದಲ್ಲಿ ಶ್ರೀರಾಮಚಂದ್ರ ಭರತನಿಗೆ ರಾಜ್ಯಭಾರವನ್ನು ಒಪ್ಪಿಸಿ ಹದಿನಾಲ್ಕು ಕಿವಿಮಾತನ್ನು ಹೇಳುತ್ತಾನೆ. ಆ ಹದಿನಾಲ್ಕು ಕಿವಿಮಾತುಗಳು ಇವತ್ತಿಗೂ ಪ್ರಸ್ತುತ. ಆಳುವವನಿಗೆ ಮಾತ್ರವಲ್ಲ, ಎಲ್ಲರ ಬದುಕಿಗೂ ಇವು ಹೊಂದುವಂತಹ ಮಾರ್ಗದರ್ಶಕ ನುಡಿಗಳು. ಇವನ್ನು ಹದಿನಾಲ್ಕು ರಾಜದೋಷಗಳು ಎಂದೇ ಕರೆಯಲಾಗಿದೆ.
1. ನಾಸ್ತಿಕತೆ
2. ಸುಳ್ಳು
3. ಸಿಟ್ಟು
4. ಅನವಧಾನ
5. ನಿಧಾನವಾಗಿ ತಡೆದು ಕೆಲಸಮಾಡುವುದು.
6. ಪ್ರಾಜ್ಞರಾದ ಸಜ್ಜನರೊಡನೆ ಸೇರದಿರುವುದು.
7. ಸೋಮಾರಿತನ.
8. ಪಂಚೇಂದ್ರಿಯಗಳಿಗೆ ಅಧೀನರಾಗಿ ಇಂದ್ರಿಯ ಚಾಪಲ್ಯದಲ್ಲಿ ಮುಳುಗಿರುವುದು.
9. ಯಾರೊಡನೆಯೂ ಸಮಾಲೋಚಿಸದೆ ಏಕಪಕ್ಷೀಯವಾದ ನಿರ್ಧಾರ.
10. ಅನುಭವವಿಲ್ಲದವರ ಜೊತೆಗೆ ಮಂತ್ರಾಲೋಚನೆ.
11. ನಿಶ್ಚಯಿಸಿದ ಕಾರ್ಯವನ್ನು ಆರಂಭಿಸದಿರುವುದು.
12. ಮಂತ್ರಾಲೋಚನೆಯನ್ನು ರಹಸ್ಯವಾಗಿ ಉಳಿಸಿಕೊಳ್ಳದಿರುವುದು.
13. ಮಂಗಳಕರವಾದ ಶುಭಕಾರ್ಯವನ್ನು ಮಾಡದಿರುವುದು.
14. ಎಲ್ಲ ಶತ್ರುಗಳ ಮೇಲೂ ಏಕಕಾಲದಲ್ಲಿ ಯುದ್ಧಾರಂಭ.
ಇವು ಬದುಕಿನಲ್ಲಿ ಯಶಸ್ಸು ಪಡೆಯಬೇಕು ಎನ್ನುವಾತ ಅನುಸರಿಸಬೇಕಾದ ಸೂತ್ರಗಳೇ ಆಗಿವೆ. ಬದುಕು ಎಂಬುದು ಒಂದು ಸುಂದರ ಪಯಣವಂತೂ ಅಲ್ಲವೇ ಅಲ್ಲ. ಅದನ್ನು ಸುಂದರವಲ್ಲದಿದ್ದರೂ ಸರಳವಾಗಿಸಿಕೊಂಡು, ಅಷ್ಟರÇÉೇ ನೆಮ್ಮದಿಯನ್ನು ಕಾಣುವುದಕ್ಕೆ ಈ ಸೂತ್ರಗಳು ಸಹಾಯಕ. ಮನುಷ್ಯ ಹುಟ್ಟಿನಿಂದ ಸಾವಿನತನಕವೂ ಪರಾವಲಂಬಿ. ಹಲವು ವೈವಿಧ್ಯಗಳ, ವೈರುಧ್ಯಗಳ ನಡುವೆ ಬಾಳನ್ನು ಕಟ್ಟಿಕೊಳ್ಳುವಾಗ ಈ ಹದಿನಾಲ್ಕೂ ದೋಷಗಳಿಂದ ದೂರವಿರಬೇಕಾದ ಅನಿವಾರ್ಯತೆ ಈ ಕಲಿಯುಗದಲ್ಲಿ ಖಂಡಿತವಾಗಿಯೂ ಇದೆ.

ಆಸ್ತಿಕತೆ ಒಂದು ಉತ್ಸಾಹಕ್ಕೆ ಕಾರಣವಾದರೆ, ನಾಸ್ತಿಕತೆಯಲ್ಲಿ ನಕಾರಾತ್ಮಕ ಗುಣಗಳತ್ತ ನಮ್ಮನ್ನು ಒಯ್ಯುವ ಅವಕಾಶ ಜಾಸ್ತಿ. ಸುಳ್ಳು ಎಂಬುದು ಒಂದು ಬಗೆಯ ಆತ್ಮವಂಚನೆ. ನಮ್ಮ ಆತ್ಮವನ್ನೇ ವಂಚಿಸಿಕೊಂಡು ಮಾಡುವ ಕಾರ್ಯ, ಆಡುವ ಮಾತು ನಮ್ಮ ಏಳಿಗೆಗೇ ಅಡ್ಡಿಯಾಗುತ್ತದೆ. ಸಿಟ್ಟು ಮನುಷ್ಯನ ಮಹಾನ್‌ ವೈರಿ. ಪರಾವಲಂಬಿಯಾದವನು ಮೊದಲು ಬಿಡಬೇಕು. ಸಿಟ್ಟಿನಿಂದ ದ್ವೇಷ, ಅಸೂಯೆ, ಅಶಾಂತಿಯೇ ನೆಲೆಯಾಗುವ ಸಂಭವವೇ ಹೆಚ್ಚಿರುವಾಗ ಇದು ಬದುಕನ್ನು ಹಾಳುಗೆಡುವುದರಲ್ಲಿ ಸಂಶಯವಿಲ್ಲ. ಅನವಧಾನ ನಮ್ಮ ಅರಿವಿನ ಹಾದಿಯನ್ನು ವಿಸ್ತಾರಗೊಳಿಸದು. ಹಾಗಾಗಿ, ಒಂದಿಷ್ಟು ಅವಧಾನ ಅಥವಾ ಏಕಚಿತ್ತತೆ ಇರಲೇ ಬೇಕು.ಯಾವುದೇ ಕೆಲಸವನ್ನು ಸಮಯಕ್ಕೆ ಸರಿಯಾಗಿ ಮಾಡಿದರೆ ಮಾತ್ರ ತಕ್ಕ ಫ‌ಲ ಸಿಗುವುದು. ಇಲ್ಲದಿದ್ದರೆ ನಿರಾಶೆ ಕಟ್ಟಿಟ್ಟ ಬುತ್ತಿ. ಇನ್ನು, ಸಜ್ಜನರ ಸಂಗ ಹೆಜ್ಜೆàನು ಸವಿದಂತೆ. ಇದು ನಮಗೆ ಗೊತ್ತೇ ಇದೆ. ಸೋಮಾರಿತನ ಬದುಕನ್ನು ಹರಿಯಗೊಡುವುದಿಲ್ಲ. ಇದು ಬದುಕನ್ನು ನಿಧಾನವಾಗಿ ಕೊಲ್ಲುವ ವಿಷ. ಇಂದ್ರಿಯಗಳನ್ನು ಗೆಲ್ಲದೆ ಯಾವುದೇ ಸಾಧನೆಯೂ ಅಸಾಧ್ಯ.

ಬದುಕಿನ ಸಂದಿಗ್ಧಘಟ್ಟಗಳು ಆಕಸ್ಮಿಕವಾಗಿ ಎದುರಿಗೆ ಬಂದು ಬಿಡುತ್ತವೆ. ಆಗ ಒಂದು ಯೋಚನೆ, ಗಟ್ಟಿಯಾದ, ಸಮರ್ಪಕವಾದ ನಿರ್ಧಾರ ಮಾಡಲೇಬೇಕು. ಅಂಥ ನಿರ್ಧಾರಕ್ಕೆ ಪ್ರಾಜ್ಞರ ಜೊತೆ ಸಮಾಲೋಚನೆ ಮಾಡಿಕೊಂಡರೆ ಎಲ್ಲವೂ ಸುಸೂತ್ರ. ಹಾಗೆಯೇ, ಅನನುಭವಿಯ ಜೊತೆಗೆ ಮಂತ್ರಾಲೋಚನೆಯಿಂದ ಕಾರ್ಯಸಿದ್ಧಿಯಾಗದು. ಜೀವನದಲ್ಲಿ ಒಂದು ನಿರ್ಧಾರ ಎಷ್ಟು ಮುಖ್ಯವೋ ಆ ನಿರ್ಧರಿತ ಕೆಲಸವನ್ನು ಆರಂಭಿಸುವುದೂ ಅಷ್ಟೇ ಮುಖ್ಯ. ನಿಶ್ಚಯಿಸಿದ ಕಾರ್ಯವನ್ನು ವಿಳಂಬವಿಲ್ಲದೆ ಆರಂಭಿಸಬೇಕು. ಅಲ್ಲದೆ, ಕೆಲವು ಮಂತ್ರಾಲೋಚನೆಗಳನ್ನು ಗುಟ್ಟಾಗಿಯೇ ಇಟ್ಟುಕೊಳ್ಳಬೇಕು. ಅವು ಕೇವಲ ಗುಟ್ಟಲ್ಲ, ನಮ್ಮೊಳಗಿನ ಶಕ್ತಿ. ಮಂಗಳಕರವಾದ ಶುಭಕಾರ್ಯಗಳನ್ನು ಮಾಡುತ್ತ, ಅವುಗಳಲ್ಲಿ ಭಾಗಿಯಾಗುತ್ತ ಮನಸ್ಸು ಸ್ಥಿರವಾಗಿ¨ªಾಗ, ಶುಭದಿಂದ ಶುಭವೇ ಹುಟ್ಟಿದಾಗ ಬದುಕು ಪರಿಶುದ್ಧವಾಗುತ್ತದೆ. ಬದುಕು ಎಂದಮೇಲೆ, ನಾಲ್ಕು ಜನರ ನಡುವೆ ಬದುಕುವಾಗ ಮಿತ್ರರೂ ಶತ್ರುಗಳೂ ಇದ್ದೇ ಇರುತ್ತಾರೆ. ಆದರೆ, ಏಕಕಾಲದಲ್ಲಿ ಎÇÉಾ ಶತ್ರುಗಳನ್ನು ಎದುರಿಸ ಹೊರಟರೆ ಮಾತ್ರ, ಶತ್ರು-ಶತ್ರುಗಳು ಒಂದಾಗಿ ನಮಗೆ ಸೋಲು ಉಂಟಾಗುತ್ತದೆ. ಈ ಹದಿನಾಲ್ಕು ದೋಷಗಳು ನಮ್ಮನ್ನು ಬಾಧಿಸಿದಂತೆ ಜೀವನವನ್ನು ಸನ್ಮಾರ್ಗದಲ್ಲಿ ಕೊಂಡೊಯ್ಯುವ ಚಾತುರ್ಯ ನಮ್ಮದಾಗಬೇಕು. ಇದಕ್ಕೆ ಈ ದೋಷಗಳನ್ನು ನೆನಪಿಟ್ಟುಕೊಂಡು, ಅನುಸರಿಸಿಕೊಂಡು ಬಾಳುವುದೇ ಗೆಲುವಿನ ಮಾರ್ಗ ಮತ್ತು ಧರ್ಮ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಶ್ರೀ ಮಹಾವಿಷ್ಣುವಿನ ದಶಾವತಾರಗಳಲ್ಲಿ ಕೃಷ್ಣಾವತಾರಕ್ಕೆ ವಿಶಿಷ್ಟ ಮಹಣ್ತೀವಿದೆ. ಕೃಷ್ಣಾವತಾರಕ್ಕೆ ಹೋಲಿಸಿದರೆ ಇನ್ನಿತರ ಅವತಾರಗಳಲ್ಲಿ ದೇವರು ಸಾಮಾನ್ಯ...

  • ಎದೆ, ಹಣೆ, ಕಣ್ಣು, ಮನಸ್ಸು, ಮಾತು, ಕೈಗಳು ಪದಗಳು ಮತ್ತು ಮೊಣಕಾಲುಗಳನ್ನು ನೆಲಕ್ಕೆ ತಾಗಿಸಿ ನೆಲದಲ್ಲಿ ಉದ್ದಂಡ ನಮಸ್ಕಾರ ಮಾಡುವುದಕ್ಕೆ ಸಾಷ್ಟಾಂಗ ನಮಸ್ಕಾರ ಎನ್ನುತ್ತಾರೆ....

  • ಆಡಂಬರವಿಲ್ಲದ, ಶುದ್ದವಾದ ಭಕ್ತಿ ನಮ್ಮೊಳಗೆ ಹುಟ್ಟಬೇಕು. ಯಜ್ಞಮಾಡಿಯೇ ದೇವರನ್ನು ಸಂಪ್ರೀತಿಗೊಳಿಸುತ್ತೇನೆ ಎಂಬುದು ನಮ್ಮೊಳಗಿನ ಅಹಂ ಅಷ್ಟೆ. ಯಜ್ಞದಲ್ಲಿ...

  • ಅರಿ ಎಂದರೆ ಶತ್ರು ಎಂದರ್ಥ.ಈ ಆರು ವಿಧದ ಮನಸ್ಸಿನ ಭಾವಗಳು ನಮ್ಮ ಬದುಕಿಗೆ ಶತ್ರುವಾಗಿರುವುದರಿಂದ ಇವನ್ನು ಅರಿಷಡ್‌ ವರ್ಗ ಅಂದರೆ ಆರು ವೈರಿಗಳು ಎಂದು ಪರಿಗಣಿಸಲಾಗಿದೆ....

  • 1. ದೇವಸ್ಥಾನಕ್ಕೆ ಹೋಗುವುದರಿಂದ ನಮಗೆ ಅಲ್ಲಿನ ಸಾತ್ತ್ವಿಕತೆಯನ್ನು ಗ್ರಹಿಸಲು ಸಾಧ್ಯವಾಗುತ್ತದೆ ಮತ್ತು ದೇವಸ್ಥಾನದಲ್ಲಿರುವ ಸಾತ್ತ್ವಿಕ ವಾತಾವರಣದಿಂದಾಗಿ...

ಹೊಸ ಸೇರ್ಪಡೆ