ಆನೆಗುಡ್ಡೆಯ ಅನನ್ಯ ಸಂತರ್ಪಣೆ

ಕಡಬುಪ್ರಿಯ ಗಣನಾಥನ ಸನ್ನಿಧಾನ

Team Udayavani, Aug 31, 2019, 5:00 AM IST

ಸಪ್ತಕ್ಷೇತ್ರಗಳಲ್ಲಿ ಒಂದಾದ ಕುಂಭಾಸಿಯ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನವು, ಕರಾವಳಿಯ ಪ್ರಸಿದ್ಧ ದೇವಸ್ಥಾನಗಳಲ್ಲಿ ಒಂದಾಗಿದೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ನಿಸರ್ಗ ರಮಣೀಯವಾದ ಸ್ಥಳದಲ್ಲಿ ಈ ಗಣಪನ ಪುಣ್ಯಕ್ಷೇತ್ರವಿದೆ. ಇದು, ಕರಾವಳಿಯ ಪ್ರಸಿದ್ಧ ದೇವಸ್ಥಾನಗಳಲ್ಲಿಯೇ ಅತೀ ಪುರಾತನವಾಗಿದ್ದು, ಇಲ್ಲಿನ ಅನ್ನ ಸಂತರ್ಪಣೆಯೂ ಅಷ್ಟೇ ವಿಶೇಷ.

ನಿತ್ಯ ಎಷ್ಟು ಮಂದಿಗೆ ಭೋಜನ?
ಇಲ್ಲಿ ಪ್ರತಿನಿತ್ಯ 2000ಕ್ಕೂ ಹೆಚ್ಚಿನ ಭಕ್ತರು ಮಧ್ಯಾಹ್ನ ಭೋಜನ ಸವಿಯುತ್ತಾರೆ. ಭಾನುವಾರ, ಮಂಗಳವಾರ, ಶುಕ್ರವಾರ ರಜಾದಿನಗಳಲ್ಲಿ ಭಕ್ತರ ಸಂಖ್ಯೆ ಅಧಿಕವಾಗಿರುತ್ತದೆ. ರಥೋತ್ಸವ ಹಾಗೂ ಚೌತಿಯಂದು 50 ಸಾವಿರಕ್ಕೂ ಅಧಿಕ ಭಕ್ತರು ಭೋಜನ ಪ್ರಸಾದ ಸವಿಯುತ್ತಾರೆ.

ಯಂತ್ರಗಳ ಮೋಡಿ
10 ಸಾವಿರ ಮಂದಿಗೆ ಅಡುಗೆ ಸಿದ್ಧಪಡಿಸುವ ಸಾಮರ್ಥ್ಯವಿರುವ ದೊಡ್ಡ ಗಾತ್ರದ ಬಾಯ್ಲರ್‌ ಇದೆ. ಅನ್ನ, ಪಾಯಸ, ಸಾಂಬಾರು ತಯಾರಿಕೆಗೆ ಇದು ಬಳಕೆಯಾಗುತ್ತಿದೆ. ಗ್ಯಾಸ್‌ ಸಿಲಿಂಡರ್‌ನಲ್ಲಿ ಅಡುಗೆ ತಯಾರಾಗುತ್ತದೆ. ಅತ್ಯಾಧುನಿಕ ತಂತ್ರಜ್ಞಾನದ ಡಿಶ್‌ವಾಶ್‌ ವ್ಯವಸ್ಥೆ ಕೂಡಾ ಇದೆ.

ಭಕ್ಷé ಸಮಾಚಾರ :
– ನಿತ್ಯವೂ ಅನ್ನ- ತಿಳಿಸಾರು, ಸಾಂಬಾರು, ಚಟ್ನಿ, ಗಟ್ಟಿ ಪಲ್ಯ, ಪಾಯಸ.
– ಕುಂಬಳಕಾಯಿ, ಟೊಮೇಟೊ, ಬದನೆಕಾಯಿ, ಸೌತೆಕಾಯಿ, ಆಲೂಗಡ್ಡೆ, ಕೊತ್ತಂಬರಿ ಸೊಪ್ಪು… ಇಲ್ಲಿ ಹೆಚ್ಚು ಬಳಕೆಯಾಗುವ ತರಕಾರಿ.

ಊಟದ ಸಮಯ
– ಮಧ್ಯಾಹ್ನ 12.45 ರಿಂದ 3 ಗಂಟೆ ತನಕ
– ಏಕಾದಶಿ, ಕೃಷ್ಣ ಜನ್ಮಾಷ್ಟಮಿ ಹಾಗೂ ಖಗ್ರಾಸ ಗ್ರಹಣದ ವೇಳೆ ಅನ್ನದಾನ ಸೇವೆ ಇರುವುದಿಲ್ಲ.

ಊಟ ವಿಶೇಷ
– ವ್ರತಾನುಷ್ಠಾನದಲ್ಲಿರುವ ಭಕ್ತರಿಗೆ ಬಾಳೆಎಲೆಯಲ್ಲಿ ಪ್ರತ್ಯೇಕ ಊಟ.
– ಭಕ್ತಾದಿಗಳಿಗೆ ಬಫೈ ವ್ಯವಸ್ಥೆಯ ಮೂಲಕ ಬಟ್ಟಲು ಊಟ ವ್ಯವಸ್ಥೆ.
– ಸಹಸ್ರ ನಾಳಿಕೇರ ಗಣಯಾಗ, ಕಡಬು ಸೇವೆ, ಅಷ್ಟೋತ್ತರ ಪೂಜೆ ನೆರವೇರಿಸಿದ ಭಕ್ತಾದಿಗಳಿಗೆ ಕಲ್ಲುಸಕ್ಕರೆ- ಕಡಲೆ ಪ್ರಸಾದ ಹಾಗೂ ದೇವಾಲಯದ ಬೆಲ್ಲದ ಪಂಚಕಜ್ಜಾಯ ವಿತರಣೆ ಇರುತ್ತದೆ.

ಭೋಜನ ಶಾಲೆ ಹೇಗಿದೆ?
ದೇಗುಲದ ಆವರಣದಲ್ಲಿಯೇ ಸುಸಜ್ಜಿತ ಶ್ರೀ ಸಿದ್ಧಿ ವಿನಾಯಕ ಭೋಜನಾ ಶಾಲೆ ಇದೆ. ಮೇಲಿನ ಮಹಡಿಯಲ್ಲೂ ಭೋಜನ ವಿತರಣೆ ವ್ಯವಸ್ಥೆಯಿದೆ. ಒಂದು ಸಲಕ್ಕೆ 2 ಸಾವಿರ ಮಂದಿ ಕುಳಿತು ಊಟ ಮಾಡಬಹುದು.

ಸಂಖ್ಯಾ ಸೋಜಿಗ
2- ಕ್ವಿಂಟಲ್‌ ಅಕ್ಕಿ ನಿತ್ಯ ಬಳಕೆ
300- ಲೀಟರ್‌ ಸಾಂಬಾರು
100- ಕಾಯಿಯಿಂದ ಚಟ್ನಿ
3.5- ಕ್ವಿಂಟಲ್‌ ತರಕಾರಿ ನಿತ್ಯ ಬಳಕೆ
2000- ಸಾವಿರ ಭಕ್ತರಿಗೆ ನಿತ್ಯ ಅನ್ನಪ್ರಸಾದ
4- ಬಾಣಸಿಗರಿಂದ ಅಡುಗೆ ತಯಾರಿ
2,00,000- ಭಕ್ತರು ಕಳೆದ ವರ್ಷ ಭೋಜನ ಸವಿದವರು

ದೇಗುಲಕ್ಕೆ ಎಷ್ಟೇ ಪ್ರಮಾಣದಲ್ಲಿ ಭಕ್ತರು ಆಗಮಿಸಿದರೂ, ಭೋಜನ ಪ್ರಸಾದ ವಿತರಣೆಯನ್ನು ಅಚ್ಚುಕಟ್ಟಾಗಿಯೇ ನಿರ್ವಹಿಸುತ್ತೇವೆ.
– ಕೆ. ಶ್ರೀರಮಣ ಉಪಾಧ್ಯಾಯ , ಆಡಳಿತ ಧರ್ಮದರ್ಶಿಗಳು

ಕಳೆದ 20 ವರ್ಷದಿಂದ ಶುಚಿ ರುಚಿಯಾದ ಅಡುಗೆ ತಯಾರಿಯನ್ನು ಶ್ರೀ ಗಣಪತಿಯ ಕೃಪೆಯಿಂದ ಅತ್ಯಂತ ಪ್ರಾಮಾಣಿಕವಾಗಿ ನಡೆಸುತ್ತಿದ್ದೇವೆ. ಇಂಥ ಪುಣ್ಯ ಸೇವೆ ನನಗೆ ಸಂತೃಪ್ತಿ ತಂದುಕೊಟ್ಟಿದೆ.
– ರಮೇಶ್‌ ಕಾರಂತ್‌ ನಾವುಂದ , ಹಿರಿಯ ಬಾಣಸಿಗ

ದೇವರ ಪಾಕಶಾಲೆ
ಶ್ರೀ ವಿನಾಯಕ ದೇವಸ್ಥಾನ, ಆನೆಗುಡ್ಡೆ, ಕುಂದಾಪುರ ತಾ.ಆನೆಗುಡ್ಡೆಯ ಅನ್ನಭೋಜನ

ಚಿತ್ರ  ಲೇಖನ : ಟಿ. ಲೋಕೇಶ್‌ ಆಚಾರ್ಯ ತೆಕ್ಕಟ್ಟೆ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

  • ದ.ಆಫ್ರಿಕಾ ಕ್ರಿಕೆಟ್‌ ತಂಡಕ್ಕೆ ಈಗ ಮೊದಲಿನ ತಾಕತ್ತಿಲ್ಲ ಎನ್ನುವುದು ಸತ್ಯವೇ. ಆದರೆ ಅದು ಈ ತಾತ್ಕಾಲಿಕ ದುಸ್ಥಿತಿಯಿಂದ ಹೊರಬಂದು ಮತ್ತೆ ವಿಶ್ವದ ಪ್ರಬಲ ತಂಡಗಳಲ್ಲಿ...

  • ಇಂದು ಭಾರತದ ಬ್ಯಾಡ್ಮಿಂಟನ್‌ ಎಂದಿನಂತಿಲ್ಲ. ವಿಶ್ವದಲ್ಲೇ ಅತಿಹೆಚ್ಚು ಪ್ರತಿಭೆಗಳ ಗಣಿ ಹೊಂದಿರುವ ದೇಶಗಳಲ್ಲಿ ಭಾರತವೂ ಒಂದು. ಇದೆಲ್ಲ ಸಾಧ್ಯವಾಗಿದ್ದು ಪಿ.ಗೋಪಿಚಂದ್‌...

  • ಕೆಲವು ದೈವಿಕ ಕ್ಷೇತ್ರಗಳ ದರುಶನದಿಂದ ಎರಡು ರೀತಿಯ ನೆಮ್ಮದಿ ಸಿಗುತ್ತದೆ. ಒಂದು, ದೇವರ ಉಪಾಸನೆಯಿಂದ ಸಿಕ್ಕ ಸಂತೃಪ್ತಿ; ಮತ್ತೂಂದು, ಅಲ್ಲಿನ ರಮ್ಯ ಪರಿಸರದಲ್ಲಿ...

  • ತ್ರಿವಿಧ ದಾಸೋಹ ನಡೆಸುತ್ತಿರುವ ನಾಡಿನ ಪ್ರಸಿದ್ಧ ಮಠಗಳಲ್ಲಿ ಆದಿಚುಂಚನಗಿರಿ ಕ್ಷೇತ್ರವೂ ಒಂದು. ಇಲ್ಲಿ ನೆಲೆಸಿರುವ ಶ್ರೀ ಕಾಲಭೈರವೇಶ್ವರ "ಅನ್ನದಾನಿ ಭೈರವ'...

  • - ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳು, ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನ, ಶಿರಸಿ ಮನಸ್ಸಿನ ಅಂತಃಸಾಕ್ಷಿಗೆ ಅನುಸಾರವಾಗಿ ನಡೆಯುವವನು ಎಂದೂ ಪಾಪಿಯಾಗಲಾರ....

ಹೊಸ ಸೇರ್ಪಡೆ